WEBSITE, INVENTORY SOFTWARE, CCTV CAMERA , COMPUTER & LAPTOP SALES & SERVICE, TABLETS, VIDEOGRAPHY, PHOTOGRAPHY, PROJECTOR ,VIDEO & AUDIO EDITING, VHS TO CD,DVD,BLURAY DISC CONVERSATION, DESIGNING & MANY MORE...
ಸುಸ್ವಾಗತ ನಿಮ್ಮ ಕಲ್ಪನೆ ನಮ್ಮ ಸೃಷ್ಠಿ !!! ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು.
ಈಗ ಮಲ್ಟಿಮೀಡಿಯವನ್ನು e-Speak ಕನ್ನಡದಲ್ಲಿ ಕೇಳಿ!

Friday, May 6, 2011

ನ್ಯಾನೊ ಡೀಸಲ್: ಸಾಟಿಯಿಲ್ಲದ 40 ಕಿ.ಮೀ. ಮೈಲೇಜ್

ಟಾಟಾ ಅಂದ್ರೆ ಹಾಗೇನೇ. ಹಲವು ಆರಂಭಗಳ ಸರದಾರ. ವಿಶ್ವದಲ್ಲಿಯೇ ಅಗ್ಗದ ಪುಟ್ಟ ಕಾರು ತಂದ ಖ್ಯಾತಿ ಈ ಕಂಪನಿಗಿದೆ. ಇದೀಗ ಜಗತ್ತಿನ ಪುಟ್ಟ ಫ್ಯಾಮಿಲಿ ಸವಾರಿಯ ಕಾರಿಗೆ ಡೀಸಲ್ ಎಂಜಿನ್ ಅಳವಡಿಸಲು ಹೊರಟಿದೆ. ಹೀಗಾಗಿ ಇದು ಭಾರತದಲ್ಲಿಯೇ ಅತ್ಯಧಿಕ ಮೈಲೇಜ್ ನೀಡುವ ಕಾರೆಂಬ ಹೆಗ್ಗಳಿಕೆ ಪಡೆಯಲಿದೆ. ನೂತನ ನ್ಯಾನೊ ಡೀಸಲ್ ಆವೃತ್ತಿ ಪ್ರತಿಲೀಟರ್ ಗೆ ಸುಮಾರು 40 ಕಿ.ಮೀ. ಮೈಲೇಜ್ ನೀಡುವ ನಿರೀಕ್ಷೆಯಿದೆ. ಭಾರತದಲ್ಲಿ ಇಷ್ಟು ಮೈಲೇಜ್ ನೀಡುವ ಕಾರು ಇಲ್ಲಿವರೆಗೆ ರಸ್ತೆಗಿಳಿದಿಲ್ಲ.

ನೂತನ ಡೀಸಲ್ ಕಾರು ಪ್ರಸಕ್ತ ಆರ್ಥಿಕ ವರ್ಷದಲ್ಲಿಯೇ ರಸ್ತೆಗಿಳಿಯಲಿದೆ ಎಂದು ಬಾಷ್ ಇಂಡಿಯಾದ ಹಿರಿಯ ಕಾರ್ಯನಿರ್ವಹಣಾಧಿಕಾರಿಯೊಬ್ಬರು ಪ್ರಕಟಿಸಿದ್ದಾರೆ. ಬಾಷ್ ಕಂಪನಿಯು ಟಾಟಾ ಕಂಪನಿಯ ಕಾರುಗಳಿಗೆ ಎಂಜಿನ್ ತಯಾರಿಸಿ ಕೊಡುತ್ತಿದೆ. "ನ್ಯಾನೊ ಕಾರುಗಳಿಗೆ ಪೆಟ್ರೊಲ್ ಎಂಜಿನ್ ತಯಾರಿಸಿಕೊಟ್ಟಿದ್ದೇವೆ. ಈಗ ಡೀಸಲ್ ಆವೃತ್ತಿ ಅಭಿವೃದ್ಧಿಪಡಿಸಲು ನೆರವಾಗುತ್ತಿದ್ದೇವೆ. ಈ ಕಾರು ಪ್ರತಿಲೀಟರ್ ಡೀಸಲ್ ಗೆ ಸುಮಾರು 40 ಕಿ.ಮೀ. ಮೈಲೇಜ್ ನೀಡಲಿದೆ" ಎಂದು ಅವರು ಹೇಳಿದ್ದಾರೆ.
ಪ್ರತಿಲೀಟರ್ ಡೀಸಲ್ ಗೆ 40 ಕಿ.ಮೀ. ಮೈಲೇಜ್ ನೀಡಿದರೆ ಹೊಸ ನ್ಯಾನೊ ರನ್ನಿಂಗ್ ದರ ಪ್ರತಿ ಕಿ.ಮೀ.ಗೆ ಕೇವಲ ಒಂದು ರೂಪಾಯಿ ಆಗಿರಲಿದೆ. ಡೀಸಲ್ ಕಾರಿನ ಇಂಧನ ಟ್ಯಾಂಕ್ ಸುಮಾರು 15 ಲೀಟರ್ ಸಾಮರ್ಥ್ಯ ಹೊಂದಿರುವ ನಿರೀಕ್ಷೆಯಿದೆ.

ನೂತನ ಡೀಸಲ್ ಕಾರು ದ್ವಿಚಕ್ರ ವಾಹನ ಗ್ರಾಹಕರನ್ನು ಕೂಡ ಸೆಳೆಯುವ ನಿರೀಕ್ಷೆಯಿದೆ. ಯಾಕೆಂದರೆ ಬಜಾಜ್ ಪಲ್ಸರ್ 180 ಮುಂತಾದ ಬೈಕ್ ದರ ಸುಮಾರು 78 ಸಾವಿರ ರೂ. ಇದ್ದು, ಇಷ್ಟೇ ಮೈಲೇಜ್ ನೀಡುವ ಕಾರು ಗ್ರಾಹಕರನ್ನು ಸೆಳೆದರೆ ಅಚ್ಚರಿಯಿಲ್ಲ.

"ಕಂಪನಿಯ ಕಾರ್ಯತಂತ್ರ, ಅನ್ವೇಷಣೆ ಕುರಿತು ಮಾಹಿತಿ ನೀಡಲು ಇದು ಸೂಕ್ತ ಸಮಯವಲ್ಲ" ಎಂದು ಟಾಟಾ ವಕ್ತಾರರು ಹೇಳಿದ್ದಾರೆ. ಬಜಾಜ್ ಆಟೋ ಕೂಡ ಇದೇ ಹಾದಿಯಲ್ಲಿದೆ. ರೆನಾಲ್ಟ್ ಮತ್ತು ನಿಸ್ಸಾನ್ ಜತೆಯಾಗಿ ಪ್ರತಿ ಲೀಟರ್ ಪೆಟ್ರೊಲ್ ಗೆ 40 ಕಿ.ಮೀ. ಮೈಲೇಜ್ ನೀಡುವ ಕಾರೊಂದನ್ನು ಹೊರತರಲಿದೆ. ಈ ಕಾರು 2011ರಲ್ಲಿ ರಸ್ತೆಗಿಳಿಯುವ ನಿರೀಕ್ಷೆಗಳಿವೆ.

No comments:

Post a Comment