WEBSITE, INVENTORY SOFTWARE, CCTV CAMERA , COMPUTER & LAPTOP SALES & SERVICE, TABLETS, VIDEOGRAPHY, PHOTOGRAPHY, PROJECTOR ,VIDEO & AUDIO EDITING, VHS TO CD,DVD,BLURAY DISC CONVERSATION, DESIGNING & MANY MORE...
ಸುಸ್ವಾಗತ ನಿಮ್ಮ ಕಲ್ಪನೆ ನಮ್ಮ ಸೃಷ್ಠಿ !!! ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು.
ಈಗ ಮಲ್ಟಿಮೀಡಿಯವನ್ನು e-Speak ಕನ್ನಡದಲ್ಲಿ ಕೇಳಿ!

Friday, May 25, 2012

ವೈದ್ಯರ ಸಾಮರ್ಥ್ಯ ಹೆಚ್ಚಿಸುವ ಕ್ಲಿನೀಕಲ್ ಕೀ ಜಾಲತಾಣ

ವೈದ್ಯಕೀಯ ಟಿಪ್ಪಣಿ ಮತ್ತು ಪರಿಹಾರಕ್ಕೆ ಪ್ರಸಿದ್ದಿ ಪಡೆದಿರುವ ಎಲ್ಸೆವಿಯರ್ ಕಂಪನಿಯು ಕ್ಲಿನಿಕಲ್ ಕೀ ಎಂಬ ಜಾಲತಾಣ ಮಾಹಿತಿ ಭಂಡಾರವನ್ನು ಬಿಡುಗಡೆಗೊಳಿಸಿದೆ. ವೈದ್ಯಕೀಯ ಹಾಗೂ ಶಸ್ತ್ರಚಿಕಿತ್ಸೆ ಪ್ರಕಾರಗಳ ಬಗ್ಗೆ ಇದರಲ್ಲಿ ಮಾಹಿತಿ ಲಭ್ಯ.
700 ಪಠ್ಯಪುಸ್ತಕ 400 ವೈದ್ಯಕೀಯ ಟಿಪ್ಪಣಿಗಳು ದೊರೆಯಲಿವೆ. ಇದರಿಂದಾಗಿ ವೈದ್ಯಕೀಯಕ್ಕೆ ಸಂಬಂದಿಸಿದ ಮಾಹಿತಿಯನ್ನು ಅಂಗೈಯಲ್ಲಿಯೇ ಸಿಗಲಿದೆ. 
ವೈದ್ಯರಿಗೆ ಅಗತ್ಯವಿರುವ ಮಾಹಿತಿ ಶೀಘ್ರ ದೊರೆಯಲಿದೆ. ಕ್ಲಿನಿಕಲ್ ಕೀ ವೈದ್ಯರ ಗುಳಮಟ್ಟ ಹಾಗೂ ಸಾಮರ್ಥ್ಯವನ್ನು ಹೆಚ್ಚಿಸಲಿದೆ. http://www.clinicalkey.com

ಕಸದಿಂದ ರಸ ಮಾಡುವ ಕಸದತೊಟ್ಟಿ.ಕಾಂ

ಗುಜರಿ ವಸ್ತುಗಳು ನಿಮ್ಮ ಮನೆಯಲ್ಲಿದೆಯೇ? ಹಾಗಾದರೆ ಕಸ ಎಂದು ಹೊರಕ್ಕೆ ಎಸೆಯಬೇಡಿ. ಅದಕ್ಕೆ ಬೆಲೆ ಕಟ್ಟಿ ಆನ್ ಲೈನ್ ಮೂಲಕ ಮಾರಾಟ ಮಾಡಬಹುದು!
ಅಚ್ಚರಿ ಆಯ್ತಾ? ಹೌದು. ಉಪಯೋಗಕ್ಕೆ ಬಾರದ ಹಳೆ ಕಂಪ್ಯೂಟರ್, ಬಳಸದೆ ಮೂಲೆಯಲ್ಲಿ ಬಿದ್ದಿರೋ ಮೋಬೈಲ್, ಅಪಘಾತ ನಡೆದಾಗ ತೆಗೆದಿರಿಸಿದ ಎಕ್ಸ್ ರೇ ಗಳನ್ನು ನಿಷ್ಪ್ರಯೋಜಕ ವಸ್ತುಗಳ ಪಟ್ಟಿಗೆ ಸೇರಿಸಬೇಡಿ. ಅವೆಲ್ಲವನ್ನೂ ಜೋಪಾನವಾಗಿ ಇಟ್ಟುಕೊಳ್ಳಿ. ನಿಮ್ಮ ಮನೆಗೆ ಬಂದು ಇವೆಲ್ಲಾ ಗುಜರಿ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತೆ "ಕಸದತೊಟ್ಟಿ".
ಕಸದತೊಟ್ಟಿ ಅನ್ನೋದು ವೆಬ್ ಸೈಟ್ ಹೆಸರು. ನಿಮ್ಮ ಮನೆಯಲ್ಲಿರುವ ನಿಷ್ಪ್ರಯೋಜಕ ವಸ್ತುಗಳ ಬಗ್ಗೆ http://www.kasadhathotti.com ನಲ್ಲಿ ಮಾಹಿತಿ ನಮೂದಿಸಿದರೆ ಸಾಕು, ಅವರೇ ಮನೆಗೆ ಬಂದು ಅವನ್ನು ಕೊಂಡ್ಯೂಯುತ್ತಾರೆ. ಮಾರುಕಟ್ಟೆಗಿಂತ ಹೆಚ್ಚಿನ ಬೆಲೆಗೆ ಖರೀದಿಸುತ್ತಾರೆ. 
ಕಸದಿಂದ ರಸ
ಕಸವನ್ನು ರಸ ಮಾಡುವ ಉದ್ದೇಶದಿಂದ http://www.kasadhathotti.com ಎಂಬ ವೆಬ್ ಸೈಟ್ ಶುರುವಾಗಿದೆ. ಮನೆಯಲ್ಲಿ ಕೆಲಸಕ್ಕೂ ಬಾರದಿರುವ ವಸ್ತುಗಳನ್ನು ಇದು ಖರೀದಿಸುತ್ತದೆ. ಗ್ರಾಹಕರಿಂದ ಖರೀದಿಸಿದ ವಸ್ತುಗಳನ್ನು ಪನರ್ ಬಳಕೆ ಘಟಕದಲ್ಲಿ ಬೇರೆ ರೂಪ ನೀಡಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತದೆ. 
ಮಾರಾಟ ಹೇಗೆ? 
ಗುಜರಿ ವಸ್ತುಗಳ ಮಾರಾಟ ಮಾಡಬೇಕೆಂದರೆ ವೆಬ್ ಸೈಟ್ ಗೆ ಬೇಟಿ ನೀಡಬೇಕು. ಅಲ್ಲಿ ತಮ್ಮದೊಂದು ಖಾತೆ ತೆಗೆಯಬೇಕು. ನಂತರ ತಮ್ಮಲ್ಲಿರುವ ಉಪಯೋಗಕ್ಕೆ ಬಾರದ ವಸ್ತು ಯಾವುದು ಮತ್ತು ಎಷ್ಟು ತೂಕವಿದೆ ಎಂಬ ಮಾಹಿತಿ ತುಂಬಿಸಬೇಕು. ಮನೆ ವಿಳಾಸ, ದೂರವಾಣಿ ಸಂಖ್ಯೆ ನಮೂದಿಸಿದರೆ ಸಾಕು, ವೆಬ್ ಸೈಟ್ ನವರು ಮನೆಗೆ ಬಂದು ಒಯ್ಯುತ್ತಾರೆ. 
ಹೈಟೆಕ್ ಟಚ್
ಗುಜರಿ ವ್ಯಾಪಾರಕ್ಕೆ ಹೈಟೆಕ್ ಟಚ್ ನೀಡಿರುವವರು ಚಂದ್ರಶೇಖರ್. ಕೇವಲ ಎಸ್.ಎಸ್.ಎಲ್.ಸಿ ಓದಿರುವ ಇವರು ಮೊದಲು ಮನೆ, ಮನೆಗೆ ತೆರಳಿ ಗುಜರಿ ವಸ್ತುಗಳನ್ನು ಖರೀದಿಸಿ ತರುತ್ತಿದ್ದರು. ವ್ಯಾಪಾರದಲ್ಲಿ ಹೊಸತನದ ತುಡಿತದಿಂದ ಸ್ನೇಹಿತರೊಂದಿಗೆ ಸೇರಿ "ಕಸದತೊಟ್ಟಿ" ವೆಬ್ ಸೈಟ್ ಆರಂಭಿಸಿದ್ದಾರೆ.
ಗುಬ್ಬಚ್ಚಿ ಗೂಡು ಗಿಫ್ಟ್
"ಕಸದತೊಟ್ಟಿ" ಪರಿಸರ ಹಾಗೂ ಪಕ್ಷಿ ಸಂಕುಲದ ಕಾಳಜಿ ಇಟ್ಟುಕೊಂಡಿದೆ. 10 ಕೆಜಿಗಿಂತ ಹೆಚ್ಚು ನಿರುಪಯುಕ್ತ ವಸ್ತುಗಳನ್ನು ಮಾರಿದವರಿಗೆ ಗುಬ್ಬಚ್ಚಿಗೂಡು ಹಾಗೂ ಗಿಡವನ್ನು ಉಚಿತವಾಗಿ ನೀಡಲಾಗುತ್ತದೆ. 
ಗೆಳೆಯರೇ ಮತ್ತೇಕೆ ತಡ ಚಂದ್ರಶೇಖರ್ ರವರ ಪರಿಸರ ಕಾಳಜಿಗೆ ನಿಮ್ಮ ಕೈಜೋಡಿಸಿದರೆ ಮತ್ತಷ್ಟು ಬಲಪಡಿಸಿದ ಹಾಗೇ ಆಗುತ್ತದೆ ಅಲ್ಲವೇ? ನೀವೊಮ್ಮೆ ಬೇಟಿ ನೀಡಿ:  http://www.kasadhathotti.com
 
 

Onlineನಲ್ಲಿ ದಿನಬಳಕೆ ವಸ್ತು ಖರೀದಿ ಮಾಡಿ

ದಿನಬಳಕೆಯ ಸಾಬೂನಿನಂತಹ ಖರೀದಿಯನ್ನು ಅಂತರ್ಜಾಲದ ಇ-ವ್ಯವಹಾರದ ಮೂಲಕ ಮಾಡುವವರು ಹೆಚ್ಚಿಲ್ಲ. ಆದರೆ ಜನರಲ್ಲಿ ಅಂತಹ ಪ್ರವೃತ್ತಿಯನ್ನು ಹುಟ್ಟುಹಾಕಲು ಬಯಸಿರುವ ತಾಣ www.soap.com ಈಗ ಆರಂಭವಾಗಿದೆ. ಸಾಬೂನಿನಂತಹ ವಸ್ತುಗಳು ವಿಶೇಷ ಮುತುವರ್ಜಿವಹಿಸಿ ಖರೀದಿಸ ಬೇಕಾದ ವಸ್ತುವಲ್ಲ. ಟೂತ್‌ಪೇಸ್ಟ್, ಬ್ರಶ್, ಶಾಂಪೂ, ಡಿಟರ್ಜಂಟ್ ಮುಂತಾದ ಹಲವು ಸಾಮಗ್ರಿಗಳನ್ನು ನಾವು ನಿಗದಿತ ಬ್ರಾಂಡ್ ಹೆಸರಿನ ಮೂಲಕ ಖರೀದಿಸುವುದೇ ಹೆಚ್ಚು. ಹಾಗಾಗಿ ಇವುಗಳನ್ನು ಆನ್‌ಲೈನಿನಲ್ಲಿ ಖರೀದಿಸಿ, ಕೊರಿಯರ್ ಮೂಲಕ ತಕ್ಷಣ ಪಡೆಯಲು ಅವಕಾಶ ನೀಡುವ ಸೇವೆಯನ್ನು ಅಂತರ್ಜಾಲ ತಾಣವು ಒದಗಿಸುತ್ತದೆ. 

