WEBSITE, INVENTORY SOFTWARE, CCTV CAMERA , COMPUTER & LAPTOP SALES & SERVICE, TABLETS, VIDEOGRAPHY, PHOTOGRAPHY, PROJECTOR ,VIDEO & AUDIO EDITING, VHS TO CD,DVD,BLURAY DISC CONVERSATION, DESIGNING & MANY MORE...
ಸುಸ್ವಾಗತ ನಿಮ್ಮ ಕಲ್ಪನೆ ನಮ್ಮ ಸೃಷ್ಠಿ !!! ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು.
ಈಗ ಮಲ್ಟಿಮೀಡಿಯವನ್ನು e-Speak ಕನ್ನಡದಲ್ಲಿ ಕೇಳಿ!

Wednesday, June 29, 2011

'ಪಂಚತಂತ್ರ ಆನ್ ಲೈನ್ ತಂತ್ರಾಂಶ''''

 ಗ್ರಾಮ ಪಂಚಾಯ್ತಿಯ ವ್ಯವಹಾರಗಳು ಹಾಗೂ ಭೂ ದಾಖಲೆಗಳ ನಿರ್ವಹಣೆಗೆ ಸಂಭಂದಿಸಿದಂತೆ ನಡೆಯುವ ಭ್ರಷ್ಟಾಚಾರಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಪಂಚತಂತ್ರ ಎಂಬ ಹೊಸ ಸಾಫ್ಟ್ ವೇರ್ ಅನ್ನು ಪರಿಚಯಿಸಿದೆ. ಪಂಚಾಯತ್ ರಾಜ್ ಇಲಾಖೆ ಹಾಗೂ ರಾಷ್ಷ್ಟ್ರೀಯ ಮಾಹಿತಿ ಕೇಂದ್ರ(NIC) ಇವರು ಜಂಟಿಯಾಗಿ ಅಭಿವೃದ್ದಿ ಪಡಿಸಿರುವ ಈ ಸಾಫ್ಟ್ವೇರ್ http://stg1.kar.nic.in/panchatantra ಎಂಬ URL ನಲ್ಲಿ ಲಭ್ಯವಿದ್ದು ಗ್ರಾಮ ಪಂಚಾಯ್ತಿಯ ವ್ಯವಹಾರಗಳ ಸಮಗ್ರ ಮಾಹಿತಿ, ಟೆಂಡರ್ ಪ್ರಕ್ರಿಯೆ, ಭೂ ದಾಖಲೆಗಳು, ಹಿಡುವಳಿದಾರರ ವಿವರಗಳು, ಸ್ವಾಧೀನತೆ ಕುರಿತಾದ ಹತ್ತು ಹಲವಾರು ಮಾಹಿತಿಗಳನ್ನು ಒಳಗೊಂಡಿದೆ. ಇದರಿಂದಾಗಿ ಅಂತರ್ಜಾಲದ ಮೂಲಕ ವಿದ್ಯಾವಂತರಿಗೆ ಭೂ ದಾಖಲೆಗಳ ಪರಿಶೀಲನೆ, ಮಾಹಿತಿ ಪಡೆಯುವಿಕೆ ಮುಂತಾದವುಗಳು ಸುಲಭವಾಗಲಿದೆ. ಮಾತ್ರವಲ್ಲ ಆನ್ ಲೈನ್ ಮುಖಾಂತರ ಕಂದಾಯ ಪಾವತಿಸುವ ಸೌಲಭ್ಯವು ಕೂಡ ಈ ವೆಬ್ ಸೈಟ್ ನಲ್ಲಿ ದೊರೆಯಲಿದೆ.
ಇದೀಗ ರಾಜ್ಯಾದ್ಯಂತ ಎಲ್ಲಾ ಗ್ರಾಮ ಪಂಚಾಯಿತಿಗಳನ್ನು ಗಣಕೀಕೃತಗೊಳಿಸಿ, ಪಾರದರ್ಶಕತೆಯನ್ನು ಅನ್ವಯಿಸಲು ಪಂಚತಂತ್ರ ಆನ್ ಲೈನ್ ತಂತ್ರಾಂಶವನ್ನು ಅನುಷ್ಟಾನಗೊಳಿಸಲಾಗಿದೆ.
ಸದ್ಯ ಗ್ರಾ.ಪಂ.ಗಳಿಗೆ ಚುನಾವಣೆ ನಡೆದು ನೂತನ ಸಮಿತಿ ಆಸ್ತಿತ್ವಕ್ಕೆ ಬಂದಿರುವುದು ಮಾತ್ರವಲ್ಲದೇ, ಗ್ರಾ.ಪಂ.ಗಳಿಗೆ ನೂತನವಾಗಿ ಪಂಚಾಯಿತಿ ಅಭಿವೃದ್ಡಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಈ ಸಂದರ್ಭದಲ್ಲಿ ಪಂಚತಂತ್ರ ಆನ್ ಲೈನ್ ತಂತ್ರಾಂಶದಿಂದ ಗ್ರಾ.ಪಂ.ಗಳ ಶೇ.೧೦೦ಕ್ಕೆ ೧೦೦ರಷ್ಟು ಪಾರದರ್ಶಕ ಆಡಳಿತವನ್ನು ತಳಮಟ್ಟದಲ್ಲಿ ನೀಡುತ್ತದೆ ಎಂಬುದು ಸರ್ಕಾರದ ಉದ್ದೇಶವಾಗಿದೆ.

