WEBSITE, INVENTORY SOFTWARE, CCTV CAMERA , COMPUTER & LAPTOP SALES & SERVICE, TABLETS, VIDEOGRAPHY, PHOTOGRAPHY, PROJECTOR ,VIDEO & AUDIO EDITING, VHS TO CD,DVD,BLURAY DISC CONVERSATION, DESIGNING & MANY MORE...
ಸುಸ್ವಾಗತ ನಿಮ್ಮ ಕಲ್ಪನೆ ನಮ್ಮ ಸೃಷ್ಠಿ !!! ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು.
ಈಗ ಮಲ್ಟಿಮೀಡಿಯವನ್ನು e-Speak ಕನ್ನಡದಲ್ಲಿ ಕೇಳಿ!

Wednesday, May 25, 2011

ಹಳೆಯ ಪುಸ್ತಕಗಳನ್ನು ರದ್ದಿಯಂಗಡಿಗೆ ಮಾರುವಿರೇತಕೆ?

ಹಳೆಯ ಶಾಲಾ ಪಠ್ಯ ಪುಸ್ತಕ, ಕತೆ, ಕಾದಂಬರಿ ಪುಸ್ತಕಗಳನ್ನು ರದ್ದಿಯಂಗಡಿಗೆ ಮಾರುವುದು ಮಾಮೂಲು. ಆದರೆ ನಿಮ್ಮಲ್ಲಿರುವ ಹಳೆಯ ಪುಸ್ತಕಗಳು ಬಡಮಕ್ಕಳ ಶಿಕ್ಷಣಕ್ಕೆ ವಿನಿಯೋಗವಾದರೆ ಎಷ್ಟು ಚೆನ್ನ ಅಲ್ಲವೇ?

ಬೆಂಗಳೂರಿನಲ್ಲಿರುವ ಕೆಲವು ಮಾಲ್ ಗಳು ಇಂತಹ ಒಂದು ಅಭಿಯಾನವನ್ನು ಆರಂಭಿಸಿವೆ. ಹೈಪರ್ಸಿಟಿ ಮತ್ತು ಕ್ರಾಸ್ ವರ್ಡ್ ಸಹಯೋಗದೊಂದಿಗೆ ಶಿಕ್ಷಾ ಫೌಂಡೆಷನ್ ನಿಮ್ಮಲ್ಲಿರುವ ಹಳೆಯ ಪುಸ್ತಕಗಳನ್ನು ಸಂಗ್ರಹಿಸಿ ಬಡಮಕ್ಕಳಿಗೆ ನೀಡುವ "ಬುಕ್-ಒ-ಮೀಟರ್" ಎಂಬ ಅಭಿಯಾನ ಸುರು ಮಾಡಿದೆ.

ರದ್ದಿಯಂಗಡಿಗೆ ಸಾಗಿಸಲು ಜೋಡಿಸಿಟ್ಟಿದ್ದ ಅಥವಾ ನಿಮಗೆ ಅಗತ್ಯವಿಲ್ಲದ ಹಳೆಯ ಪಠ್ಯಪುಸ್ತಕಗಳು, ಸಾಹಿತ್ಯ ಪುಸ್ತಕಗಳನ್ನು ನೀವು ಈ ಮಾಲ್ ಗಳಿಗೆ ನೀಡಬಹುದು. ಇದರಿಂದ ಬಡಮಕ್ಕಳಿಗೆ ಮಾತ್ರ ಲಾಭವಲ್ಲ. ಯಾರು ಹಳೆಯ ಪುಸ್ತಕಗಳನ್ನು ನೀಡುತ್ತಾರೋ ಅವರಿಗೆ ವಿನಾಯಿತಿ ದರದ ವೋಚರ್ಸ್ ಕೂಡ ನೀಡಲಾಗುತ್ತದೆ.

ಬನ್ನೇರುಘಟ ರಸ್ತೆಯಲ್ಲಿರುವ ರಾಯಲ್ ಮೀನಾಕ್ಷಿ ಮಾಲ್, ಐಟಿಪಿಎಲ್ ರಸ್ತೆಯಲ್ಲಿರುವ ಎಂಬಾಸ್ಸಿ ಪಾರಾಗನ್ ಹೈಪರ್ ಸಿಟಿ ಮಾಲಿನಲ್ಲಿ ಹಳೆಯ ಪುಸ್ತಕಗಳನ್ನು ಮಾರಾಟ ಮಾಡಬಹುದು.

ಈ ಪುಸ್ತಕ ಸಂಗ್ರಹ ಅಭಿಯಾನ ಜೂನ್ 20ಕ್ಕೆ ಕೊನೆಗೊಳ್ಳಲಿದೆ. ಚಿಲ್ಲರೆ ಹಣದ ಆಸೆಗಾಗಿ ರದ್ದಿಯಂಗಡಿಗೆ ಹಳೆಯ ಪುಸ್ತಕಗಳನ್ನು ಮಾರಾಟ ಮಾಡದಿರಿ. ಹೆಚ್ಚಿನ ಮಾಹಿತಿಗಾಗಿ 43643333 ನಂಬರ್ ಗೆ ಕರೆ ಮಾಡಬಹುದು.

Thursday, May 19, 2011

ಬಯಲಾಗಲಿದೆ ಮಾನವನ “biological age”

ಸದ್ಯದಲ್ಲೇ ನಿವೆಷ್ಟು ವರ್ಷಗಳ ಕಾಲ ಬದುಕ ಬಲ್ಲಿರಿ  ಎಂಬ ಸತ್ಯ ತಿಳಿದುಕೊಳ್ಳುವ ಅವಕಾಶ ಲಭಿಸಲಿದೆ. ಹೌದು ವಿಜ್ಞಾನಿಗಳು ಈ ನಿಟ್ಟಿ ಪ್ರಯೋಗ ನಡೆಸುತ್ತಿದ್ದು ಅದು ಫಲ ನೀಡುವ ಹಂತದಲ್ಲಿದೆ. ಒಂದು ವೇಳೆ ಇದು ಯಶಸ್ವಿಯಾದಲ್ಲಿ ಕೇವಲ ರಕ್ತ ಪರೀಕ್ಷೆಯಿಂದಲೇ ಮನುಷ್ಯ ತನ್ನ  ಆಯಸ್ಸನ್ನು ಅರಿತುಕೊಳ್ಳಬಹುದು.   
ಈ ಪ್ರಯೋಗ ಯಶಸ್ವಿಯಾದರೆ ವಿಮಾ ಕಂಪನಿಗಳಿಗೆ ಅದು ಮರಣ ಶಾಸನವೇ ಸರಿ. ಏಕೆಂದರೆ ಜೀವಿತಾವಧಿ ತನಕ ಮೆಡಿಕಲ್ ಕವ್ರೇಜ್  ಮಾಡುತ್ತೇವೆ ಎಂದು ಪುಸಲಾಯಿಸಿ ಪ್ರೀಮಿಯಂಗಳನ್ನು ಕಂತುಗಳಲ್ಲಿ ಈ ಕಂಪನಿಗಳು ಜನರಿಂದ ಹಣ ವಸೂಲಿಮಾಡುತ್ತಿವೆ.  ಒಂದು ವೇಳೆ ರಕ್ತಪರೀಕ್ಷೆಯಿಂದ ಜೀವಿತಾವಧಿ ತಿಳಿದುಬಿಟ್ಟರೆ ಜೀವವಿಮಾ ಪಾಲಿಸಿ ಯಾರು ಮಾಡಿಸುತ್ತಾರೆ..? . ಇಂಥ ಪರೀಕ್ಷೆ ಮುಂದಿನ ವರ್ಷ ಬ್ರಿಟನ್ ನಲ್ಲಿ ನಾಗರಿಕರ ಉಪಯೋಗಕ್ಕೆ  ಲಭ್ಯವಾಗಲಿದೆ ಎನ್ನಲಾಗಿದೆ. ಈ ಪರೀಕ್ಷೆಯಲ್ಲಿ ಮಾನವನ ಕ್ರೋಮೋಸೋಮ್ ನಲ್ಲಿನ ` ಟೀಲೋಮೋರ್ಸ್  ‘ ಅಭ್ಯಾಸದ ಆಧಾರದ ಮೇಲೆ ಎಷ್ಟು ವಯಸ್ಸಾಗುತ್ತಿದೆ, ಇನ್ನೆಷ್ಟು ವರ್ಷ ಜೀವಿಸಬಹುದು ಎಂಬುದನ್ನು ಕರಾರುವಕ್ಕಾಗಿ ಊಹಿಸಬಹುದಾಗಿದೆ. ಅಂದ್ರೆ ವ್ಯಕ್ತಿಯ `ಬಯಲಾಜಿಕಲ್ ಏಜ್’ ಬಯಲಾಗುವುದು.

