WEBSITE, INVENTORY SOFTWARE, CCTV CAMERA , COMPUTER & LAPTOP SALES & SERVICE, TABLETS, VIDEOGRAPHY, PHOTOGRAPHY, PROJECTOR ,VIDEO & AUDIO EDITING, VHS TO CD,DVD,BLURAY DISC CONVERSATION, DESIGNING & MANY MORE...
ಸುಸ್ವಾಗತ ನಿಮ್ಮ ಕಲ್ಪನೆ ನಮ್ಮ ಸೃಷ್ಠಿ !!! ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು.
ಈಗ ಮಲ್ಟಿಮೀಡಿಯವನ್ನು e-Speak ಕನ್ನಡದಲ್ಲಿ ಕೇಳಿ!

Friday, March 30, 2012

ಕಳೆದುಹೋದ LAPTOP ಪತ್ತೆಗೆ ತಂತ್ರಾಂಶ

 
ದಿನಂಪ್ರತಿ ಬಳಸುವ ಕಂಪ್ಯೂಟರುಗಳು ನಮ್ಮ ಬದುಕಿನ ಭಾಗವೇ ಆಗಿರುತ್ತವೆ. ಲ್ಯಾಪ್ಟಾಪ್ ಇರಬಹುದು ಇಲ್ಲವೇ ಟ್ಯಾಬ್ಲೆಟ್ ಕೂಡ ಇರಬಹುದು ಅದರ ಜೊತೆ ಒಂದು ವಿಶೇಷ ಬೆಸುಗೆ ಏರ್ಪಟ್ಟಿರುತ್ತದೆ. ನಮ್ಮ ಕಣ್ಣುಮುಂದೆ ಅವು ಕಾಣದಿದ್ದರೆ ಏನೋ ಮಿಸ್ ಮಾಡಿಕೊಂಡ ಹಾಗೆ ಅನಿಸುತ್ತದೆ.
ಅಕಸ್ಮಾತ್ ಕಳೆದುಹೋದರೆ ಇಲ್ಲಾ ಮರೆತು ಎಲ್ಲೊ ಬಿಟ್ಟುಬಿಟ್ಟರೆ ಆತಂಕಕ್ಕೆ ಈಡಾಗುತ್ತೇವೆ. ಯಾರಾದರೂ ಕದ್ದರಂತೂ ಮನಸ್ಸು ಚಡಪಡಿಸುತ್ತದೆ. ಈಗ ಕಳೆದುಹೋದ ಅಥವಾ ಕದ್ದ ಲ್ಯಾಪ್ಟಾಪ್ ಎಲ್ಲಿದೆ ಎಂದು ಪತ್ತೆ ಮಾಡಲೆಂದೇ ಒಂದು ಉಚಿತ ತಂತ್ರಾಂಶ ಬಂದಿದೆ.
ನಿಮ್ಮ ಲ್ಯಾಪ್ಟಾಪ್ನಲ್ಲಿ ವಿಂಡೋಸ್ 2000 ಹಾಗು ಅದಕ್ಕೂ ಮೇಲ್ಪಟ್ಟ ಆವೃತ್ತಿಯ ವಿಂಡೋಸ್ ಇದ್ದರೆ ಇದನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಕಳೆದುಹೋದ ಲ್ಯಾಪ್ಟಾಪ್ ಅನ್ನು ಬೇರೆ ಕಂಪ್ಯೂಟರ್ ಮೂಲಕ ಅದರ ಲೋಕೇಶನ್ ಅನ್ನು ಗೂಗಲ್ ಮ್ಯಾಪ್ ಮೂಲಕ ನೋಡಬಹುದು ಕೂಡ.
locatemylaptop ಹೆಸರಿನ ತಂತ್ರಾಂಶ ಡೌನ್ಲೋಡ್ ಮಾಡಿಕೊಂಡು ಒಮ್ಮೆ ರೆಜಿಸ್ಟರ್ ಮಾಡಿದರೆ ಸಾಕು.

Ultrabook ಕಾಲ

ಡೆಸ್ಕ್‌ಟಾಪ್‌ಗಳ ದಿನಗಳಿನ್ನು ಬೆರಳೆಣಿಕೆಯಲ್ಲಿವೆ. ಕಂಪ್ಯೂಟರ್ ಆಟಗಳನ್ನಾಡುವವರು, ವಿನ್ಯಾಸ-ಚಿತ್ರ ರಚನೆಯಲ್ಲಿ ತೊಡಗುವವರು ಮುಂತಾದ ಕೆಲವು ರೀತಿಯ ಬಳಕೆದಾರರನ್ನು ಹೊರತು ಪಡಿಸಿ, ಇತರ ರೀತಿಯ ಬಳಕೆದಾರರು ಡೆಸ್ಕ್‌ಟಾಪ್ ಬಳಕೆಯನ್ನು ನಿಲ್ಲಿಸಿ. ಲ್ಯಾಪ್‌ಟಾಪ್. ಟ್ಯಾಬ್ಲೆಟ್, ಸ್ಮಾರ್ಟ್‌ಫೋನುಗಳತ್ತ ವಾಲುತ್ತಿದ್ದಾರೆ. ಡೆಸ್ಕ್‌ಟಾಪ್ ಬಳಕೆದಾರರು ನಾಲ್ಕು ಜೀಬಿ RAM, ಒಂದು ಟೆರಾಬೈಟು ಸ್ಮರಣಕೋಶವನ್ನು ಹೊಂದಿರುವುದು ಸಾಮಾನ್ಯ. AMD ಮತ್ತು INTEL ನ ಬಹುಸಂಖ್ಯೆಯ ಸಂಸ್ಕಾರಕವನ್ನು ಹೊಂದಿರುವುದು ಸಾಮಾನ್ಯ. ವಿಶಾಲ ತೆರೆ ಮತ್ತು ಟೈಪಿಸುವುದನ್ನು ಸಲೀಸಾಗಿಸುವ ಕೀಲಿಮಣೆಯನ್ನು ಇವು ಹೊಂದಿರುವುದರಿಂದ ಇದಕ್ಕೆ ಅಭಿಮಾನಿಗಳೂ ಇದ್ದಾರೆ. ಸ್ಪರ್ಶ ಸಂವೇದಿ ತೆರೆಯನ್ನು ಹೊಂದಿರುವ ಡೆಸ್ಕ್‌ಟಾಪ್‌ಗಳು ಕಡಿಮೆಯಾದರೂ ಇಲ್ಲವೇ ಇಲ್ಲವೆಂದಿಲ್ಲ.

