WEBSITE, INVENTORY SOFTWARE, CCTV CAMERA , COMPUTER & LAPTOP SALES & SERVICE, TABLETS, VIDEOGRAPHY, PHOTOGRAPHY, PROJECTOR ,VIDEO & AUDIO EDITING, VHS TO CD,DVD,BLURAY DISC CONVERSATION, DESIGNING & MANY MORE...
ಸುಸ್ವಾಗತ ನಿಮ್ಮ ಕಲ್ಪನೆ ನಮ್ಮ ಸೃಷ್ಠಿ !!! ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು.
ಈಗ ಮಲ್ಟಿಮೀಡಿಯವನ್ನು e-Speak ಕನ್ನಡದಲ್ಲಿ ಕೇಳಿ!

Thursday, July 28, 2011

ಬನ್ನಿ, ಸಾಲುಮರದ ತಿಮ್ಮಕ್ಕಂಗೆ ನೆರವಾಗೋಣ

ಸಾಲುಮರದ ತಿಮ್ಮಕ್ಕ ಯಾರಿಗೆ ಗೊತ್ತಿಲ್ಲ? ಆವರ ಮರಗಳ ಮೇಲಿನ ಅಮರ ಪ್ರೀತಿ ಯಾರಿಗೆ ಗೊತ್ತಿಲ್ಲ? ತಾನಳಿದರೂ, ತನ್ನ ಮರಗಳ ನೆರಳು ಪೀಳಿಗೆಗಳ ಕಾಲ ಹಬ್ಬುವಂತೆ ಮಾಡಿದ ತಿಮ್ಮಕ್ಕಂಗೇ ಸರಿಯಾದ ನೆರಳಿಲ್ಲ. ಊರಿಗೆ ಆಸ್ಪತ್ರೆಯಿಲ್ಲ.
ಇತ್ತೀಚೆಗೆ ಬೆಂಗಳೂರಿಗೆ ಬಂದು ಗಾಂಧಿ ಪ್ರತಿಮೆಯೆದುರು ಈ ವಿಷಯವಾಗಿ ಧರಣಿ ನಡೆಸಿದ ತಿಮ್ಮಕ್ಕ ಅಲ್ಲಲ್ಲಿ ಸುದ್ದಿಯಾದರು. ಈಗಷ್ಟೇ ಕರ್ನಾಟಕ ಸರ್ಕಾರವು ಒಂದು ಲಕ್ಷ ರೂ. ನೆರವು ಘೋಷಿಸಿದೆ. ಸಾಕೆ?
