WEBSITE, INVENTORY SOFTWARE, CCTV CAMERA , COMPUTER & LAPTOP SALES & SERVICE, TABLETS, VIDEOGRAPHY, PHOTOGRAPHY, PROJECTOR ,VIDEO & AUDIO EDITING, VHS TO CD,DVD,BLURAY DISC CONVERSATION, DESIGNING & MANY MORE...
ಸುಸ್ವಾಗತ ನಿಮ್ಮ ಕಲ್ಪನೆ ನಮ್ಮ ಸೃಷ್ಠಿ !!! ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು.
ಈಗ ಮಲ್ಟಿಮೀಡಿಯವನ್ನು e-Speak ಕನ್ನಡದಲ್ಲಿ ಕೇಳಿ!

Saturday, October 27, 2012

ಸುಸ್ವಾಗತ


ಲೈಫು ಇಷ್ಟೇನೆ..... ಅಂತ ಸುಸ್ತಾಗಿ ನಮ್ಮ ಗೂಡಲ್ಲಿ ಅಡಗಿಕೊಳ್ಳಲು ತಯಾರಾಗುವಾಗ ಅದರಿಂದ ಹೊರಗೆ ಎಳೆಯಲು ಎಷ್ಟೊಂದು ಕಾರ್ಯಕ್ರಮಗಳು. ಕೆಲಸ ಕಾರ್ಯಗಳು ಜೊತೆಗೆ ಸಮಾಜ ಸೇವೆ, ರಾಜಕೀಯ, ಸಂಘಟಿಸುವ ಪರಿಪಾಠ, ಪರಿಸರ ಮತ್ತು ವನ್ಯಜೀವಿಗಳ ಬಗ್ಗೆ ಆಸಕ್ತಿ, ಪೋಟೋಗ್ರಫಿ, ಆರ್ಟ್ ಎಗ್ಸಿಬಿಶನ್, ಮಕ್ಕಳಿಗಾಗಿ ನನ್ನದೇ ಆದ ಬಾಲವನ(ಇದು ಮಕ್ಕಳ ಲೋಕ)ಸ್ವಯಂ ಸಂಸ್ಥೆ, ತಿಳದಿದ್ದು, ತಿಳಿಯದಿದ್ದು, ಗೊತ್ತಿಲ್ಲದೆ ಇರುವಂತದ್ದು ಇಂತಹದರ ಜೊತೆ ಸಿಕ್ಕಾ ಪಟ್ಟೆ ಮಾತು, ಜೊತೆಗೆ ಒಂದಿಷ್ಟು ಗಾಢ ಮೌನ, ನಾಟಕದ ಷೋ ಅಂದ್ರೆ ಪ್ರಾಣ, ಹರಟೆ ಹೊಡೆಯಲು ಸಾಕಷ್ಟು ಗೆಳೆಯರು......... 
ಏನೆಲ್ಲಾ…
ಹುಟ್ಟಿದ್ದು ಗಡಿನಾಡ ಹಳ್ಳಿಯಲ್ಲಿ, ಓದಿದ್ದು ಅಲ್ಪ ಆದರೆ ತಿಳಿದುಕೊಂಡಿದ್ದು ಸಿಕ್ಕಾಪಟ್ಟೆ ಯಾವುದೋ ಕೆಲಸ ಮಾಡಲು ಹೋಗಿ ಮತ್ಯಾವುದೋ ಕೆಲಸ ಮಾಡಿ ವೃತ್ತಿ ಜೀವನವೆಂಬ ಯಾಂತ್ರಿಕ ಜೀವನದಲ್ಲಿ ಮುಳುಗಿ, ತೇಲಿ ಕಡೆಯದೇನೋ ಎಂಬಂತೆ ಮಲ್ಟಿಮೀಡಿಯಾ ಎಂಬ ನಾಮದೇಯ, ಗೊತ್ತು ಗುರಿ ಇಲ್ಲದ ವೃತ್ತಿ ಜೀವನ ಆರಂಭ. ಜೀವನದಲ್ಲಿ ಎಸ್ಟೊಂದು ಕೆಲಸಗಳು ಅಬ್ಬಾ ನೆನೆದರೆ ಅದ್ಬುತವೇನೂ ಎಂಬ ಜೀವನ ಹೇಳುತ್ತಿದ್ದರೆ ಮುಗಿಯದ ಕಥೆ..............................
ಹಾಗಾಗಿ ‘ಮಲ್ಟಿಮೀಡಿಯಾ’ದಲ್ಲಿ ಏನೇನಾಗುತ್ತೆ? ಇಲ್ಲಿ ಏನು ಸಿಗುತ್ತೆ ಅನ್ನೋ ಲಿಸ್ಟ್ ಇಲ್ಲಿ ಸಿಗುತ್ತೆ, ಬೇರೆ ವೃತ್ತಿಗಳ ವಿಚಾರಗಳ ಬಗ್ಗೆ ಮಾಹಿತಿ ಹಾಗೂ ಆಹ್ವಾನಗಳೂ ಇಲ್ಲಿರುತ್ತೆ. ಅಷ್ಟೇ ಅಲ್ಲ, ಬೇಕಾದ, ಬೇಡದ ವಿಚಾರಗೂ ಇಲ್ಲಿರುತ್ತೆ.
ಹಾಗಾಗಿ ,
ದಯವಿಟ್ಟು ತಪ್ಪದೇ ಬನ್ನಿ.
*****ಸರ್ವರಿಗೂ ಸುಸ್ವಾಗತ***** ಹಾಗೇ ಧನ್ಯವಾದಗಳು ಸಹ*****