ಮರೆಯಾಗುತ್ತಿರುವ ಡೆಸ್ಕ್‌ಟಾಪುಗಳ ಸ್ಥಾನವನ್ನು ಉಲ್ಟ್ರಾಬುಕ್‌ಗಳು ಆಕ್ರಮಿಸಬಹುದು. ಉಲ್ಟ್ರಾಬುಕ್‌ಗಳೆಂದರೆ ಲೋಹದ  ಮೇಲ್ಮೈಹೊಂದಿರುವ ತೆಳುವಾದ ಲ್ಯಾಪ್‌ಟಾಪುಗಳು. ಇವುಗಳನ್ನು ಹಗುರ ಮಾಡಲು, ಇವುಗಳಲ್ಲಿ ಹಾರ್ಡ್‌ಡಿಸ್ಕ್ ಬದಲಿಗೆ ಫ್ಲಾಶ್ ಸ್ಮರಣಕೋಶಗಳನ್ನು ಬಳಸಲಾಗುತ್ತಿದೆ. DESKTOPಗಳಲ್ಲಿ ಸ್ಪರ್ಶಸಂವೇದಿ ತೆರೆಗಳು ಜನಪ್ರಿಯವಾಗಿಲ್ಲವಾದರೂ ಅಲ್ಟ್ರಾಬುಕ್‌ಗಳಲ್ಲಿ ಇಂತಹ ತೆರೆಗಳು ಕಡ್ಡಾಯವಾಗಿ ಬೇಕೇ ಬೇಕು. ಡೆಲ್ ಕಂಪೆನಿಯು ಟ್ಯಾಬ್ಲೆಟ್ ಮತ್ತು ಸ್ಮಾರ್ಟ್‌ಫೋನು ತಯಾರಿಸಿ, ಮಾರಾಟಕ್ಕೆ ಒದಗಿಸಿದರೂ ಯಶಸ್ಸು ಕಾಣಲಿಲ್ಲ. INTEL, ACER ಮತ್ತು DELL ಕಂಪೆನಿಗಳು ನೆಟ್‌ಬುಕ್ ಮಾರಾಟದಲ್ಲಿ ಸಫಲತೆ ಕಂಡಿವೆ. ಮಾದರಿಗಾಗಿ INTEL ರವರ ಅಂತರ್ಜಾಲ ತಾಣ ನೋಡಿ. 

ವಿದ್ಯುನ್ಮಾನ ಮದುವೆ

ಅಂತರಜಾಲದಲ್ಲಿ ಪ್ರತಿಯೊಂದಕ್ಕೂ ಒಂದೊಂದು ಜಾಲತಾಣವಿರುವಾಗ ಮದುವೆಗೂ ಬೇಕಲ್ಲವೇ? ಹೌದು. ಅದಕ್ಕೂ ಹಲವಾರು ಜಾಲತಾಣಗಳಿವೆ. ಅಂತಹ ಒಂದು ಜಾಲತಾಣ ಮದುವೆಯನ್ನು ಯೋಚಿಸುವಲ್ಲಿಂದ ಹಿಡಿದು ಮಧುಚಂದ್ರ ಮುಗಿಸಿ ಬರುವ ತನಕ ವಿವಿಧ ಹಂತಗಳಿಗೆ ಇದರಲ್ಲಿ ಸೂಕ್ತ ವಿಭಾಗಗಳಿವೆ. ವಧೂವರರ ಭಾವಚಿತ್ರ, ಅವರು ಹೇಗೆ ಭೇಟಿಯಾದರೆಂಬ ವಿವರ, ಎಲ್ಲಿ ಯಾವಾಗ ಮದುವೆ, ಬಂಧುಮಿತ್ರರಿಗೆ ಆಹ್ವಾನ ಕಳುಹಿಸುವುದು, ತಮಗೇನು ಬೇಕು ಎಂಬ ಆಶಾಪಟ್ಟಿ, ಹೀಗೆ ಹಲವು ರೀತಿಯಲ್ಲಿ ಮದುವೆಗೆ ಸಹಾಯ ಮಾಡುವ ಸವಲತ್ತುಗಳಿವೆ. ಮದುವೆಗೆ ಬರುವವರು ತಮಗೆ ಯಾವ ರೀತಿಯ ಆಹಾರ ಬೇಕು ಎಂಬಂತಹ ವೋಟಿಂಗ್ ಕೂಡ ತಯಾರಿಸಬಹುದು.

Monday, March 26, 2012

SMS ಬ್ಲಾಕ್ ಮಾಡುವುದು ಹೇಗೆ

ಮೊಬೈಲ್ ಇದೆ ಅಂದಮೇಲೆ ಕರೆಗಳು ಬರುತ್ತೆ. ಎಸ್ಎಂಎಸ್ ಗಳೂ ಬರುತ್ತೆ.  ಅದರಲ್ಲೂ ಇನ್ಶುರೆನ್ಸ್ ತಗೊಳ್ಳಿ, ಅದು ತಗೊಳ್ಳಿ, ಇದು ಚೆನ್ನಾಗಿದೆ, ಈ ಪಾರ್ಲರ್ ಐಟಂ ಚೆಂದ ಅಂತ ದಿನಕ್ಕೆ ಎಣಿಕೆ ಇಲ್ಲದಷ್ಟು ಎಸ್ಎಂಎಸ್ ಬರುತ್ತವೆ.
ಇದನ್ನು ತಡೆಯಲು ಸುಲಭ ಉಪಾಯವೆಂದರೆ DND (ಡು ನಾಟ್ ಡಿಸ್ಟರ್ಬ್) ರೆಜಿಸ್ಟರ್ ಮಾಡಬಹುದು. ನೀವು ರೆಜಿಸ್ಟರ್ ಮಾಡಿದ ಒಂದು ವಾರದಲ್ಲಿ ಅನಗತ್ಯ ಎಸ್ಎಂಎಸ್ ಬರುವುದು ನಿಲ್ಲುತ್ತದೆ.

ನಿಮ್ಮದು ಆಂಡ್ರಾಯ್ಡ್ ಆಧಾರಿತ ಸ್ಮಾರ್ಟ್ ಫೋನ್ ಆದರೆ SMS BLOCKER - AWARD WINNER ಎಸ್ಎಂಎಸ್ ಬ್ಲಾಕರ್ App ಡೌನ್ಲೋಡ್ ಮಾಡಿಕೊಂಡು ಕೂಡ ತಡೆಗಟ್ಟಬಹುದು.

ಹಾಗಿದ್ದರೆ ನಿಮ್ಮ ಬ್ಯುಸಿ ಸಮಯದಲ್ಲಿ ಬಂದು ಕಿರಿಕ್ ಮಾಡ್ತಿರುವ ಈ ಎಸ್.ಎಂ.ಎಸ್ ಮತ್ತು ಕರೆಗಳನ್ನು ತಪ್ಪಿಸಲು ಸುಲಭವಾದ ಉಪಾಯವಿದೆ. ಕೂಡಲೇ ನೀವು ರಾಷ್ಟ್ರೀಯ ಗ್ರಾಹಕ ಆದ್ಯತೆ ರಿಜಿಸ್ಟರ್ (NCPR) ವೆಬ್ ಸೈಟ್ ಲಿಂಕ್
http://nccptrai.gov.in/nccpregistry/search.misc ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ನಂಬರ್ ರಿಜಿಸ್ಟರ್ ಆಗಿದೆಯೋ ಇಲ್ಲವೋ ಪರೀಕ್ಷಿಸಿ. ಇಲ್ಲವಾದಲ್ಲಿ ಎಲ್ಲಾ ರೀತಿಯ ಕಾಟವನ್ನು ತಪ್ಪಿಸಲು START ಎಂದು ಟೈಪ್ ಮಾಡಿ ಸ್ಪೇಸ್ ಕೊಟ್ಟು 0 ಟೈಪ್ ಮಾಡಿ 1909 ಗೆ ಎಸ್.ಎಂ.ಎಸ್ ಕಳುಹಿಸಿ  (START 0 ).7 ದಿನಗಳಲ್ಲಿ ಆಕ್ಟಿವೇಟ್ ಆಗುತ್ತದೆ ಎಂಬ ಎಸ್.ಎಂ.ಎಸ್ ಬರುತ್ತದೆ.