http://www.diapers.com/ ಅಂತರ್ಜಾಲ ತಾಣದ ಯಶಸ್ಸಿನಿಂದ ಉತ್ತೇಜಿತರಾದವರು ಸೋಪ್.ಕಾಂ ತಾಣವನ್ನು ಆರಂಬಿಸಿದ್ದಾರೆ. ಡಯಾಪರ್.ಕಾಂ ತಾಣವು ಮಕ್ಕಳಿಗೆ ಅಗತ್ಯವಾದ ವಸ್ತುಗಳನ್ನು ಖರೀದಿಸಲು ಅವಕಾಶ ನೀಡುವ ತಾಣ.
 http://www.casa.com/ ಅಂತರ್ಜಾಲ ತಾಣದಲ್ಲಿ ಮಲಗುವ ಕೋಣೆ, ಶೌಚಗೃಹ, ಮಲಗುವ ಕೋಣೆ, ಊಟದ ಕೋಣೆ, ಸಂಗ್ರಹ ಕೋಣೆ, ಮನೆ ಅಲಂಕಾರಿಕ ವಸ್ತುಗಳಿಗಾಗಿ ಕಾಸಾ.ಕಾಂ ತಾಣವನ್ನು ಆರಂಬಿಸಿದ್ದಾರೆ. ಕಾಸಾ.ಕಾಂ ತಾಣವು ಮನೆಗೆ ಅಗತ್ಯವಾದ ವಸ್ತುಗಳನ್ನು ಖರೀದಿಸಲು ಅವಕಾಶ ನೀಡುವ ತಾಣ.
 http://www.yoyo.com/ ಅಂತರ್ಜಾಲ ತಾಣದಲ್ಲಿ ಹುಟ್ಟಿದ ಮಕ್ಕಳಿಂದ ಹಿಡಿದು ಹದಿಮೂರರ ವಯಸ್ಸಿನ ಮಕ್ಕಳಿಗೆ ಮೋಜಿನ ಜೊತೆಗೆ ಮನರಂಜನೆಯ ಸಿಡಿ, ಡಿವಿಡಿ, ಮಕ್ಕಳ ಡಿಜಿಟಲ್ ಕ್ಯಾಮೆರ, ವಿಡಿಯೋ ಆಟಿಕೆಗಳು, ಜನ್ಮದಿನದ ಉಡುಗೊರೆ, ಸೈಕಲ್, ಆಹಾರ ಸಾಮಗ್ರಿಗಳು, ಕ್ರೀಡಾ ಆಟಿಕೆಗಳು ಮುಂತಾದ ಮಕ್ಕಳಿಕೆ ಮನರಂಜನೆಗೆ ಅವಶ್ಯಕತೆಯಿರುವ ಸಾಮಗ್ರಿಗಳನ್ನು ಒದಗಿಸುವ  ಯೊಯೊ.ಕಾಂ ತಾಣವನ್ನು ಆರಂಬಿಸಿದ್ದಾರೆ.
 http://www.wag.com/ ಅಂತರ್ಜಾಲ ತಾಣದಲ್ಲಿ ನಾಯಿ, ಬೆಕ್ಕು, ಆಮೆ, ಮೊಲ, ಮೀನು, ಪಕ್ಷಿಗಳಿಗೆ ಅಗತ್ಯವಿರುವ ಆಹಾರ, ಪಂಜರ, ಬುಟ್ಟಿ, ಗೂಡುಗಳು, ಶೃಂಗಾರ ಬಿಡಿ ಭಾಗಗಳು, ಶುದ್ಧೀಕರಿಸುವ ವಸ್ತು ಮತ್ತಿತರೆ ವಸ್ತುಗಳನ್ನು ಅನ್ಲೈನ್ ನಲ್ಲಿ ಖರೀದಿಸಲು ವ್ಯಾಗ್.ಕಾಂ ಜಾಲತಾಣವನ್ನು ಆರಂಬಿಸಿದ್ದಾರೆ. ವ್ಯಾಗ್.ಕಾಂ ಜಾಲತಾಣವು ಪ್ರಾಣಿ ಪಕ್ಷಿಗಳಿಗೆ ಅಗತ್ಯವಿರುವ ವಸ್ತುಗಳನ್ನು ಖರೀದಿಸಲು ಅವಕಾಶ ನೀಡುವ ತಾಣ.

ಆಸುಸ್ ಕಂಪನಿಯ ಜೆನ್ ಬುಕ್ ಎಂಬ ಅಲ್ಟ್ರಾಬುಕ್

ಸ್ನೇಹಿತರೆ ಮೊನ್ನೆಯಷ್ಟೆ ಅಲ್ಟ್ರಾಬುಕ್ ಎಂಬ ಲ್ಯಾಪ್‌ಟಾಪುಗಳ ಬಗ್ಗೆ ವರದಿಯನ್ನು ಓದಿದ್ದೀರಿ ತಾನೆ? ಆಗ ಅಲ್ಟ್ರಾಬುಕ್ ಲ್ಯಾಪ್‌ಟಾಪುಗಳ ನಿಖರವಾದ ಬೆಲೆಯ ಬಗ್ಗೆ ವರಿದಿಯಾಗಿರಲಿಲ್ಲ. ಇದೀಗ ಆಸುಸ್ ಕಂಪನಿಯು ಹೊರತಂದಿರುವ ಜೆನ್ ಬುಕ್ ಎಂಬ ಅಲ್ಟ್ರಾಬುಕ್ ಲ್ಯಾಪ್‌ಟಾಪುಗಳ ಬೆಲೆ ಕೋರ್ ಐ3 ಲ್ಯಾಪ್ ಟಾಪು ಸುಮಾರು 48,760.00 ರೂಗಳಿಗೆ ಪ್ಲಿಪ್ ಕಾರ್ಟ್ ಆನ್ಲೈನ್ ಜಾಲತಾಣದಲ್ಲಿ ಲಭ್ಯವಿದ್ದು. ಕೋರ್ ಐ7 ಲ್ಯಾಪ್ ಟಾಪಿನ ಬೆಲೆ ಸುಮಾರು 89,900.00 ರೂಗಳ ಬೆಲೆಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಉಲ್ಟ್ರಾಬುಕ್‌ಗಳೆಂದರೆ ಲೋಹದ ಮೇಲ್ಮೈಹೊಂದಿರುವ ತೆಳುವಾದ ಲ್ಯಾಪ್‌ಟಾಪುಗಳು. ಇವುಗಳನ್ನು ಹಗುರ ಮಾಡಲು, ಇವುಗಳಲ್ಲಿ ಹಾರ್ಡ್‌ಡಿಸ್ಕ್ ಬದಲಿಗೆ ಫ್ಲಾಶ್ ಸ್ಮರಣಕೋಶಗಳನ್ನು ಬಳಸಲಾಗುತ್ತಿದೆ. ಡೆಸ್ಕ್ಟಾಪ್ ಗಳಲ್ಲಿ ಸ್ಪರ್ಶಸಂವೇದಿ ತೆರೆಗಳು ಜನಪ್ರಿಯವಾಗಿಲ್ಲವಾದರೂ ಅಲ್ಟ್ರಾಬುಕ್‌ಗಳಲ್ಲಿ ಇಂತಹ ತೆರೆಗಳು ಕಡ್ಡಾಯವಾಗಿ ಬೇಕೇ ಬೇಕು. ಆಸುಸ್ ಕಂಪೆನಿಯು ಟ್ಯಾಬ್ಲೆಟ್ ಮತ್ತು ಸ್ಮಾರ್ಟ್‌ಫೋನು ಹಾಗೂ ಟ್ಯಾಬ್ಲೆಟ್+ಸ್ಮಾರ್ಟ್‌ಫೋನು=ಪ್ಯಾಡ್ ಪೋನ್ ತಯಾರಿಸಿ ಮಾರಾಟಕ್ಕೆ ಒದಗಿಸಿ ಯಶಸ್ಸು ಕಂಡಿದ್ದು ಇದೀಗ ಅಲ್ಟ್ರಾಬುಕ್ ಎಂಬ ಲ್ಯಾಪ್‌ಟಾಪುಗಳನ್ನು ತಯಾರಿಸಿದ್ದು. ಇತ್ತೀಚಿನ ಎರಡನೆಯ ಪೀಳಿಗೆ ಕೋರ್ ಪ್ರೊಸೆಸರ್ (ಮೊಬೈಲ್ ಬಳಕೆ ಹೊಂದುವಂತೆ) ಶಕ್ತಿಯನ್ನು ಹೊಂದಿರುವ ಲ್ಯಾಪ್ ಟಾಪುಗಳ ಮಾದರಿಗಾಗಿ ASUS ಕಂಪನಿಯ ಅಂತರ್ಜಾಲ ತಾಣ ನೋಡಿ. http://zenbook.asus.com/zenbook

ಟ್ಯಾಬ್ಲೆಟ್ + ಸ್ಮಾರ್ಟ್ ಫೋನ್ = ಅಸುಸ್ Padfone

ವಿಶ್ವದ ಕಂಪ್ಯೂಟರ್ ಉತ್ಪಾದಕ ಕಂಪನಿಗಳಲ್ಲೇ ನಾವೀನ್ಯತೆಯ ಉತ್ಪನ್ನಗಳನ್ನು ಹೊರತರುತ್ತಿರುವ ಹೆಸರುವಾಸಿ ಕಂಪನಿ ಅಸುಸ್, ಈಗ ಸ್ಮಾರ್ಟ್ ಫೋನ್ ಹಾಗು ಟ್ಯಾಬ್ಲೆಟ್, ಎರಡೂ ಒಂದರಲ್ಲೇ ಇರುವ ಪ್ಯಾಡ್ ಫೋನ್ ಎಂಬ ಹೆಸರಿನ ಫ್ಯಾಬ್ಲೆಟ್ ಒಂದನ್ನು ಅತಿ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ ಎಂದು ತಿಳಿಸಿದೆ.
ಸ್ಪೇನ್ ದೇಶದ ಬಾರ್ಸಿಲೋನಾದಲ್ಲಿ ನಡೆದ ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2012 ರಲ್ಲಿ ಈ ಪ್ಯಾಡ್ ಫೋನ್ ಅನ್ನು ಪ್ರದರ್ಶಿಸಿ ಹಲವರನ್ನು ಬೆರಗುಗೊಳಿಸಿದ್ದ ಅಸುಸ್ ನ ಈ ಫ್ಯಾಬ್ಲೆಟ್, ಟ್ಯಾಬ್ಲೆಟ್ ಹಾಗು ಸ್ಮಾರ್ಟ್ ಫೋನ್ ಎರಡೂ ಒಳಗೊಂಡಿದೆ.
ಇದರಲ್ಲಿರುವ ಸ್ಮಾರ್ಟ್ ಫೋನ್ 4.3 ಇಂಚ್ ಡಿಸ್ಪ್ಲೇ ಹೊಂದಿದ್ದು, ಟ್ಯಾಬ್ಲೆಟ್ 10.1 ಇಂಚ್ ಟಚ್ ಸ್ಕ್ರೀನ್ ಹೊಂದಿದ್ದು, 5 ಮೆಗಾ ಪಿಕ್ಸೆಲ್ ಕ್ಯಾಮರಾ, ಆಂಡ್ರಾಯ್ಡ್ 4.0 ತಂತ್ರಾಂಶ ಹಾಗು ಶಕ್ತಿಶಾಲಿ ಬ್ಯಾಟರಿ ಹೊಂದಿದೆ.
 ಬೇಕಾದಾಗ ಹೊರಗೆ ತೆಗೆದು ಈ ಸ್ಮಾರ್ಟ್ ಫೋನ್ ಅನ್ನು ಉಪಯೋಗಿಸಿಕೊಳ್ಳಬಹುದಾಗಿದೆ. ಸದ್ಯಕ್ಕೆ ಈ ಪ್ಯಾಡ್ ಫೋನಿನ ಎಲ್ಲಾ ಫೀಚರುಗಳು ಹಾಗು ಬೆಲೆಯ ಬಗ್ಗೆ ಮಾಹಿತಿ ಇಲ್ಲ. ಹೆಚ್ಚಿನ ಮಾಹಿತಿಗೆ ಜಾಲತಾಣ.