ತಿಮ್ಮಕ್ಕ ಬರೀ ಮರ ನೆಟ್ಟವರಲ್ಲ. ನಮ್ಮ ಪ್ರಜ್ಞೆಯನ್ನೇ ನೆಟ್ಟಗಾಗಿಸಿದವರು. ಪರಿಸರ ಪ್ರೀತಿಯ ನೂರಾರು ಒಣ ಘೋಷಣೆಗಳಿಗಿಂತ ನೀರೆರೆದು ಬೆಳೆಸಿದ ಹಸಿ ಮರಗಳೇ ಮೇಲು ಎಂದು ಬಲವಾಗಿ ನಂಬಿದವರು. ಅವರನ್ನು ಅವರದೇ ಕಾಲಘಟ್ಟದಲ್ಲಿ ನೋಡುತ್ತಿರುವ ನಾವಾದರೂ ಕೊಂಚ ಹೆಚ್ಚು ಪ್ರೀತಿಸಬೇಕಲ್ಲವೆ?
ಬನ್ನಿ, ಸಾಲುಮರದ ತಿಮ್ಮಕ್ಕಂಗೆ ಸಾಲು ಸಾಲಾಗಿ ನೆರವಾಗಿ:
  • ಅವರ ಬ್ಯಾಂಕ್ ಹೆಸರು: ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಹುಲಿಕಲ್ ಶಾಖೆ, ಮಾಗಡಿ ತಾಲೂಕು, ರಾಮನಗರ ಜಿಲ್ಲೆ
  • ಖಾತೆ ನಂ: ಚಿಕ್ಕತಿಮ್ಮಕ್ಕ, ಉಳಿತಾಯ ಖಾತೆ (ಎಸ್ ಬಿ) ನಂ: ೫೪೦೫೫೦೨೩೯೬೫ (54055023965)
  • (ಖಾತೆಯಲ್ಲಿ ಅವರ ಹೆಸರು ಚಿಕ್ಕತಿಮ್ಮಕ್ಕ ಎಂದಿದೆ ಗಮನಿಸಿ)
ಅಥವಾ ಅವರಿಗೆ ನೇರವಾಗಿ ಹಣ ಕಳಿಸಬೇಕೆಂದರೆ ತಿಮ್ಮಕ್ಕನ ಹೆಸರಿನಲ್ಲಿ ಮನಿಯಾರ್ಡರ್ ಮಾಡಿ.
ನಿಮ್ಮ ಮಕ್ಕಳ ಜನ್ಮದಿನದ ಸಂದರ್ಭದಲ್ಲೋ, ನಿಮ್ಮ ಇಷ್ಟಮಿತ್ರರ ಮದುವೆಯ ವಾರ್ಷಿಕೋತ್ಸವದ ದಿನದಲ್ಲೋ, ನಿಮ್ಮ ಮನೆಯ ಯಾವುದೋ ಶುಭಗಳಿಗೆಯಲ್ಲೋ, ಸಾಲುಮರದ ತಿಮ್ಮಕ್ಕ ನೆನಪಾಗಲಿ. ಅವರು ನಾಡಿಗೆ ಕೊಟ್ಟ ಸಂದೇಶ ನಮ್ಮನ್ನು ಕಾಡಲಿ.
ಅವಸರದ ಸಾಹಿತ್ಯ, ಅವಸರದ ಬದುಕಿನಲ್ಲಿ ದಿನದಿನವೂ ಕೋಶಕೋಶ ಹಬ್ಬಿ ಬೆಳೆವ ಮರಗಳನ್ನು ಅವಿರತವಾಗಿ ಬೆಳೆಸಿದ ತಿಮ್ಮಕ್ಕನ ಜೀವ ಇನ್ನುಮುಂದಾದರೂ ಚಡಪಡಿಸದಿರಲಿ.

