WEBSITE, INVENTORY SOFTWARE, CCTV CAMERA , COMPUTER & LAPTOP SALES & SERVICE, TABLETS, VIDEOGRAPHY, PHOTOGRAPHY, PROJECTOR ,VIDEO & AUDIO EDITING, VHS TO CD,DVD,BLURAY DISC CONVERSATION, DESIGNING & MANY MORE...
ಸುಸ್ವಾಗತ ನಿಮ್ಮ ಕಲ್ಪನೆ ನಮ್ಮ ಸೃಷ್ಠಿ !!! ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು.
ಈಗ ಮಲ್ಟಿಮೀಡಿಯವನ್ನು e-Speak ಕನ್ನಡದಲ್ಲಿ ಕೇಳಿ!

Saturday, April 30, 2011

ಭಾರತದ ಭ್ರಷ್ಟಾಚಾರ ವಿಶ್ವರೂಪ

ಭಾರತದ ಭ್ರಷ್ಟಾಚಾರದ ವಿಶ್ವರೂಪ ತಿಳಿದುಕೊಳ್ಳಲು http://www.truthabou... ನೋಡಿ.

Thursday, April 21, 2011

ವಿಶ್ವ ಭೂದಿನ 2011

ಏಪ್ರಿಲ್ 22 ವಿಶ್ವ ಭೂದಿನ. ನಮಗೂ ಅರಿವಾಗಿರಬಹುದು. ಬೆಂಗಳೂರಿನಂತಹ ಉದ್ಯಾನನಗರಿ ಹಿಂದಿನಂತಿಲ್ಲ. ಬೇಸಿಗೆಯ ಬೇಗೆ ಜಾಸ್ತಿಯಾಗಿದೆ. ಅಕಾಲಿಕ, ಅಪರೂಪದ ಮಳೆ ಕಂಡುಬರುತ್ತಿದೆ. ಅಂದಿನ ಚಳಿ ಇಂದು ನೆನಪು ಮಾತ್ರ. ಪರಿಸರ ಹಿಂದಿನಂತಿಲ್ಲ. ಕಾರ್ಬನ್ ಡೈಯಾಕ್ಸೆಡ್, ನ್ಯೂಟ್ರೊಸ್ ಅಕ್ಸಿಡೆಸ್, ಕಲುಷಿತ ನೀರು, ಮಿಥೆನ್ ಇತ್ಯಾದಿ ಹಾನಿಕಾರಕ ಅಂಶಗಳು ಭೂರಮೆಯ ಒಡಲು ತುಂಬುತ್ತಿದೆ.

ಇದಕ್ಕೆ ಕಾರಣಗಳು ನೂರಾರಿರಬಹುದು. ಆದರೆ ವಾಹನೋದ್ಯಮದ ಕೊಡುಗೆಯು ಸಾಕಷ್ಟಿದೆ. ಪೆಟ್ರೊಲ್ ಡೀಸಲ್ ಇತ್ಯಾದಿ ಮುಗಿದು ಹೋಗುವ ಸಂಪನ್ಮೂಲಗಳು, ವಾಹನಗಳು ಉಗುಳುವ ಹೊಗೆ, ಮಾಲಿನ್ಯ ಇದರಿಂದ ಭೂಮಿ ಹೆಚ್ಚು ಕಲುಷಿತಗೊಳ್ಳುತ್ತಿದೆ. ಪರಿಸರ ಸ್ನೇಹಿ ವಾಹನದತ್ತ ಮುಖ ಮಾಡುವುದೇ ಇಂದಿನ ತುರ್ತು.

