WEBSITE, INVENTORY SOFTWARE, CCTV CAMERA , COMPUTER & LAPTOP SALES & SERVICE, TABLETS, VIDEOGRAPHY, PHOTOGRAPHY, PROJECTOR ,VIDEO & AUDIO EDITING, VHS TO CD,DVD,BLURAY DISC CONVERSATION, DESIGNING & MANY MORE...
ಸುಸ್ವಾಗತ ನಿಮ್ಮ ಕಲ್ಪನೆ ನಮ್ಮ ಸೃಷ್ಠಿ !!! ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು.
ಈಗ ಮಲ್ಟಿಮೀಡಿಯವನ್ನು e-Speak ಕನ್ನಡದಲ್ಲಿ ಕೇಳಿ!

Friday, April 15, 2011

ಆಟೋರಿಕ್ಷ ದೂರುತಾಣಆಟೋರಿಕ್ಷಗಳ ಕಿರಿಕಿರಿ ಯಾರಿಗೆ ಅನುಭವವಾಗಿಲ್ಲ? ಹೇಳಿದ ಜಾಗಕ್ಕೆ ಬರುವುದಿಲ್ಲ, ಮೀಟರ್ ಹಾಕುವುದಿಲ್ಲ, ಹಾಕಿದರೂ ಮೀಟರಿಗೆ ಎರಡು ಪಾಲು ಹಣ ಕೇಳುವುದು -ಹೀಗೆ ಹಲವಾರು ರೀತಿಯಲ್ಲಿ ನಾಗರಿಕರಿಗೆ ತೊಂದರೆ ಕೊಡುವ ಆಟೋರಿಕ್ಷ ಚಾಲಕರು ಬೇಕಾದಷ್ಟು ಮಂದಿ ಇದ್ದಾರೆ. ಪ್ರತಿ ಬಾರಿಯೂ ಸರಕಾರದ ಸೂಕ್ತ ಇಲಾಖೆಗೆ ಹೋಗಿ ದೂರು ಸಲ್ಲಿಸುವುದು ದೊಡ್ಡ ತಲೆನೋವಿನ ಕೆಲಸ. ದೂರು ಸಲ್ಲಿಸಿದರೂ ನಿಮ್ಮ ದೂರಿನ ಮೇಲೆ ಏನು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಯುವುದು ಹೇಗೆ? ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಿ ಒಂದು ಜಾಲತಾಣವಿದೆ. ಅದುವೇ auto404.org. ಈ ಜಾಲತಾಣದಲ್ಲಿ ಆಟೋರಿಕ್ಷದ ನೋಂದಣಿ ಸಂಖ್ಯೆ, ದಿನಾಂಕ, ಸ್ಥಳ, ದೂರಿನ ವಿವರ ಎಲ್ಲ ದಾಖಲಿಸಬಹುದು. ಆಗಾಗ ನೀವು ಇಲ್ಲಿಗೆ ಭೇಟಿ ನೀಡಿ ನಿಮ್ಮ ದೂರಿನ ಬಗ್ಗೆ ಏನು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಯಬಹುದು. ಈ ಜಾಲತಾಣಕ್ಕೆ ಸರಕಾದ ಮಾನ್ಯತೆ ಇದೆ.

1 comment:

  1. thank u very much for ur informatic message.

    ReplyDelete