Sunday, July 24, 2011

ಎಲ್ ಪಿಜಿ, ಪಡಿತರ ಚೀಟಿ ಅಕ್ರಮ ಸಕ್ರಮ ಚೆಕ್ ಮಾಡಿ

ಪಡಿತರ ಚೀಟಿದಾರರು ಹಾಗೂ ಅಡುಗೆ ಅನಿಲ(ಎಲ್ ಪಿಜಿ) ಗ್ರಾಹಕರು ತಮ್ಮ ಖಾತೆಗಳು ಕಾನೂನು ಬದ್ಧವಾಗಿದೆಯೇ? ಅಕ್ರಮ ಸಂಪರ್ಕ ಏನಾದರೂ ಆಗಿದಿಯೇ? ಎಲ್ ಪಿಜಿ ಸಂಪರ್ಕ ರದ್ದು ಪಡಿಸಲಾಗಿದೆಯೇ? ಎಂಬುದನ್ನು ಆನ್ ಲೈನ್ ಮೂಲಕ ತಿಳಿದುಕೊಳ್ಳಬಹುದು.

ಬೆಂಗಳೂರು ನಗರದವೊಂದರಲ್ಲೇ 9.1 ಲಕ್ಷಕ್ಕೂ ಅಧಿಕ ಅನಧಿಕೃತ ಎಲ್ ಪಿ ಜಿ ಸಂಪರ್ಕ ಇರುವುದನ್ನು ಸರ್ಕಾರ ಅಧಿಕೃತವಾಗಿ ಬಹಿರಂಗ ಪಡಿಸಿದ ಮೇಲೆ ಸಾರ್ವಜನಿಕರಲ್ಲಿ ತಮ್ಮ ಮನೆ ಎಲ್ ಪಿಜಿ ಅಸಲಿಯೇ ನಕಲಿಯೇ ಎಂಬ ಪ್ರಶ್ನೆ ಕಾಡುತ್ತಿದೆ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವೆಬ್ ಸೈಟ್ ಗೆ ಭೇಟಿ ನೀಡಿ ಸ್ಕ್ರೋಲ್ ಆಗುತ್ತಿರುವ ಕೊಂಡಿಯನ್ನು ಕ್ಲಿಕ್ ಮಾಡಿದರೆ ಎಲ್.ಪಿ.ಜಿ ಬಳಕೆದಾರರ ಜೋಡಣೆ ಸ್ಥಿತಿ ವೆಬ್ ಪುಟಕ್ಕೆ  ನಿಮ್ಮನ್ನು ಕರೆದೊಯ್ಯುತ್ತದೆ.

ಆದರಲ್ಲಿ ನಿಮ್ಮ ಎಲ್.ಪಿ.ಜಿ ಹಂಚಿಕೆದಾರರನ್ನು ಆಯ್ಕೆ ಮಾಡಿ(ಇಂಡೇನ್, ಹಿಂದೂಸ್ತಾನ್, ಭಾರತಿ) ನಂತರ ಜಿಲ್ಲೆ, ಸ್ಥಳೀಯ ವಿತಕರರನ್ನು ಸೂಚಿಸಿ, ಬಳಕೆದಾರರ ಸಂಖ್ಯೆ ತಿಳಿಸಿದರೆ ನಿಮ್ಮ ಎಲ್ ಪಿಜಿ ಜಾತಕ ತೆರೆದುಕೊಳ್ಳುತ್ತದೆ. ನಿಮ್ಮ ಸಂಪರ್ಕ ಕಾನೂನುಬದ್ಧವಾಗಿದೆ ಅಥವಾ ಇಲ್ಲ ಎಂಬುದು ತಕ್ಷಣಕ್ಕೆ ತಿಳಿಯುತ್ತದೆ.

ವೆಬ್ ಸೈಟ್ ಜಾಮ್: ಕಳೆದ ಎರಡು ದಿನಗಳಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಗ್ರಾಹಕರು ಈ ವೆಬ್ ತಾಣಕ್ಕೆ ಭೇಟಿ ನೀಡಿದ್ದಾರೆ. ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಸುಲಭವಾಗಿ ಮಾಹಿತಿ ಪಡೆಯಬಹುದಾಗಿದೆ. ಪಡಿತರ ಚೀಟಿ ಹಾಗೂ ಎಲ್ ಪಿಜಿ ಬಳಕೆದಾರರ ಮಾಹಿತಿಯಲ್ಲಿ ಬದಲಾವಣೆಗಳಿದ್ದರೆ ಅದನ್ನು ಅಧಿಕಾರಿಗಳ ಗಮನಕ್ಕೆ ತರಬಹುದು. 24 ಗಂಟೆಗಳಲ್ಲಿ ತಿದ್ದುಪಡಿ ಮಾಡಲಾಗುವುದು ಎಂದು ಪ್ರಧಾನ ಕಾರ್ಯದರ್ಶಿ ಬಿಎ ಹರೀಶ್ ಗೌಡ ತಿಳಿಸಿದ್ದಾರೆ.

ಇಂಟರ್ ನೆಟ್ ಇಲ್ಲದವರು ಏನ್ ಮಾಡ್ಬೇಕು?: ಸಂಬಂಧಿಸಿದ ತಾಲೂಕು ಕಚೇರಿಯಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಹಾಗೂ ನಿರೀಕ್ಷಕರನ್ನು ಭೇಟಿಯಾಗಿ ಮಾಹಿತಿ ಮತ್ತು ಪರಿಹಾರ ಪಡೆಯಬಹುದು.
http://web1.kar.nic.in/fcslpg4/verify_lpg_status.aspx