ರೆಸ್ಟೋರೆಂಟ್ ಬುಕ್ ಮಾಡಲು ವೆಬ್ಸೈಟ್

ವೀಕೆಂಡ್ ಬಂದಿದೆ. ಮನೆಯಲ್ಲಿ ಅಡಿಗೆ ಮಾಡಲು ಬೇಜಾರಿರಬಹುದು ಇಲ್ಲವೆ ಉತ್ತಮ ರೆಸ್ಟೋರೆಂಟ್ ಗೆ ಹೋಗಿ ವಿವಿಧ ದೇಶದ ತಿನಿಸುಗಳನ್ನು ಸವಿಯಲು ನಾಲಿಗೆ ಹಾತೊರೆಯುತ್ತಿರಬಹುದು. ಆದರೆ ಜನಜಂಗುಳಿ ಇರುವುದರಿಂದ ಗಂಟೆಗಟ್ಟಲೆ ಕಾಯಬೇಕಾಗಬಹುದು. ಇದಕ್ಕೆ ಪರಿಹಾರ, ಮೊದಲೇ ಬೂಕಿಂಗ್ ಮಾಡಬೇಕು ಇಲ್ಲವೆ ಹೋಮ್ ಡೆಲಿವರಿ ಗೆ ಆರ್ಡರ್ ಮಾಡಬೇಕು.
ಅಂತಹ ಆನ್ಲೈನ್ ಬುಕಿಂಗ್ ವ್ಯವಸ್ತೆ ಇರುವ ವೆಬ್ಸೈಟ್ ಒಂದು ಇದೆ. ನಿಮ್ಮ ಏರಿಯಾದ, ಫೆವರಿಟ್ ರೆಸ್ಟೋರೆಂಟ್ ಅನ್ನು ಆಯ್ಕೆ ಮಾಡಿಕೊಂಡು ಮನೆಯಲ್ಲೇ ಕೂತು ಬುಕ್ ಮಾಡಬಹುದು, ಜಸ್ಟ್ಈಟ್.ಇನ್ ಜಾಲತಾಣದ ಮೂಲಕ ಯಾವುದೇ ಸರ್ವೀಸ್ ಚಾರ್ಜ್ ಇಲ್ಲದೆ.ಪಂಜಾಬಿ, ಉತ್ತರಭಾರತ, ದಕ್ಷಿಣಭಾರತದ ತಿನಿಸು, ಚೈನೀಸ್, ಮಾಂಸಹಾರಿ, ಕೇಕ್ ಮತ್ತು ಸಿಹಿ ತಿನಿಸುಗಳು, ಮನೆಊಟ ಮುಂತಾದ ಶುಚಿರುಚಿಯಾದ ತಿಂಡಿತಿನಿಸುಗಳನ್ನು ಮನೆಯಲ್ಲೇ ಕುಳಿತು ಸವಿಯಿರಿ.
ಆನ್ಲೈನ್ ಹಣ ಪಾವತಿ ಮಾಡಿದರೆ 10 % ಡಿಸ್ಕೌಂಟ್ ಕೂಡ ಸಿಗುತ್ತದೆ.ಜಾಲತಾಣ ವಿಳಾಸ http://justeat.in/bangalore

ಸಂಸ್ಕೃತ ವಿಶ್ವವಿದ್ಯಾನಿಲಯದ ತ್ರಿಭಾಷಾ ಜಾಲತಾಣ

ಸಂಸ್ಕೃತ ವಿಶ್ವವಿದ್ಯಾನಿಲಯದ ಹುಟ್ಟು,ಬೆಳವಣಿಗೆ ಹಾಗೂ ಕೋರ್ಸ್ ಗಳ ಸಂಪೂರ್ಣ ಮಾಹಿತಿ ಇರುವ ಸಂಸ್ಕೃತ,ಇಂಗ್ಲೀಷ್ ಮತ್ತು ಕನ್ನಡ ಭಾಷೆಗಳಲ್ಲಿ ವಿಶೇಷವಾದ ಜಾಲತಾಣ ಇದಾಗಿದೆ. ಕೆ.ಎಸ್.ಯು ಜಾಲತಾಣಕ್ಕೆ ಬೇಟಿ ನೀಡಿದರೆ ವಿವಿಯಲ್ಲಿರುವ ಕೋರ್ಸ್ ಗಳು ಇತರ ಸಂಪೂರ್ಣ ವಿವರಗಳು ದೊರೆಯುತ್ತದೆ. 
ವಿವಿಯಿಂದ ಸಂಶೋಧಕರಿಗೆ ಕೊಡುವ ಫೆಲೋಶಿಪ್ ಗಳು, ಸಂಸ್ಕೃತ ಶಿಕ್ಷಕರಿಗೆ ನೀಡುತ್ತಿರುವ ಪ್ರಶಸ್ತಿಗಳು, ಸಂಸ್ಕೃತ ಕೃತಿಗಳನ್ನು ಹೊರತರುತರಲು ಇರುವ ಕರ್ನಾಟಕ ಸಾರಸ್ವತೋಪಾಸಕ ಪುಸ್ತಕ ಮಾಲೆ, ಪ್ರೋ.ಎಂ.ಹಿರಿಯಣ್ಣ ಗ್ರಂಥ ಪುಸ್ಕಾರ ಯೋಜನೆಗಳ ಮಾಹಿತಿ ಜಾಲತಾಣದಲ್ಲಿದೆ.
3 ಭಾಷೆಗಳಲ್ಲಿ ಮಾಹಿತಿ ನೀಡುವ ಜಾಲತಾಣ, ಓಲೆಗರಿ, ಹಸ್ತಪ್ರತಿಗಳ ಗಣಕೀಕರಣ ಯೋಜನೆ, ಇ-ಲರ್ನಿಂಗ್ ಕೋರ್ಸ್ ಆರಂಭದ ಚಿಂತನೆಯಲ್ಲಿರುವ ಸಂಸ್ಕೃತ ವಿವಿಯ ಜಾಲತಾಣದ ನೋಟಕ್ಕೆ ಕೊಂಡಿ: http://www.ksu.ac.in/ka

ರಸ್ತೆ ಸಂಚಾರಿ ಕ್ಯಾಮರೆಗಳ ನೇರನೋಟ


ಬೆಂಗಳೂರು ಮಹಾನಗರದಲ್ಲಿ ವಾಹನ ದಟ್ಟಣೆಯ ಹೆಚ್ಚಿದ್ದು ಸಂಚಾರಿ ಸುರಕ್ಷತಾ ದೃಷ್ಟಿಯಿಂದ ನಗರದ ಕೆಲವು ಮುಖ್ಯರಸ್ತೆಗಳ ಸಿಗ್ನಲ್ ಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಿದ್ದು. ಬಿ.ಟಿ.ಐ.ಎಸ್.ಇನ್ ಜಾಲತಾಣದಲ್ಲಿ ಸಂಚಾರ ನಿಯಮಗಳು ಬಗ್ಗೆ ಮಾಹಿತಿ, ಆರ್.ಟಿ.ಓ ದಂಡಗಳು, ಬಿ.ಎಂ.ಟಿ.ಸಿ ಬಸ್ ಗಳ ಬಗ್ಗೆ ಮಾಹಿತಿ, ನಗರದ ಬಸ್ ಮಾರ್ಗಗಳ ಬಗ್ಗೆ ಮಾಹಿತಿ, ಮೆಟ್ರೋ ರೈಲು ಕಾಮಗಾರಿಗಳ ಬಗ್ಗೆ ಮಾಹಿತಿ, ವಾಹನ ನಿಲ್ದಾಣಗಳ ಬಗ್ಗೆ ಹಾಗೂ ಇನ್ನತರೆ ಮಾಹಿತಿಗಳು ಜಾಲತಾಣದಲ್ಲಿ ಲಭ್ಯವಿದ್ದು. ಜಾಲತಾಣದಲ್ಲಿ ನಗರದ ನಕ್ಷೆಯ ಮುಖಾಂತರ ನಗರದ ಸುತ್ತಮುತ್ತ ಸಂಚಾರ ಪರಿಸ್ಥಿತಿಗಳನ್ನು ನೋಡಬಹುದು. ಹಾಗೂ ಲೈವ್ ವಿಡಿಯೋ ದೃಶ್ಯಗಳು ಸಹ ಲಭ್ಯವಿದೆ. ವೆಬ್ ತಾಣದಲ್ಲಿ ವಾಹನಗಳ ಚಲನೆಯನ್ನು ಇದೀಗ ಸುಲಭವಾಗಿ ಸಾರ್ವಜನಿಕರು ನೇರ ಪ್ರಸಾರ ನೋಡಬಹುದು. http://www.btis.in

ವಿಜ್ಞಾನಿ ಐನ್ ಸ್ಟೀನ್


ಗ್ರೇಟ್ ವಿಜ್ಞಾನಿ ಐನ್ ಸ್ಟೀನ್ ಬಗ್ಗೆ ನೀವೆಲ್ಲಾ, ತಿಳಿದುಕೊಂಡಿದ್ದೀರಿ. ಫಿಸಿಕ್ಸ್ ನಲ್ಲಿ ನೋಬಲ್ ಪಡೆದಿರುವ ಐನ್ ಸ್ಟೀನ್ ಶತಮಾನದ ಮನುಷ್ಯ ಎನ್ನುವ ಬಿರುದಿಗೆ ಕೂಡ ಪಾತ್ರವಾದವರು. ನಿಮಗೆ ಐನ್ ಸ್ಟೀನ್ ಮಗುವಾಗಿದ್ದಾಗ ಹೇಗಿದ್ದರು ಗೊತ್ತೇ? ದಪ್ಪಗೆ ಇದ್ದರು. ನಿಜವಾಗಿಯೂ ಅವರು ತುಂಬಾ ದಪ್ಪಗಿದ್ದರು. ದೊಡ್ಡ ತಲೆಯನ್ನು ಹೊಂದಿದ್ದರು.ಅಲ್ಲದೆ ಶಾಲೆಯ ದಿನಗಳಲ್ಲಿ ಅವರಿಗೆ ಮಾತಿನ ತೊಂದರೆ ಇತ್ತು. 

ಥಾಮಸ್ ಸಾವೆಲ್ ಎಂಬ ಸಂಶೋಧಕ ಗುರುತಿಸಿದ ಹಾಗೆ ಅನೇಕ ಮಂದಿ ಇಂತಹ ಅದ್ಬುತ ಪ್ರತಿಭೆಯುಳ್ಳವರಿಗೆ ಚಿಕ್ಕಂದಿನಲ್ಲಿ ಮಾತಿನ ತೊಂದರೆ ಇತ್ತು. ಅದಕ್ಕಾಗಿ ಆತ ಈ ತೊಂದರೆಯನ್ನು ಐನ್ ಸ್ಟೀನ್ ಸಿಂಡ್ರೋಮ್ ಎಂದು ಗುರುತಿಸುತ್ತಾನೆ. ಗೊತ್ತಾ? ಅದಿರಲಿ, ಈ ಐನ್ ಸ್ಟೀನ್ ಎಷ್ಟೆಲ್ಲಾ ದೇಶಗಳಲ್ಲಿ ಕೆಲಸ ಮಾಡಿದರು ಗೊತ್ತೇ? ಜರ್ಮನಿ,ಇಟಲಿ, ಬೆಲ್ಜಿಯಂ, ಇಂಗ್ಲೆಂಡ್, ಅಮೇರಿಕ, ಸ್ವಿಸ್, ಆಸ್ಟ್ರಿಯಾ ದೇಶಗಳಲ್ಲಿ ಕೆಲಸ ಮಾಡಿದರು. 

1955 ರಲ್ಲಿ ಐನ್ ಸ್ಟೀನ್ ಸತ್ತ ನಂತರ ಅವರ ಮೆದುಳನ್ನು ಸುಮಾರು 45 ವರ್ಷಗಳು ಜಾರ್ ಒಂದರಲ್ಲಿ ಸಂಗ್ರಹಿಸಿ ಇಡಲಾಗಿತ್ತು. ಪ್ರಿನ್ಸ್ ಟನ್ ಆಸ್ಪತ್ರೆಯ ಪೆಥಲಾಜಿಸ್ಟ್  ಥಾಮಸ್ ಹಾರ್ವೆ ಎನ್ನುವವರು ಅವರ ಕುಟುಂಬದ ಅನುಮತಿಯಿಲ್ಲದೇ ಐನ್ ಸ್ಟೀನ್ ಮೆದುಳನ್ನು ತೆಗೆದುಕೊಂಡು ಹೋಗಿ ಸಂಗ್ರಹಿಸಿದ್ದರು. ಅದಕ್ಕಾಗಿ ಅವರು ತಮ್ಮ ಉದ್ಯೋಗವನ್ನು ಕಳೆದುಕೊಂಡರು. ಅಂತೂ ಹಲವಾರು ವರ್ಷಗಳ ಬಳಿಕ ಅವರ ಮಗ ಹನ್ಸ್ ಆಲ್ಬರ್ಟ್ ಮೆದುಳನ್ನು ಅಧ್ಯಾಯನ ಮಾಡಲು ಅನುಮತಿ ನೀಡಿದರು. ಅನಂತರ ನಡೆದದ್ದೇ ಅದ್ಬುತ. ಇಡೀ ವಿಶ್ವದ ವಿಜ್ಞಾನಿಗಳೆಲ್ಲಾ ಈ ಮೆದುಳನ್ನು ಅಧ್ಯಾಯನ ಮಾಡಿದರು. ಸಾಮಾನ್ಯರಂತಿಲ್ಲದ ಅನೇಕ ರಚನೆಗಳನ್ನು ಆ ಮೆದುಳಿನಲ್ಲಿ ಪತ್ತೆಹಚ್ಚಲಾಯಿತು. ಅದಕ್ಕಾಗಿಯೇ ಅಲ್ಲವೇ ಅವರು ಐನ್ ಸ್ಟೀನ್ ಆಗಿದ್ದು?

