WEBSITE, INVENTORY SOFTWARE, CCTV CAMERA , COMPUTER & LAPTOP SALES & SERVICE, TABLETS, VIDEOGRAPHY, PHOTOGRAPHY, PROJECTOR ,VIDEO & AUDIO EDITING, VHS TO CD,DVD,BLURAY DISC CONVERSATION, DESIGNING & MANY MORE...
ಸುಸ್ವಾಗತ ನಿಮ್ಮ ಕಲ್ಪನೆ ನಮ್ಮ ಸೃಷ್ಠಿ !!! ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು.
ಈಗ ಮಲ್ಟಿಮೀಡಿಯವನ್ನು e-Speak ಕನ್ನಡದಲ್ಲಿ ಕೇಳಿ!

Monday, June 18, 2012

ಜಾನಪದ ಲೋಕ

ಪ್ಯಾಟಿ ಮಂದಿ ನೋಡಿ, ಹಳ್ಳಿ ಲೈಪು.......
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರಾಮನಗರದಿಂದ 8 ಕಿ.ಮೀ. ದೂರದಲ್ಲಿ ಬಲಗಡೆಗೆ 15 ಎಕರೆ ವಿಶಾಲವಾದ ಜಾಗದಲ್ಲಿ ಜಾನಪದ ಲೋಕ ಸೃಷ್ಟಿಯಾಗಿದ್ದು, ಪ್ರವಾಸಿಗರನ್ನು ಜನಪದ ವಿಶೇಷತೆಗಳಿಂದ ಸ್ವಾಗತಿಸುತ್ತಿದೆ. ಮುಖ್ಯ ದ್ವಾರದಲ್ಲಿ ನಗುತ್ತಿರುವ ನಿಗಿ ನಿಗಿ ಸೂರ್ಯ ನಂದಿ ಧ್ವಜಗಳ ಮಧ್ಯೆ "ಬನ್ನಿ ಒಳ ಬನ್ನಿ" ಎನ್ನುತ್ತಾನೆ. 1994ರ ಮಾ.12ರಂದು ಆರಂಭವಾದ ಈ ವಿಸ್ಮಯ ಲೋಕ ಜಗತ್ತಿನ ಪ್ರಮುಖ ಸಾಂಸ್ಕೃತಿಕ ಲೋಕಗಳಲ್ಲೊಂದು ಎಂಬುದು ಕನ್ನಡಿಗ ಹೆಮ್ಮೆ. 'ಗಜಮುಖನೇ ಗಣಪತಿಯೇ ನಿನಗೆ ವಂದನೆ' ಎಂದೆನ್ನೆಲು ಅಲ್ಲೊಂದು ಪುಟ್ಟದಾದ, ಚೊಕ್ಕವಾದ ಗಣೇಶ ಮಂದಿರ. ಅನಂತರ ಅನಾವರಣಗೊಳ್ಳುತ್ತೆ ನಮ್ಮ ಮುಂದೊಂದು ಅನುಪಮ 'ಜಾನಪದ ಜಗತ್ತು'.
ಏನುಂಟು..... ಏನಿಲ್ಲ.......