ಪಂಚತಂತ್ರ ಆನ್ ಲೈನ್ ತಂತ್ರಾಂಶದಿಂದ ಗ್ರಾ.ಪಂ.ಗಳ ಸಂಪೂರ್ಣ ಮಾಹಿತಿ ದೊರೆಯಲಿದೆ. ಇದಕ್ಕಾಗಿ ನೀವು http://stg2.kar.nic.in/gpportal/ ತಾಣವನ್ನು ಸಂಪರ್ಕಿಸಬಹುದು.

Tuesday, June 21, 2011

ಕೆ.ಎಸ್.ಆರ್.ಟಿ.ಸಿ ಪೇಪರ್ಲೆಸ್ ಟಿಕೆಟ್

ದೇಶದಲ್ಲಿ ಮೊತ್ತಮೊದಲ ಬಾರಿಗೆ ಪೇಪರ್ಲೆಸ್ ಟಿಕೆಟ್ ಸೇವೆಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಆರ್ಟಿಸಿ) ಪರಿಚಯಿಸಿದೆ. ಟಿಕೆಟ್ ಬುಕ್ಕಿಂಗ್ ಮಾಡಿದ ನಂತರ ಪ್ರಿಂಟೌಟ್ ತೆಗಿಸುವ ಅಗತ್ಯನೂ ಇಲ್ಲ.

ಏನ್ರಿ ಇದು: ಇದು ಮೊಬೈಲ್ ಟಿಕೆಟ್. ಅಂದ್ರೆ ಕೆಎಸ್ಆರ್ಟಿಸಿ ಟಿಕೆಟ್ ಬುಕ್ಕಿಂಗ್ ಮಾಡಿದಾಗ ಪಡೆದ ಎಸ್ಎಂಎಸ್ ಮತ್ತು ನಿಮ್ಮ ಗುರುತಿನ ಚೀಟಿಯನ್ನು ಬಸ್ ನಿರ್ವಾಹಕರಿಗೆ ತೋರಿಸಿದರೆ ಸಾಕು. ಪ್ರಿಂಟೌಟ್ ತೆಗೆದ ಟಿಕೆಟ್ ಬೇಕಿಲ್ಲ. ಪೇಪರ್ ಬಳಕೆಯಿಲ್ಲ. ಹೀಗಾಗಿ ಇದು ಪರಿಸರ ಸ್ನೇಹಿ ಟಿಕೆಟ್.

ಏನು ಮಾಡಬೇಕು?: ಕೆಎಸ್ಆರ್ಟಿಸಿ ವೆಬ್ಸೈಟ್ www.ksrtc.in ನಲ್ಲಿ ಇ-ಟಿಕೆಟ್ ಬುಕ್ಕಿಂಗ್ ಮಾಡಬಹುದು. ಅದರಲ್ಲಿ ಮೊಬೈಲ್ ನಂಬರ್, ಜನ್ಮದಿನಾಂಕ ಮತ್ತು ವಿಳಾಸ ಸೇರಿದಂತೆ ವೈಯಕ್ತಿಕ ಮಾಹಿತಿ ನೀಡಬೇಕು. ಜಿಪಿಆರ್ಎಸ್ ಸೌಲಭ್ಯವಿರುವ ಮೊಬೈಲ್ ನಲ್ಲೂ ಟಿಕೆಟ್ ಬುಕ್ಕಿಂಗ್/ಕ್ಯಾನ್ಸಲ್ ಮಾಡಬಹುದು.