Tuesday, July 5, 2011

ಜನಲೋಕಪಾಲ ವಿಧೇಯಕ ತನ್ನಿ

ಎಲ್ಲೆಲ್ಲೂ ತುಂಬಿರುವ ಭ್ರಷ್ಟಾಚಾರದಿಂದ ರೋಸಿಹೋಗಿದ್ದೀರಿ ತಾನೆ? ಭ್ರಷ್ಟಾಚಾರ ವಿರುದ್ಧ ಅಣ್ಣಹಜಾರೆ ಮಾಡುತ್ತಿರುವ ಚಳವಳಿಯೂ ಗೊತ್ತು ತಾನೆ? ಈ ಚಳವಳಿಯಲ್ಲಿ ನೀವೂ ಧುಮುಕಲು ಸಮಯವಿಲ್ಲವೇ? ಅಡ್ಡಿಯಿಲ್ಲ. ಜನಲೋಕಪಾಲ ವಿಧೇಯಕ ತನ್ನಿ ಎಂದು ಕನಿಷ್ಠ ನಿಮ್ಮ ಸಂಸದರಿಗೆ ಒತ್ತಾಯಿಸಬಹುದಲ್ಲವೇ? ಹೌದು, ಆದರೆ ಹೇಗೆ ಎನ್ನುತ್ತೀರಾ? nocorruption.in ಜಾಲತಾಣಕ್ಕೆ ಭೇಟಿ ನೀಡಿ. ನಿಮ್ಮ ಸಂಸದರ ಇಮೈಲ್ ವಿಳಾಸ ಪತ್ತೆಹಚ್ಚಿ. ಅದೇ ಜಾಲತಾಣದಲ್ಲಿ ನೀಡಿರುವ ಪತ್ರದ ಮಾದರಿಯಲ್ಲಿ ನಿಮ್ಮ ಸಂಸದರಿಗೆ ಇಮೈಲ್ ಮಾಡಿ. ಕೆಲವು ಸಂಸದರ ಇಮೈಲ್ ವಿಳಾಸದಲ್ಲಿ ತಪ್ಪು ಇರಬಹುದು. ಸರಿಯಾದ ವಿಳಾಸ ತಿಳಿದಿದ್ದಲ್ಲಿ ಅದನ್ನು ತಿದ್ದಲೂ ನೀವು ನೆರವಾಗಬಹುದು.

Monday, July 4, 2011

ಕನ್ನಡದಲ್ಲಿ ಆಟೋಕ್ಯಾಡ್ ಕಲಿಯಿರಿ...

ವಿಶ್ವನಾಥ ಡಿ.ಎ. ರವರಿಂದ,
ಆತ್ಮೀಯ ಓದುಗರೆ,
                     ತುಂಬ ದಿನದಿಂದ ನನ್ನದೊಂದು ಆಸೆಯಿತ್ತು.ಕನ್ನಡಿಗರಿಗೆ ಕನ್ನಡದಲ್ಲೇ ಆಟೋಕ್ಯಾಡ್ ತಂತ್ರಾಂಶವನ್ನ ಹೇಳಿಕೊಡಬೇಕು ಎಂದುಕೊಂಡಿದ್ದೆ ಮತ್ತು ಈಗ ಆ ಕೆಲಸ ಪ್ರಾರಂಭಿಸಿದ್ದೇನೆ. ಯೂಟ್ಯೂಬ್ ನಲ್ಲಿ ಈ ಸರಣಿಯ ಮೊದಲ ವಿಡಿಯೋ ಹಾಕಿದ್ದೇನೆ. ಯೂಟ್ಯೂಬ್ ನಲ್ಲಿ "ಆಟೋಕ್ಯಾಡ್ ಕಲಿಯಿರಿ" ಎಂದು ಇಂಗ್ಲಿಶ್ ನಲ್ಲಿ ಟೈಪ್ ಮಾಡಿದರೆ, ನನ್ನ ವಿಡಿಯೋ ಸಿಗುತ್ತದೆ. ನೀವೆಲ್ಲ ಅದನ್ನು ನೋಡಿ ಹೇಗಿದೆ ಎಂದು ಹೇಳಿದರೆ, ನನಗೆ ಮುಂದುವರಿಯಲು ಸುಲಭವಾಗುತ್ತದೆ.
ವಿಡಿಯೋದ ಲಿಂಕನ್ನು ಕೆಳಗೆ ಕೊಡಲಾಗಿದೆ.