BURN NOTE- ಈ-ಮೇಲ್


 ನೀವು ಹಳೇ ಗೆಳತಿಗೆಂದು ಬರೆದ ಈ-ಮೇಲ್ ಇರಬಹುದು, ಇಲ್ಲವೆ ಅಶ್ಲ್ಲೀಲ ಈ -ಮೇಲ್ ಫಾರ್ವರ್ಡ್ ಮಾಡಿರಬಹುದು, ಅಥವಾ ನಿಮ್ಮ ಖಾಸಗಿ ಚಿತ್ರಗಳನ್ನ ಗೆಳೆಯನಿಗೆ ಮೇಲ್ ಕಳುಹಿಸಿದ್ದು ಅವನು ಎಂದಾದರೊಂದು ದಿನ ಬ್ಲಾಕ್ ಮೇಲ್ ಮಾಡಬಹುದು ಎನ್ನುವ ಚಿಂತೆ ಇದ್ದರೆ ಮರೆತುಬಿಡಿ.
ನಮ್ಮಂಥವರ ಮನಸ್ಸು ಚೆನ್ನಾಗಿ ಅರ್ಥ ಮಾಡಿಕೊಂಡಿರುವ ಜಾಕೋಬ್ ರೋಬ್ಬಿನ್ಸ್ ಎಂಬಾತ ಕಂಡುಹಿಡಿದಿರುವ ವೆಬ್ಸೈಟ್ ನಿಂದ ನೀವು ಈ-ಮೇಲ್  ಕಳುಹಿಸಿದರೆ ಅದು ಇಂಟರ್ನೆಟ್ ನಲ್ಲಿ ಸೇವ್  ಆಗುವುದೇ ಇಲ್ಲ. ಎಷ್ಟು ಸಮಯದ ನಂತರ ನೀವು ಆ ಈ –ಮೇಲ್ ಡಿಲೀಟ್ ಆಗಬೇಕು ಅಂತ ಸೆಟ್ ಮಾಡಿಬಿಟ್ಟರೆ ಸಾಕು, ಅಷ್ಟು ಸಮಯದ ನಂತರ ಅವರು ಓದಿದ ತಕ್ಷಣ ಡಿಲೀಟ್ ಆಗಿಬಿಡುತ್ತದೆ. ಅದೂ ಅಲ್ಲದೆ ನೀವು ಕಳಿಸಿದ ವ್ಯಕ್ತಿಯೂ ನಿಮ್ಮ ಮೇಲ್ ಅನ್ನು ಸೇವ್ ಮಾಡಲಾಗುವುದಿಲ್ಲ. ಕಾಪಿ ಮಾಡುವುದು, ಪೇಸ್ಟ್ ಮಾಡುವುದು,ಸ್ಕ್ರೀನ್ ಶಾಟ್ ತೆಗೆದುಕೊಳ್ಳುವುದೂ ಸಾಧ್ಯವಾಗುವುದಿಲ್ಲ.
ಇನ್ನು ಮುಂದೆ ನೀವು ಅರ್ಜೆಂಟ್ ಆಗಿ ಪಾಸ್ವರ್ಡ್ ಅನ್ನೋ, ಕ್ರೆಡಿಟ್ ಕಾರ್ಡ್ ಸಂಖ್ಯೆಯನ್ನೋ ಮೇಲ್ ಮಾಡಿದರೂ ನಿಶ್ಚಿಂತೆಯಾಗಿರಬಹುದು.
ನೀವು ಕ್ಲಿಕ್ ಮಾಡಬೇಕಾದ ಲಿಂಕ್ :- https://burnnote.com/#/

Friday, March 23, 2012

IPHONE,IPAD,ANDROID APPS ವೆಬ್ಸೈಟ್

ನಿಮ್ಮ ಆಪಲ್ ಐಫೋನ್, ಐಪ್ಯಾಡ್ ಹಾಗು ಆಂಡ್ರಾಯ್ಡ್ ಸ್ಮಾರ್ಟ್ ಫೋನುಗಳಿಗೆ ಹೊಸ ಆಪ್ಸ್ ಹುಡುಕುವುದು ಈಗ ಇನ್ನೂ ಸುಲಭ.
ಯಾವ ರೀತಿಯ ಆಪ್ಸ್ ಬೇಕು ಎಂದು ಹುಡುಕಲು ಆಪಲ್ ಚೊಂಪ್ ಹೆಸರಿನ ಹೊಸ ಸರ್ಚ್ ಇಂಜಿನ್ ರೀತಿಯ ವೆಬ್ಸೈಟ್ ಒಂದನ್ನು ಬಿಡುಗಡೆ ಮಾಡಿದ್ದು, ಇಲ್ಲಿ ಹೊಚ್ಚ ಹೊಸ ಉಚಿತ ಹಾಗು ಕೊಳ್ಳುವ ಆಪ್ಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ಇದಲ್ಲದೆ ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ಆಪ್ಸ್ ಗಳು ಸಹ ಸಿಗುತ್ತವೆ.  ಡೌನ್ಲೋಡ್ ಗಾಗಿ ಕ್ಲಿಕ್ ಮಾಡಿ.

ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಪಾಲಕರಿಗೆ ವಿಜ್ಞಾನದ ಪ್ರಾತ್ಯಕ್ಷಿಕೆ

ವಿಜ್ಞಾನ ಎಂದೆಂದಿಗೂ ಕುತೂಹಲಕಾರಿಯೇ. ನಾವು ಪ್ರತಿದಿನ ಮನೆಗಳಲ್ಲಿ ಮಾಡುವ ಹಲವು ಕೆಲಸಗಳ ಹಿಂದೆ ವಿಜ್ಞಾನದ ತತ್ತ್ವಗಳಿವೆ. ಅಂಗಳಕ್ಕೆ ಬಂದು ಆಕಾಶ ನೋಡಿದರೆ ಕಾಣುವ ನಕ್ಷತ್ರಗಳು ಶತಮಾನಗಳಿಂದ ಮಾನವನ ಆಸಕ್ತಿಯನ್ನು ಕೆರಳಿಸುತ್ತಲೇ ಬಂದಿವೆ. ದೋಸೆ ಕಾವಲಿ ಬಿಸಿಯಾಗಿದೆಯೇ ಎಂದು ತಿಳಿಯಲು ಗೃಹಿಣಿ ಸ್ವಲ್ಪ ನೀರು ಚಿಮುಕಿಸಿ ನೋಡುವುದರ ಹಿಂದೆ ಭೌತಶಾಸ್ತ್ರದ ಸಿದ್ಧಾಂತ ಅಡಗಿದೆ. ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಅರಿವು ಮತ್ತು ಅದನ್ನು ತಿಳಿದುಕೊಳ್ಳಲು ಆಸಕ್ತಿ ಮೂಡಿಸುವುದು ಪಾಲಕರ ಮತ್ತು ಶಿಕ್ಷಕರ ಹೊಣೆಗಾರಿಕೆ. ಇದರಿಂದ ತಪ್ಪಿಸಕೊಳ್ಳುವಂತೆಯೇ ಇಲ್ಲ. ವಿಜ್ಞಾನವಿಲ್ಲದೆ ಜೀವನವಿಲ್ಲ. ದೈನಂದಿನ ಜೀವನದಲ್ಲಿ ಅಡಕವಾಗಿರುವ ವಿಜ್ಞಾನದ ಸಿದ್ಧಾಂತಗಳ ಬಗ್ಗೆ ಅರಿವು ಮೂಡಿಸುವ ಜಾಲತಾಣ ವಿಜ್ಞಾನದ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಪಾಲಕರಿಗೆ, ಎಲ್ಲ ಹಂತಗಳವರಿಗೆ, ಇಲ್ಲಿ ಸೂಕ್ತ ಮಾಹಿತಿ, ಪ್ರಾತ್ಯಕ್ಷಿಕೆ ಎಲ್ಲ ಇವೆ. 

ವಿಡಿಯೋ ಕ್ಲಿಪ್‌ಗಳನ್ನು ಪರಸ್ಪರ ಹಂಚಿಕೊಳ್ಳಲು ಜಾಲತಾಣ

ಈ ಅಂತರ್ಜಾಲ ತಾಣದಲ್ಲಿ ವಿಡಿಯೋಗಳನ್ನು ಪರಸ್ಪರ ಹಂಚಿಕೊಳ್ಳಲು ಬರುತ್ತದೆ.ಇದೂ ಇನ್ನೊಂದು ಬಗೆಯ ಸಾಮಾಜಿಕ ಜಾಲತಾಣವಾದರೂ, ವಿಡಿಯೋ ಕ್ಲಿಪ್‌ಗಳ ಕಡೆ ಹೆಚ್ಚಿನ ಒತ್ತು ನೀಡಿರುವುದು ಈ ತಾಣದ ವೈಶಿಷ್ಟ್ಯ.

ವಿಶ್ವವಿದ್ಯಾಲಯ ಆನ್‌ಲೈನ್ ಪ್ರಶ್ನೆಪತ್ರಿಕೆ


ಆನ್‌ಲೈನ್ ಮೌಲ್ಯಮಾಪನದ ನಂತರ, ಇದೀಗ ಪ್ರಶ್ನೆಪತ್ರಿಕೆಗಳ ಬಟವಾಡೆಗೆ ಅಂತರ್ಜಾಲದ ಬಳಕೆ ಮಾಡಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸುದ್ದಿಯಲ್ಲಿದೆ. ಬೆಳಗಾವಿ ವಿಭಾಗದಲ್ಲಿ ಆನ್‌ಲೈನ್ ಪ್ರಶ್ನೆಪತ್ರಿಕೆ ರವಾನೆ ವ್ಯವಸ್ಥೆಯನ್ನು ಸಫಲವಾಗಿ ಬಳಸಿ,ಇನ್ನಿದನ್ನು ರಾಜ್ಯದಲ್ಲೆಡೆ ಬಳಕೆ ಮಾಡಲು ವಿಶ್ವವಿದ್ಯಾಲಯ ಉದ್ದೇಶಿಸಿದೆ.ಕಾಲೇಜುಗಳಿಗೆ ಪರೀಕ್ಷೆ ನಡೆವ ದಿನವೇ ಪ್ರಶ್ನೆಪತ್ರಿಕೆಯ ಇ-ಪ್ರತಿ ಕಳುಹಿಸಿ,ಪರೀಕ್ಷಾ ಕೇಂದ್ರಗಳಲ್ಲಿ ಅವನ್ನು ಮುದ್ರಿಸಿ, ಪರೀಕ್ಷೆ ನಡೆಸುವುದೇ ಈ ವ್ಯವಸ್ಥೆ.ಮಾಮೂಲು ಮಿಂಚಂಚೆ ಸೇವೆಯನ್ನು ಈ ವ್ಯವಸ್ಥೆ ಬಳಸುತ್ತಿಲ್ಲ. ಅಂತರ್ಜಾಲದಲ್ಲಿ ಖಾಸಗಿ ಜಾಲವನ್ನು ಏರ್ಪಡಿಸಿ, ತಂತ್ರಾಂಶವೊಂದನ್ನು ಬಳಸಿ ಇದನ್ನು ಕಾರ್ಯಗತಗೊಳಿಸಲಾಗಿದೆ. ಪ್ರಶ್ನೆಪತ್ರಿಕೆ ಮಾಹಿತಿ ಸೋರಿಕೆ ತಡೆಗೆ ಗೂಢಲಿಪಿಯನ್ನು ಆಧರಿಸಿದ ಭದ್ರತಾ ವ್ಯವಸ್ಥೆಯಿದೆ. http://www.vtu.ac.in/

Wednesday, March 21, 2012

ಸ್ಯಾಮ್ಸಂಗ್ ಫೋನ್ ಗೆ ಆನ್ಲೈನ್ ಅಂಗಡಿ

ಸ್ಯಾಮ್ಸಂಗ್ ಇಂಡಿಯಾ ಈಗ ಭಾರತೀಯ ಗ್ರಾಹಕರಿಗೆ ತನ್ನದೇ ಆದ ಹೊಸ ಆನ್ಲೈನ್ ಮಳಿಗೆಯನ್ನು ಪ್ರಾರಂಭಿಸಿದೆ.
ಇದರೊಂದಿಗೆ ನೀವು ಈಗ ಸ್ಯಾಮ್ಸಂಗ್ ಕಂಪನಿಯ ಮೊಬೈಲ್, ಟ್ಯಾಬ್ಲೆಟ್, ಲ್ಯಾಪ್ಟಾಪ್ ಹಾಗು ಬಿಡಿಭಾಗಗಳನ್ನು ಇಲ್ಲೇ ಕೊಳ್ಳಬಹುದು. ಹಣ ಪಾವತಿಗಾಗಿ ಆನ್ಲೈನ್ (ಡೆಬಿಟ್ / ಕ್ರೆಡಿಟ್ ಕಾರ್ಡ್) ಸೌಲಭ್ಯ ಹಾಗು ಖರೀದಿಸಿದ ವಸ್ತು ಮನೆಗೆ ಬಂದ ಮೇಲೆ ಹಣ ಪಾವತಿ ಮಾಡುವ ಆಯ್ಕೆಯನ್ನೂ ಕೊಟ್ಟಿದೆ.
ನಿಮ್ಮ ಹತ್ತಿರದ ಮೊಬೈಲ್ ಅಂಗಡಿಗಿಂತಲೂ ಕಡಿಮೆ ಬೆಲೆಯಲ್ಲಿ ಸ್ಯಾಮ್ಸಂಗ್ ಉತ್ಪನ್ನಗಳು ಇಲ್ಲಿ ಸಿಗಲಿದ್ದು, ಕೆಲವು ಮೊಬೈಲುಗಳ ಮೇಲೆ ಡಿಸ್ಕೌಂಟ್ ಕೂಡಾ ಇದೆ.
ಹಾಗಾದರೆ ತಡ ಯಾಕೆ. ಖರೀದಿ ಮಾಡಲು ಇಲ್ಲವೆ ಬೆಲೆಯನ್ನು ಚೆಕ್ ಮಾಡಲು ಭೇಟಿ ಕೊಡಿ .

