WEBSITE, INVENTORY SOFTWARE, CCTV CAMERA , COMPUTER & LAPTOP SALES & SERVICE, TABLETS, VIDEOGRAPHY, PHOTOGRAPHY, PROJECTOR ,VIDEO & AUDIO EDITING, VHS TO CD,DVD,BLURAY DISC CONVERSATION, DESIGNING & MANY MORE...
ಸುಸ್ವಾಗತ ನಿಮ್ಮ ಕಲ್ಪನೆ ನಮ್ಮ ಸೃಷ್ಠಿ !!! ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು.
ಈಗ ಮಲ್ಟಿಮೀಡಿಯವನ್ನು e-Speak ಕನ್ನಡದಲ್ಲಿ ಕೇಳಿ!

Saturday, June 30, 2012

ಗೂಗಲ್ ಡ್ರೈವ್ ಬಗ್ಗೆ ತಿಳಿದಿರಬೇಕಾದ 7 ಅಂಶಗಳು

 • ಗೂಗಲ್ ಡ್ರೈವ್ ನಿಂದ ನೀವು ಡೇಟಾ ಅಪ್ಲೋಡ್ ಮಾಡಿದ ಮೇಲೆ ಅವುಗಳು ಗೂಗಲ್ ನ ಸರ್ವರ್ಗಳಲ್ಲಿ ಶೇಖರಣೆಯಾಗುವುದರಿಂದ, ನಿಮ್ಮ ಡೇಟಾವನ್ನು ಎಲ್ಲಿಂದ ಬೇಕಾದರೂ ಉಪಯೋಗಿಸಬಹುದು.
 • ಗೂಗಲ್ ಡ್ರೈವ್ ನ ಆಪ್ ನಿಂದ ಕೆಲಸ ಮಾಡುವ ಈ ಕ್ಲೌಡ್ ಶೇರಿಂಗ್, ಇದನ್ನು ಉಪಯೋಗಿಸುವಾಗ, ನಿಮ್ಮ ಕಂಪ್ಯೂಟರ್ ನಲ್ಲಿ ವಿಂಡೋಸ್ ನ ಫೊಲ್ಡರ್ ಒಂದನ್ನು ಕ್ರಿಯೇಟ್ ಮಾಡುತ್ತದೆ. ಆ ಫೊಲ್ಡರ್ ನಲ್ಲಿ ಶೇಖರಿಸಿದ ಯಾವುದೇ ಮಾಹಿತಿ ನಿಮ್ಮ ಹಾರ್ಡ್ ಡಿಸ್ಕ್ ಹಾಗು ಗೂಗಲ್ ಡ್ರೈವ್ ನಲ್ಲೂ ಸ್ಟೋರ್ ಆಗುತ್ತದೆ. ಹೀಗಾಗಿ ನೀವು ಈ ಮಾಹಿತಿಯನ್ನು ಬೇರೆ ಕಂಪ್ಯೂಟರ್ ಹಾಗು ಮೊಬೈಲಿನಿಂದಲೂ ಪಡೆಯಬಹುದು.
 •  ಸದ್ಯಕ್ಕೆ 5GB ಡೇಟಾ ಸ್ಟೋರೇಜ್ ಫ್ರೀ ಆಗಿ ಕೊಡುತ್ತಿರುವ ಗೂಗಲ್, 100 GB ಡೇಟಾ ಸ್ಟೋರೇಜ್ ಬೇಕಿದ್ದರೆ ಪ್ರತಿ ತಿಂಗಳು 5 ಡಾಲರ್ ಬಾಡಿಗೆ ಕೊಟ್ಟರೆ ಸಾಕು.
 •  ಗೂಗಲ್ ಡ್ರೈವ್ ನಿಮ್ಮ ಮ್ಯಾಕ್, ಪಿಸಿ, ಆಂಡ್ರಾಯ್ಡ್ ಟ್ಯಾಬ್ಲೆಟ್ ಹಾಗು ಮೊಬೈಲುಗಳಿಗೂ ಡೌನ್ಲೋಡ್ ಮಾಡಬಹುದು.
 •  ಹಾರ್ಡ್ ಡಿಸ್ಕ್ ನಲ್ಲಿ ಯಾವ ಯಾವ ಡೇಟಾ ಸ್ಟೋರ್ ಮಾಡಿಕೊಳ್ಳಬಹುದೋ ಆ ಎಲ್ಲ ರೀತಿಯ ಡೇಟಾವನ್ನೂ ಗೂಗಲ್ ಡ್ರೈವ್ ನಲ್ಲಿ ಶೇಖರಿಸಬಹುದು.
 • ಗೂಗಲ್ ಡಾಕ್ಸ್ ಕೂಡಾ ಗೂಗಲ್ ಡ್ರೈವ್ ನಲ್ಲಿ ಇರುವುದರಿಂದ ನೀವು ಡಾಕ್ಯುಮೆಂಟ್ಸ್, ಸ್ಪ್ರೆಡ್ ಶೀಟ್ಸ್, ಹಾಗು ಪ್ರೆಸೆನ್ಟೇಶನ್ಗಳನ್ನೂ ಮಾಡಬಹುದಾಗಿದೆ.
 •  ಗೂಗಲ್ ಡ್ರೈವ್ ನಿಂದ ಗೂಗಲ್ ಪ್ಲಸ್ ನಲ್ಲಿ ಫೋಟೋಗಳನ್ನ ಅಟಾಚ್ ಮಾಡಬಹುದಾಗಿದೆ.
 •  https://drive.google.com/start#home

