WEBSITE, INVENTORY SOFTWARE, CCTV CAMERA , COMPUTER & LAPTOP SALES & SERVICE, TABLETS, VIDEOGRAPHY, PHOTOGRAPHY, PROJECTOR ,VIDEO & AUDIO EDITING, VHS TO CD,DVD,BLURAY DISC CONVERSATION, DESIGNING & MANY MORE...
ಸುಸ್ವಾಗತ ನಿಮ್ಮ ಕಲ್ಪನೆ ನಮ್ಮ ಸೃಷ್ಠಿ !!! ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು.
ಈಗ ಮಲ್ಟಿಮೀಡಿಯವನ್ನು e-Speak ಕನ್ನಡದಲ್ಲಿ ಕೇಳಿ!

Thursday, August 25, 2011

ಮಾನವ ಮಿದುಳು:ಕಂಪ್ಯೂಟರ್ ಚಿಪ್ ಅನುಕರಣೆಐಬಿಎಂ ಕಂಪೆನಿಯು ಮಾನವ ಮಿದುಳಿನ ರೀತಿಯಲ್ಲಿ ಕಾರ್ಯಾಚರಿಸುವ ಐಸಿ ಚಿಪ್‌ನ್ನು ಅಭಿವೃದ್ಧಿ ಪದಿಸುವ ಯತ್ನಕ್ಕೆ ಕೈಹಾಕಿದೆ.ವಿಶ್ವವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ಐಬಿಎಂ ಈ ಪ್ರಯತ್ನಕ್ಕೆ ಕೈಹಾಕಿದೆ.ಮಾನವ ಮಿದುಳು ಒಂದು ಅದ್ಭುತ ರಚನೆ ಎನ್ನುವುದು ಓದುಗರಿಗೆ ಗೊತ್ತಿರುವ ವಿಚಾರ.ಅತ್ಯಂತ ಕಡಿಮೆ ಶಕ್ತಿ ಬಳಸಿ ಕೆಲಸ ಮಾಡುವುದು,ಬೇಕಾದ ಭಾಗವನ್ನು ಮಾತ್ರಾ ಎಚ್ಚರವಾಗಿಟ್ಟು.ಉಳಿದ ಭಾಗಗಳನ್ನು ಬಂದ್ ಮಾಡಿಡುವುದು ಮಿದುಳಿನ ವೈಶಿಷ್ಟ್ಯ.ಐದು ಗಿಗಾಹರ್ಟ್ಸ್ ಕಂಪ್ಯೂಟರಿನಷ್ಟೇ ವೇಗವಾಗಿ ಕಾರ್ಯಾಚರಿಸುವ ಮಿದುಳು,ಪ್ಯಾರಲಲ್ ಪ್ರಾಸೆಸಿಂಗ್ ಮಾಡುವ ಪರಿಯಲ್ಲಿ ಮಾತ್ರಾ ಕಂಪ್ಯೂಟರನ್ನು ಹಿಂದಿಕ್ಕುತ್ತದೆ.ಯೋಚನೆ,ಸಂವೇದನೆ,ಸಂವಹನೆ ಮತ್ತು ಗುರುತಿಸುವಿಕೆ ಇವೆಲ್ಲಾ ಮಿದುಳಿಗೆ ಸಾಧ್ಯ,ಕಂಪ್ಯೂಟರಾದರೋ ಕ್ಯಾಲ್ಕ್ಯುಲೇಟರ್ ಪರಿ ಕೆಲಸ ಮಾಡುವಷ್ಟಕ್ಕೆ ಸೀಮಿತವಾಗಿದೆ.ಈಗ ಐಬಿಎಂ ಕಂಪೆನಿ ಮಾಡುತ್ತಿರುವುದು ಕಂಪ್ಯೂಟರಿನಲ್ಲಿ ನ್ಯಾನೋತಂತ್ರಜ್ಞಾನ,ನ್ಯೂರೋವಿಜ್ಞಾನ ಮತ್ತು ಸೂಪರ್‌ಕಂಪ್ಯೂಟರನ್ನು ಸಮ್ಮಿಳಿತಗೊಳಿಸುವ ಯತ್ನವಾಗಿದೆ.ಮಿದುಳಿನಲ್ಲಿ ನ್ಯೂರಾನ್ ಎನ್ನುವ ಕೇಂದ್ರಗಳು ಯೋಚನೆಯ ಕೇಂದ್ರಗಳಾಗಿವೆ.ಸಿನಾಪ್ಸ್ ಎನ್ನುವ ಭಾಗ ನೆನಪು ಶಕ್ತಿ ಮತ್ತು ಕಲಿಕೆಯ ಕೇಂದ್ರಗಳು.ಏಕ್ಸಾನ್ ಎನ್ನುವುದು ಮಿದುಳಿನ ಅಂಗಾಂಶಗಳನ್ನು ಬೆಸೆಯುವ ಭಾಗಗಳು.ಐಬಿಎಂನಲ್ಲೂ ಇದೇ ಆಧಾರದಲ್ಲಿ ಅಭಿವೃದ್ಧಿ ಪಡಿಸುವ ಯತ್ನಗಳಾಗುತ್ತಿವೆ.ಮಿದುಳಿನಂತೆ ಸ್ಮರಣಶಕ್ತಿಯುಳ್ಳ,ಕಲಿಯಬಲ್ಲ,ಸಂವೇದನೆಗಳನ್ನು ಹೊಂದಿದ ಕಂಪ್ಯೂಟರನ್ನು ಅಭಿವೃದ್ಧಿ ಪಡಿಸುವ ಕನಸಿನೊಂದಿಗೆ ಐಬಿಎಂ ಮುನ್ನಡೆಯಲಿದೆ.ಆದರಿದು ಬಹಳ ಸಮಯ ತೆಗೆದುಕೊಳ್ಳಲಿದೆ.ಈಗೇನಿದ್ದರೂ ಅತಿ ಚಿಕ್ಕ ಹೆಜ್ಜೆಗಳನ್ನಿಡಲಷ್ಟೇ ಸಾಧ್ಯವಾಗಿದೆ.
source:http://ashok567.blogspot.com/ 