ಐನ್ ಸ್ಟಿನ್ ಜನನ 14-ಮಾರ್ಚ್-1879. ಮರಣ 18-ಏಪ್ರಿಲ್-1955.
ದಿ ಹೆಬ್ರೀವ್ ಯೂನಿರ್ವಸಿಟಿ ಆಫ್ ಜೇರುಸಲೇಮ್ ಲೈಬ್ರೆರಿಯಿಂದ ಮತ್ತಷ್ಟು ಮಾಹಿತಿಗಾಗಿ ಐನ್ ಸ್ಟೀನ್ ರವರ ಜಾಲತಾಣ. 

ನಿಂತು ಚಲಿಸುವ ವಾಹನ


ಅಮೇರಿಕದಲ್ಲಿ ಎರಡು ಗಾಲಿಯ ವಾಹನಗಳಿವೆ.ಅವಕ್ಕೆ ಸೆಗ್ ವೇ ಅಂತಾರೆ. ಹಾಗೇ ಈಗಷ್ಟೆ ಭಾರತದಲ್ಲೂ ಜನಪ್ರಿಯವಾಗುತ್ತಿರುವ ಈ ವಾಹನ, ಎರಡು ಗಾಲಿ, ಒಂದು ಕೋಲಿಗೆ ಜೋಡಿಸಿರುವ ಹ್ಯಾಂಡಲ್, ಒಬ್ಬರು ಮಾತ್ರ ನಿಂತು ಚಲಿಸಬಹುದಾದ ವಾಹನ ಅದು, ಅದನ್ನು ಸ್ವಲ್ಪ ಮಾರ್ಪಡಿಸಿ ಕೂತು ಓಡಾಡುವ ಸೆಗ್ ವೇ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಹೊಂಡ ಕಂಪನಿಯು ಯೂನಿಕಬ್ ಎಂಬ ಹೆಸರಿನ ಕೂತು ಚಲಿಸುವ ಸಗ್ ವೇ ತಯಾರಿಸುತ್ತಿದ್ದು. ಈ ಹೊಸ ಸಗ್ ವೇ ಗಂಟೆಗೆ 6.ಕಿ.ಮೀ. ವೇಗದಲ್ಲಿ ಚಲಿಸುತ್ತದೆ. 74.ಸೆ.ಮಿ ಎತ್ತರವಿದೆ. ಲಿಥಿಯಂ ಐಯಾನ್ ಬ್ಯಾಟರಿಯಿಂದ ಚಲಿಸುತ್ತದೆ. ಗೈರೋಸ್ಕೋಪಿಕ್ ಬ್ಯಾಲೆನ್ಸ್ ಕಂಟ್ರೋಲ್ ತಂತ್ರಜ್ಞಾನ ಬಳಸಲಾಗಿದೆ. ವೇಗ ನಿಯಂತ್ರಿಸಬಹುದು. ವಾಹನವನ್ನು ಯಾವ ದಿಕ್ಕಿಗಾದರೂ ತಿರುಗಿಸಬಹುದು. ಇದನ್ನೆಲ್ಲಾ ಮಾಡುವುದಕ್ಕೆ ನಮ್ಮ ಪುಷ್ಠಗಳನ್ನು ಬಳಸಬೇಕಾಗುತ್ತದೆ. ಈ ಪರಿಸರ ಸ್ನೇಹಿ ಸಗ್ ವೇ ಖರೀದಿಸಲು ಜಾಲತಾಣ ವಿಳಾಸ: http://www.segway.com

Thursday, May 24, 2012

ಅಬ್ಬೀ ಇ-ವಿಸಿಟಿಂಗ್ ಕಾರ್ಡ್ ರೀಡರ್

ವಿಸಿಟಿಂಗ್ ಕಾರ್ಡ್ ವಿನಿಮಯ ನಡೆಸಿ, ಪರಸ್ಪರರ ಹೆಸರು,ಪದವಿ, ವಿಳಾಸ ಸಂಪರ್ಕ ಸಂಖ್ಯೆ ಇತ್ಯಾದಿಗಳನ್ನು ಬೇಕಾದಾಗ ಬಳಸಿಕೊಳ್ಳುವುದು ಹಳೆಯ ವಿಧಾನ.ಇ-ವಿಸಿಟಿಂಗ್ ಕಾರ್ಡ್‌ಗಳ ವಿನಿಮಯವನ್ನು ಮೊಬೈಲ್ ಇಂದ ಮೊಬೈಲಿಗೆ ಮಾಡಿಕೊಳ್ಳಲೂ ಬಹುದು.ಹಳೆಯ ವಿಧಾನದಲ್ಲಿ ನಂಬಿಕೆಯಿಟ್ಟವರು, ಈಗಲೂ ನಿಮಗೆ ವಿಸಿಟಿಂಗ್ ಕಾರ್ಡ್ ನೀಡಬಹುದು. ಅದನ್ನು ಜೋಪಾನ ಪಡಿಸಿ, ಇರಿಸಿಕೊಂಡು ಬೇಕಾದಾಗ ಹುಡುಕುವುದು ತಾಪತ್ರಯವೆನಿಸಿದರೀಗ ಇದನ್ನು ನಿವಾರಿಸಲು ಸುಲಭ ಉಪಾಯವಿದೆ.ಕಾರ್ಡನ್ನು ಕೈಯಲ್ಲಿ ಹಿಡಿದು, ಮೊಬೈಲಿನಲ್ಲಿ ಅದರ ಚಿತ್ರ ಸೆರೆಹಿಡಿಯಿರಿ.ಕಾರ್ಡಿನಲ್ಲಿರುವ ವಿವರಗಳನ್ನು ಮೊಬೈಲಿನ ಅಡ್ರೆಸ್‌ಬುಕ್‌ನಲ್ಲಿ ದಾಖಲಾಗಿಸಿ.ಇದನ್ನು ಸಾಧ್ಯವಾಗಿಸುವ ಆಂಡ್ರಾಯಿಡ್ ಫೋನ್ ತಂತ್ರಾಂಶವೀಗ ಅಬ್ಬೀ abbyy ಎನ್ನುವ ಹೆಸರಿನಲ್ಲಿ ಲಭ್ಯವಿದೆ.ಇದನ್ನು ಗೂಗಲ್ ಆಂಡ್ರಾಯಿಡ್ ಫೋನುಗಳಲ್ಲಿ ಅನುಸ್ಥಾಪಿಸಿಕೊಂಡರೆ, ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್ (ಓಸಿಆರ್) ತಂತ್ರಜ್ಞಾನವನ್ನು ಸ್ಮಾರ್ಟ್ ಫೋನ್ ಕ್ಯಾಮೆರಾ ಬಳಸಿ ಮೊಬೈಲ್ ವಿಳಾಸ ಪುಸ್ತಕಕ್ಕೆ ನೇರವಾಗಿ ವಿಸಿಟಿಂಗ್ ಕಾರ್ಡುಗಳ ಸಂಪರ್ಕ ಮಾಹಿತಿಯನ್ನು ವರ್ಗಾಯಿಸಬಹುದು. ಪೂರ್ತಿ ತಂತ್ರಾಂಶ ಬೇಕಿದ್ದರೆ, ಐನೂರು ರೂಪಾಯಿ ಬಿಚ್ಚಬೆಕು-ಉಚಿತವಾಗಿ ಸರಳ ಆವೃತ್ತಿ ಲಭ್ಯವಿದೆ: http://goo.gl/WX9nt
ಐಪೋನ್ ತಂತ್ರಾಂಶಕ್ಕಾಗಿ ಜಾಲತಾಣ ಕೊಂಡಿ: http://goo.gl/xJHkH
ಆಂಡ್ರಾಯ್ಡ್ ಮೊಬೈಲ್ ತಂತ್ರಾಂಶ ಜಾಲತಾಣ ಕೊಂಡಿ: http://goo.gl/CY04L

Wednesday, May 23, 2012

​​ಆಪಲ್ ಸ್ಫೂರ್ತಿಯ ಕಾರು "iMove"

ಆಪಲ್ ವಿನ್ಯಾಸ ಮಾಡಿರುವ ಸ್ಫೂರ್ತಿಯ ಕಾರು ಐಮೂವ್. ಇಟಲಿ ಮೂಲದ ವಿನ್ಯಾಸಕ ಲಿವ್ಯು ಟುಡೊರಾನ್ (Liviu Tudoran) ಆಪಲ್ ನ ಮ್ಯಾಕಿಂಟೋಶ್ ಉತ್ಪನ್ನಗಳ ಸ್ಫೂರ್ತಿ ತೆಗೆದುಕೊಂಡು 2020 ಫಾರ್ iMove ಎಂಬ ಕಾನ್ಸೆಪ್ಟ್ ಕಾರನ್ನು ವಿನ್ಯಾಸಗೊಳಿಸಿದ್ದು. ಈ ಕಾರು ಸಹಜವಾಗಿ ಸೌರ ವಿದ್ಯುತ್ ನಿಂದ ಚಾಲನೆ ಮಾಡಬಹುದಾಗಿದೆ. ಕಾರಿಗೆ ಪಾರದರ್ಶಕ ವಸ್ತುಗಳನ್ನು ಹೊದಿಸಲಾಗಿರುತ್ತದೆ. ಈ ಪಾರದರ್ಶಕವಾದ ಗಾಜು ಸಹ ಒಂದು ಸೌರ ಫಲಕ ಆಗಿದ್ದು. ಸೌರವಿದ್ಯುತ್ ನಿಂದ ಚಾಲನೆ ಮಾಡಬಹುದಾದ ಈ ಕಾರಿನಲ್ಲಿ ಮೂರು ಪ್ರಯಾಣಿಕರು ಪ್ರಾಯಾಣಿಸಲು ಸಾಧ್ಯವಾಗುತ್ತದೆ. ಹಾಗೂ ಹೊಸತನದ ಸಾಮಾನು ಸಂಗ್ರಹ ಸ್ಥಳವನ್ನು ವಿನ್ಯಾಸಗೊಳಿಸಿದ್ದು. ಭವಿಷ್ಯದ ಕಲ್ಪನೆಯನ್ನು ಹೊಂದಿರುವ ಈ ಕಾರನ್ನು ವಿವಿಧ ರೀತಿಯಲ್ಲಿ ಮಾರ್ಪಾಡು ಮಾಡುವ ಹಾಗೆ ಸಾಧ್ಯತೆಗಳನ್ನು ನೀಡಿದ್ದು, ಆದ್ದರಿಂದ ಮಾಲೀಕರು ಅವರ ಸ್ವಂತ ಆಯ್ಕೆಗಳ ಪ್ರಕಾರ ಕಾರನ್ನು ಬದಲಿಸಲು ಸಾಧ್ಯವಾಗುತ್ತದೆ. ಈ ಭವಿಷ್ಯದ ಕಾರಿನ ಹಲವು ಮಾದರಿಗಳನ್ನು ವೀಕ್ಷಿಸಲು ಜಾಲತಾಣ ವಿಳಾಸ: http://goo.gl/DxrfD

ಗೂಗಲ್ ಅನ್ಲೈನ್ ವಿಡಿಯೋ ತಾಣ "ಯೂಟ್ಯೂಬ್ "