Saturday, May 14, 2011

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ

ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ನಿರ್ದೇಶನಾಲಯ

ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ನಿರ್ದೇಶನಾಲಯ

ಪೋಡಿಯಂ ಬ್ಲಾಕ್ ,ವಿಶ್ವೇಶ್ವರಯ್ಯ ಕೇಂದ್ರ ನೆಲಮಹಡಿ ,
ಡಾ.ಬಿ.ಅರ್.ಅಂಬೇಡ್ಕರ್ ವೀದಿ,
ಬೆಂಗಳೂರು 560001
ದೂರವಾಣಿ ಸಂಖ್ಯೆ: 080 - 22860907, 22866046
ಟೆಲಿಫ್ಯಾಕ್ಸ್: 22866066.

Wednesday, May 11, 2011

SSLC RESULTS 2011

2010-2011ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಇದೇ ಬರುವ ಗುರುವಾರ ದಿನಾಕ ಹನ್ನೆರಡರಂದು ಪ್ರಕಟವಾಗಲಿದೆ. ಅಂದು ಸಂಜೆ ವೆಬ್‌ಸೈಟ್‌ಗಳಲ್ಲಿ ಫಲಿತಾಂಶ ಲಭ್ಯವಾಗಲಿದೆ.
13ರಂದು ಆಯಾ ಪ್ರೌಢಶಾಲೆಗಳಲ್ಲಿ ಪ್ರಕಟಿಸಲು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಸಿದ್ಧತೆ ಮಾಡಿಕೊಂಡಿದೆ.

ಈ ಕೆಳಗಿನ ವೆಬ್ ತಾಣಗಳಲ್ಲಿ ಪಲಿತಾಂಶವನ್ನು ವೀಕ್ಷಿಸಬಹುದಾಗಿದೆ. 
http://karresults.nic.in/
www.schools9.com
www.indiaresults.com
www.exametc.com
www.bangaloreeducation.com
www.karnataka.com
www.educationgateway.co.in
www .examresults.net
www.resultskarnatakaeducation.net

Sunday, May 8, 2011

ಅಮ್ಮನ ದಿನ - ಮಮತೆಯ ಮಾತೆಯ ಸ್ಮರಿಸೋಣ


ಆ ದಿನ ಬಂದೊಡನೆಯೇ ಇಂದು ನಾನು ಅಮ್ಮನಿಗಾಗಿ ಏನು ಮಾಡಬೇಕು? ಆ ದಿನದಂದು ಅವಳನ್ನು ಹೇಗೆ ಸಂತಸಪಡಿಸಬೇಕು, ಅವಳಿಗೆ ಏನು ಕೊಡಬೇಕು ಎಂಬ ಪ್ರಶ್ನೆಗಳು ನಮ್ಮನ್ನು ಕಾಡುತ್ತವೆ.

ಆ ದಿನದಂದು ಮಾತ್ರ ಏಕೆ ಅಂತಹ ಆಲೋಚನೆಗಳು ಮೂಡುತ್ತವೆ? ಪ್ರತಿ ದಿನ ಅಮ್ಮನನ್ನು ಕಾಳಜಿಯಿಂದ ಏಕೆ ನೋಡಬಾರದು? ಎಲ್ಲಾ ದಿನಗಳು ಅಮ್ಮನ ದಿನ ಏಕಾಗಬಾರದು, ಅಲ್ಲವೇ? ಅದೇ ನೋಡಿ, ಅಂದು ಮಾತ್ರ ನಮಗೆ ಅವಳ ಮೇಲೆ ಎಲ್ಲಿಲ್ಲದ ಪ್ರೀತಿ, ಅವಳಿಗೆ ಮೆಚ್ಚುವಂತಹ ಕೊಡುಗೆಗಳು! ಅಬ್ಬಾ ಬೇಡ, ಅಂದು ಅಮ್ಮನನ್ನು, 'ಅಮ್ಮಾ ನೀನು ಏನೂ ಮಾಡಬೇಡ, ಇಂದು ಹಾಯಾಗಿ ಕುಳಿತುಕೋ' ಎಂದು ಮನೆಯಲ್ಲಿ ಮಕ್ಕಳು ಇನ್ನಿಲ್ಲದ ಮಾತುಗಳಿಂದ ಅವಳನ್ನು ಹೊಗಳಿ ಅಟ್ಟಕ್ಕೇರಿಸುತ್ತಾರೆ. ದೂರದಲ್ಲಿರುವ ಮಕ್ಕಳು ಫೋನಿನ ಮೂಲಕ ಅಮ್ಮನಿಗೆ ಶುಭಾಶಯಗಳನ್ನು ತಿಳಿಸುತ್ತಾರೆ. ಈಗ ಹೇಳಿ, ಇಂತಹ ಕಾಳಜಿ ಪ್ರತಿ ದಿನ ಮಕ್ಕಳು ಆ ತಾಯಿಯ ಮೇಲೆ ತೋರಿಸಿದರೆ ಆ ಮಹಾ ತಾಯಿ ಎಷ್ಟು ಸಂತಸ ಪಡುತ್ತಾಳೆ ಗೊತ್ತೆ! ಆಗ ಪ್ರತಿದಿನ ಅಮ್ಮನ ದಿನವೇ ಆಗಿರುತ್ತದೆ. ಅದಕ್ಕೆಂದು ಮೀಸಲಿಡುವ ದಿನವೇ ಆಗಬೇಕಾಗಿಲ್ಲ.

ತುಸು ಹೊತ್ತು ನಮ್ಮ ಬಾಲ್ಯವನ್ನು ನೆನಪಿಸಿಕೊಂಡಾಗ... ಅಮ್ಮನ ಸೆರಗು ಹಿಡಿದು ಅವಳ ಹೆಜ್ಜೆಯನ್ನೇ ಹಿಂಬಾಲಿಸುತ್ತಾ ಅವಳ ನೆರಳಿನಲ್ಲಿಯೇ ಕಾಲ ಕಳೆಯುತ್ತಿರುತ್ತೇವೆ, ಎಲ್ಲಕ್ಕೂ ಅವಳೇ ಇರಬೇಕು. ಅಮ್ಮನಿಲ್ಲದೇ ಒಂದು ಕ್ಷಣವೂ ಬಿಟ್ಟಿರಲಾಗದು. ಆದರೆ ಬೆಳೆಯುತ್ತಾ ಬೆಳೆಯುತ್ತಾ ಅವಳ ಆಸರೆಯಿಂದ ಸ್ವಲ್ಪ ದೂರ ಸರಿದು ನಮ್ಮದೇ ಭಾವನಾಲೋಕದಲ್ಲಿ ಕಾಲ ಕಳೆಯಲು ಇಷ್ಟಪಡುತ್ತೇವೆ. ಹೀಗೆ ಏನೇ ಆದರೂ ಅಮ್ಮ ಎನ್ನುವ ಪದ ನಮ್ಮ ಮನವನ್ನು ರೋಮಾಂಚನಗೊಳಿಸುತ್ತದೆ ಅಲ್ಲವೇ? ಅಕಸ್ಮಾತ್ ನಮಗೇನಾದರು ಆಘಾತ ಅಥವಾ ನೋವುಂಟಾದಾಗ ಅಮ್ಮಾ....! ಎನ್ನುತ್ತೇವೆ ವಿನಃ ಅಪ್ಪಾ, ಅಜ್ಜಿ, ತಾತಾ ಎಂದು ಕರೆಯುವುದಿಲ್ಲ, ಇದು ಸಹಜ.