Saturday, August 20, 2011

ಬಾಲ ಕಾರ್ಮಿಕರ ಉಳಿಸಲು ಇ ಪತ್ರಿಕೆ

ರಾಜ್ಯ ಬಾಲ ಕಾರ್ಮಿಕ ಸಂಪನ್ಮೂಲ ಕೇಂದ್ರವು ಮಕ್ಕಳ ಕಲ್ಯಾಣ ಹಾಗೂ ಇದಕ್ಕೆ ಸಂಬಂಧಿಸಿದ ಕ್ಷೇತ್ರದಲ್ಲಿ ಪ್ರಪಂಚದಾದ್ಯಂತ ಆಗುತ್ತಿರುವ ಇತ್ತೀಚಿನ ಬೆಳವಣಿಗೆಗಳು ಹಾಗೂ ಅಭಿವೃದ್ಧಿಯನ್ನು ಬಿಂಬಿಸುವ 'ಬಾಲವಾಣಿ' ಎಂಬ ದ್ವೈಮಾಸಿಕ ಇ-ನಿಯತಕಾಲಿಕ ಪ್ರಕಟಿಸುತ್ತಿದೆ.

ಸಮಾಜದ ಉನ್ನತ ವರ್ಗದ ಜನರನ್ನು ತಲುಪಿ ಇದರ ಬಗ್ಗೆ ಗಮನ ಸೆಳೆಯುವಲ್ಲಿ 'ಬಾಲವಾಣಿ' ಪ್ರಯತ್ನಿಸುತ್ತಿದೆ. 'ಬಾಲವಾಣಿ'ಯ ಪ್ರತಿ ಸಂಚಿಕೆಯೂ ವಿಭಿನ್ನ ವಿಷಯಗಳ ಬಗ್ಗೆ ನೋಟ ಬೀರಲಿದೆ. ಸರಕಾರದ ಹಲವು ಕಾರ್ಯಕ್ರಮಗಳು ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಹಲವು ಯೋಜನೆಗಳು, ಸಾಧನೆಗಳನ್ನು ಎಲ್ಲರಿಗೆ ತಲುಪಿಸುವಲ್ಲಿ ಸಹಾಯ ಮಾಡುತ್ತದೆ. ಈ ಮೂಲಕ ವಾಚಕರಲ್ಲಿ ಮಕ್ಕಳ ಕಲ್ಯಾಣ ಹಾಗೂ ಬಾಲ ಕಾರ್ಮಿಕತೆ ನಿರ್ಮೂಲನೆಯ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಕಾರ್ಯ ನಿರ್ವಹಿಸುತ್ತದೆ. ವಿವಿಧ ಸಂಸ್ಥೆಗಳು, ಕ್ರಿಯಾಶೀಲರು ಹಾಗೂ ಇತರರು ತಮ್ಮ ಚಿಂತನೆಗಳನ್ನು, ವಿಚಾರಗಳನ್ನು ಹಂಚಿಕೊಳ್ಳಲು ಒಂದು ಉತ್ತಮ ವೇದಿಕೆಯಾಗಿದೆ.

ಈ ನಿಯತಕಾಲಿಕದಲ್ಲಿ ಸರಕಾರದ ಹಲವು ಕಾರ್ಯಕ್ರಮಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ನಾನಾ ಯೋಜನೆಗಳು, ಸಾಧನೆಗಳನ್ನು ಒಳಗೊಂಡಿದೆ. 'ಬಾಲವಾಣಿ'ಯ ಸಂಚಿಕೆ ನೋಡಲು ಸಂಪರ್ಕಿಸುವ ವೆಬ್‌ಸೈಟ್: www.karunadu.gov.in/karnatakachildlabour

ಸಂಪರ್ಕ ವಿಳಾಸ:
Karnataka State Resource Centre on Child Labour (KSRCCL)
Karnataka State Child Labour Eradication
Project Society
Department of Labour , Government of Karnataka
Karmika Bhavana, ITI Compound,
Bannerghatta Road , Bangalore - 560 029
Phone : 080-22453549, 080-26531258 Extn 152
E-Mail: ksrccl@yahoo.in

Thursday, August 18, 2011

ಭಾರತ ನನ್ನ ದೇಶ

 ನಮ್ಮ ದೇಶದ ಅಧಿಕೃತ ಅಂತರಜಾಲತಾಣ ಇರಲೇಬೇಕಲ್ಲ? ಹೌದು, ಇದೆ. ಅದರ ವಿಳಾಸ - india.gov.in. ಇದು ಭಾರತ ಸರಕಾರದ ಅಧಿಕೃತ ಜಾಲತಾಣ. ನಮ್ಮ ದೇಶದ ಬಗ್ಗೆ ಎಲ್ಲ ವಿವರಗಳು ಇಲ್ಲಿವೆ. ಉದಾ- ರಾಷ್ಟ್ರೀಯ ಹಬ್ಬಗಳು, ಪ್ರಾಣಿ, ಹೂವು, ಪಕ್ಷಿ, ಗೀತೆ, ನದಿ, ಇತ್ಯಾದಿ. ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಅವುಗಳ ಮಾಹಿತಿಗಳು ಇಲ್ಲಿವೆ ಅಥವಾ ಆಯಾ ಸರಕಾರಗಳ ಅಧಿಕೃತ ಜಾಲತಾಣಗಳಿಗೆ ಕೊಂಡಿಗಳಿವೆ. ಪಾಸ್‌ಪೋರ್ಟ್ ಪಡೆಯುವುದು ಹೇಗೆ, ಸರಕಾರದ ಹಲವು ಅರ್ಜಿಗಳು, ಗಝೆಟ್‌ಗಳು ಎಲ್ಲ ಮಾಹಿತಿ ಇಲ್ಲಿವೆ. ಸರಕಾರಕ್ಕೆ ನೇರವಾಗಿ ದೂರು ನೀಡಬೇಕೆ? ಅದಕ್ಕೂ ಇಲ್ಲಿ ಸವಲತ್ತು ಇದೆ. ಇದು ನಿಜಕ್ಕೂ ಉಪಯೋಗಕಾರಿ. ಇದು ಕೆಲಸ ಮಾಡುತ್ತದೋ ಇಲ್ಲವೋ ಎಂಬ ಬಗ್ಗೆ ನನಗೆ ಅನುಮಾನವಿತ್ತು. ನಾನು ಒಂದು ದೂರು ಸಲ್ಲಿಸಿದಾಗ ಅದರ ಬಗ್ಗೆ ಕ್ರಮ ತೆಗೆದುಕೊಂಡು ನನಗೆ ಪತ್ರವೂ ಬಂದಿತ್ತು. ನಮ್ಮ ರಾಜ್ಯದಲ್ಲಿರುವ ಒಟ್ಟು ಜಿಲ್ಲೆಗಳ ಮಾಹಿತಿ ಮಾತ್ರ ತಪ್ಪಾಗಿದೆ.