ಯೂಟ್ಯೂಬ್ ನಲ್ಲಿ ಪ್ರತಿ ನಿಮಿಷ 72 ಗಂಟೆಗಳ ವಿಡಿಯೋ ಅಪ್ ಲೋಡ್ ಆಗುತ್ತದೆ ಎಂದು ಗೂಗಲ್ ಮಾಲೀಕತ್ವದ ಯೂಟ್ಯೂಬ್ ಬ್ಲಾಗ್ ಒಂದರಲ್ಲಿ ಹೇಳಿಕೊಂಡಿದ್ದು, 7ನೇ ವರ್ಷಾಚರಣೆ ವೇಳೆ ಇದೊಂದು ಮಹತ್ವದ ಮೈಲಿಗಲ್ಲು.
ಯೂಟ್ಯೂಬ್ ನಲ್ಲಿ ಚಂದಾದಾರರಾಗುವವರ ಪ್ರಮಾಣ ಶೇ.50% ರಷ್ಟು ಹೆಚ್ಚಿದ್ದು, ಒಟ್ಟು 80 ಕೋಟಿ ಮಂದಿ ತಿಂಗಳೊಂದಕ್ಕೆ ಯೂಟ್ಯೂಬ್ ನಲ್ಲಿ ಕಳೆಯುವ ಒಟ್ಟು ಸಮಯ 3 ಬಿಲಿಯನ್ (300ಕೋಟಿ) ಗಂಟೆಗಳಿಗೆ ತಲುಪಿದೆ ಎಂದು ಕಂಪನಿಯ ಹೇಳಿಕೆ. 2006 ರಲ್ಲಿ ಗೂಗಲ್ ಯೂಟ್ಯೂಬನ್ನು 1.65 ಬಿಲಿಯನ್ ಡಾಲರ್ ಗಳಿಗೆ ಖರೀದಿಸಿತ್ತು.
ಆರಂಭದಲ್ಲಿ ಕಡಿಮೆ ರೆಸೆಲ್ಯೂಶನ್ ನ ವಿಡಿಯೋ ಮಾತ್ರ ಅಪ್ ಲೋಡ್  ಮಾಡಬಹುದಾಗಿದ್ದ ಯೂಟ್ಯೂಬ್ ನಲ್ಲಿ ಈಗೀಗ ಟಿವಿ ಕಾರ್ಯಕ್ರಮಗಳನ್ನು ಅಪ್ ಲೋಡ್ ಮಾಡಬಹುದು. ಯೂಟ್ಯೂಬ್ ನಲ್ಲಿ ಸಂಗೀತ, ಮನರಂಜನೆ, ಕ್ರೀಡೆ, ಚಲನಚಿತ್ರ, ರಾಜಕೀಯ ಸುದ್ದಿ, ಹಾಸ್ಯ, ವಿಜ್ಞಾನ, ತಂತ್ರಜ್ಞಾನ,ಗಣಕಯಂತ್ರ, ಮೊಬೈಲ್ ಪೋನ್, ಆಟಿಕೆ, ಆಟಗಳು, ವಾಹನ, ಶಿಕ್ಷಣ, ಸಂಪ್ರದಾಯ, ವನ್ಯಜೀವಿ, ಪರಿಸರ, ಪ್ರಯಾಣ,ಆನಿಮೇಷನ್ ಮುಂತಾದ ಇನ್ನೂ ಅನೇಕ ವಿಡಿಯೋ ತುಣುಕುಗಳನ್ನು ವೀಕ್ಷಿಸಬಹುದು ಹಾಗೇ ಡೌನ್ಲೋಡ್ ಮಾಡಿಕೊಳ್ಳಲೂಬಹುದು. http://www.youtube.com

Tuesday, May 22, 2012

ಮದುವೆಗೆ ವೆಬ್ಸೈಟ್

ಈಗಂತೂ ಮದುವೆಗಳ ಸೀಸನ್. ಆಷಾಢ ಮಾಸಕ್ಕೆ ಮುನ್ನ ಮದುವೆಯಾಗುವವರಿಗೆ ಸಾಕಷ್ಟು ಕೆಲಸ ಇರುತ್ತದೆ. ಮದುವೆಯ ಸಿದ್ಧತೆಯ ಜೊತೆಗೆ ಆಮಂತ್ರಣ ಪತ್ರಿಕೆ ಕೊಡುವ ತ್ರಾಸದಾಯಕ ಕೆಲಸ ಬೇರೆ ಇರುತ್ತದೆ. ಈಗಂತೂ ಎಲ್ಲರೂ ಕೆಲಸಕ್ಕೆ ಹೋಗುವುದರಿಂದ ಹಾಗು ಸಮಯದ ಅಭಾವ ಇರುವುದರಿಂದ ಎಲ್ಲರಿಗೆ ಆಮಂತ್ರಣ ಪತ್ರಿಕೆ ಕೊಡುವುದು ಅಸಾಧ್ಯವಾಗುತ್ತದೆ. ಹಾಗಾಗಿ ಕೆಲವರು ಫೋನ್ ಮಾಡಿ ಮದುವೆಗೆ ಕರೆಯುತ್ತಾರೆ ಇಲ್ಲವೆ ಪತ್ರಿಕೆಯನ್ನು ಕೊರಿಯರ್ ಮಾಡಿ ಸೇಫ್ ಆಗುತ್ತಾರೆ.
ಈಗ ಇಂಟರ್ನೆಟ್  ಯುಗವಾದ್ದರಿಂದ ಕೆಲವು ಬುದ್ಧಿವಂತರು ಇಮೇಲ್ ಮೂಲಕ ಆಮಂತ್ರಣ ಪತ್ರಿಕೆ ಸ್ಕ್ಯಾನ್ ಮಾಡಿ ಕಳುಹಿಸುತ್ತಾರೆ. ಇದನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗುವ ಮತ್ತೊಂದು ಪ್ರಯತ್ನ ಎಂದರೆ ನಿಮ್ಮ ಮದುವೆ ವೆಬ್ಸೈಟ್.
ಹೌದು. ನಿಮ್ಮ ಮದುವೆಗೆ ವೆಬ್ಸೈಟ್ ಒಂದನ್ನು ಸೃಷ್ಟಿ ಮಾಡಿ ನಿಮ್ಮ ಹಾಗು ನಿಮ್ಮನ್ನು ಮದುವೆ ಆಗುವ ಹುಡುಗ/ಹುಡುಗಿಯ ಪ್ರೊಫೈಲ್ ಅನ್ನು ಸೃಷ್ಟಿಸಿ ಅದರ ಜೊತೆ ನಿಮ್ಮ ಸ್ನೇಹಿತರು, ಸಂಬಂಧಿಗಳು, ನಿಮ್ಮ ಆಫೀಸಿನ ಸಹ ಕೆಲಸಗಾರರು, ಈ ರೀತಿ ಎಲ್ಲರಿಗೂ ಆಮಂತ್ರಣ ಕಳಿಸಿದರೆ ಹೇಗೆ ? ಸ್ವಲ್ಪ ವಿಭಿನ್ನವಾಗಿ ಇರುತ್ತದೆ ಅಲ್ವಾ.
ಅಂಥಾ ಒಂದು ಉಚಿತ ವೆಬ್ಸೈಟ್ ಅನ್ನು ನೀವು ಸೃಷ್ಟಿ ಮಾಡಿ ನಿಮ್ಮ ಫೇಸ್ ಬುಕ್ ಪ್ರೊಫೈಲ್ ಗೆ ಲಿಂಕ್ ಕೊಟ್ಟು, ಅಲ್ಲಿರುವ, ನಿಮಗೆ ಬೇಕಾದವರನ್ನು ಮದುವೆಗೆ ಕರೆಯಲು weduary ಎಂಬ ಉಚಿತ App ಒಂದಿದೆ. ಅದರ ಮೂಲಕ ನಿಮ್ಮ ಹಾಗು ನಿಮ್ಮ ಹುಡುಗಿಯ ಬಗೆಗಿನ ಎಲ್ಲಾ ಮಾಹಿತಿಯನ್ನು ಕೊಟ್ಟು, ಫೇಸ್ ಬುಕ್ ಮೂಲಕ ಆಮಂತ್ರಿಸಬಹುದು. ಇದಷ್ಟೇ ಅಲ್ಲದೆ ಈ app ಮೂಲಕ, ಯಾರ್ಯಾರು ಮದುವೆಗೆ ಬರುತ್ತಾರೆ, ಯಾರು ಬರುವುದಿಲ್ಲ ಎಂದೂ ತಿಳಿದುಕೊಳ್ಳಬಹುದು. ಬರುವ ಪ್ರತಿಯೊಬ್ಬರ ಪ್ರೊಫೈಲ್ ಅನ್ನು ಸೃಷ್ಟಿ ಮಾಡಿ, ಅವರು  ಇಷ್ಟಪಡುವ, ಪಡದ ವಿಷಯಗಳ ಮಾಹಿತಿ ಕೊಡುತ್ತದೆ.
ನೀವು ಮದುವೆ ಆಗಿದ್ದೀರೋ ಇಲ್ಲವೋ, ಮುಂದೆ ಆಗುತ್ತೀರೋ ಇಲ್ಲವೋ, ಆದರೆ ಹಲವಾರು ಒಳ್ಳೆ theme ಹಾಗು templateಗಳು ಲಭ್ಯವಿರುವ ಈ weduary ವೆಬ್ಸೈಟ್ ಅನ್ನು ಇವತ್ತೇ ಚೆಕ್ ಮಾಡಿ.

Monday, May 21, 2012

ಪರಿಸರ ಸ್ನೇಹಿ iZen ಬಿದಿರಿನ ಬ್ಲೂಟೂತ್ ಕೀಬೋರ್ಡ್


 ವಿಶ್ವದ ಮೊದಲ ಪರಿಸರ ಸ್ನೇಹಿ ಬಿದರಿನ ಬ್ಲೂಟೂತ್ ಕೀಬೋರ್ಡ್ ಅನ್ನು  iZen ಕಂಪನಿಯು ಮಾರುಕಟ್ಟೆಗೆ  ಬಿಡುಗಡೆ ಮಾಡಿದೆ. ಶೇ 92% ಬಿದಿರನ್ನು ಉಪಯೋಗಿಸಿ ರಚಿಸಲಾದ ಈ ಕೀಬೋರ್ಡ್ ನಲ್ಲಿ ರೀಚಾರ್ಜ್ ಮಾಡಬಹುದಾದ ಲಿಥಿಯಂ-ಅಯಾನ್ ಬ್ಯಾಟರಿ ಯನ್ನು ಅಳವಡಿಸಿದ್ದು. ಕೀಬೋರ್ಡ್ ಅನ್ನು ಯುಎಸ್ಬಿ 2.0 ಕೇಬಲ್ ಬಳಸಿಕೊಂಡು ಬ್ಯಾಟರಿ ಚಾರ್ಜ್ ಮಾಡಬಹುದು. ಕೀಬೋರ್ಡ್ ನ  ಅಳತೆ 11.5-ಇಂಚಿನ X 5-ಇಂಚಿನ X 0.75-ಇಂಚಿನ ಮತ್ತು 1.1 ಪೌಂಡ್ (ಬಾಕ್ಸ್ ಸೇರಿದಂತೆ) ತೂಕ ಹೊಂದಿದ್ದು.  iZen ಬಿದಿರು ಬ್ಲೂಟೂತ್ ಕೀಬೋರ್ಡ್ ಬೆಲೆ ಸುಮಾರು 4500.00 ರೂಗಳಾಗಿದೆ. iZen ಕಂಪನಿಯು ಹಲವಾರು ಪರಿಸರ ಸ್ನೇಹಿ ಉತ್ಪನ್ನಗಳನ್ನು ತಯಾರಿಸಿದ್ದು ಐಪೋನ್ ಕವಚ, ಬಿದಿರಿನ ಮೌಸ್ ಮತ್ತು ಕೀಬೋರ್ಡ್, ಕಂಪ್ಯೂಟರ್ ನ ಕವಚ, ಐಪಾಡ್ ನ ಸ್ಟ್ಯಾಂಡ್, ಐಪೋನ್ ನ ಜೀಬ್ರಾ ಪ್ಯಾನೆಲ್ ಮುಂತಾದ ಉತ್ಪನ್ನಗಳನ್ನು ಲಭ್ಯವಿದೆ. ಕಂಪನಿಯ ಜಾಲತಾಣ ವಿಳಾಸ: http://www.izenbamboo.com