ಅಮ್ಮ, ಒಂದು ಮಗುವಿಗೆ ತಾಯಿಯಾಗಿ, ಗುರುವಾಗಿ ಮತ್ತು ಸ್ನೇಹಿತೆಯಾಗಿ ಆ ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ಪಾತ್ರಳಾಗುತ್ತಾಳೆ. ಇಂದು ನಾವಿರುವ ಸ್ಥಿತಿಗೆ ಅವಳ ಆಸರೆ, ಅಕ್ಕರೆ ಮತ್ತು ಪ್ರೋತ್ಸಾಹವೇ ಕಾರಣ. ಅಮ್ಮನಲ್ಲಿ ಎಳ್ಳಷ್ಟೂ ಮತ್ಸರ, ದ್ವೇಷ ಮತ್ತು ಅಸೂಯೆಯಿಲ್ಲದೆ ಪ್ರತಿ ಕ್ಷಣವೂ ತನ್ನ ಮಗುವಿಗಾಗಿ ಹಾತೊರೆಯುತ್ತಾಳೆ. ಇಂತಹ ಅಮೂಲ್ಯವಾದ ಜೀವಕ್ಕೆ ನಾವು ಎಷ್ಟು ಋಣಿಯಾಗಿದ್ದರೂ ಸಾಲದು.

ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ ಎಂಬ ಗಾದೆಯಂತೆ ಯಾವುದೇ ಪದಾರ್ಥಕ್ಕೆ ಉಪ್ಪಿಲ್ಲದಿದ್ದರೆ ಹೇಗೆ ರುಚಿಯಿರುವುದಿಲ್ಲವೊ ಅದೇ ರೀತಿ ತಾಯಿಗಿಂತ ಮಿಗಿಲಾದ ಸ್ನೇಹಿತರು ಹಾಗೂ ಬಾಂಧವ್ಯವಿರುವುದಿಲ್ಲ. ನಾವು ತಾಯಿಗೆ ಸದಾ ಒಂದು ಉನ್ನತ ಸ್ಥಾನವನ್ನು ಕೊಡಬೇಕು, ಅವಳನ್ನು ಗೌರವಿಸಬೇಕು ಹಾಗೂ ಆರಾಧಿಸಬೇಕು. ಎಂದಿಗೂ ಅವಳನ್ನು ನಾವು ನಿಂದಿಸಬಾರದು, ಅವಳ ಮಾತೃ ಹೃದಯಕ್ಕೆ ನೋವನ್ನುಂಟುಮಾಡಬಾರದು.

ಒಂದು ಹೆಣ್ಣಿಗೆ ಮಡದಿ, ಅತ್ತೆ, ಸೊಸೆ, ತಂಗಿ, ಅಕ್ಕ, ಹೀಗೆ ಹಲವಾರು ಸ್ಥಾನಗಳಿಗಿಂತ ತಾಯಿಯ ಸ್ಥಾನ ಅತಿ ಮುಖ್ಯವಾದುದು. ಆ ಸ್ಥಾನಕ್ಕೆ ಎಷ್ಟು ಮಹತ್ವವಿದೆಯೆಂದು ನಾವು ಲೆಕ್ಕಿಸಲು ಸಾಧ್ಯವಿಲ್ಲ. ಅವಳಲ್ಲಿ ವಿಶಾಲವಾದ ಮನೋಭಾವನೆಯಿದೆ, ತ್ಯಾಗಮಯಿ, ಕರುಣಾಮಯಿ ಹಾಗೂ ಕ್ಷಮಯಾಧರಿತ್ರಿ ಅವಳು. ಇಂತಹ ಎಲ್ಲಾ ಗುಣಗಳನ್ನು ನಾವು ಯಾವ ಸಂಬಂಧದಲ್ಲಿಯೂ ಕಾಣಲಾಗುವುದಿಲ್ಲ.

ನಮ್ಮ ಜೀವನದಲ್ಲಾಗುವ ಬದಲಾವಣೆಗಳಿಗೆ ಯಾರ ಹೊಣೆಯೂ ಕಾರಣವಲ್ಲ, ಹಾಗೆಯೇ ಅಮ್ಮನ ಪ್ರೀತಿ ಯಾವ ಸಂಬಂಧಗಳ ಹೋಲಿಕೆಗೂ ಸಲ್ಲದು. 'ಹೆತ್ತವರಿಗೆ ಹೆಗ್ಗಣ ಮುದ್ದು' ಎನ್ನುವ ಹಾಗೆ ಅವಳಲ್ಲಿ ತನ್ನ ಮಗುವಿನ ಅತಿಯಾದ ಕಾಳಜಿ ಕೆಲವೊಮ್ಮೆ ಅನಾಹುತವಾಗಬಹುದೇ ವಿನಃ ಅವಳಲ್ಲಿ ಅಸೂಯೆ, ಸ್ವಾರ್ಥ ಇರುವುದಿಲ್ಲ. ಹೀಗೆ ನಾವು ಅಮ್ಮನ ನಿಜವಾದ ಪ್ರೀತಿಯನ್ನು- ಅವಳ ಕಾತುರತೆಯನ್ನು ಅರ್ಥಮಾಡಿಕೊಂಡು ನಮಗಾಗಿ, ನಮ್ಮ ಒಳಿತಿಗಾಗಿ ಸದಾ ಚಿಂತಿಸುವ ಆ ಮಾತೃ ಹೃದಯಕ್ಕೆ ಸಂತೋಷ ಉಣಿಸುವುದೇ ಮಕ್ಕಳ ಕರ್ತವ್ಯ. ಅಂತಹಾ ಅಮ್ಮನನ್ನು ಎಂದೆಂದಿಗೂ ಸ್ಮರಿಸೋಣ.

Friday, May 6, 2011

ಪದ ರಕ್ಷಣೆಗೆ ದೀಕ್ಷೆ

 