ಇಡೀ ಭೂಮಿಯ ಉಳಿವಿಗಾಗಿ, ಆ ಮೂಲಕ ಮನಕುಲದ ಉಳಿವಿಗಾಗಿ ಎಲ್ಲರೂ ಯೋಚಿಸಬೇಕು. ಮುಖ್ಯವಾಗಿ ವಾಹನ ಖರೀದಿಸುವ ಮುನ್ನ ಎರಡೆರಡು ಬಾರಿ ಯೋಚಿಸಬೇಕು. ಹೈಬ್ರಿಡ್ ಅಥವಾ ಪರಿಸರ ಸ್ನೇಹಿ ವಾಹನಗಳನ್ನು ಖರೀದಿಸುವ ಕುರಿತು ಎಲ್ಲರೂ ಯೋಚಿಸಬೇಕು. ಸರಕಾರಗಳು ಕೂಡ ಪರಿಸರ ಸ್ನೇಹಿ ವಾಹನ ಖರೀದಿಗೆ ಸಾಕಷ್ಟು ವಿನಾಯಿತಿ ಕೂಡ ನೀಡುತ್ತಿವೆ.

ಸರಕಾರದ ಕೊಡುಗೆಗಳು: ಹೈಬ್ರಿಡ್ ಕಾರ್ ಗಳಿಗೆ ಆಮದು ಸುಂಕ ಕಡಿತ ಮಾಡುವ ಯೋಜನೆ ಇರುವುದಾಗಿ ಮತ್ತು ಈ ವಿಭಾಗದಲ್ಲಿನ ವಾಹನಗಳ ಕುರಿತು ಮೃದು ನೀತಿ ಅನುಸರಿಸುವುದಾಗಿ ಕೇಂದ್ರ ಸರಕಾರ ಇತ್ತೀಚೆಗೆ ಹೇಳಿತ್ತು. ಕಳೆದ ತಿಂಗಳ ಬಜೆಟ್ ನಲ್ಲೂ ಹೈಬ್ರಿಡ್ ವಾಹನಗಳಿಗೆ ರಾಷ್ಟ್ರೀಯ ಮಿಷನ್ ಸ್ಥಾಪನೆಯ ಪ್ರಸ್ತಾಪ ಮಾಡಲಾಗಿತ್ತು. ಮುಂದಿನ ದಿನಗಳಲ್ಲಿ ಹಸಿರು ವಾಹನಗಳನ್ನು ಆಯ್ಕೆ ಮಾಡಿಕೊಳ್ಳಲು ಜನರಿಗೆ ಇದು ಒಂದು ಕಾರಣವಾಗಬಹುದು.

ಪರಿಸರ ಸ್ನೇಹಿ: ಜಾಗತಿಕ ತಾಪಮಾನ ಏರಿಕೆಯಾಗುವಲ್ಲಿ, ಓಝೋನ್ ಪರದೆಯಲ್ಲಿ ರಂಧ್ರವುಂಟಾಗುವಲ್ಲಿ ವಾಹನೋದ್ಯಮದ ಕೊಡುಗೆ ಅಪಾರ. ಒಟ್ಟಾರೆ ವಾಯುಮಾಲಿನ್ಯದಲ್ಲಿ ಕಾರ್, ಟ್ರಕ್ ಮತ್ತು ಇತರ ವಾಹನಗಳ ಕೊಡುಗೆ ಅರ್ಧದಷ್ಟಿದೆ. ಹೀಗಾಗಿ ಹೈಬ್ರಿಡ್ ವಾಹನಗಳ ಬಳಕೆ ಹೆಚ್ಚಾದಂತೆ ಹವಾಮಾನ ಮಾಲಿನ್ಯ ನಿಯಂತ್ರಿಸಬಹುದು. ಪರಿಸರಕ್ಕೆ ನೀವು ಹೀಗೂ ಕೊಡುಗೆ ನೀಡಬಹುದು. ಈಗ ರಸ್ತೆಯಲ್ಲಿ ಬೆರಳೆಣಿಕೆಯಷ್ಟು ಹೈಬ್ರಿಡ್ ಕಾರ್ ಗಳಿವೆ ಅಷ್ಟೇ! ಇಂಧನ ದರದ ನಾಗಲೋಟ, ತೆರಿಗೆ ವಿನಾಯಿತಿ ಮತ್ತು ಪರಿಸರ ಸ್ನೇಹಿ ಫೀಚರ್ ಗಳಿಂದ ನಿಮಗೂ ಹೈಬ್ರಿಡ್ ಕಾರ್ ಖರೀದಿಸುವ ಬಯಕೆಯಾಗಿರಬಹುದು.