ಹೀಗೆ ಟಿಕೆಟ್ ಬುಕ್ಕಿಂಗ್ ಮಾಡಿದ ನಂತರ ನಿಮ್ಮ ಮೊಬೈಲ್ ಗೆ ಸಂದೇಶವೊಂದು ಬರುತ್ತದೆ. ಅದರಲ್ಲಿ ಬಸ್ ನಂಬರ್, ಸೀಟ್ ನಂಬರ್, ಪ್ರಯಾಣದ ದಿನಾಂಕ, ತಲುಪಬೇಕಾದ ಸ್ಥಳ ಸೇರಿದಂತೆ ಅಗತ್ಯ ಮಾಹಿತಿಗಳೆಲ್ಲ ಇರುತ್ತದೆ. ಇದನ್ನೇ ಕಂಡೆಕ್ಟರ್ ಗೆ ತೋರಿಸಿದರೆ ಸಾಕು. 
ಏನು ಲಾಭ: ಬಸ್ ಟಿಕೆಟ್ ಬುಕ್ಕಿಂಗ್ ಮಾಡಿದ ನಂತರ ಸೈಬರ್ ಕೆಫೆ ಇತ್ಯಾದಿ ಕಡೆ ಹೋಗಿ ಪ್ರಿಂಟೌಟ್ ತೆಗೆಸಬೇಕಾಗುತ್ತದೆ. ಆದರೆ ನೂತನ ಯೋಜನೆಯಲ್ಲಿ ಅಂತಹ ಕಷ್ಟವಿಲ್ಲ. ಪೇಪರ್ ಬಳಕೆಯಿಲ್ಲ. ಮರ ಕಡಿಯೋದು ಕಡಿಮೆಯಾಗುತ್ತದೆ. ಪರಿಸರ ಉಳಿಯುತ್ತದೆ. ಪ್ರಯಾಣಿಕನಿಗೆ ಹೆಚ್ಚಿನ ಕಿರಿಕಿರಿಯಿಲ್ಲ. ವಾಟ್ ಆನ್ ಐಡಿಯಾ...

Tuesday, June 14, 2011

ವಿಶ್ವದ ಅತ್ಯಂತ ಸಣ್ಣವ್ಯಕ್ತಿ ಇವನು ಕೇವಲ 23.6 ಇಂಚು

ವಿಶ್ವದ ಅತ್ಯಂತ ಸಣ್ಣವ್ಯಕ್ತಿಯಾಗಿ ಗಿನ್ನಿಸ್ ಬುಕ್ಕಿಗೆ ಫಿಲಿಪೈನ್ ನ "ಜುನ್ರೆ ಬಲವಿಂಗ್" ಆಯ್ಕೆಯಾಗಿದ್ದಾನೆ. ಅಡಿಕೋಲಿಗಿಂತ ಚಿಕ್ಕದಾಗಿರುವ ಇವನು ಕೇವಲ 23.6 ಇಂಚು ಎತ್ತರವಿದ್ದಾನೆ. ಆದ್ರೆ ಇವನ ವಯಸ್ಸು 18 ಅಂದ್ರೆ ನಂಬಲೇಬೇಕು.

ಹದಿನೆಂಟು ವಯಸ್ಸಿನ ಹುಡುಗನೊಬ್ಬನ ತೂಕ ಕೇವಲ 5 ಕೆ.ಜಿ. ಎನ್ನುವುದು ಮತ್ತೊಂದು ಸೋಜಿಗ. ಆತನ ಹೆತ್ತವರು ಹೇಳುವ ಪ್ರಕಾರ ಈತ ಒಂದನೇ ವಯಸ್ಸಿನ ನಂತರ ಬೆಳವಣಿಗೆಯಾಗಲಿಲ್ಲವೆನ್ನುತ್ತಾರೆ. ಸದ್ಯ ತನ್ನ ಕುಬ್ಜತೆಯಿಂದಾಗಿ ಗಿನ್ನಿಸ್ ದಾಖಲೆ ಮಾಡಿದ್ದಾನೆ.