ಹೊಸ ಪದಗಳು ಚಾಲ್ತಿಗೆ ಬರುವುದು ಹಳೇ ಪದಗಳು ನಾಪತ್ತೆಯಾಗುವುದು ಭಾಷೆಯೊಂದರಲ್ಲಿ ಸಾಮನ್ಯ. ಹೊಸ ಪದಗಳು ಪ್ಯಾಷನಬಲ್ ಆಗಿರುತ್ತವೆ. ಬಬ್ಲಿಯಾಗಿರುತ್ತವೆ. ಅವುಗಳ ಬಳಕೆಯಿಂದ ನಮ್ಮನ್ನು ನಾವು ಹೊಸದಾಗಿ ಪ್ರಸೆಂಟ್ ಮಾಡಿಕೊಳ್ಳಬಹುದು ಎಂಬುದು ಎಲ್ಲಾ ಸಂದರ್ಭಗಳಲ್ಲೂ ನಿಜವಾಗಿರುವುದಿಲ್ಲ. ಹಳೇ ಪದಗಳು ಕೂಡ ಆಕರ್ಷಕವಾಗಿರುತ್ತವೆ. ನೀವು ಮುಳೀಯ ತಿಮ್ಮಪ್ಪಯ್ಯ, ಗೋವಿಂದ ಪೈ, ಸೇಡಿಯಾಪು ಕೃಷ್ಣಭಟ್, ಗೋರೂರು,ಡಿ.ಎಲ್.ಎನ್. ಕೆ.ವಿ.ಸುಬ್ಬಣ್ಣ, ನವರತ್ನ ರಾಮಾರಾವ್ ಮುಂತಾದ ಹಳೇಯ ತಲೆಮಾರಿನಲೇಕಕರ ಭಾಷೆಯನ್ನು ಗಮನಿಸಿದರೆ ಅದರಲ್ಲಿ ತಾಜಾತನ ಮತ್ತು ಚೆಲುವು ಕಾಣಿಸುತ್ತದೆ. 
ಒಂದು ಕಾಲದಲ್ಲಿ "ಅರ್ಥಪೂರ್ಣ"ವಾಗಿ ಬದುಕಿದ್ದ ಪದಗಳು ಅನಂತರ ಯಾರೂ ಬಳಸದೆ ಮೂಲೆಗೆ ಬಿದ್ದಿರುವುದಕ್ಕೆ ಮತ್ತೆ ಚಾಲನೆ ಕೊಡುವ ಕೆಲಸವನ್ನು ಆಕ್ಸ್ ಪರ್ಡ್ ವಿವಿ ಪ್ರಸ್ ಮಾಡುತ್ತಿದೆ. ಇದಕ್ಕಾಗಿ ಅದು http://www.savethewords.org/ ಆರಂಭಿಸಿದೆ.
http://www.savethewords.org/ ಎಂದು ಗಣಕದಲ್ಲಿ ನಮೊದಿಸಿದ ಕೂಡಲೇ ನೀವು ಈ ಭಾಷಾ ತಾಣಕ್ಕೆ ಪಯಣಿಸುತ್ತೀರಿ. ಅಲ್ಲಿ ಅಪರೂಪದ ಪದಗಳ 'ಅಂಗಡಿ' ತೆರೆದುಕೊಳ್ಳುತ್ತವೆ. ಪದವನ್ನು ಆಯ್ಕೆ ಮಾಡಿಕೊಂಡ ಮೇಲೆ ಅದನ್ನು ನಿತ್ಯದ ಮಾತುಕತೆಯಲ್ಲಿ ಬಳಸುವ 'ಪದದೀಕ್ಷೆ' ಪಡೆಯುತ್ತೀರಿ. ಈ ವೆಬ್ ತಾಣ ನಿಮಗೆ ಟಿಪ್ಸ್ ಕೊಡುತ್ತಾ ಹೋಗುತ್ತದೆ. ನಿಮ್ಮ ಪದ ಸಂಪತ್ತನ್ನು ಹೆಚ್ಚಿಸುತ್ತದೆ. '"You look quite crassulent in that dress" ಎನ್ನುತ್ತೀರಿ. crassulent ಅನ್ನೋದು ಈ ಜಾಲ ತಾಣ ಹೇಳೀಕೊಟ್ಟಿರುವ ಹೊಸ ಪದ. ಇದರ ಅರ್ಥ overweight. ಬಳಸಿದ ಕೂಡಲೇ ಬಿದ್ದುಕೊಂಡಿದ್ದ ಪದಕ್ಕೆ ಜೀವಸಂಚಾರವಾಗುತ್ತದೆ. ಅನಂತರ ಅದರ ಓಡಾಟವನ್ನು ತಡೆಯುವವರಿರುವುದಿಲ್ಲ. ಇದುವರೆಗೆ ಒಂದುವರೆ ಲಕ್ಷಕ್ಕೂ ಹೆಚ್ಚು ಮಂದಿ ಹಳೇ ಪದಗಳನ್ನು ಬಳಸುವುದಕ್ಕೆ ವಚನಬದ್ದರಾಗಿದ್ದಾರೆ. ಹಳೇ ಶಬ್ದಗಳ ರೆಕಾರ್ಡಿಂಗ್, ಸಂಶೋದನೆ, ವಿಶ್ಲೇಷಣೆ ಹಾಗೂ ಇವತ್ತಿನ ಬಳಕೆಗೆ ಅನುವು ಮಾಡಿಕೊಡುವ ಕೆಲಸವನ್ನು ಈ ಜಾಲತಾಣ ಮಾಡುತ್ತಿದೆ.

ನ್ಯಾನೊ ಡೀಸಲ್: ಸಾಟಿಯಿಲ್ಲದ 40 ಕಿ.ಮೀ. ಮೈಲೇಜ್

ಟಾಟಾ ಅಂದ್ರೆ ಹಾಗೇನೇ. ಹಲವು ಆರಂಭಗಳ ಸರದಾರ. ವಿಶ್ವದಲ್ಲಿಯೇ ಅಗ್ಗದ ಪುಟ್ಟ ಕಾರು ತಂದ ಖ್ಯಾತಿ ಈ ಕಂಪನಿಗಿದೆ. ಇದೀಗ ಜಗತ್ತಿನ ಪುಟ್ಟ ಫ್ಯಾಮಿಲಿ ಸವಾರಿಯ ಕಾರಿಗೆ ಡೀಸಲ್ ಎಂಜಿನ್ ಅಳವಡಿಸಲು ಹೊರಟಿದೆ. ಹೀಗಾಗಿ ಇದು ಭಾರತದಲ್ಲಿಯೇ ಅತ್ಯಧಿಕ ಮೈಲೇಜ್ ನೀಡುವ ಕಾರೆಂಬ ಹೆಗ್ಗಳಿಕೆ ಪಡೆಯಲಿದೆ. ನೂತನ ನ್ಯಾನೊ ಡೀಸಲ್ ಆವೃತ್ತಿ ಪ್ರತಿಲೀಟರ್ ಗೆ ಸುಮಾರು 40 ಕಿ.ಮೀ. ಮೈಲೇಜ್ ನೀಡುವ ನಿರೀಕ್ಷೆಯಿದೆ. ಭಾರತದಲ್ಲಿ ಇಷ್ಟು ಮೈಲೇಜ್ ನೀಡುವ ಕಾರು ಇಲ್ಲಿವರೆಗೆ ರಸ್ತೆಗಿಳಿದಿಲ್ಲ.

ನೂತನ ಡೀಸಲ್ ಕಾರು ಪ್ರಸಕ್ತ ಆರ್ಥಿಕ ವರ್ಷದಲ್ಲಿಯೇ ರಸ್ತೆಗಿಳಿಯಲಿದೆ ಎಂದು ಬಾಷ್ ಇಂಡಿಯಾದ ಹಿರಿಯ ಕಾರ್ಯನಿರ್ವಹಣಾಧಿಕಾರಿಯೊಬ್ಬರು ಪ್ರಕಟಿಸಿದ್ದಾರೆ. ಬಾಷ್ ಕಂಪನಿಯು ಟಾಟಾ ಕಂಪನಿಯ ಕಾರುಗಳಿಗೆ ಎಂಜಿನ್ ತಯಾರಿಸಿ ಕೊಡುತ್ತಿದೆ. "ನ್ಯಾನೊ ಕಾರುಗಳಿಗೆ ಪೆಟ್ರೊಲ್ ಎಂಜಿನ್ ತಯಾರಿಸಿಕೊಟ್ಟಿದ್ದೇವೆ. ಈಗ ಡೀಸಲ್ ಆವೃತ್ತಿ ಅಭಿವೃದ್ಧಿಪಡಿಸಲು ನೆರವಾಗುತ್ತಿದ್ದೇವೆ. ಈ ಕಾರು ಪ್ರತಿಲೀಟರ್ ಡೀಸಲ್ ಗೆ ಸುಮಾರು 40 ಕಿ.ಮೀ. ಮೈಲೇಜ್ ನೀಡಲಿದೆ" ಎಂದು ಅವರು ಹೇಳಿದ್ದಾರೆ.
ಪ್ರತಿಲೀಟರ್ ಡೀಸಲ್ ಗೆ 40 ಕಿ.ಮೀ. ಮೈಲೇಜ್ ನೀಡಿದರೆ ಹೊಸ ನ್ಯಾನೊ ರನ್ನಿಂಗ್ ದರ ಪ್ರತಿ ಕಿ.ಮೀ.ಗೆ ಕೇವಲ ಒಂದು ರೂಪಾಯಿ ಆಗಿರಲಿದೆ. ಡೀಸಲ್ ಕಾರಿನ ಇಂಧನ ಟ್ಯಾಂಕ್ ಸುಮಾರು 15 ಲೀಟರ್ ಸಾಮರ್ಥ್ಯ ಹೊಂದಿರುವ ನಿರೀಕ್ಷೆಯಿದೆ.