ಮರಳಿ ಅಂಚೆಗೆ

ಮಿಂಚಂಚೆಯೊಂದನ್ನು ಬರೆದು http://snailmailmyemail.org/ ಅಂತರ್ಜಾಲ ತಾಣಕ್ಕೆsnailmailmyemail@gmail.com ವಿಳಾಸಕ್ಕೆ  ಮಿಂಚಂಚೆ ಕಳುಹಿಸಿದರೆ ಸರಿ. ನಿಮ್ಮ ಮಿಂಚಂಚೆಯನ್ನು ಬರೆದು, ಅದನ್ನು ಸಾಮಾನ್ಯ ಅಂಚೆಯಲ್ಲಿ ಸೂಚಿಸಿದ ವಿಳಾಸಕ್ಕೆ ಕಳುಹಿಸುವ ಏರ್ಪಾಡಾಗುತ್ತದೆ. ಜುಲೈ ಹದಿನೈದರಿಂದ ಒಂದು ತಿಂಗಳ ಕಾಲ ಲಭ್ಯವಿರುವ ಈ ಸೇವೆಯು,ಸಾಮಾನ್ಯ ಅಂಚೆಯ ಹಿರಿಮೆಯನ್ನು ನೆನಪಿಸಲು ಹಮ್ಮಿಕೊಳ್ಳಲಾಗಿರುವ ಚಳುವಳಿಯಾಗಿದೆ.ಕೈಬರಹದ ಪತ್ರಗಳನ್ನು ಪಡೆದಾಗ ಅಗುವ ಖುಷಿಯನ್ನು ಮಿಂಚಂಚೆ ನೀಡದು. ಕೈಬರಹದ ಪತ್ರಗಳು ವ್ಯಕ್ತಿಯ ಸ್ವಂತಿಕೆಯನ್ನು ಮೆರೆದು, ಅದನ್ನು ಪಡೆದವರಲ್ಲಿ ವ್ಯಕ್ತಿಗೆ ತಮ್ಮ ಮೇಲೆ ಇರುವ ಕಾಳಜಿಯನ್ನು ವ್ಯಕ್ತಪಡಿಸುತ್ತವೆ ಎನ್ನುವುದು, ಈ ಚಳುವಳಿಯನ್ನು ಹಮ್ಮಿಕೊಂಡ ಇವಾನ್, ಲ್ಯೂಸಿ ಮುಂತಾದವರ ನಂಬಿಕೆ. ಆ ಆನ್‌ಲೈನ್ ಚಳುವಳಿಗೆ ಹೆಚ್ಚೇನೂ ಪ್ರತಿಕ್ರಿಯೆ ಬರದೆಂದುಕೊಂಡು, ತಾಣವನ್ನು ಆರಂಭಿಸಿದ ಅವರಿಗೆ ಸಾವಿರಗಟ್ಟಲೆ ಮಿಂಚಂಚೆಗಳು ಬಂದಾಗ ಖುಷಿ ಮತ್ತ್ತು ಗಾಬರಿ-ಗಾಬರಿ ಯಾಕೆಂದರೆ, ಆ ಸಂದೇಶಗಳನ್ನು ಬರೆದು ಪತ್ರ ಮುಖೇನ ಕಳುಹಿಸಲು ಬೇಕಾದ ಜನಬೆಂಬಲ ಬೇಕಲ್ಲಾ? ಅದಕ್ಕೂ ಅಂತರ್ಜಾಲವೇ ನೆರವಾಯಿತು. ಪತ್ರ ಬರೆಯುವುದು ಹವ್ಯಾಸವಾಗಿರುವ ಜನರು, ಈ ಕಾರ್ಯದಲ್ಲಿ ಕೈಗೂಡಿಸಲು ಸ್ವಯಂಸೇವಕರಾಗಿ ಮುಂದೆ ಬಂದರು. ಮೊದಲು ಮಿಂಚಂಚೆ ಕಳುಹಿಸಿ, ತಮಗಾಗಿ ಇತರರು ಪತ್ರ ಬರೆಯಲಿ ಎಂದು ಅಪೇಕ್ಷಿಸಿದವರು, ನಂತರದಲ್ಲಿ ತಾವೇ ಕೈಗೂಡಿಸಿದರು. ಆಗಸ್ಟ್ ಹದಿನೈದರ ನಂತರವೂ ಈ ತಾಣ ಮುಂದುವರಿದರೆ ಅಚ್ಚರಿಯಿಲ್ಲ.