ಈತ ನೇಪಾಲದ ಖಗೇಂದ್ರ ದಾಖಲೆಯನ್ನು ಮುರಿದು ಹಾಕಿದ್ದಾನೆ. ಆತನ ಹೆಸರು ಈ ಹಿಂದೆ ಗಿನ್ನಿಸ್ ಬುಕ್ಕಿನಲ್ಲಿತ್ತು. ಆದರೆ ಅತನಿಗಿಂತ ಮೂರು ಇಂಚು ಸಣ್ಣಗಿರುವ ಕಾರಣ ಬಲವಿಂಗ್ ಗೆ ವಿಶ್ವದ ಕುಬ್ಜ ಕಿರೀಟ ದೊರಕಿದೆ.

ಹಾಗಂತ ವಿಶ್ವದಲ್ಲಿ ಇವನಿಗಿಂತ ಸಣ್ಣಗಾತ್ರದವರು ಇರಲಿಲ್ಲವೆಂದಲ್ಲ. 22.5 ಇಂಚು ಉದ್ದದ ಭಾರತದ ಗುಲ್ ಮೊಹಮ್ಮದ್ (1957-97) ಬದುಕಿಲ್ಲವಾದರಿಂತ ಸದ್ಯ ಬದುಕಿರುವ ಕುಳ್ಳರಲ್ಲಿ ಬಲವಿಂಗ್ ಅಗ್ರಜ.
http://www.guinnessworldrecords.com/ 

Monday, June 6, 2011

ಪೇಪರ್ ಫೋನ್

ಅರಿಜೋನಾ ವಿಶ್ವವಿದ್ಯಾಲಯ ಸಂಶೋಧಕರು ಹಗುರವಾದ,ಬಾಗುವ,ಮತ್ತು ಬಹಳ ದೃಡವಾದ ವಸ್ತುವನ್ನು ಬಳಸಿ ಸೆಲ್‌ಪೋನ್ ತಯಾರಿಸಿದ್ದಾರೆ.ಹಾಗಾಗಿ ಇದು ಸಾಮಾನ್ಯ ಫೋನುಗಳ ಆರನೇ ಒಂದು ಭಾಗದಷ್ಟು ತೂಗುತ್ತದೆ. ಕ್ರೆಡಿಟ್‌ಕಾರ್ಡಿನಷ್ಟು ಹಗುರ,ಆದರೆ ಅದಕ್ಕಿಂತಲೂ ಹೆಚ್ಚು ಬಾಗಿಸಲಾಗುವ ವಸ್ತುವಿನಿಂದ ಇದನ್ನು ತಯಾರಿಸಲಾಗಿದೆ.ಇದು ಪರಿಸರಕ್ಕೂ ಹೆಚ್ಚು ಪ್ರಿಯವಾಗಬಲ್ಲುವಂತಹ ವಸ್ತು.ಇದರ ಇನ್ನೊಂದು ಅನುಕೂಲವೆಂದರೆ,ಸ್ಪರ್ಶಸಂವೇದಿ ಆಗುವ ಜತೆಗೆ, ಬಾಗಿಸಿಯೂ, ಇದಕ್ಕೆ ಆದೇಶಗಳನ್ನು ನೀಡಲು ಸಾಧ್ಯ.ಒಂದು ಕಡೆ ಬಾಗಿಸಿದರೆ, ಅಪ್ಲಿಕೇಶನುಗಳನ್ನು ಚಾಲೂ ಮಾಡಬಹುದಾದರೆ,ಇನ್ನೊಂದೆಡೆ ಬಾಗಿಸಿ, ಬೇರೇನೋ ಆದೇಶ ನೀಡಲು ಸಾಧ್ಯವಾಗಲಿದೆ. ಇನ್ನೊಂದು ಹತ್ತು ವರ್ಷದಲ್ಲಾದರೂ, ಈ ತಂತ್ರಜ್ಞಾನ ವಾಣಿಜ್ಯ ತಯಾರಿಕೆಗೆ ಸಿದ್ಧವಾಗಬಹುದು ಎಂದು ನಿರೀಕ್ಷಿಸಿದರೆ, ಅದು ತಪ್ಪಲ್ಲ.