ನೂತನ ಡೀಸಲ್ ಕಾರು ದ್ವಿಚಕ್ರ ವಾಹನ ಗ್ರಾಹಕರನ್ನು ಕೂಡ ಸೆಳೆಯುವ ನಿರೀಕ್ಷೆಯಿದೆ. ಯಾಕೆಂದರೆ ಬಜಾಜ್ ಪಲ್ಸರ್ 180 ಮುಂತಾದ ಬೈಕ್ ದರ ಸುಮಾರು 78 ಸಾವಿರ ರೂ. ಇದ್ದು, ಇಷ್ಟೇ ಮೈಲೇಜ್ ನೀಡುವ ಕಾರು ಗ್ರಾಹಕರನ್ನು ಸೆಳೆದರೆ ಅಚ್ಚರಿಯಿಲ್ಲ.

"ಕಂಪನಿಯ ಕಾರ್ಯತಂತ್ರ, ಅನ್ವೇಷಣೆ ಕುರಿತು ಮಾಹಿತಿ ನೀಡಲು ಇದು ಸೂಕ್ತ ಸಮಯವಲ್ಲ" ಎಂದು ಟಾಟಾ ವಕ್ತಾರರು ಹೇಳಿದ್ದಾರೆ. ಬಜಾಜ್ ಆಟೋ ಕೂಡ ಇದೇ ಹಾದಿಯಲ್ಲಿದೆ. ರೆನಾಲ್ಟ್ ಮತ್ತು ನಿಸ್ಸಾನ್ ಜತೆಯಾಗಿ ಪ್ರತಿ ಲೀಟರ್ ಪೆಟ್ರೊಲ್ ಗೆ 40 ಕಿ.ಮೀ. ಮೈಲೇಜ್ ನೀಡುವ ಕಾರೊಂದನ್ನು ಹೊರತರಲಿದೆ. ಈ ಕಾರು 2011ರಲ್ಲಿ ರಸ್ತೆಗಿಳಿಯುವ ನಿರೀಕ್ಷೆಗಳಿವೆ.

Monday, May 2, 2011

ನಿಮ್ಮ ಪಡಿತರ ಚೀಟಿಯನ್ನು ಆಂರ್ತಜಾಲದಲ್ಲಿ ವೀಕ್ಷಿಸಲು

ಬಿಪಿಎಲ್ ಪಡಿತರ ಚೀಟಿದಾರರನ್ನು ಬಯೋಮೆಟ್ರಿಕ್ ಕಂಪ್ಯೂಟರ್ ಸಿಸ್ಟಮ್‌ಗೆ ಒಳಪಡಿಸುವ ಮೂಲಕ ಆಹಾರ ಪೂರೈಕೆಯಲ್ಲಿ ಪಾರದರ್ಶಕತೆ ಹೊಂದಿದ್ದು. ಈ ಸಿಸ್ಟಮ್‌ಗೆ ಬಿಪಿಎಲ್ ಫಲಾನುಭವಿಗಳ ಹೆಬ್ಬೆಟ್ಟು ಗುರುತನ್ನು ಪಡೆಯಲಾಗುವುದು. ಫಲಾನುಭವಿ ಹೆಬ್ಬೆಟ್ಟು ಒತ್ತಿದೊಡನೆ ಅವರ ಖಾತೆಯಲ್ಲಿ ಲಭ್ಯವಿರುವ ಸಾಮಗ್ರಿಗಳ ವಿವರ ಹಾಗೂ ಆ ತಿಂಗಳಿನಲ್ಲಿ ಅವರು ಪಡೆದಿರುವ ಸಾಮಗ್ರಿಗಳ ಎಲ್ಲಾ ವಿವರಗಳನ್ನು ಕಂಪ್ಯೂಟರ್ ತೋರಿಸುತ್ತದೆ. ಇದರಿಂದ ಅಂಗಡಿ ಮಾಲೀಕರು ಗ್ರಾಹಕರಿಗೆ ಮೋಸ ಮಾಡುವ ಸಾಧ್ಯತೆ ಇರುವುದಿಲ್ಲ. ಹಾಗೇ ನಿಮ್ಮ ಪಡಿತರ ಚೀಟಿಯನ್ನು ಅಂರ್ತಾಜಲದಲ್ಲಿ ವೀಕ್ಷಿಸಲು ಹಾಗೂ ತಿದ್ದುಪಡಿ, ಹೆಸರು ಸೇರ್ಪಡೆ, ವಿಳಾಸ ಬದಲಾವಣೆಗಾಗಿ ಈ ಕೆಳಗಿನ ಕೋಂಡಿಯನ್ನು ಕ್ಲಿಕ್ಕಿಸಿ.www.ahara.kar.nic.in
http://202.138.100.204/kyrc/RCView.aspx


ಕರ್ನಾಟಕ ರಾಜ್ಯ ಪತ್ರ

ಕರ್ನಾಟಕ ರಾಜ್ಯ ಪತ್ರಗಳನ್ನು ಅಂತರ್ಜಾಲದಲ್ಲಿ ಪಡೆಯಲು ಕೊಂಡಿಯನ್ನು ಕ್ಲಿಕ್ಕಿಸಿ. http://gazette.kar.nic.in/

Sunday, May 1, 2011

ಕಾರ್ಮಿಕ ದಿನಾಚರಣೆಯ ಔಚಿತ್ಯ ಹಾಗೂ ಸಂದೇಶ

"ವಿಶ್ವಕಾರ್ಮಿಕ ದಿನಾಚರಣೆ"ಯು ಪ್ರಾರಂಭವಾಗಿ 124 ವರುಷಗಳು ಕಳೆದು, ಇಂದು (ಮೇ 1, 2010) 125ನೆಯ ಆಚರಣೆ ವಿಶ್ವದಾದ್ಯಂತ ನಡೆಯುತ್ತಿರುವ ಸಂಧಿಕಾಲದಲ್ಲಿ, ಈ ದಿನಾಚರಣೆಯ ಉಗಮ, ಇತಿಹಾಸ ಹಾಗೂ ಪ್ರಸ್ತುತತೆಗಳ ಒಂದು ವಿವೇಚನೆಯು ಔಚಿತ್ಯಪೂರ್ಣವಾಗುತ್ತದೆ. ಅಂತೆಯೇ ಈ ಕಿರುಲೇಖನದಲ್ಲಿ ಒಂದೆಡೆ "ವಿಶ್ವಕಾರ್ಮಿಕ ದಿನಾಚರಣೆ"ಯ ಇತಿಹಾಸದ ಇಣುಕುನೋಟವನ್ನು ನೀಡುವುದರೊಡನೆ, ಇನ್ನೊಂದೆಡೆ, ಇದರ ಪ್ರಸ್ತುತ ಔಚಿತ್ಯದ ಪುನರಾವಲೋಕನೆಯನ್ನೂ ಮಾಡಲಾಗಿದೆ.