ಈಗ ಮಲ್ಟಿಮೀಡಿಯವನ್ನು ಕನ್ನಡದಲ್ಲಿ ಕೇಳಿ! 

ನ್ನಡದಲ್ಲಿ ಅಕ್ಷರಗಳನ್ನು ಓದುವ ತಂತ್ರಾಂಶಗಳ ಬೆಳವಣಿಗೆ ಈಗಷ್ಟೇ ಆರಂಭವಾಗಿದೆ. ಈಗ ಆರಂಭಿಕವಾಗಿ  ಈ-ಸ್ಪೀಕ್ ಎಂಬ ಮುಕ್ತ ತಂತ್ರಾಂಶವನ್ನು ಓದುಗರ ಅನುಕೂಲಕ್ಕಾಗಿ ಕೊಡುತ್ತಿದ್ದೇವೆ. ಇದನ್ನು ರೂಪಿಸಿದವರು ಶ್ರೀ ಜೊನಾಥನ್ ಡಡ್ಡಿಂಗ್ಟನ್ ಎಂಬುವವರು. ಈ ತಂತ್ರಾಂಶಕ್ಕೆ ಕನ್ನಡ ಭಾಷೆಗೆ ಬೇಕಾದ ಅಗತ್ಯಗಳನ್ನು ರೂಪಿಸಿಕೊಟ್ಟವರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಅಬಸೆ ಗ್ರಾಮದಲ್ಲಿ ಕೃಷಿಕರಾಗಿರುವ ದೃಷ್ಟಿಸವಾಲಿನ ಯುವಕ ಶ್ರೀ ಶ್ರೀಧರ್ ರವರು. ಅವರಿಗೆ 'ಚಂದ್ರುಮಲ್ಟಿಮೀಡಿಯ’ ವತಿಯಿಂದ ಹೃತ್ಪೂರ್ವಕ ವಂದನೆಗಳು.

2 comments:

 1. Hello Chandu avare nimma blog tumba chennagide..
  but one confusion
  nimma blog name direct aagi
  http://www.chandrumultimedia.com

  but nandu
  http://meghareddi.blogspot.com/

  nivu ee blogspot anna hege eliminate madiddira...?

  ReplyDelete
 2. ಮೊದಲನೆಯದಾಗಿ ನನ್ನ ತಾಣಕ್ಕೆ ಭೇಟಿ ನೀಡಿದ್ದಕ್ಕೆ ತುಂಬಾ ಸಂತೋಷ.
  ನಿಮ್ಮ ಪ್ರಶ್ನೆಗೆ ಉತ್ತರ:
  ಮೊದಲು ನೀವು ನಿಮ್ಮ ಬ್ಲಾಗ್ ನ್ನು ಸೈನ್ ಇನ್ ಮಾಡಿ.ನಂತರ ಸೆಟ್ಟಿಂಗ್ಸ್ ಗೇ ಹೋಗಿ ಅಲ್ಲಿ Publishing ಕ್ಲಕ್ಕಿಸಿ Publish on a custom domain ನಿಮಗೆ ಕಾಣಸಿಗುತ್ತದೆ. ಅಲ್ಲಿ Switch to: • Custom Domain ಕಾಣಸಿಗುತ್ತದೆ. ಅಲ್ಲಿ Buy a domain for your blog ಎಂಬಲ್ಲಿ (.com .info. .org . Biz) ನೀವು ನಿಮಗೆ ಬೇಕಾದ ತಾಣದ ಹೆಸರನ್ನು ನೊಂದಾಯಿಸಲು ಸುಮಾರು 10 ಡಾಲರುಗಳನ್ನು ಕೊಟ್ಟು ಖರೀದಿಸಬೇಕು.Domains are registered through a Google partner and cost $10 (USD) for one year. As part of registration, you will also get a Google Apps account for your new domain.
  ಹೆಚ್ಚಿನ ಮಾಹಿತಿ ಬೇಕಾದಲ್ಲಿ ಕರೆ ಮಾಡಿ: 9740463256.

  ReplyDelete