Saturday, May 19, 2012

ಕಿಸ್ ಕಳಿಸಲು ಆಪ್

ನಿಮ್ಮ ಸ್ವೀಟ್ ಹಾರ್ಟ್ ಗೆ ರಸಮಯ ಸಂದೇಶ/ಮೇಲ್/ಸಂಕೇತಗಳನ್ನು ಕಳಿಸುವಂತಿದ್ದರೆಎಷ್ಟೊಂದು ಚೆನ್ನಾಗಿರುತ್ತಲ್ವಾ? ಅದನ್ನು ಸುಲಭವಾಗಿಸುವ ಆಪ್ ಒಂದು ಇಲ್ಲಿದೆ. ನೀವು ಕಳಿಸುವ ಸಂದೇಶ ಬಹಿರಂಗವಾಗದಂತ. ಕಳಿಸಿದವರಿಗೆ ಮಾತ್ರ ದೊರಕುವಂತೆ ಮಾಡೋದು ಇದರಿಂದ ಸುಲಭ.
ಕೆಲವು ಉತ್ಸಾಹಿಗಳು ಸೇರಿಕೊಂಡು ಅಭಿವೃದ್ಧಿಪಡಿಸಿರುವ ಈ ಆಪ್ "ಪೇರ್"(ಜೋಡಿ) ಎಂದು ಹೆಸರಿಡಲಾಗಿದೆ. ಇದನ್ನು ಬಳಸಿಕೊಂಡು ನಿಮ್ಮ ಮೆಚ್ಚಿನ ಜೀವಿಗಳಿಗೆ ನೀವು ಚುಂಬನ, ಸಂದೇಶ, ವಿಡಿಯೋ ಹಾಗೂ ಖಾಸಗೀ ಫೋಟೋಗಳನ್ನು ಕಳಿಸಬಹುದು. ಅದೂ ಯಾರಿಗೂ ಗೊತ್ತಾಗದಂತೆ.
ಈ ಆಪ್ ಅನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮ ಆಫಲ್ ಐಪೋನ್ ಅನ್ನು ನಿಮ್ಮ ಗೆಳತಿಯ ಫೋನಿಗೆ ಫೇರ್ ಮಾಡಿದರೆ ಸಾಕು. ಆಪಲ್ ಮಳಿಗೆಯಲ್ಲಿ ಈ ಆಪ್ ಅನ್ನು ಉಚಿತವಾಗಿ ಡೌನ್ಲೋಡ್ ಮಾಡಿಕೊಂಡಿಕೊಳ್ಳುವ ಅವಕಾಶವಿದೆ. ಎಲ್ಲಾ ಆಂಡ್ರಾಯ್ಡ್ ಆಧಾರಿತ ಸಾಧನಗಳಿಗೂ ಈ ಆಪ್ ಬಳಸಬಹುದು. ಡೌನ್ಲೋಡ್ ಗೆ ನೋಡಿ: http://trypair.com

Friday, May 18, 2012

ಹಳೆ ಪೋಟೊಗಳಿಗೆ ಜಾಲತಾಣ

ಶೂಬಾಕ್ಸ್ ಅನ್ನೋದು ಈಗ ಸುದ್ದಿಯಲ್ಲಿರುವ ಆಂಡ್ರಾಯ್ಡ್ ಆಪ್ಲಿಕೇಷನ್. 1000ಮೆಮೊರಿಸ್.ಕಾಮ್  ನಿಂದ ನಿರ್ಮಿಸಿರುವ ಈ ಆಪ್ಲಿಕೇಷನ್ ನಿಮ್ಮ ಹಳೆಯ ಪೋಟೋಗಳನ್ನು ಶೇರ್ ಮಾಡಿಕೊಳ್ಳುವುದಕ್ಕೆಂದೇ ಇದೆ. ಪ್ರಿಂಟಾಗಿರುವ ಪೋಟೋಗಳನ್ನು ಮೊಬೈಲ್ ನಿಂದಲೇ ಸ್ಕ್ಯಾನ್ ಮಾಡಬಹುದು. ಅದನ್ನು ಶೇರ್ ಮಾಡಬಹುದು. ಹೀಗೆ ಶೇರ್ ಮಾಡುವ ಪೋಟೋಗಳು, ಶೂ ಬಾಕ್ಸ್ ಮತ್ತು 1000.ಮೆಮೊರಿಸ್.ಕಾಮ್ ನಲ್ಲಿರುತ್ತವೆ. ನಿಮ್ಮ ಪೋಟೋಗಳನ್ನು ಖಾಸಗಿಯಾಗಿ ಇಟ್ಟುಕೊಳ್ಳಬಹುದು. ಆಯ್ದ ಕೆಲವರೊಂದಿಗಷ್ಟೆ ಹಂಚಿಕೊಳ್ಳಬಹುದು. ಪ್ರತಿ ಪೋಟೋಗೆ ಟ್ಯಾಗ್. ದಿನಾಂಕ, ಸ್ಥಳದ ಮಾಹಿತಿಯನ್ನು ಸೇರಿಸಬಹುದು. ಎಷ್ಟು ಪೋಟೋಗಳನ್ನಾದರೂ ಇಲ್ಲಿ ಅಪ್ ಲೋಡ್ ಮಾಡಬಹುದು.

1000.ಮೆಮೊರಿಸ್.ಕಾಮ್  ಜಾಲತಾಣ ವಿಳಾಸ: http://1000memories.com

ಹಳೆಯ ನೆನಪುಗಳನ್ನು ತಾಜಾಗೊಳಿಸುವ ಈ ಆಪ್ಲಿಕೇಷನ್ ನಿಮಗೆ ಬೇಕಾದರೆ ಇಲ್ಲಿಂದ ಡೌನ್ ಲೋಡ್ ಮಾಡಿಕೊಳ್ಳಿ:http://goo.gl/54rf5

ಅಂತರ್ಜಾಲ ತಾಣದಿಂದ ಸಂಚಾರಿ ಸಾಧನ ನಿರ್ವಹಿಸಿ

ನಿಮ್ಮ  ನೆಚ್ಚಿನ ಫೋನ್ ಅನ್ನು ನಿಮ್ಮ ಗಣಕಯಂತ್ರದಿಂದಲೇ ನಿಯಂತ್ರಿಸಬಹುದಾದರೆ ಹೇಗೇ? ಹೌದಲ್ಲ !
ನಿಮ್ಮ ಮೊಬೈಲ್ ನ ಸಂಪರ್ಕ ಸಂಖ್ಯೆಗಳನ್ನು ತಿದ್ದಲು, ಮೊಬೈಲ್ ಸಾಧನ ಕಳೆದುಕೊಂಡಲ್ಲಿ ಅದನ್ನು ಲಾಕ್ ಮಾಡಲು, ಸಂದೇಶಗಳನ್ನು ಕಳುಹಿಸಲು, ಕಡತಗಳನ್ನು ಸೇರಿಸಲು ಅಥವಾ ಅಳಿಸಿಹಾಕಲು ಹಾಗೂ ಪೋನ್ ಈಗ ಯಾವ ಪ್ರದೇಶದಲ್ಲಿದೆ ಎಂದು ನಕ್ಷೆಯ ಮುಖಾಂತರ ತಿಳಿಯಲು ಸಾಧ್ಯವಾದರೆ ಹೇಗೆ ಎಂದೆಲ್ಲಾ ಯೋಚಿಸುತ್ತಿದ್ದರೇ? ಬೇಕಾಗಿರುವ ಎಲ್ಲಾ ಇಂಟರ್ನೆಟ್ ಪ್ರವೇಶವನ್ನು ರಿಮೋಟ್ ಪೋನ್ ಅಸೆಸ್ ಎಂಬ ಕಂಪನಿಯು ಇಷ್ಟೆಲ್ಲಾ ಉಪಯೋಗಗಳನ್ನು ಹೊಂದಿರುವ ತಂತ್ರಾಂಶವನ್ನು ಬಿಡುಗಡೆಗೊಳಿಸಿದೆ.


ನಿಮ್ಮ ವೈಯಕ್ತಿಕ ರಿಮೋಟ್ ಪೋನ್ ಅಸೆಸ್ ಖಾತೆಗೆ ನಿಮ್ಮನ್ನು ಸಂಪರ್ಕಿಸಲು ಜಾಲತಾಣ ವಿಳಾಸ: http://goo.gl/Zyb5z
ಆಂಡ್ರಾಯ್ಡ್ ಪ್ಲೇ ಮಳಿಗೆಯಿಂದ ಡೌನ್ಲೋಡ್ ಮಾಡಲು ಕೊಂಡಿ; http://goo.gl/BwPZL

Android Phone ಕಳೆದು ಹೋದರೆ ಪತ್ತೆ ಹೇಗೆ ?

ನಿಮ್ಮ  ನೆಚ್ಚಿನ ಫೋನ್ ಕಳೆದು ಹೋದರೆ ಮನಸ್ಸು ಎಷ್ಟು ಗಲಿಬಿಲಿಗೊಳ್ಳುತ್ತೆ ಅಲ್ಲವಾ? ಅದರಲ್ಲೂ ಸ್ಮಾರ್ಟ್ ಫೋನ್ ಆಗಿದ್ದರಂತೂ ಇನ್ನೂ ಬೇಜಾರಾಗುತ್ತೆ. ರಿಮೋಟ್ ಲೊಕೇಟರ್ App ಇಲ್ಲವೆ ಸೆಕ್ಯೂರಿಟಿ App ಅನ್ನು ಮೊದಲೇ Install ಮಾಡಿಕೊಂಡಿದ್ದರೆ ಹೇಗೋ ಪತ್ತೆ ಹಚ್ಚಬಹುದು. Install ಆಗಿಲ್ಲದಿದ್ದರೆ ಏನಪ್ಪಾ ಮಾಡುವುದು ಎಂದು ತಲೆ ಕೆಡಿಸಿಕೊಳ್ಳುವುದು ಬೇಡ.

ಅದಕ್ಕಾಗಿಯೇ ಒಂದು ಸುಲಭ ಉಪಾಯವಿದೆ. ಈ ಕೆಳಗಿನ ಹಂತಗಳನ್ನು ಪಾಲಿಸಿ:
 • ನೀವು ಫೋನ್ ಕಳೆದು ಹೋದ ತಕ್ಷಣ ನೀವು ಗೂಗಲ್ ಪ್ಲೇ ಮಳಿಗೆಗೆ ಹೋಗಿ.
 • ನಂತರ AndroidLost page ಗೆ ಹೋಗಬೇಕು.
 •  ಇದಾದ ಮೇಲೆ ನಿಮ್ಮ ಅ ಳೆದು ಹೋದ ಫೋನ್ ನಲ್ಲಿ ನೀವು ಯಾವ ಗೂಗಲ್ ಖಾತೆ ಉಪಯೋಗಿಸುತ್ತಿದ್ದರೋ ಅದೇ ಗೂಗಲ್ ಖಾತೆಗೆ Sign in ಮಾಡಿ.
 • ನಿಮ್ಮ ಕಳೆದುಹೋದ ಫೋನ್ ಏನಾದರೂ ಆನ್ ಆಗಿದ್ದರೆ, ಈ  App ಆಟೋಮ್ಯಾಟಿಕ್ ಆಗಿ Install ಆಗುತ್ತದೆ.
 • ನಂತರ ನೀವು AndroidLost.com ಗೆ ಹೋಗಿ ಮತ್ತೆ Sign in ಮಾಡಿ
 • ಇದಾದ ನಂತರ Controls/Settings page ಗೆ ಹೋಗಿ.
 • ಆ ಪೇಜ್ ನಲ್ಲಿ remote control options active ಎಂದು ತೋರಿಸುತ್ತಿದ್ದರೆ ನಿಮ್ಮ ಫೋನ್ ಅನ್ನು ಹುಡುಕಬಹುದು.
 • Inactive ಆಗಿದ್ದರೆ ಮತ್ತೆ Login ಮಾಡಿ ಟ್ರೈ ಮಾಡಬೇಕು.
 ನಿಮ್ಮ  ಫೋನ್ ಕಳೆದು ಹೋಗುವ ಮುನ್ನ ಮುನ್ನೆಚ್ಚರಿಕೆ ಕ್ರಮವಾಗಿ ಕೂಡಾ ನೀವು ಈ App ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ಆಂಡ್ರಾಯ್ಡ್ ಪ್ಲೇ ಮಳಿಗೆಯಿಂದ ಡೌನ್ಲೋಡ್ ಮಾಡಲು ಕೊಂಡಿ> http://goo.gl/rrLhI

Thursday, May 17, 2012

ಟ್ರಾಫಿಕ್ ಸಿಗ್ನಲ್ ಕ್ಯಾಮೆರಾ ಮೊಬೈಲ್ ತಂತ್ರಾಂಶ


ಕ್ಯಾಮರಸ್ ಇಂಡಿಯಾ ಎಂಬ ಸಂಸ್ಥೆಯವರು ಬೆಂಗಳೂರು, ದೆಹಲಿ, ಕೇರಳ, ಮೌಂಟ್ ಸರಸ್ವತಿ, ಮುಂಬೈ,ತಿರುವನ್ನಮಲೈ ನಗರಗಳ ಟ್ರಾಫಿಕ್ ಸಿಗ್ನಲ್ ಕ್ಯಾಮೆರಾಗಳ ನೇರ ವಿಡಿಯೋ ದೃಶ್ಯಗಳನ್ನು ವೀಕ್ಷಿಸಲು ಆಂಡ್ರಾಂಯ್ಡ್ ಮೊಬೈಲ್ ತಂತ್ರಾಂಶವನ್ನು ಬಿಡುಗಡೆ ಮಾಡಿದ್ದು. ಇಂಟರ್ ನೆಟ್ ಸೌಲಭ್ಯ ಹೊಂದಿರುವ ಆಂಡ್ರಾಯ್ಡ್ ಮೊಬೈಲ್ ನಲ್ಲಿ ಸುಲಭವಾಗಿ ವೀಕ್ಷಿಸಬಹುದಾಗಿದೆ. ನಿಮಗೂ ಲೈವ್ ವಿಡಿಯೊ ನೋಡುವ ಆಸೆ ಇದ್ದರೆ ಇಲ್ಲಿಂದ ತಂತ್ರಾಂಶವನ್ನು ಡೌನ್ಲೊಡ್ ಮಾಡಿಕೊಳ್ಳಿ. http://goo.gl/d0k4g

ನಾಗರೀಕರ ಸನಿಹಕ್ಕೆ ಪೊಲೀಸ್ ಜಾಲತಾಣ

ಪೋಲೀಸ್ ಇಲಾಖೆಗೆ ಸಂಬಂಧಪಟ್ಟ ನಾಗರೀಕರಿಗೆ ಶೀಘ್ರಸೇವೆಯನ್ನು ಒದಗಿಸಿ ಸರಳೀಕರಣಗೊಳಿಸುವ ಸಂಬಂದ ರಾಜ್ಯ ಪೋಲೀಸ್ ಇಲಾಖೆ ಜಾಲತಾಣ ಜಾರಿಗೆ ತಂದಿದೆ. 