Wednesday, August 17, 2011

ಆಟೋದೋರು ತಂಟೆ ಮಾಡಿದ್ರೆ ಒಂದು ಎಸ್.ಎಮ್.ಎಸ್ ಮಾಡಿ

 ಆಟೋದೋರು ತಂಟೆ ಮಾಡಿದ್ರೆ ಒಂದು ಎಸ್.ಎಮ್.ಎಸ್ ಮಾಡಿ.
SMS  @excessfare TO  92433 42000

Friday, August 5, 2011

ಇ-ದಾನ ಮಾಡಿ

ನಿಮ್ಮಲ್ಲಿ ನಿಮಗೆ ಉಪಯೋಗವಿಲ್ಲದ ಆದರೆ ಸಂಪೂರ್ಣ ಕೆಟ್ಟು ಹೋಗಿರದ ಹಲವಾರು ವಸ್ತುಗಳಿರಬಹುದು. ಅದು ಬೆಲೆಬಾಳುವ ಉಪಕರಣವಿರಬಹುದು, ಬಟ್ಟೆಬರೆಯಿರಬಹುದು, ಅಥವಾ ಸೈಕಲ್, ಹೀಗೆ ಯಾವುದು ಬೇಕಿದ್ದರೂ ಆಗಿರಬಹುದು. ಅವುಗಳನ್ನು ಉಪಯೋಗ ಮಾಡುವಂತಹ ಬಡವರಿಗೆ, ನಿರ್ಗತಿಕರಿಗೆ ದಾನ ಮಾಡುವ ಇಚ್ಛೆಯೂ ನಿಮಗಿರಬಹುದು. ಆದರೆ ದಾನ ಮಾಡುವುದು ಹೇಗೆ? ಅಗತ್ಯವಿರುವವರು ಎಲ್ಲಿದ್ದಾರೆ? ಅವರನ್ನು ಸಂಪರ್ಕಿಸುವುದು ಹೇಗೆ? ಎಂದೆಲ್ಲಾ ಆಲೋಚಿಸುತ್ತಿದ್ದೀರಾ? ಹಾಗಿದ್ದರೆ ನೀವು www.e-daan.com ಜಾಲತಾಣಕ್ಕೆ ಭೇಟಿ ನೀಡಬಹುದು. ದಾನ ನೀಡುವವರನ್ನು ಮತ್ತು ದಾನ ಪಡೆಯುವವರನ್ನು ಈ ಜಾಲತಾಣ ಒಂದುಗೂಡಿಸುತ್ತದೆ. ಸಾಮಾನ್ಯವಾಗಿ ದಾನ ಪಡೆಯುವವರು ಅಂತರಜಾಲ ಬಳಸುವವರಾಗಿರುವುದಿಲ್ಲ. ವಸ್ತುಗಳನ್ನು ಎನ್‌ಜಿಓಗಳ ಮೂಲಕ ವಿತರಣೆ ಮಾಡಲಾಗುತ್ತದೆ.
krupe:Dr U B Pavanaja