ದೀರ್ಘಾವಧಿಗೆ ದುಬಾರಿಯಲ್ಲ : ಹೈಬ್ರಿಡ್ ಕಾರ್ ಖರೀದಿಸಬೇಕೆಂದಿದ್ದೇ ಆದರೆ ಅದು ದುಬಾರಿ ಎಂದು ನೀವು ಹೇಳಬಹುದು. ನಿಜ. ಇತರ ವಾಹನಗಳಿಗೆ ಹೋಲಿಸಿದರೆ ಇದು ಒಂದಿಷ್ಟು ದುಬಾರಿಯೇ. ಆದರೆ ದೀರ್ಘಾವಧಿ ಕುರಿತು ನೀವು ಯೋಚಿಸಿದ್ದರೆ, ಅಂದರೆ ದಿನನಿತ್ಯ ನೀವು ಪೆಟ್ರೋಲ್, ಡೀಸಲ್ ಗೆ ಸುರಿಯುವ ಹಣವನ್ನು ಲೆಕ್ಕ ಹಾಕಿದರೆ ಇದು ದುಬಾರಿಯಲ್ಲ. ಹೀಗಾಗಿ ಪರಿಸರ ರಕ್ಷಣೆಯೊಂದಿಗೆ ಹಣವನ್ನು ಉಳಿತಾಯ ಮಾಡಲು ಹೈಬ್ರಿಡ್ ಅಥವಾ ಎಲೆಕ್ಟ್ರಿಕ್ ವಾಹನಗಳಿಗೆ ಸಾಧ್ಯವಿದೆ.

ಪರಿಸರಕ್ಕಾಗಿ ತಂತ್ರಜ್ಞಾನ

ಆಧುನಿಕ ತಂತ್ರಜ್ಞಾನದ ಅತಿಯಾದ ಬಳಕೆಯಿಂದಾಗಿ ಭೂಮಿ ಬಿಸಿಯಾಗುತ್ತಿದೆ, ಪ್ರಾಕೃತಿಕ ಸಂಪತ್ತು ಕಡಿಮೆಯಾಗುತ್ತಿದೆ, ಪ್ರದೂಷಣ ಜಾಸ್ತಿಯಾಗುತ್ತಿದೆ, ಇತ್ಯಾದಿ ಓದುತ್ತಲೇ ಇರುತ್ತೇವೆ. ತಂತ್ರಜ್ಞಾನವನ್ನೇ ಈ ಪರಿಸರದ ಒಳಿತಿಗಾಗಿ ಬಳಸಿದರೆ ಹೇಗೆ? ಸೌರವಿದ್ಯುತ್ ಬಳಕೆ ಎಲ್ಲರಿಗೂ ಗೊತ್ತು. ಹಾಗೆಯೇ ಗಾಳಿಯಂತ್ರ. ಇದೇ ರೀತಿ ತಂತ್ರಜ್ಞಾನವನ್ನು ಇನ್ನೂ ಹಲವು ರೀತಿಯಲ್ಲಿ ಪರಿಸರದ ಉಳಿವಿಗಾಗಿ ಬಳಸಬಹುದು. ಪರಿಸರಕ್ಕಾಗಿ ತಂತ್ರಜ್ಞಾನವನ್ನು ಯಾವ ರೀತಿ ಬಳಸಬಹುದು ಎಂಬುದನ್ನು ಉದಾಹರಣೆಗಳ ಮೂಲಕ ತಿಳಿಸುವ ಜಾಲತಾಣ www.ecogeek.org.

Monday, April 18, 2011

ಸ್ವಂತ ಕವಿತೆಯ ಓದು

ಕರ್ನಾಟಕ ಸಾಹಿತ್ಯ ಅಕಾಡೆಮಿ “ಸ್ವಂತ ಕವಿತೆಯ ಓದನ್ನು” ತನ್ನ ವೆಬ್ ಸೈಟಿನಲ್ಲಿ ಪರಿಚಯಿಸಿದೆ. ಇಲ್ಲಿ ಕವಿಗಳು ತಮ್ಮ ಕವಿತೆಗಳನ್ನು ತಾವೇ ಓದುತ್ತಾರೆ.ಅದನ್ನು ಇಲ್ಲಿ ನೋಡಬಹುದು ಹಾಗೂ ಓದಬಹುದು.