ಲೋಕಮಹಲ್, ಶಿಲ್ಪಮಾಳ,ಆಯಗಾರರ ಮಾಳ,ತೊಟ್ಟಿಮನೆ,ಕಂಬಗಳ ಮನೆ ಹೀಗೆ ಒಂದೊಂದು ವಸ್ತು ಸಂಗ್ರಹಾಗರಕ್ಕೆ ಒಂದೊಂದು ವಿಶ್ಇಷ್ಟ ಹೆಸರು.ದಾರಿ ದಿಕ್ಕು ತೋರಲು ಗೋಕುಲಾಷ್ಟಮಿ ಕೃಷ್ಣನ ಪಾದದ ಗುರುತು. ತೊಗಲು ಗೊಂಬೆ, ಆಯುಧಗಳು, ಮದುವೆ,ಸೀಮಂತ ಮುಂತಾದ ಶಾಸ್ತ್ರಗಳಲ್ಲಿ ಬಳಸುವ ವಸ್ತುಗಳು,ಜನಪದ ವಾದ್ಯಗಳು, ಆಟಿಕೆಗಳು, ವರ್ಣಚಿತ್ರಗಳು, ಗ್ರಾಮೀಣ ಕಸಬುಗಳ ಉಪಕರಣಗಳು, ತಾಳೆ ಗರಿಗಳು ಇನ್ನೂ ಮುಂತಾದ 500ಕ್ಕೂ ಹೆಚ್ಚು ಜಾನಪದ ಸಲಕರಣೆಗಳನ್ನು ಕಲಾತ್ಮಕವಾಗಿ ವೈಜ್ಞಾನಿಕವಾಗಿ ಜತನದಿಂದ ಕಾಪಾಡಲಾಗಿದೆ. ಇಲ್ಲಿ 1200 ವರ್ಷಗಳಿಗೂ ಹಳೆಯದಾದ ಶಾಸನ, ವೀರಗಲ್ಲು, ಲಿಪಿಗಳು ಕಾಣಸಿಗುತ್ತವೆ. 
ಇಂದು ಎಕರೆ ಜಾಗದಲ್ಲಿ ನಿರ್ಮಿತವಾಗಿರುವ ಸ್ವಚ್ಛಂದ ಕೊಳ, ನೆಮ್ಮದಿಯಿಂದ ಈಜುತ್ತಿರುವ ಬಾತು ಕೋಳಿಗಳು, ಮತ್ತು ಮಕ್ಕಳಿಗಾಗಿ ದೋಣಿ ವಿಹಾರ 1000 ಜನ ಕುಳಿತುಕೊಳ್ಳಲು ಸಾಧ್ಯವಾಗುವಂಥ ಗ್ರೀಕ್ ಮಾದರಿಯ ರಂಗ ಮಂದಿರ, ಅಲ್ಲೆ ವಸ್ತುಗಳನ್ನು ತಯಾರು ಮಾಡುತ್ತಿರುವ ಕರಕುಶಲ ಕರ್ಮಿಗಳು, ತಮ್ಮಷ್ಟಕ್ಕೆ ತಾವೇ ಗೀಗಿ ಪದ ಹಾಡಿಕೊಳ್ಳುತ್ತಿರುವ ಜನಪದರು, ನೃತ್ಯಾಭ್ಯಾಸ ಮಾಡುತ್ತಿರುವ ಕಲಾವಿದರು ಎಲ್ಲರನ್ನೂ ಕಾಣಬಹುದು.
ಕೇಳಲು.......... ನೋಡಲು..........
ಅಚ್ಚರಿ ಮತ್ತು ಅಷ್ಟೇ ಹೆಮ್ಮೆ ಪಡಬಹುದಾದ ಮತ್ತೊಂದು ವಿಷಯವೆಂದರೆ ಜಾನಪದ ಕಲೆಗಳ ಬಗ್ಗೆ ಒಂದೇ ಸಮನೆ 1800 ಗಂಟೆಗಳ ಕಾಲ ಕುಳಿತು ನೋಡಬಹುದಾದಷ್ಟು ವಿಡಿಯೋ ಸಂಗ್ರಹವಿದೆ. ಸುಮಾರು 800 ಗಂಟೆಗಳಷ್ಟು ಬಿಡುವಿಲ್ಲದೇ ಕೇಳಬಹುದಾದಷ್ಟು ಧ್ವನಿಮುದ್ರಿಕೆಗಳ ಸಂಗ್ರಹವಿದೆ. ಇಲ್ಲಿ ವಿಡಿಯೋ ಥಿಯೇಟರ್ ಕೂಡ ಇದೆ.ಬಗಲಲ್ಲೆ ಒಂದು ಜಾನಪದ ಸಂಶೋಧನಾ ಕೇಂದ್ರವಿದ್ದು, ಸಂಬಂಧಪಟ್ಟ ಕಲೆಗಳಲ್ಲಿ ಡಿಪ್ಲೋಮಾ ಮತ್ತು ಸರ್ಟಿಫಿಕೇಟ್ ಕೋರ್ಸ್ ಗಳನ್ನು ನಡೆಸಲಾಗುತ್ತಿದೆ.