ಇತಿಹಾಸದ ಇಣುಕುನೋಟ:

ವೈಜ್ಞಾನಿಕ ಸಮಾಜವಾದದ ಪ್ರವರ್ತಕರಾದ ಕಾರ್ಲ್‌ಮಾರ್ಕ್ಸ್ ಹಾಗೂ ಫ್ರೆಡ್ರಿಕ್ ಎಂಗೆಲ್ಸ್ ಇವರು ಎಂಟು ಗಂಟೆಗಳ ಕೆಲಸದ ದಿನ ಜಾರಿಗೆ ಬರಬೇಕು ಎಂದು ತಮ್ಮ ಅನೇಕ ಬರವಣಿಗೆಗಳಲ್ಲಿ ಪ್ರತಿಪಾದಿಸಿದ್ದರು. ಜೆನೀವಾದಲ್ಲಿ ನಡೆದ ಮೊದಲನೆ ಇಂಟರ್‌ನ್ಯಾಷನಲ್‌ದಲ್ಲಿ 1866ರಲ್ಲೇ ಈ ಕುರಿತು ತೀರ್ಮಾನವನ್ನು ಕೈಗೊಳ್ಳಲಾಗಿತ್ತು ಕೂಡಾ. ಅಂತೆಯೇ 1866 ಆಗಸ್ಟ್‌ನಲ್ಲಿ ಅಮೆರಿಕೆಯ 60 ಸಂಘಟನೆಗಳಿಗೆ ಸೇರಿದ ಲಕ್ಷಾವಧಿ ಕಾರ್ಮಿಕರು ಕೂಡ ಈ ತೀರ್ಮಾನವನ್ನು ಕೈಗೊಂಡಿದ್ದರು. ಹೀಗಾಗಿ ಎಂಟು ಗಂಟೆಗಳ ದಿನದ ಬೇಡಿಕೆ ವಿಶ್ವದ ಎಲ್ಲ ಕಾರ್ಮಿಕರ ಬೇಡಿಕೆಯಾಗಿ ಪರಿವರ್ತಿತಗೊಂಡಿತು. ಆದರೆ, ಈ ಬೇಡಿಕೆಯನ್ನು ಸಾಧಿಸಿಕೊಳ್ಳಲು ಅಮೆರಿಕೆಯ ಚಿಕಾಗೋ ನಗರದ ಹೇಮಾರ್ಕೆಟ್ ಸ್ಕ್ವಯರ್‌ದಲ್ಲಿ ನಡೆದ ಹೋರಾಟ ಜಾಗತಿಕ ಕಾರ್ಮಿಕ ಹೋರಾಟಗಳ ಇತಿಹಾಸದಲ್ಲಿ ಕೆಂಪು ಅಕ್ಷರ ದಿನವಾಗಿ ಪರಿಣಮಿಸಿತು.

1886 ಮೇ 1, ಕಾರ್ಮಿಕ ಹೋರಾಟಗಳ ಇತಿಹಾಸದಲ್ಲಿ ಒಂದು ಮಹತ್ವದ ಘಟ್ಟ. ಆ ದಿನ ಅಮೆರಿಕೆಯಲ್ಲಿ ಸುಮಾರು ಐದು ಲಕ್ಷ ಜನ, ಎಂಟು ಗಂಟೆಯ ಕೆಲಸದ ದಿನಕ್ಕಾಗಿ ಪ್ರದರ್ಶನವನ್ನು ಹೂಡಿದ್ದರು. ಇವರಲ್ಲಿ ಸುಮಾರು ಎರಡು ಲಕ್ಷ ಜನ ಮುಷ್ಕರವನ್ನು ಹೂಡಿದ್ದರು. ಅಂದು ಚಿಕಾಗೋ ನಗರದಲ್ಲೇ 80 ಸಾವಿರ ಕಾರ್ಮಿಕರು ಮುಷ್ಕರವನ್ನು ಹೂಡಿದ್ದರು. ಈ ಚಳವಳಿಯನ್ನು ದಮನಗೊಳಿಸಲು ಪ್ರತ್ಯೇಕವಾಗಿ ಖಾಸಗಿ ಗೂಂಡಾ ಕಂಪೆನಿಗಳು ದೌರ್ಜನ್ಯವನ್ನು ನಡೆಸಿದ್ದವು. ಇದಕ್ಕೆ ಒಂದು ಉದಾಹರಣೆ, ಪಿಂಕರ್‌ಟನ್ ಕಂಪನಿ . ಇದು ಹೇಳಿತ್ತು: "ಈ ಕಾರ್ಮಿಕರಿಗೆ ತುಪಾಕಿಗಳಿಂದ ಹಬ್ಬದ ಊಟ ಬಡಿಸಬೇಕು" ಎಂದು. "ಕಾರ್ಮಿಕ ವರ್ಗದ ಒಂದು ಅರ್ಧಭಾಗವನ್ನು ಕೊಲ್ಲಿಸಲು, ಇನ್ನೊಂದು ಅರ್ಧ ಭಾಗವನ್ನು ಬಾಡಿಗೆಗೆ ಪಡೆಯಬಲ್ಲ ಸಾಮರ್ಥ್ಯ ನನಗಿದೆ" ಎಂದು ಓರ್ವ ದೊಡ್ಡ ಏಕಸ್ವಾಮ್ಯ ಬಂಡವಾಳಶಾಹಿಯಾಗಿದ್ದ ಜಾಯ್‌ಗೌಲ್ಡ್ ಹೇಳಿದ್ದ. ಈ ಬಗೆಯಾದ ಬಂಡವಾಳಶಾಹಿಗಳ ದೌರ್ಜನ್ಯವನ್ನು ಎದುರಿಸಿ ಅಮೆರಿಕೆಯ ಕಾರ್ಮಿಕವರ್ಗ ಹೋರಾಟಕ್ಕೆ ಧುಮುಕಿತ್ತು.

ಈ ಬೃಹತ್ ಚಳವಳಿಯನ್ನು ಹತ್ತಿಕ್ಕಲು ಬಂಡವಾಳಶಾಹಿ ವರ್ಗ ಹಾಗೂ ಅಮೆರಿಕನ್ ಸರ್ಕಾರ ಒಟ್ಟು ಕೂಡಿಕೊಂಡಿತ್ತು. ಮೇ 1ರಂದು ಪ್ರಾರಂಭಮಾಡಿದ್ದ ಚಳವಳಿ ಮುಂದುವರಿದಿತ್ತು; ಮೇ 3ರಂದು ಬಂಡವಾಳಶಾಹಿಗಳು ಈ ಮುಷ್ಕರವನ್ನು ಮುರಿಯಲು, ಅದರಲ್ಲಿಯ ಒಂದು ಗುಂಪನ್ನು ಇನ್ನಿತರರ ಮೇಲೆ ಸಂಘರ್ಷ ಮಾಡಲು ಪ್ರೇರೇಪಿಸಿದ್ದರು. ಈ ಸಂಘರ್ಷವನ್ನು ಹತ್ತಿಕ್ಕುವ ನೆಪಹೂಡಿ, ಪೋಲೀಸರು ಆರು ಕಾರ್ಮಿಕರನ್ನು ಗುಂಡಿಕ್ಕಿ ಕೊಂದಿದ್ದರು. ಈ ಪೋಲೀಸ್ ದೌರ್ಜನ್ಯವನ್ನು ಪ್ರತಿಭಟಿಸಲು, ಚಿಕಾಗೋ ನಗರದ ಹೇಮಾರ್ಕೆಟ್ ಸ್ಕ್ವಯರ್‌ದ ಬೃಹತ್ ಮತಪ್ರದರ್ಶನವನ್ನು ನಡೆಸಲಾಗಿತ್ತು. ಈ ಸಭೆಯು ರಾತ್ರಿ 10 ಗಂಟೆಗೆ ಪೂರ್ಣಗೊಳ್ಳುತ್ತಿದ್ದಂತೆ, ಹಿಂಭಾಗದಿಂದ ಪೋಲೀಸ್ ಏಜೆಂಟೊಬ್ಬನು ಕಾರ್ಮಿಕರ ಮೇಲೊಂದು ಬಾಂಬನ್ನು ಎಸೆದಿದ್ದನು. ಇದರಿಂದ ಗೊಂದಲ ಉಂಟಾಗಿ, ಕತ್ತಲಲ್ಲಿ ಸಿಕ್ಕಾಪಟ್ಟೆ ಗುಂಡಿಕ್ಕಲು ಉದ್ಯುಕ್ತರಾದರು. ಇದರ ಪರಿಣಾಮವಾಗಿ ಏಳೆಂಟು ಕಾರ್ಮಿಕರು ಸ್ಥಳದಲ್ಲೇ ಅಸುನೀಗಿದ್ದರು. ಮೂವತ್ತು-ನಾಲ್ವತ್ತು ಮಂದಿ ಕಾರ್ಮಿಕರು ಗಾಯಗೊಂಡಿದ್ದರು. ಕಾರ್ಮಿಕರ ಕೋಪ ಕಟ್ಟೆ ಒಡೆದು, ಘರ್ಷಣೆಗೆ ಇಳಿದರು. ಒಬ್ಬ ಪೋಲೀಸ್ ಸ್ಥಳದಲ್ಲೇ ಮೃತಪಟ್ಟಿದ್ದ; ತೀವ್ರವಾಗಿ ಗಾಯಗೊಂಡಿದ್ದ ಏಳು ಜನ ಪೋಲೀಸರು ನಂತರ ಮರಣಹೊಂದಿದ್ದರು.