Tuesday, March 20, 2012

ವಾರಂಟಿಫೈ

ನಾವು ದಿನನಿತ್ಯದ ಬದುಕಲ್ಲಿ ಹಲವಾರು ವಸ್ತುಗಳನ್ನು ಖರೀದಿಸುತ್ತೇವೆ. ಅದೆಷ್ಟೋ ಬಿಲ್ಲುಗಳನ್ನು ಜೇಬಿನಲ್ಲಿ ಇಲ್ಲವೆ ಪರ್ಸಿನಲ್ಲಿ ತುರುಕಿರುತ್ತೇವೆ. ಕೊಂಡುಕೊಂಡ ವಸ್ತು ಕೆಟ್ಟಾಗ ಇಲ್ಲವೆ ಹಾನಿಯಾದಾಗ ಅದರ ಬಿಲ್ಲುಗಳು ಸಿಗದಿದ್ದರೆ ಪರದಾಡಬೇಕಾಗುತ್ತದೆ.
ಇನ್ನುಮುಂದೆ ನೀವು ಯಾವುದೇ ವಾರಂಟಿ ಇರುವ ವಸ್ತು ಖರೀದಿಸಿದಾಗ ಅದರ ಬಿಲ್ಲನ್ನು ಜೋಪಾನ ಮಾಡುವ ವಾರಂಟಿಫೈ ಎಂಬ ಆಪ್ (App) ಬಂದಿದೆ. ಇದನ್ನು ನೀವು ನಿಮ್ಮ ಸ್ಮಾರ್ಟ್ಫೋನ್ ಹಾಗು ಆಪಲ್ ನ ಉತ್ಪನ್ನಗಳಲ್ಲಿ ಡೌನ್ಲೋಡ್ ಮಾಡಿಕೊಂಡು ಆ ಬಿಲ್ ಅನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ. ಸ್ಕ್ಯಾನ್ ಆದ ನಿಮ್ಮ ಬಿಲ್ಲುಗಳನ್ನು ವಾರಂಟಿಫೈ ನ ಸರ್ವರುಗಳು ಎಷ್ಟೇ ವರ್ಷವಾದರೂ ಸರಿ ಜೋಪಾನ ಮಾಡುತ್ತವೆ.
ಇದಷ್ಟೇ ಅಲ್ಲದೆ ವಾರಂಟಿ ಕೊನೆಯಾಗುವ ಸಮಯವನ್ನು ಅದೇ ನೆನಪಿಸುತ್ತದೆ ಹಾಗು ಆನ್ಲೈನ್ ನಲ್ಲೇ ವಾರಂಟಿಯನ್ನು ವಿಸ್ತರಿಸಬಹುದು.
ಈ ಆಪ್ ಅನ್ನು ನಿಮ್ಮ ಆಪಲ್ ಹಾಗು ಆಂಡ್ರಾಯ್ಡ್ ಫೋನುಗಳಿಗೆ ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ  

Sunday, March 18, 2012

ಸ್ತೋತ್ರಸಂಗ್ರಹ

ಕಗ್ಗ ರಸಧಾರೆ

ಮಂಕುತಿಮ್ಮನ ಕಗ್ಗಗಳ ವಿಚಾರ ಮಂಥನ 

ನುಡಿ/ಬರಹದಲ್ಲಿ ಬರೆದಿದ್ದನ್ನು ಯುನಿಕೋಡ್ ಕನ್ನಡಕ್ಕೆ ಬದಲಾಯಿಸಲು

ASCII2UNICODE

Text Encoding Converter for Kannada
ನುಡಿ/ಬರಹದಲ್ಲಿ ಬರೆದಿದ್ದನ್ನು ಯುನಿಕೋಡ್ ಕನ್ನಡಕ್ಕೆ ಬದಲಾಯಿಸಲು ಸಹಾಯ ಮಾಡುವ ತಂತ್ರಾಂಶ ಇದು. ಎಡಗಡೆ ಇರುವ ಜಾಗದಲ್ಲಿ ನುಡಿ/ಬರಹ ದಲ್ಲಿ ಬರೆದ ಪಠ್ಯವನ್ನು ಹಾಕಿ ನಂತರ ಕನ್ವರ್ಟ್ ಅಂತ ಇರುವ ಬಟನ್ ಒತ್ತಿ. ಪಕ್ಕದ ಜಾಗದಲ್ಲಿ ಯುನಿಕೋಡ್ ಗೆ ಬದಲಾವಣೆಗೊಂಡು ಕಾಣಿಸುತ್ತದೆ, ಅದನ್ನು ಕಾಪಿ ಮಾಡಿಕೊಂಡು ಫೈಲ್ ಗಳಲ್ಲಿ ಸೇವ್ ಮಾಡಿಕೊಳ್ಳಿ. 