ಕೇರಳ ಮುಖ್ಯಮಂತ್ರಿ ಕಚೇರಿ ನೇರವಾಗಿ ನೋಡುವ ಸೌಲಭ್ಯ

ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ಕಚೇರಿ, ಸಭಾ ಮಂದಿರಗಳಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನೇರವಾಗಿ ನೋಡುವ ಸೌಲಭ್ಯವನ್ನು ಕೇರಳ ಸರಕಾರ ಜನರಿಗೆ ನೀಡಿದೆ. www.keralacm.gov.in ಈ ವೆಬ್ ತಾಣಕ್ಕೆ ಭೇಟಿ ಕೊಟ್ಟಲ್ಲಿ ನಿಮಗೆ ಮುಖ್ಯಮಂತ್ರಿ ಚೇಂಬರ್ ಒಳಗೆ ಏನೇನೆಲ್ಲಾ ನಡೆಯುತ್ತದೆ ಎಂದು ದಿನದ ಇಪ್ಪತ್ತನಾಲ್ಕು ಗಂಟೆಯೂ ವೀಕ್ಷಿಸಬಹುದಾಗಿದೆ.
ಕಚೇರಿ ಮತ್ತು ಚೇಂಬರಿನೊಳಗೆ ನಾಲ್ಕು ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇದೇ ವ್ಯವಸ್ಥೆಯನ್ನು ಬೇರೆಲ್ಲಾ ಸಚಿವರ ಕಚೇರಿಗಳಿಗೂ ವಿಸ್ತರಿಸಲಾಗುತ್ತದೆ. ಈಗಾಗಲೇ ಕಾರ್ಮಿಕ ಸಚಿವ ಶಿಬು ಬೇಬಿ ಜಾನ್ ಅವರು ಈ ಬಗ್ಗೆ ತೀವ್ರ ಆಸಕ್ತಿ ತೋರಿಸಿದ್ದು, ಸಂಪುಟದಲ್ಲಿ ಈ ಕುರಿತು ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುತ್ತದೆ. ಚೇಂಬರಿನಲ್ಲಿ ನಡೆಯುವ ನನ್ನೆಲ್ಲಾ ಸಭೆಗಳು, ಪತ್ರಿಕಾ ಗೋಷ್ಠಿಗಳು ಮತ್ತು ಸಂಪುಟ ಸಭೆಯ ಕುರಿತಾದ ವಿವರಗಳೆಲ್ಲವನ್ನೂ ಈ ಅಂತರಜಾಲ ತಾಣದಿಂದ ಲೈವ್ ಆಗಿ ವೀಕ್ಷಿಸಬಹುದು ಎಂದು ಉಮ್ಮನ್ ಚಾಂಡಿ ಮಾಧ್ಯಮದವರಿಗೆ ತಿಳಿಸಿದ್ದಾರೆ.
ಭ್ರಷ್ಟಾಚಾರದ ಪೆಡಂಭೂತವು ದೇಶದ ಮೂಲೆ ಮೂಲೆಗಳಲ್ಲೂ ಹಬ್ಬಿರುವ ಈ ಸಮಯದಲ್ಲಿ ಇಂಥದ್ದೊಂದು ಪರಿಪೂರ್ಣ ‘ಪಾರದರ್ಶಕ’ ವ್ಯವಸ್ಥೆಯನ್ನು ರೂಪಿಸಿರುವ ಕೇರಳದ ಮುಖ್ಯಮಂತ್ರಿಯವರನ್ನು ಮೆಚ್ಚಲೇಬೇಕು. ನಮ್ಮ ಕರ್ನಾಟಕದಲ್ಲೂ ಈ ರೀತಿಯದ ಸೌಲಭ್ಯ ಎಲ್ಲಾ ಸರಕಾರೀ ಕಛೇರಿಗಳಲ್ಲೂ ಬಂದಲ್ಲಿ ನಾವೂ ಹೆಮ್ಮೆ ಪಡಬಹುದಾಗಿದೆ.