ಈ ಸಭೆಯಲ್ಲಿದ್ದ ಪ್ರಮುಖ ನಾಯಕರೆಂದರೆ, ಆಲ್ಬರ್ಟ್ ಪಾರ್ಸನ್ಸ್ ಹಾಗೂ ಅಗಸ್ಟ್ ಸ್ಟೈಸ್. ಆದರೆ ಅಮೆರಿಕನ್ ಸರ್ಕಾರ ಎಂಟು ಜನ ಕಾರ್ಮಿಕ ನಾಯಕರ ಮೇಲೆ ಖೊಟ್ಟಿ ಕೇಸನ್ನು ದಾಖಲಿಸಿತ್ತು. ತೋರಿಕೆಯ ವಿಚಾರಣೆಯಲ್ಲಿ ಇವರಲ್ಲಿ ಏಳು ಜನರಿಗೆ ಗಲ್ಲುಶಿಕ್ಷೆಯನ್ನು, ಇನ್ನೊಬ್ಬನಿಗೆ ಹದಿನೈದು ವರುಷಗಳ ಜೈಲುವಾಸವನ್ನು ವಿಧಿಸಲಾಯಿತು. ಈ ರೀತಿ ಶಿಕ್ಷೆಗೆ ಒಳಗಾಗಿದ್ದ ಕಾರ್ಮಿಕ ನಾಯಕವೀರರು ಹೇಳಿದ್ದರು - "ನಮ್ಮನ್ನು ಗಲ್ಲಿಗೆ ಏರಿಸುವುದರಿಂದ ಕಾರ್ಮಿಕ ಚಳವಳಿಯನ್ನು ದಮನಗೊಳಿಸಬಹುದೆಂದು ಭಾವಿಸಿದ್ದರೆ ಅದು ಭ್ರಮೆ ಮಾತ್ರ. ನೀವು ಇದರಿಂದ ಒಂದು ಕಿಡಿಯನ್ನು ಆರಿಸಬಹುದು. ಆದರೆ ನಿಮ್ಮ ಮುಂದೆ, ನಿಮ್ಮ ಸುತ್ತು ಈ ಜ್ವಾಲೆ ಉರಿಯುತ್ತಿದೆ. ಈ ದಾವಾಗ್ನಿಯನ್ನು ನೀವು ಆರಿಸಲಾರಿರಿ" ಎಂದು.

ಗಲ್ಲುಶಿಕ್ಷೆಗೆ ಒಳಗಾಗಿದ್ದವರಲ್ಲಿ ಒಬ್ಬನಾದ ಆಗಸ್ಟ್ ಸ್ಟೈಸ್ ಗವರ್ನರ್‌ಗೆ ಒಂದು ಪತ್ರವನ್ನು ಬರೆದು ಹೇಳಿದ್ದ. "ನೀವು ಮಾಡುತ್ತಿದ್ದುದು ಶಾಸನಬದ್ಧ ಕೊಲೆ. ನಾನು ಆ ಸಭೆಯಲ್ಲಿದ್ದ ತಪ್ಪಿಗಾಗಿ ನನ್ನನ್ನು ಗಲ್ಲಿಗೆ ಏರಿಸುತ್ತಿದ್ದೀರಿ. ಇದೇ ಅಪರಾಧವಾದರೆ, ನನ್ನ ಹೆಂಡತಿ ಹಾಗೂ ನನ್ನ ಮಕ್ಕಳೂ ಆ ಸಭೆಯಲ್ಲಿದ್ದರು. ಅವರಿಗೂ ಗಲ್ಲುಶಿಕ್ಷೆ ಕೊಡಿ" ಎಂದು. ಅಂತೆಯೇ ಅವನು ತನ್ನ ಹೆಂಡತಿಗೆ ಬರೆದ ಪತ್ರದಲ್ಲಿ ಹೇಳಿದ್ದ - "ನಾನು ಇಲ್ಲದಿದ್ದರೂ ಸೋಷಲಿಸಮ್ ಮಹದಾಶಯದ ಸಾಧನೆಗಾಗಿ ಈ ಚಳವಳಿಯನ್ನು ನೀನು ಮುಂದುವರಿಸಬೇಕು" ಎಂದು. ಆಗಸ್ಟ್ ಸ್ಟೈಸ್‌ನ ಹೆಂಡತಿ ಲೂಸಿಯು, ಪತಿವಾಕ್ಯದಂತೆ ತನ್ನ ತೊಂಭತ್ತನೆಯ ವಯಸ್ಸಿನವರೆಗೆ ಸಮಾಜವಾದೀ ಚಳವಳಿಗಳಲ್ಲಿ ಭಾಗವಹಿಸಿ, 7-3-1942ರಲ್ಲಿ ನಿಧನಹೊಂದಿದ್ದಳು. ಆಕೆ ಸಾಯುವ ಕೆಲ ತಿಂಗಳ ಹಿಂದೆ, ಹೇಮಾರ್ಕೆಟ್ ಸ್ಕ್ವಯರ್‌ದಲ್ಲಿ ನಡೆದ ಮೇಡೇ ರ್‍ಯಾಲಿಯಲ್ಲಿ ಭಾಷಣಮಾಡಿ, ಚರಿತ್ರೆಯನ್ನು ನಿರ್ಮಿಸಿದ್ದಳು.

ಈ ಏಳು ನಾಯಕರನ್ನು ಗಲ್ಲುಗೇರಿಸಲು ನಿಗದಿಪಡಿಸಿದ ಮುನ್ನಾದಿನ ನ್ಯೂಯಾರ್ಕ್ ನಗರದಲ್ಲಿ ಏಳುಸಾವಿರ ಕಾರ್ಮಿಕರು ಪ್ರತಿಭಟನಾ ರ್‍ಯಾಲಿಯನ್ನು ಮಾಡಿ, "ನ್ಯಾಯಾಲಯ ಮಾಡುತ್ತಿರುವ ಈ ಕೊಲೆಯನ್ನು ನಾವು ಪ್ರತಿಭಟಿಸುತ್ತೇವೆ" ಎಂದು ಆಗಸದ ಕಿವಿಪಟಲ ಹರಿಯುವಂತೆ ಕೂಗಿದ್ದರು. ಆ ದಿನವೇ ಗಲ್ಲುಶಿಕ್ಷೆಯನ್ನು ಎದುರಿಸಬೇಕಾಗಿದ್ದ ಲಿಂಗ್ ತನ್ನ ಜೈಲು ಕೊಠಡಿಯಲ್ಲೇ ಅಸುನೀಗಿದ್ದ. ಆ ದಿನವೇ ಫೀಲ್ಡನ್ ಹಾಗೂ ಷ್ಯಾಬ್ ಇವರಿಗೆ ವಿಧಿಸಿದ್ದ ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿದಂತೆ ಗವರ್ನರ್ ಒಂದು ಅಧಿಕೃತ ಪ್ರಕಟಣೆಯನ್ನು ಹೊರಡಿಸಿದ್ದು ಗಮನಾರ್ಹ. ಇನ್ನುಳಿದ ನಾಲ್ವರನ್ನು ದಿ|| 11-11-1887ರಂದು ನೇಣುಕಂಬಕ್ಕೆ ಏರಿಸಲಾಯಿತು. ಈ ಎಲ್ಲ ಕಾರ್ಮಿಕ ನಾಯಕರ ತ್ಯಾಗ ಅಮರವಾಗಿದೆ, ಈ ರೋಮಾಂಚಕಾರಿ ಇತಿಹಾಸ ಜಾಗತಿಕ ಕಾರ್ಮಿಕ ಆಂದೋಲನದ ಇತಿಹಾಸದಲ್ಲಿ ರಕ್ತಾಕ್ಷರಗಳಲ್ಲಿ ಬರೆದಿಡಲಾದ ಅಮರ ದಾಖಲಾಗಿದೆ. ವಿಶ್ವ ಕಾರ್ಮಿಕರ ನಿರಂತರ ಸ್ಫೂರ್ತಿಯ ಸೆಲೆಯಾಗಿದೆ.