Sunday, June 5, 2011

ರಾಣಿ ಚೆನ್ನಮ್ಮ ವಿವಿ ವೆಬ್‌ಸೈಟ್

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವು ತನ್ನದೇ ಆದ ಹೊಸ ವೈಬ್‌ಸೈಟ್ www.rcub.ac.in ಅನ್ನು ಪ್ರಾರಂಭಿಸಿದೆ. ಇದರಲ್ಲಿ ವಿವಿ ಕುರಿತಾದ ಶೈಕ್ಷಣಿಕ ಮಾಹಿತಿ, ವಿವಿಧ ಕೋರ್ಸ್‌ಗಳು, ಪ್ರವೇಶ ಪ್ರಕ್ರಿಯೆ ಮುಂತಾದ ವಿಷಯಗಳ ಮಾಹಿತಿಯನ್ನು ಪಡೆಯಬಹುದಾಗಿದೆ.

ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ಕಾಲೇಜು, ಸ್ನಾತಕೋತ್ತರ ಕಾಲೇಜು, ಪರೀಕ್ಷಾ ವೇಳಾಪಟ್ಟಿ, ಪಠ್ಯಕ್ರಮ ಮುಂತಾದ ಮಾಹಿತಿಗಳಿದ್ದು, ವಿದ್ಯಾರ್ಥಿಗಳು ಹಾಗೂ ಪಾಲಕರು ವೆಬ್‌ಸೈಟ್ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

ಕರ್ನಾಟಕ ಯೂನಿವರ್ಸಿಟಿ ಪಿಜಿ ಸೆಂಟರ್ ಅನ್ನು 2010ರಿಂದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಲಾಗಿದೆ. ಉತ್ತರ ಕರ್ನಾಟಕದ ಬೆಳಗಾವಿ, ಬಿಜಾಪುರ ಮತ್ತು ಬಾಗಲಕೋಟ ಜಿಲ್ಲೆಗಳು ಈ ವಿವಿಯ ವ್ಯಾಪ್ತಿಗೆ ಬರುತ್ತವೆ.

Saturday, June 4, 2011

ವಿಶ್ವ ಪರಿಸರ ದಿನ


60 ಸಂವತ್ಸರಗಳು

1. ಪ್ರಭವ
2. ವಿಭವ
3. ಶುಕ್ಲ
4. ಪ್ರಮೋದ
5. ಪ್ರಜೋತ್ಪತ್ತಿ
6. ಆಂಗೀರಸ
7. ಶ್ರೀಮುಖ
8. ಭಾವ
9. ಯುವ
10. ಧಾತ್ರಿ
11. ಈಶ್ವರ
12. ಬಹುಧಾನ್ಯ
13. ಪ್ರಮಾಧಿ
14. ವಿಕ್ರಮ
15. ವರುಷ/ವೃಷ
16. ಚಿತ್ರಭಾನು
17. ಸ್ವಭಾನು
18. ತಾರಣ
19. ಪಾರ್ಥಿವ
20. ವ್ಯಯ
21. ಸರ್ವಜಿತ್
22. ಸರ್ವಧಾರಿ
23. ವಿರೋಧಿ
24. ವಿಕೃತ
25. ಖರ
26. ನಂದನ
27. ವಿಜಯ
28. ಜಯ
29. ಮನ್ಮಥ
30. ದುರ್ಮುಖ
31. ಹೇವಿಳಂಬಿ
32. ವಿಳಂಬಿ
33. ವಿಕಾರಿ
34. ಶಾರ್ವರಿ
35. ಪ್ಲವ
36. ಶುಭಕೃತ
37. ಶೋಭಾಕೃತ
38. ಕ್ರೋಧಿ
39. ವಿಶ್ವಾವಸು
40. ಪರಾಭವ
41. ಪ್ಲವಂಗ
42. ಕೀಲಕ
43. ಸೌಮ್ಯ
44. ಸಾಧಾರಣ
45. ವಿರೋಧಿಕೃತ
46. ಪರಿಧಾವಿ
47. ಪ್ರಮಾಧಿ
48. ಆನಂದ
49. ರಾಕ್ಷಸ
50. ನಳ
51. ಪಿಂಗಳ
52. ಕಾಳಯುಕ್ತಿ
53. ಸಿದ್ಧಾರ್ಥಿ
54. ರುದ್ರ
55. ದುರ್ಮತಿ
56. ದುಂದುಭಿ
57. ರುದಿರೋದ್ಗಾರಿ
58. ರಕ್ತಾಕ್ಷಿ
59. ಕ್ರೋಧನ
60. ಅಕ್ಷಯ