Saturday, March 17, 2012

ಶ್ರೀಯುತ ಡಾ|| ದೊಡ್ಡರಂಗೇಗೌಡ ರ ಅಂತರ್ಜಾಲ ತಾಣ


ಶ್ರೀಯುತ ಡಾ|| ದೊಡ್ಡರಂಗೇಗೌಡರು ಕನ್ನಡದ ವಿಶಿಷ್ಟ ಸಾಹಿತಿ ಮತ್ತು ಲೇಖಕರು. ಇವರು ಎಲ್ಲಾ ತೆರನಾದ ಸಾಹಿತ್ಯದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಇವರು ಬರೆದ ನೂರಾರು ಚಿತ್ರಗೀತೆಗಳಂತೂ ಕನ್ನಡಿಗರ ಜನಮಾನಸದಲ್ಲಿ ಸದಾ ಗುನುಗುಡುತ್ತಿರುತ್ತವೆ. ಅದಲ್ಲದೇ ಭಾವಗೀತೆ, ಕವನ, ಪ್ರವಾಸ ಕಥನ ಮತ್ತು ಇನ್ನಿತರೆ ಹತ್ತು ಹಲವಾರು ಪುಸ್ತಕಗಳಲ್ಲಿ ದೊ.ರಂ.ಗೌ. ಅವರು ಕನ್ನಡಕ್ಕೆ ತಮ್ಮದೇ ಆದ ವಿಶೇಷ ಸೇವೆ ಸಲ್ಲಿಸಿದ್ದಾರೆ.
ದೊ.ರಂ.ಗೌ. ಅವರು ನಾಡಿನಲ್ಲಷ್ಟೇ ಅಲ್ಲದೇ ದೇಶ ವಿದೇಶಗಳಲ್ಲೂ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ದೂರದಲ್ಲಿರುವ ಕನ್ನಡಿಗರಿಗೂ ಸಹ ಶ್ರೀಯುತರ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಈ ಅಂತರ್ಜಾಲ ತಾಣವನ್ನು ರಚಿಸಲಾಗಿದೆ. ಇಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಗೌಡರ ಮತ್ತು ಅವರ ಸಾಹಿತ್ಯದ ಪರಿಚಯ ಮಾಡಿಕೊಡಲು ಯತ್ನಿಸಲಾಗಿದೆ.
ನೀವೂಮ್ಮೆ  ಭೇಟಿಕೊಡಬಾರದೇಕೆ? ವಿಳಾಸ: http://www.doddarangegowda.com/

ಆನ್ ಲೈನ್ ನಲ್ಲಿ ಪಾಸ್ ಪೂರ್ಟ್ ಅರ್ಜಿ

Wednesday, March 7, 2012

ಗೂಗಲ್ ಪ್ಲೇ

ಆಂಡ್ರಾಯ್ಡ್ ಮಾರ್ಕೆಟ್ ಎಂದು ಕರೆಯಲ್ಪಡುತ್ತಿದ್ದ ಗೂಗಲ್ ಪ್ಲೇ, ಗೂಗಲ್ ನ ಆನ್ಲೈನ್ ಮಳಿಗೆಯಾಗಿದ್ದು ನೀವು ಮೊಬೈಲ್ ಸಾಧನಗಳು, ಸಂಗೀತ, ಪುಸ್ತಕಗಳು, ಡಿಜಿಟಲ್ ವಸ್ತುಗಳು, ಆಪ್ ಗಳು, ವೀಡಿಯೋ ಗಳನ್ನು, ಗೇಮ್ಸ್ ಗಳನ್ನು ಖರೀದಿಸಬಹುದು.

ಗೂಗಲ್ ತನ್ನ ಮಾರುಕಟ್ಟೆ ವಿಸ್ತರಿಸಲು ಆಂಡ್ರಾಯ್ಡ್ ಮಾರ್ಕೆಟ್ ಎಂದು ಕರೆಯುತ್ತಿದ್ದ ಮಳಿಗೆಯ ಹೆಸರಿನ್ನು ಬದಲಿಸಿದೆ.
ಗೂಗಲ್ ಪ್ಲೇ ಒಮ್ಮೆ ನೋಡಲು ಕ್ಲಿಕ್ ಮಾಡಿ. https://play.google.com/store

Tuesday, March 6, 2012

ಚಂದ್ರುಲೋಕದಲ್ಲಿ ಎಲ್ಲವೂ ಚಂದ

28-02-2012 ನನ್ನ ನೆಚ್ಚಿನ ಸಂಯುಕ್ತ ಕರ್ನಾಟಕ ದಿನ ಪತ್ರಿಕೆಯ 13ನೇ ಪುಟದಲ್ಲಿ ಬ್ಲಾಗ್ ಲೋಕ ( ಚಂದ್ರುಲೋಕದಲ್ಲಿ ಎಲ್ಲವೂ ಚಂದ ) ನನ್ನೆಲ್ಲ ಬ್ಲಾಗ್ ಗಳ ಬಗ್ಗೆ  ಸುದ್ದಿ ಪ್ರಕಟಣೆಗೊಂಡಿದೆ ಸ್ನೇಹಿತರೆ.! ನೀವೂ ಓದಿ ಕಾಮೆಂಟಿಸಿ....
ಹಾಗೆ ನನ್ನನ್ನು ಅಭಿನಂದಿಸಿದ  ನನ್ನೆಲ್ಲಾ ಬ್ಲಾಗ್ ಓದುಗ ಮಿತ್ರರಿಗೆ ನನ್ನ ಸ್ಮರಣೀಯ ವಂದನೆಗಳು.
!! ನಿಮ್ಮ ಸಲಹೆಗಳಿಗೆ ಸದಾ ಸ್ವಾಗತ !!

ಟೆರ್ರಾಫುಗಿಯಾ: ಹಾರುವ ಕಾರು

ಹಕ್ಕಿಗೆ ಬಾನಿನಲ್ಲಿ ಹಾರುವ ಆಸೆ ನದಿಗೆ ಸಾಗರವ ಸೇರುವ ಆಸೆ.. ರಸ್ತೆಯಲ್ಲಿ ಸಾಗುವ ಕಾರಿಗೂ ಬಾನಲ್ಲಿ ಆಸೆ. ನಂಬಿದರೆ ನಂಬಿ ಹಾರುವ ಕಾರೊಂದು ರಸ್ತೆಗೆ ಅಲ್ಲಲ್ಲ ಆಕಾಶಕ್ಕೆ ಹಾರಲಿದೆ.

ಟೆರ್ರಾಫುಗಿಯಾ ಎಂದರೆ ಅಮೆರಿಕದ ದೊಡ್ಡ ಕನಸಿನ ಸಣ್ಣ ಕಂಪನಿ. ಕಂಪನಿಯು ಹಾರುವ ಕಾರಿನ ಕಾನ್ಸೆಪ್ಟನ್ನು ಹಲವು ವರ್ಷಗಳ ಹಿಂದೆಯೇ ಪ್ರದರ್ಶಿಸಿತ್ತು. ಇದೀಗ ಈ ಕಾರು ಉತ್ಪಾದನಾ ಹಂತಕ್ಕೆ ತಲುಪಿದೆ. ಈ ಕಾರು ದುಬಾರಿ. ಅಂದ್ರೆ 2.79 ಲಕ್ಷ ಡಾಲರ್.  ಟೆರ್ರಾಫುಗಿಯಾ ಹಾರುವ ಕಾರು ಅಮೆರಿಕದಲ್ಲಿ ಮಾರಾಟಕ್ಕೆ ರೆಡಿಯಾಗಲಿದೆ.