ಕರ್ನಾಟಕ ಪೊಲೀಸ್ ಇಲಾಖೆ ಜಾಲತಾಣ: http://ksp.gov.in/home/citizen/forms.php
ಬೆಂಗಳೂರು ನಗರ ಪೊಲೀಸ್ ಇಲಾಖೆ ಜಾಲತಾಣ: http://www.bcp.gov.in/english/index.htm

ಮಾಹಿತಿ ಜಾಲದಿಂದ ಅನಾವರಣಗೊಳಿಸಿಕೊಳ್ಳಬಹುದಾದಂತಹ ಒಂದೇ ಒಂದು ಏಕೀಕೃತ ವ್ಯವಸ್ಥೆಯನ್ನು ರೂಪಿಸಲಾಗಿದೆ. ಇನ್ನು ಮುಂದೆ ಅರ್ಜಿದಾರರು ಯಾವುದೇ ರೀತಿಯ ಪೊಲೀಸ್ ತಪಾಸಣೆಗಳಿಗಾಗಿ ಜಿಲ್ಲಾ ಪೊಲೀಸ್ ಕಛೇರಿಗಾಗಲೀ ಅಥವಾ ಪೊಲೀಸ್ ಕಮೀಷನರ್ ಕಛೆರಿಗಾಗಲೀ ಕೇವಲ ಅರ್ಜಿ ನಮೂನೆ ಪಡೆಯಲು ಹೊಗುವ ಬದಲು ಗಣಕೀಕೃತ ವ್ಯವಸ್ಥೆಯಿಂದ ಪಡೆಯಬಹುದು.

Tuesday, May 15, 2012

ಕೆಲಸ ಹುಡುಕುವ ಮುನ್ನ

ಯಾವುದಾದರೂ ಸರಿ, ಒಂದು ಕೆಲಸ ಸಿಕ್ಕಿದರೆ ಸಾಕು ಎನ್ನುವ ಕಾಲ ಈಗಿಲ್ಲ. ತಮ್ಮ ತಮ್ಮ ಆಸಕ್ತಿಗೆ ಸರಿಹೊಂದುವ ಕೆಲಸ ಮಾಡಿದರೆ ಎಲ್ಲರಿಗೂ ಒಳ್ಳೆದು. ಅದಕ್ಕೆ ಸರಿಯಾದ ಕಂಪೆನಿ ಹುಡುಕಬೇಕು. ಕಂಪೆನಿ ಸೇರುವ ಮುನ್ನ ಅಥವಾ ಕಂಪೆನಿಗೆ ಅರ್ಜಿ ಗುಜರಾಯಿಸುವ ಮುನ್ನ ಆ ಕಂಪೆನಿ ಬಗ್ಗೆ ಪೂರ್ತಿ ವಿವರ ತಿಳಿದಿದ್ದರೆ ಒಳ್ಳೆಯದು. ಕಂಪೆನಿಯ ಜಾಲತಾಣದಲ್ಲೇನೋ ಕಂಪೆನಿಯ ಬಗ್ಗೆ ವಿವರ ಇರುತ್ತದೆ. ಆದರೆ ಅದರ ಬಗ್ಗೆ ಅಲ್ಲಿ ಕೆಲಸ ಮಾಡಿದವರಿಂದ ಹಿಂಮಾಹಿತಿ (feedback) ಸಿಗುವುದಿಲ್ಲ. ಅಲ್ಲಿ ಕೆಲಸ ಮಾಡಿದವರನ್ನು ಪರಿಚಯ ಮಾಡಿಕೊಂಡು ಅವರಿಂದ ಮಾಹಿತಿ ತಿಳಿದುಕೊಳ್ಳುವುದು ಎಲ್ಲ ಸಂದರ್ಭಗಳಲ್ಲಿ ಅಸಾಧ್ಯ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ರೂಪವಾಗಿ ಇರುವ ಜಾಲತಾಣ www.glassdoor.com. ಈ ಜಾಲತಾಣದಲ್ಲಿ ಕಂಪೆನಿಗಳ ವಿಮರ್ಶೆ ಮಾತ್ರವಲ್ಲ, ಅಲ್ಲಿ ಸಂದರ್ಶನದಲ್ಲಿ ಕೇಳುವ ಪ್ರಶ್ನೆಗಳು, ಸಂಬಳ ಎಷ್ಟಿರಬಹುದು, ಇತ್ಯಾದಿ ಎಲ್ಲ ಮಾಹಿತಿಗಳಿವೆ.

ಬಿಡುವಿನ ವೇಳೆ ಕೆಲಸ ಮಾಡಲು

 

ಬಿಡುವಿನ ವೇಳೆಯಲ್ಲಿ ಫ್ರೀ ಇದ್ದಾಗ ಗಣಕ ಯಂತ್ರದ ಮೇಲೆ ಬೇರೆ ಕೆಲಸ ಮಾಡಲು ವೆಬ್‌ಸೈಟ್‌ನ ಮಾಹಿತಿ www.freelanceindia.com ಜಾಲತಾಣ ನೋಡಿ. 


ಪಾಠ ಮಾಡುತ್ತಲೇ ಹಣ ಗಳಿಸಿ

 


ನಿಮಗೆ ಪಾಠ ಮಾಡುವ ಉತ್ಸಾಹವಿದೆಯೇ? ಹಾಗಾದರೆ ಇಲ್ಲಿದೆ ನೋಡಿ ನಿಮಗೊಂದು ಅದ್ಭುತ ಅವಕಾಶ. ಈ ಕೆಳಗಿನ ಲಿಂಕ್ ಗಳಿಗೆ ಭೇಟಿ ನೀಡಿ.
ನಿಮ್ಮ ಇಷ್ಟದ ವಿಷಯಗಳ ಬಗ್ಗೆ ಪಾಠ ಮಾಡಿ. ಮತ್ತು ಪಾಠ ಮಾಡುತ್ತಲೇ ಹಣ ಗಳಿಸಿ.


ಭಾರತದಲ್ಲಿ ಮಾತ್ರ

 
“ನಿಮ್ಮ ಜೀವಕ್ಕೆ ಬೆಲೆ ಇಲ್ಲದಿರಬಹುದು ಆದರೆ ಪೆಟ್ರೋಲ್ ತುಂಬ ದುಬಾರಿ. ಇಲ್ಲಿ ಧೂಮಪಾನ ಮಾಡಬೇಡಿ” -ಇದು ಪೆಟ್ರೋಲ್ ಬಂಕ್ ಒಂದರ ಮುಂದೆ ಇರುವ ಫಲಕ. ಇನ್ನೊಂದು ಉದಾಹರಣೆ -ಒಬ್ಬಾಕೆ ತನ್ನ ಚಿಕ್ಕ ಮಗುವನ್ನು ನಡೆಸಿಕೊಂಡು ಹೋಗುತ್ತಿದ್ದಾಳೆ. ಇದರಲ್ಲೇನು ವಿಶೇಷ ಎನ್ನುತ್ತೀರಾ? ಆಕೆಯ ಹೆಗಲಲ್ಲಿ ಒಂದು ಬುಟ್ಟಿ ಇದೆ. ಆ ಬುಟ್ಟಿಯಲ್ಲಿ ಆಕೆಯ ಮುದ್ದಿನ ನಾಯಿ ಇದೆ. ಅಂದರೆ ಆಕೆ ನಾಯಿಯನ್ನು ಹೊತ್ತುಕೊಂಡು ಹೋಗುತ್ತಿದ್ದಾಳೆ ಮತ್ತು ಅದೇ ಸಮಯದಲ್ಲಿ ತನ್ನ ಮಗುವನ್ನು ನಡೆಸಿಕೊಂಡು ಹೋಗುತ್ತಿದ್ದಾಳೆ. ಇವೆಲ್ಲ ಎಲ್ಲಿ ಎನ್ನುತ್ತೀರಾ? ನಮ್ಮದೇ ಭಾರತ ದೇಶದಲ್ಲಿ ಸ್ವಾಮಿ. ಹೌದು ಇದಕ್ಕೆ ಎಲ್ಲಿದೆ ಪುರಾವೆ ಎನ್ನುತ್ತೀರಾ? ಬನ್ನಿ. onlyinindia.in ಜಾಲತಾಣಕ್ಕೆ ಭೇಟಿ ನೀಡಿ.

ರಕ್ತದಾನಿಗಳು ಬೇಕೇ?


 
ಅಂತರ್ಜಾಲ ತಾಣದಲ್ಲಿ ರಕ್ತದಾನಿಗಳು ನೋಂದಾಯಿಸಿಕೊಳ್ಳುವ ವ್ಯವಸ್ಥೆಯಿದೆ.ಹೆಸರು,ವಿಳಾಸ,ಸಂಪರ್ಕಸಂಖ್ಯೆ ಇತ್ಯಾದಿ ವಿವರಗಳೊಂದಿಗೆ ನೋಂದಾಯಿಸಿಕೊಳ್ಳಬೇಕಾಗುತ್ತದೆ.ರಕ್ತದ ಗುಂಪನ್ನೂ ನೀಡಬೇಕಾಗುತ್ತದೆ.ರಕ್ತ ಬೇಕಾದವರು ತಮ್ಮ ಊರು, ರಕ್ತದ ಗುಂಪು ನೀಡಿ, ದಾನಿಗಳ ವಿವರಗಳನ್ನು ಪಡೆದುಕೊಳ್ಳಬಹುದು. ನಂತರ ದಾನಿಯನ್ನು ನೇರವಾಗಿ ಸಂಪರ್ಕಿಸಿ, ರಕ್ತದಾನದ ವ್ಯವಸ್ಥೆ ಮಾಡಿಕೊಳ್ಳಬಹುದು. ಸಂಪರ್ಕ ವಿಳಾಸಗಳು ತಪ್ಪಿದ್ದರೆ, ಅದನ್ನು ಅಂತರ್ಜಾಲ ತಾಣಕ್ಕೆ ತಿಳಿಸಿದರೆ, ಅಂತಹ ವ್ಯಕ್ತಿಗಳ ವಿವರಗಳನ್ನು ಕಿತ್ತು ಹಾಕಬಹುದು.http://www.friends2support.org/