ಜಾನಪದ ಸೊಗಡು ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಈ ಲೋಕದಲ್ಲಿ ನಡೆಸುತ್ತಿರುವ ಕೋರ್ಸ್ ಗಳು, ಸಾಹಸ ಮೆಚ್ಚುವಂಥದ್ದು. ಮಂಗಳವಾರ ಹೊರತುಪಡಿಸಿ ಮಿಕ್ಕೆಲ್ಲ ದಿನಗಳಂದು ಬೆಳಿಗ್ಗೆ 9.30 ರಿಂದ ಸಂಜೆ 5.30 ರವರೆವಿಗೂ ಚಟುವಟಿಕೆಯಿಂದಿರುವ ಈ ಕೆಂದ್ರದಲ್ಲಿ ಪ್ರತಿ ತಿಂಗಳ ಕೋನೆ ಭಾನುವಾರ ಹಲವಾರು ಜನಪದ ಕಲೆಗಳ ಪ್ರದರ್ಶನ ಇರುತ್ತದೆ. ಜಾನಪದ ಸಂಸ್ಕೃತಿ ಮೇಲೆ ಬೆಳಕು ಚೆಲ್ಲುವಂಥ ಈ ಕಾರ್ಯಕ್ರಮ ತಪ್ಪದೇ ವೀಕ್ಷಿಸುವ ಮನಸ್ಸು ಎಲ್ಲರದ್ದಾಗಲಿ.
200 ವರ್ಷಗಳ ಹಳೆಯ ಬಂಡಿ, ಜೇಡಿ ಮಣ್ಣಿನಿಂದಾದ ಮಡಕೆ, ಕುಡಿಕೆ, ದೀಪದ ಬುಡ್ಡಿಗಳು ಇಂದಿನ ಐಟಿ-ಬಿಟಿ ಮಂದಿ ಜೀವನ ಹಾಗೂ ಹಳ್ಳಿ ಜನರ ಝೀವನಕ್ಕೆ ಇರುವ ಅಜ-ಗಜಾಂತರ ವ್ಯತ್ಯಾಸದ ಬಗ್ಗೆ ಚಿಂತನೆ ಹಚ್ಚುತ್ತವೆ. ತರಾವರಿ ತಿಂಡಿ-ತಿನಿಸುಗಳೂ ಇಲ್ಲಿ ಲಭ್ಯ. 
ಹೀಗೇ ಬನ್ನಿ
ಜಾನಪದ ಪರಿಷತ್ ನಡೆಸುತ್ತಿರುವ ಈ ಜಾನಪದ ಲೋಕ 15 ಎಕರೆ ಪ್ರದೇಶ ಹೊಂದಿದೆ. ಇಲ್ಲಿನ ಬಯಲು ರಂಗ ಮಂದಿರದಲ್ಲಿ ಜಾನಪದ ಸಂಸ್ಕೃತಿಯ ತರಬೇತಿ ನಡೆಯುತ್ತದೆ. ಬೆಂಗಳೂರಿನಿಂದ 53 ಕಿ.ಮಿ. ದೂರದಲ್ಲಿದ್ದು, ಬಸ್ ವ್ಯವಸ್ಥೆ ಇದೆ.
ಭೇಟಿ ನೀಡಿ.. http://www.janapadaloka.org/


1 comment:

  1. Chandru thank u for ur good post..

    The information contained in the web page http://www.janapadaloka.org/ is elobrate and its raises curiosity amongst the people to visit the Janapada Loka..

    ReplyDelete