ಈ ಕಾರಿನಲ್ಲಿ ಮಡುಚಿಕೊಳ್ಳುವ ರೆಕ್ಕೆ ಇದೆ. ಕೇವಲ 30 ಸೆಕೆಂಡಿನಲ್ಲಿ ಇದು ಕಾರಿನಿಂದ ವಿಮಾನಕ್ಕೆ ಪರಿವರ್ತನೆ ಗೊಳ್ಳಲಿದೆ. ಅಂದರೆ ರಸ್ತೆಯಲ್ಲಿ ಸಾಗುತ್ತಿರುವ ಕಾರೊಂದು ಕೆಲವೇ ಸೆಕೆಂಡಿನಲ್ಲಿ ರೆಕ್ಕೆ ಬಿಚ್ಚಿ ಹಾರಲಿದೆ. ಪ್ರತಿಗಂಟೆಗೆ 110 ಕಿ.ಮೀ. ವೇಗದಲ್ಲಿ ಈ ಕಾರು ಫುಲ್ ಟ್ಯಾಂಕ್ ಇಂಧನದಲ್ಲಿ ಸುಮಾರು 460 ಮೈಲು ಎತ್ತರದಲ್ಲಿ ಹಾರುವ ಸಾಮರ್ಥ್ಯ ಹೊಂದಿದೆ.

ಟ್ರಾನ್ಸಿಷನ್ ಹಾರುವ ಕಾರು ಎಲ್ಲರ ಕೈಗೆ ಸಿಗದು. ಭಾರತಕ್ಕೆ ಬಂದರೆ ಇದರ ದರ ಹಲವು ಕೋಟಿ ರುಪಾಯಿಗಳಲ್ಲಿ ಇರಲಿದೆ. ದುಡ್ಡು ನಮ್ಮಲ್ಲಿ ಬೇಕಾದಷ್ಟು ಇದೆ ಅಂತ ನೀವು ಅಂದುಕೊಂಡರೂ ಇದನ್ನು ಖರೀದಿಸುವುದು ಸುಲಭವಲ್ಲ. ಇದಕ್ಕೆ ಸಮರ್ಪಕ ಪೈಲಟ್ ಪರವಾನಿಗೆಯೂ ನಿಮಲ್ಲಿರಬೇಕು. ವೈಮಾನಿಕ ಸಚಿವಾಲಯ ಮಾತ್ರವಲ್ಲದೇ ದೇಶದ ಭದ್ರತಾ ವಿಭಾಗದಿಂದಲೂ ಅನುಮತಿ ಪಡೆಯಬೇಕಿದೆ

ಈಗಾಗಲೇ ಈ ಹಾರುವ ಕಾರಿಗೆ ಭಾರತದ ಗ್ರಾಹಕರೊಬ್ಬರು ಆರ್ಡರ್ ಮಾಡಿದ್ದಾರೆ. ಆದರೆ ದೇಶದ ಕೆಲವು ಇಲಾಖೆಯಿಂದ ಇನ್ನೂ ಸರಿಯಾದ ಸಮ್ಮತಿ ದೊರಕಿಲ್ಲ. ಕಂಪನಿಯ ಹಾರುವ ಕಾರಿಗೆ ಈಗಾಗಲೇ ಸುಮಾರು 100 ಜನರು ಬುಕ್ಕಿಂಗ್ ಮಾಡಿದ್ದಾರೆ.

Monday, March 5, 2012

ವಿಂಡೋಸ್ 8


ಬಳಕೆದಾರರಿಗೆ ಮುಂಬರುವ ಹೊಸ ವಿಂಡೋಸ್ 8ರ ಅನುಭವ ನೀಡಲು ಮೈಕ್ರೋಸಾಫ್ಟ್ ಆಪರೇಟೀಂಗ್ ವ್ಯವಸ್ಥೆ ತಂತ್ರಾಂಶದ ಆವೃತ್ತಿಯನ್ನು ಬಿಡುಗಡೆ ಮಾಡಿದೆ.ಇದು ಸರ್ವ ಸಾಧನಗಳನ್ನು ಗಮನದಲ್ಲಿರಿಸಿ ಸಿದ್ಧ ಪಡಿಸಿರುವ ಆಪರೇಟಿಂಗ್ ವ್ಯವಸ್ಥೆಯಾಗಿರುವುದರಿಂದ.ಇದರಲ್ಲಿ ಡೆಸ್ಕ್‌ಟಾಪ್ ವ್ಯವಸ್ಥೆಯ ಮಾಮೂಲಿ ಬಳಕೆಗೆ ಒಗ್ಗದಿರಬಹುದು.ಆದರೆ ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್ ಸಾಧನಗಳ ಬಳಕೆಯಲ್ಲಿ ಸ್ಪರ್ಶಸಂವೇದಿ ತೆರೆಗೆ  ಸೂಕ್ತವಾದ ಅನುಕೂಲತೆಗಳನ್ನಿದು ಹೊಂದಿದೆ ಎಂದು ಇದನ್ನು ಬಳಸಿದವರು ಪ್ರಮಾಣೀಕರಿಸಿದ್ದಾರೆ.ವಿಂಡೋಸ್ ಎಂಟನ್ನು ಅನುಸ್ಥಾಪಿಸಿದಾಗ, ಸ್ಟಾರ್ಟ್ ಬಟನ್ ಇತ್ಯಾದಿಗಳ ಮಾಮೂಲಿ ನೋಟ ಸಿಗದು. ವಿವಿಧ ಅಪ್ಲಿಕೇಶನ್‌ಗಳ ಐಕಾನುಗಳ ದರ್ಶನವಾದೀತು. ಮಾಮೂಲಿ ಡೆಸ್ಕ್‌ಟಾಪ್ ಅನುಭವ ನೀಡುವಂತೆ ಆಪರೇಟಿಂಗ್ ವ್ಯವಸ್ಥೆಯನ್ನು ಸಿದ್ಧಪಡಿಸಿದರೆ, ವಿಂಡೋಸ್ 7ನ್ನು ಬಳಸಿದಂತೆ ಕಾಣಿಸಿ, ಹೊಸ ಆಪರೇಟಿಂಗ್ ವ್ಯವಸ್ಥೆಯಿದೆ ಎನ್ನುವುದೇ ಮರೆತೀತು ಎಂದು ಬಳಕೆದಾರರ ಮೊದಲ ಪ್ರತಿಕ್ರಿಯೆಗಳು ಹೇಳುತ್ತವೆ. ವಿಂಡೋಸ್ 8ರ 64ಬಿಟ್ ಆವೃತ್ತಿಯು 3.3ಜಿಬಿ ಹೊಂದಿದ್ದು. 32 ಬಿಟ್ ಆವೃತ್ತಿಯು 2.5ಜಿಬಿ ಹೊಂದಿರುತ್ತದೆ. ನೀವೂ ಹೊಸ ವಿಂಡೋಸ್ 8ನ್ನು ಪಡೆಯಲು ವಿಳಾಸ : http://windows.microsoft.com/en-US/windows-8/iso