Thursday, May 10, 2012

LookeeTV ಎಚ್ಡಿ ಡೆಸ್ಕ್ಟಾಪ್ ಇಂಟರ್ನೆಟ್ ಟಿವಿ ಮತ್ತು ರೇಡಿಯೋ

ಅದೊಂದು ಕಾಲವಿತ್ತು ರೋಡಿಯೋ, ಕಪ್ಪುಬಿಳಿಪಿನ ದೂರದರ್ಶನವೆಂಬ ಮಾಯಪೆಟ್ಟಿಗೆಯ ಕಾಲ. ಶುಕ್ರವಾರದ ಚಿತ್ರಮಂಜರಿ, ಭಾನುವಾರದ ಸಂಜೆ ಪ್ರಸಾರವಾಗುತ್ತಿದ್ದ ಚಲನಚಿತ್ರಕ್ಕೆ ಎದರುನೊಡುತ್ತಿದ್ದ ಕಾಲ. ಹಳ್ಳಿಗಳಲ್ಲಿ ಕೆಲಸ ಕಾರ್ಯಗಳನ್ನು ಮುಗಿಸಿ ದೂರದರ್ಶನ ಮುಂದೆ ಹಾಜರು. ಟಿವಿ ನೋಡಲು ಗೌಡರ ಮನೆ ಮುಂದೆ ಸರತಿ ಸಾಲು ಕಟ್ಟಿ ನಿಲ್ಲುವುದು ರೂಡಿ. ಅರ್ಧ ಕಾರ್ಯಕ್ರಮ ಮುಗಿಯುವುದರಲ್ಲಿ ಜಾಹಿರಾತು ಅಷ್ಟೊತ್ತಿಗೆ ಗೌಡರ ಊಟದ ಸಮಯ ಆಮೇಲೆ ಬನ್ನಿ ಎಂಬ ಗೌಡರ ಶ್ರೀಮತಿಯವರ ಆಜ್ಞೆ. ನಿರಾಸೆಯಿಂದ ಪೆಚ್ಚುಮೊರೆಯ ಜೊತೆಗೆ ಮನೆಗೆ ವಾಪಸ್ಸು. ಭಾನುವಾರ ಬೆಳಿಗ್ಗೆ ಪ್ರಸಾರವಾಗುತ್ತಿದ್ದ ರಾಮಾಯಣ, ಮಹಾಭಾರತ ಧಾರವಾಹಿಯನ್ನು ವೀಕ್ಷಿಸಲು ಗೌಡರ ಮನೆಯೊಡತಿಗೆ ನಾಲ್ಕಾಣೆ ಶುಲ್ಕ ನೀಡಿ ಕಪ್ಪುಬಿಳುಪಿನ ದೂರದರ್ಶನ ಮುಂದೆ ಹಾಜರು. ಆದರೆ ಈಗ ತಂತ್ರಜ್ಞಾನ ಯಾವ ಮಟ್ಟಿಗೆ ಮುಂದುವರೆದಿದೆಯೆಂದರೆ ಬಣ್ಣಬಣ್ಣದ ದೂರದರ್ಶನಗಳ ಜೊತೆಗೆ ಗಣಕಯಂತ್ರ, ದೂರವಾಣಿ, ಬಸ್ಸು, ಕಾರು, ರೈಲು, ವಿಮಾನ ಎಲ್ಲಿ ನೋಡಿದರೂ ದೂರದರ್ಶನಗಳ ದರ್ಶನದ ಕಾಲ.


LookeeTV ಎಚ್ಡಿ ಡೆಸ್ಕ್ಟಾಪ್ ಇಂಟರ್ನೆಟ್ ಟಿವಿ ಮತ್ತು ರೇಡಿಯೋ 90 ದೇಶಗಳ 65 ವಿವಿಧ ಭಾಷೆಗಳಲ್ಲಿ 2,000 ಇಂಟರ್ನೆಟ್ ಟಿವಿ ವಾಹಿನಿಗಳು ಮತ್ತು 30,000 ರೇಡಿಯೋ ಕೇಂದ್ರಗಳು ಪ್ರವಹಿಸಬಲ್ಲ ಲೂಕಿ ಟಿವಿ ಎಂಬ ಪ್ಲೇಯರ್ ನೀವು ಆನಂದಿಸಲು ಶಕ್ತಗೊಳಿಸುತ್ತದೆ. ಈ ಯಂತ್ರಾಂಶ ವೈಫೈ ನೆಟ್ವರ್ಕ್ ನಲ್ಲಿ ಐದು ಇತರ ಸಾಧನಗಳಿಗೆ ಜೊತೆಯಾಗಿ ಹಂಚಿಕೊಂಡು ಸಿಂಕ್ ಮತ್ತು ಸಂಯೋಜನೆ ಮಾಡಬಹುದು. ಇದು ಆಪಲ್ ನ  IOS, ವಿಂಡೋಸ್, ಆಂಡ್ರಾಯ್ಡ್, ಅಥವಾ ಲಿನಕ್ಸ್ ಕಾರ್ಯ ವ್ಯವಸ್ಥೆಗಳು ಹೊಂದಿಕೊಳ್ಳಬಲ್ಲದಾಗಿದೆ. LookeeTV ಎಚ್ಡಿ ಪ್ಲೇಯರ್ ನ ಮಾರಾಟ ಬೆಲೆ ಸುಮಾರು 9950.00 ರೂಗಳಾಗಿದೆ.  ಹೆಚ್ಚಿನ ನೋಟಕ್ಕೆ ಜಾಲತಾಣ ವಿಳಾಸ:

ಗೂಗಲ್ ಟಿವಿ


ಜಗತ್ತಿನಲ್ಲಿ ನಾಲ್ಕುನೂರು ಕೋಟಿ ಜನರು ಟಿವಿ ವೀಕ್ಷಣೆಯಲ್ಲಿ ತೊಡಗುತ್ತಾರೆ. ಅಮೆರಿಕಾದ ಜನರು ದಿನಕ್ಕೆ ನಾಲ್ಕೈದು ಗಂಟೆಗಳ ಕಾಲ ಟಿವಿ ವೀಕ್ಷಣೆಯಲ್ಲಿ ತೊಡಗಿರುವುದು ಸಾಮಾನ್ಯ. ಆದರೆ ನೂರಾರು ಚಾನೆಲ್‌ಗಳ ಕಾರ್ಯಕ್ರಮ ಪಟ್ಟಿಯನ್ನು
ಜಾಲಾಡಿ, ನಮಗಿಷ್ಟವಾದ ಕಾರ್ಯಕ್ರಮದ ವೇಳೆಯನ್ನು ಪತ್ತೆ ಹಚ್ಚಿ, ಆ ವೇಳೆಗೆ ಸರಿಯಾಗಿ ಟಿವಿಯ ಮುಂದೆ ಕುಳಿತು ಟಿವಿ ವೀಕ್ಷಿಸುವುದು, ಈಗಿನ ಜನರಿಗೆ ಕಷ್ಟವೆನಿಸತೊಡಗಿದೆ.ಅಂತರ್ಜಾಲವು ಸುಲಭ ಶೋಧ ಸೌಕರ್ಯವನ್ನು ಕೊಡುವುದು, ನೇರ ಟಿವಿಪ್ರಸಾರವನ್ನೂ ಒದಗಿಸುತ್ತಿರುವ ಕಾರಣ, ಟಿವಿ ಕಾರ್ಯಕ್ರಮಗಳನ್ನು ಕಂಪ್ಯೂಟರಿನಲ್ಲಿ ನೋಡುವವರೂ ಹೆಚ್ಚುತ್ತಿದ್ದಾರೆ. ಇದನ್ನು ಮನಗಂಡು ಗೂಗಲ್  "ಗೂಗಲ್ ಟಿವಿ"ಯನ್ನು ಒದಗಿಸಲು ಯೋಜಿಸಿದೆ.ಇದರ ಮೂಲಕ ಟಿವಿಯ ಮೂಲಕವೇ ಅಂತರ್ಜಾಲವನ್ನೂ ನೋಡಬಹುದು. ಗೂಗಲ್ ಕ್ರೋಮಿನ ಮೂಲಕ ಶೋಧ ನಡೆಸಿ, ಟಿವಿ ಕಾರ್ಯಕ್ರಮಗಳನ್ನು ನೋಡಬಹುದು. ಆಟಗಳನ್ನೂ ಆಡಬಹುದು.ಇಲ್ಲವೇ ಅಂತರ್ಜಾಲದಲ್ಲಿರುವ ಬಂಧು ಮಿತ್ರರ ಚಿತ್ರಗಳನ್ನೂ ಟಿವಿಯಲ್ಲಿಯೇ
ನೋಡಬಹುದು. ಗೂಗಲ್ ಟಿವಿಯು ಎರಡು ಮಾದರಿಗಳಿದ್ದು.
ಮಾದರಿ ಒಂದು.  ಲಾಜಿಟೆಕ್ ರೆವ್ಯೂ ಸೆಟ್‌ಟಾಪ್ ಪೆಟ್ಟಿಗೆ
ಮಾದರಿ ಎರಡು.  ಸೋನಿ ಕಂಪೆನಿ ನಿರ್ಮಿತ ಗೂಗಲ್ ಟಿವಿಗಳೂ ಲಭ್ಯವಿದೆ.
ಜತೆಗೆ ಅಂತರ್ಜಾಲ ತಾಣಗಳು ಗೂಗಲ್ ಟಿವಿಗೆ ತಮ್ಮನ್ನು ಅಣಿಗೊಳಿಸಲು ಸಹಾಯವನ್ನೂ ಗೂಗಲ್ ಒದಗಿಸಲಿದೆ. ತಂತ್ರಾಂಶ ಅಭಿವೃದ್ಧಿ ಪಡಿಸುವವರು, ಗೂಗಲ್ ತಂತ್ರಾಂಶ ಅಭಿವೃದ್ಧಿ ಕಿಟ್‌ಗಳನ್ನು ಬಳಸಿ, ಹೊಸ ಸೇವೆಗಳಿಗೆ ಗೂಗಲ್ ಟಿವಿಯನ್ನು ಸಜ್ಜುಗೊಳಿಸಬಹುದು.

ಗೂಗಲ್ ಟಿವಿಯ ವೈಶಿಷ್ಠಗಳು 
ಟಿವಿಯಲ್ಲಿ ಆನ್ಲೈನ್ ವಿಡಿಯೋಗಳನ್ನು ವೀಕ್ಷಿಸಬಹುದು ಹಾಗೆ ಅಂರ್ತಜಾಲವನ್ನೂ ಶೋಧಿಸಬಹುದು. ಚಿತ್ರದಿಂದ ಚಿತ್ರಗಳನ್ನೂ ವೀಕ್ಷಿಸಬಹುದು. ಆಂಡ್ರಾಯ್ಡ್  ಅಥವಾ ಐಪೋನ್ ಮೊಬೈಲ್ ಅಪ್ಲಿಕೇಷನ್ ಲಭ್ಯವಿದ್ದು ಅದರಿಂದಲೇ ಗೋಗಲ್ ಟಿವಿಯನ್ನು ನಿಯಂತ್ರಿಸಬಹುದು. ಆಂಡ್ರಾಯ್ಡ್ ಅಪ್ಲಿಕೇಷನ್ ಅನ್ನು ಗೂಗಲ್ ಪ್ಲೇ ಜಾಲತಾಣದಿಂದ  ಡೌನ್ಲೋಡ್ ಮಾಡಿಕೊಂಡು ಕಾಲಕಾಲಕ್ಕೆ ಅಪ್ಡೇಟ್ ಮಾಡಿಕೊಳ್ಳಬಹುದಾಗಿದೆ. ಮಲ್ಟಿಮೀಡಿಯಾ ವಿಡಿಯೋ ಹಾಗೂ ಆಡಿಯೋ ಪಾರ್ಮಾಟ್ಗಳಾದ
 • Video
  H.264 (MP4, MKV, MOV, AVCHD, 3GP, TS), MPEG-4 part 2 (MP4, DIVX, AVI, 3GP, TS), WMV9 (ASF, AVI), MPEG-2 (MPG, TS), H.263 (MP4, 3GP, FLV).
 • Audio
  MP3, AAC, Vorbis/OGG, MIDI, PCM/WAV, WMA, FLAC, AC.
 • Images
  JPEG, GIF, PNG, BMP ಇನ್ನೂ ಇತರೆ ಪಾರ್ಮಾಟ್ ಗಳನ್ನು ಬೆಂಬಲಿಸುತ್ತದೆ.
ವೈಪೈನಿಂದಲೂ ಚಾಲೂ ಮಾಡಬಹುದಾಗಿದ್ದು. ಡಿವಿಆರ್ ಬಾಕ್ಸ್ ನಿಂದ ಒಂದು ಬಟನ್ ಕ್ಲಿಕ್ಕಿಸಿ ರೆರ್ಕಾಡ್ ಮಾಡಬಹುದು.
ಹೆಚ್ಚಿನ ವಿವರಗಳಿಗೆ ಜಾಲತಾಣ: http://www.google.com/tv ನೋಡಬಹುದು.
ಸೋನಿ ಕಂಪೆನಿ ನಿರ್ಮಿತ ಗೂಗಲ್ ಟಿವಿಯನ್ನು ಅಂರ್ತಜಾಲದ ಮೂಲಕ ಖರೀದಿಸಲು. http://goo.gl/ndTg2
ಲಾಜಿಟೆಕ್ ರೆವ್ಯೂ ಸೆಟ್‌ಟಾಪ್ ಪೆಟ್ಟಿಗೆ ಅಂರ್ತಜಾಲದ ಮೂಲಕ ಖರೀದಿಸಲು: http://goo.gl/pBfwZ