Sunday, April 17, 2011

ಅರವತ್ನಾಲ್ಕು ವಿದ್ಯೆಗಳು

ವೇದ
೩೩
ಜಲಸ್ತಂಭ
ವೇದಾಂಗ
೩೪
ವಾಯುಸ್ತಂಭ
ಇತಿಹಾಸ
೩೫
ಖಡ್ಗಸ್ತಂಭ
ಆಗಮ
೩೬
ವಶ್ಯಾ
ನ್ಯಾಯ
೩೭
ಆಕರ್ಷಣ
ಕಾವ್ಯ
೩೮
ಮೋಹನ
ಅಲಂಕಾರ
೩೯
ವಿದ್ವೇಷಣ
ನಾಟಕ
೪೦
ಉಚ್ಚಾಟನ
ಗಾನ
೪೧
ಮಾರಣ
೧೦
ಕವಿತ್ವ
೪೨
ಕಾಲವಂಚನ
೧೧
ಕಾಮಶಾಸ್ತ್ರ
೪೩
ವಾಣಿಜ್ಯ
೧೨
ದೂತನೈಪುಣ್ಯ
೪೪
ಪಶುಪಾಲನ
೧೩
ದೇಶ ಭಾಷಾ ಜ್ಞಾನ
೪೫
ಕೃಷಿ
೧೪
ಲಿಪಿ ಕರ್ಮ
೪೬
ಸಮಶರ್ಮ
೧೫
ವಾಚ
೪೭
ಲಾವುಕಯುದ್ಧ
೧೬
ಸಮಸ್ತಾವಧಾನ
೪೮
ಮೃಗಯಾ
೧೭
ಸ್ವರಪರೀಕ್ಷಾ
೪೯
ಪುತಿಕೌಶಲ
೧೮
ಶಾಸ್ತ್ರಪರೀಕ್ಷಾ
೫೦
ದೃಶ್ಯಶರಣಿ
೧೯
ಶಕುನಪರೀಕ್ಷಾ
೫೧
ದ್ಯೂತಕರಣಿ
೨೦
ಸಾಮುದ್ರಿಕಪರೀಕ್ಷಾ
೫೨
ಚಿತ್ರಲೋಹ, ಪಾರ್ಷಾಮೃತ್,ದಾರು ವೇಣು ಚರ್ಮ ಅಂಬರ ಕ್ರಿಯೆ
೨೧
ರತ್ನಪರೀಕ್ಷಾ
೫೩
ಚೌರ್ಯ
೨೨
ಸ್ವರ್ಣಪರೀಕ್ಷಾ
೫೪
ಔಷಧಸಿದ್ಧಿ
೨೩
ಗಜಲಕ್ಷಣ
೫೫
ಮಂತ್ರಸಿದ್ಧಿ
೨೪
ಅಶ್ವಲಕ್ಷಣ
೫೬
ಸ್ವರವಂಚನಾ
೨೫
ಮಲ್ಲವಿದ್ಯಾ
೫೭
ದೃಷ್ಟಿವಂಚನಾ
೨೬
ಪಾಕಕರ್ಮ
೫೮
ಅಂಜನ
೨೭
ದೋಹಳ
೫೯
ಜಲಪ್ಲವನ
೨೮
ಗಂಧವಾದ
೬೦
ವಾಕ್ ಸಿದ್ಧಿ
೨೯
ಧಾತುವಾದ
೬೧
ಘಟಿಕಾ ಸಿದ್ಧಿ
೩೦
ಖನಿವಾದ
೬೨
ಪಾದುಕಾ ಸಿದ್ಧಿ
೩೧
ರಸವಾದ
೬೩
ಇಂದ್ರ ಜಾಲ
೩೨
ಅಗ್ನಿಸ್ತಂಭ
೬೪
ಮಹೇಂದ್ರ ಜಾಲ