Thursday, March 1, 2012

ಸ್ಯಾಮ್ಸಂಗ್ ನ ಚಾಟ್ ಆನ್ ಈಗ ವೆಬ್ ಬ್ರೌಸೆರ್ ನಲ್ಲಿ ಲಭ್ಯಸ್ಯಾಮ್ಸಂಗ್ ಚಾಟ್ ಆನ್ (ChatON), ಮೆಸೆಂಜರ್ ಸೇವೆ ನೀಡುವ ಆಪ್ ಆಗಿದ್ದು ಈಗ ವೆಬ್ ಬ್ರೌಸರ್ ಮೂಲಕವೂ ಲಭ್ಯವಾಗಲಿದೆ.
ಸಾಮಾನ್ಯವಾಗಿ ಸ್ಯಾಮ್ಸಂಗ್ ನ ಸ್ಮಾರ್ಟ್ ಫೋನ್ಗಳಲ್ಲಿ ಈ ಸೌಲಭ್ಯವಿದ್ದು, ನಿಮ್ಮ ಸ್ನೇಹಿತರ ಜೊತೆ ಗೂಗಲ್ ಚಾಟ್ ರೀತಿಯಲ್ಲಿ ಚಾಟ್ ಮಾಡಬಹುದಿತ್ತು. ಈಗ ವೆಬ್ ಮೂಲಕವೂ ಲಾಗಿನ್ ಮಾಡಿ ಚಾಟ್ ಮಾಡಲು ಸ್ಯಾಮ್ ಸಂಗ್ ಅನುವು ಮಾಡಿಕೊಟ್ಟಿದ್ದು, ಬಡಾ, ಐಓಎಸ್ ಹಾಗು ಆಂಡ್ರಾಯ್ಡ್ ಆಪ್ ಗಳಲ್ಲಿ ಈಗಾಗಲೇ ಲಭ್ಯವಿದೆ. .
ವೆಬ್ ಮೂಲಕ ಚಾಟ್ ಆನ್ (ChatON) ಲಾಗಿನ್ ಮಾಡಲು ಕ್ಲಿಕ್ ಮಾಡಿ 

ಸ್ವತಂತ್ರ ಉದ್ಯೋಗಿಯಾಗಿ

ನಿಮಗೆ ಒಂದು ಸಣ್ಣ ಕೆಲಸ ಮಾಡಿಸಬೇಕಾಗಿದೆ. ಉದಾಹರಣೆಗೆ ನಿಮ್ಮ ಸಣ್ಣ ಕಂಪೆನಿಯ ಬಗ್ಗೆ ಒಂದು ಚಿಕ್ಕ ಜಾಲತಾಣ ಅಥವಾ ಪ್ರಸೆಂಟೇಶನ್. ಇದಕ್ಕಾಗಿ ದೊಡ್ಡ ಕಂಪೆನಿಯನ್ನು ಹಿಡಿದರೆ ಅವರು ಹೇಳುವಷ್ಟು ಹಣ ಕೊಡಲು ನಿಮ್ಮಿಂದ ಅಸಾಧ್ಯ. ಆಗ ನೀವು ಇಂತಹ ಕೆಲಸಗಳನ್ನು ಮಾಡುವ ಸ್ವತಂತ್ರ ಉದ್ಯೋಗಿಯನ್ನು (freelancer) ಹುಡುಕುತ್ತೀರಿ. ಅದೇ ರೀತಿ ನೀವೇ ಒಬ್ಬ ಸ್ವತಂತ್ರ ಉದ್ಯೋಗಿಯಾಗಿ ಕೆಲಸ ಹುಡುಕುತ್ತಿದ್ದೀರಿ ಎಂದಿಟ್ಟುಕೊಳ್ಳೋಣ. ಈ ಎರಡು ರೀತಿಯವರನ್ನು ಒಂದುಗೂಡಿಸುವ ಹಲವಾರು ಜಾಲತಾಣಗಳಿವೆ. ಅಂತಹ ಒಂದುಜಾಲತಾಣ www.freelancer.in. ಲಭ್ಯವಿರುವ ಕೆಲಸಗಳನ್ನು ಹಲವು ವಿಧಗಳಲ್ಲಿ ಪಟ್ಟಿ ಮಾಡಲಾಗಿದೆ. ಕೆಲಸ ಬೇಕಿದ್ದವರು ಇವುಗಳಲ್ಲಿ ತಮ್ಮ ಪರಿಣತಿಗೆ ಸರಿಹೊಂದುವುದನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ಹರಾಜಿನಲ್ಲಿ ಭಾಗವಹಿಸಬೇಕು.

ಗೊರಿಲ್ಲಾ ಗ್ಲಾಸ್ ಎಂದರೇನು ?

ಏನಪ್ಪಾ ಇದು ಗೊರಿಲ್ಲಾ ಪ್ರಾಣಿಗೆ ಬಳಸುವ ಗ್ಲಾಸ್ ಎಂದುಕೊಂಡಿರಾ? ಇದು ಮೊಬೈಲ್ ಪ್ಯಾನೆಲ್ ಗಳಿಗೆ ಉಪಯೋಗಿಸುವ ಅತ್ಯಂತ ಶಕ್ತಿಶಾಲಿ ತರಚು ನಿರೋಧಕ ಗಾಜು.
ಕಾರ್ನಿಂಗ್ ಎಂಬ ಕಂಪನಿ ಉತ್ಪಾದಿಸುವ ಈ ಗಾಜು ವಿಶ್ವದಾದ್ಯಂತ ಸುಮಾರು 200 ಮಿಲಿಯನ್ ಮೊಬೈಲ್ ಗಳ ಡಿಸ್ಪ್ಲೇ ಪ್ಯಾನೆಲ್ ಆಗಿ ಉಪಯೋಗಿಸಲ್ಪಡುತ್ತದೆ. ಈ ಗ್ಲಾಸ್ ತೆಳುವಾಗಿದ್ದು ಪ್ಲಾಸ್ಟಿಕ್ ಗಿಂತ 30 ಪಟ್ಟು ಹೆಚ್ಚು ಗಟ್ಟಿತನ ಹೊಂದಿದೆ. ಮೊದಲೆಲ್ಲಾ HD ಟಿ.ವಿ ಹಾಗು 3ಡಿ ಕನ್ನಡಕಗಳಲ್ಲಿ ಈ ಗ್ಲಾಸ್ಗಳನ್ನು ಬಳಸುತ್ತಿದ್ದು ಈಗ ಆಪಲ್ ನ ಐಫೋನ್- 4 ನಲ್ಲಿ ಕೂಡ ಬಳಸಲಾಗುತ್ತಿದೆ. ಈ ಗ್ಲಾಸ್ ಟ್ಯಾಬ್ಲೆಟ್ ಹಾಗು ಟಚ್ ಸ್ಕ್ರೀನ್ ಇರುವ ಫೋನ್ ಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.
ಗೊರಿಲ್ಲಾ ಗ್ಲಾಸ್ ನ ಹೊಸ ಆವೃತ್ತಿ ಗೊರಿಲ್ಲಾ ಗ್ಲಾಸ್-2 ಮೇ ತಿಂಗಳಲ್ಲಿ ಬರಲಿದ್ದು ಈಗಿರುವ ಗ್ಲಾಸ್ ಗಿಂತಾ 20 % ಸಣ್ಣದಾಗಿ ಇರಲಿದೆಯಂತೆ.