ಮೇ ದಿನಾಚರಣೆ - ಎಂಟು ಗಂಟೆಗಳ ಕೆಲಸದ ದಿನದ ಹೋರಾಟ - ಇದರ ಮಹತ್ವವನ್ನು ವಿಶ್ವದಲ್ಲೇ ಪ್ರಥಮ ಸಮಾಜವಾದಿ ರಾಷ್ಟ್ರ ನಿರ್ಮಾಪಕ, ರಷ್ಯಾ ಕ್ರಾಂತಿಕಾರಿ ನಾಯಕ ಲೆನಿನ್ ಬಣ್ಣಿಸಿದ್ದು ಹೀಗೆ: "ಮೇ ದಿನಾಚರಣೆ ಒಂದು ಸಾಂಪ್ರದಾಯಿಕ ಕ್ರಿಯೆಯಲ್ಲ. ಶೋಷಿತವರ್ಗಗಳ ಹಾಗೂ ದೇಶಗಳ ವಿಮೋಚನೆಗಾಗಿ ನಡೆಸಬೇಕಾದ ಕ್ರಾಂತಿಕಾರಿ ಹೋರಾಟಗಳು, ರಾಜಕೀಯ ಹೋರಾಟಗಳು, ಸಾಮ್ರಾಜ್ಯಶಾಹಿ ವಿರೋಧಿ ಅಂತಾರರಾಷ್ಟ್ರೀಯ ಕಾರ್ಮಿಕವರ್ಗದ ಹೋರಾಟ, ಇವುಗಳಿಗಾಗಿ ಅವಶ್ಯವಾದ ಚೈತನ್ಯವನ್ನು ಕಾರ್ಮಿಕರು ಬೆಳೆಸಿಕೊಳ್ಳಬೇಕಾದ ಮಹತ್ವದ ದಿನ ಇದು. ತಮಗೆ ಸಂಬಂಧಿಸಿದ ದಿನನಿತ್ಯದ ಬೇಡಿಕೆಗಳಿಗಾಗಿ ಸಣ್ಣ ಸಣ್ಣ ಬೇಡಿಕೆಗಳಿಗಾಗಿ ಆಂದೋಲನ ನಡೆಸುವ ಸಂದರ್ಭವಲ್ಲ ಇದು. ಇಂಥವು ವರ್ಷಾದ್ಯಂತ ಇದ್ದೇಇರುತ್ತವೆ. ಕಾರ್ಮಿಕರು ಈ ಅಂತರವನ್ನು ಅರಿತುಕೊಂಡು ಮೇ ದಿನಾಚರಣೆಯನ್ನು ಆಚರಿಸುವುದು ಅತ್ಯವಶ್ಯ" ಎಂದು.

ಪ್ರಚಲಿತ ಪ್ರಸ್ತುತತೆ

"ವಿಶ್ವದ ಕಾರ್ಮಿಕರೇ ಒಂದಾಗಿರಿ, ಒಂದಾಗಿರಿ" - ಇದು ವಿಶ್ವಕಾರ್ಮಿಕ ದಿನಾಚರಣೆಯ ಧ್ಯೇಯವಾಕ್ಯ. ಹಾಗಾದರೆ ಏತಕ್ಕಾಗಿ ವಿಶ್ವದ ಕಾರ್ಮಿಕರು ಒಂದಾಗಬೇಕು?" ಎಂಬ ಪ್ರಶ್ನೆಗೆ ಉತ್ತರ - "ವಿಶ್ವದಾದ್ಯಂತ ಸಮಾಜವಾದೀ ಸಮಾಜದ ಸ್ಥಾಪನೆಗೆ" ಎಂದು. 2008ರಲ್ಲಿ ಅಮೆರಿಕೆಯಲ್ಲಿ ತೀವ್ರ ಆರ್ಥಿಕ ಮುಗ್ಗಟ್ಟು ಸಂಭವಿಸಿ, ಇದು ವಿಶ್ವದಾದ್ಯಂತ ಹಬ್ಬಿ, ಬಂಡವಾಳಶಾಹಿ ಹಾಗೂ ಸಾಮ್ರಾಜ್ಯಶಾಹಿ ವ್ಯವಸ್ಥೆಯು ಕುಸಿಯುತ್ತಿರುವುದಕ್ಕೆ ಸಾಕ್ಷ್ಯವನ್ನು ಒದಗಿಸಿದೆ. ಇದು ಸಮಾಜವಾದೀ ಸಾಮಾಜಿಕ ವ್ಯವಸ್ಥೆಯ ಸ್ಥಾಪನೆಗೆ ಯೋಗ್ಯಕಾಲವಾಗಿದ್ದು, ವಿಶ್ವದ ಕಾರ್ಮಿಕರು ಒಂದಾಗಿ ಈ ಕಾರ್ಯಕ್ಕೆ ಅಣಿಯಾಗಬೇಕಾಗಿದೆ. ಅಂತೆಯೇ ಭಾರತದಲ್ಲಿ ಸ್ವಾತಂತ್ರ್ಯಾನಂತರ 62 ವರುಷಗಳು ಕಳೆದರೂ ಪ್ರಜಾಸತ್ತೆಯ - ಸಮಾಜವಾದದ ಸಂವಿಧಾನದ ಮುಖವಾಡ ಧರಿಸಿ, ಬಂಡವಾಳಶಾಹಿ - ಸಾಮ್ರಾಜ್ಯಶಾಹಿ ಶೋಷಣಾಮಯ ವ್ಯವಸ್ಥೆಯನ್ನು, ಅಸಮಾನತೆ-ಅನ್ಯಾಯ-ಶೋಷಣೆಗಳನ್ನು ಶಾಶ್ವತಗೊಳಿಸುತ್ತಿರುವ ಭಾರತೀಯ ಆಳುವವರ್ಗಗಳ (ಬಂಡವಾಳಶಾಹಿ - ಭೂಮಾಲಕವರ್ಗಗಳ) ಆಳ್ವಿಕೆಯನ್ನು ಕೊನೆಗೊಳಿಸಲು, ಭಾರತದಲ್ಲಿಯ ಶೋಷಿತ ಕಾರ್ಮಿಕರು ಹಾಗೂ ಇತರ ಎಲ್ಲ ಶೋಷಿತ ವರ್ಗಗಳು ಒಂದಾಗಿ, ಈ ಶೋಷಕವರ್ಗದ ಅಮಾನುಷ ಆಡಳಿತಕ್ಕೆ ಅಂತ್ಯಹಾಡದಿದ್ದರೆ, ಸಂವಿಧಾನದಲ್ಲಿ ಘೋಷಿಸಲ್ಪಟ್ಟಿರುವ ಸಮಾಜವಾದವು ಕೇವಲ ಕಾಗದದ ಆಶ್ವಾಸನೆಯಾದೀತೇ ಹೊರತು, ಸಾಮಾಜಿಕ ವಾಸ್ತವಿಕತೆಯಾಗಲಾರದು. ಅಂತೆಯೇ ಈ ಮೇ ದಿನಾಚರಣೆಯ ಸಂದೇಶ, ಶೋಷಿತ ಕಾರ್ಮಿಕರು ಒಗ್ಗೂಡಿ, ವರ್ಗಹೋರಾಟಕ್ಕೆ ಮುಂದಾಗಿ, ಸಮಾಜವಾದಿ ಸಮಾಜ ಸ್ಥಾಪನೆಗೆ ಕಂಕಣಬದ್ಧರಾಗಬೇಕು ಎಂಬುದಾಗಿದೆ.