ಗೂಗಲ್ ಕನ್ನಡ ಭಾಷಾಂತರ ಆಂಡ್ರಾಯ್ಡ್ App

ವಿಶ್ವದ ಇಂಟರ್ನೆಟ್ ದೈತ್ಯ ಅಮೆರಿಕಾದ ಗೂಗಲ್ ಶುರುವಾದಾಗಿನಿಂದ ಹಲವಾರು ವಿಭಿನ್ನ ಪ್ರಯೋಗಗಳನ್ನು ಮಾಡುತ್ತಾ ಇಂಟರ್ನೆಟ್ ಬಳಕೆದಾರರಿಗೆ ಹೊಸ ಹೊಸ ಫೀಚರುಗಳು ಇರುವ ಟೂಲ್ ಗಳನ್ನು ಕೊಡುತ್ತಾ ಬಂದಿದೆ. ತನ್ನ ಗೂಗಲ್ ಲ್ಯಾಬ್ಸ್ ನಲ್ಲಿ ಪ್ರಯೋಗಗಳನ್ನು ಕೈಗೊಂಡು ಹೊಸದೆನಿಸುವ ಫೀಚರುಗಳನ್ನು ಕೊಡುವುದರಲ್ಲಿ ಗೂಗಲ್ ಫೇಮಸ್ ಆಗಿದ್ದು, ಯಾವುದೇ ಭಾಷೆಯ ಪದಗಳನ್ನು ಭಾಷಾಂತರಿಸಲು PC ಗಳಲ್ಲಿ ಬಳಸಬಹುದಾದ ಗೂಗಲ್ ಟ್ರಾನ್ಸ್ ಲೇಟ್ ಫೇಮಸ್ ಆಗಿರುವುದು ನಿಮಗೆಲ್ಲಾ ಗೊತ್ತೇ ಇದೆ.
ಈಗ ಇದೇ ರೀತಿಯ ಸೌಲಭ್ಯವನ್ನು ತನ್ನ ತಂತ್ರಾಂಶವಾದ ಆಂಡ್ರಾಯ್ಡ್ ಇರುವ ಟ್ಯಾಬ್ಲೆಟ್ ಹಾಗು ಸ್ಮಾರ್ಟ್ ಫೋನುಗಳಿಗೆ ಹೊರತಂದಿದ್ದು, ಸುಮಾರು 64 ಭಾಷೆಗಳ ಶಬ್ದಗಳನ್ನು ಭಾಷಾಂತರ ಮಾಡುವ ಸಾಮರ್ಥ್ಯ ಹೊಂದಿದೆ. ಅದೂ ಅಲ್ಲದೆ 40 ವಿಭಿನ್ನ ಭಾಷೆಗಳನ್ನು  ಮಾತಿನ ಮೂಲಕ ಅರ್ಥ ಮಾಡಿಕೊಂಡು ಅದನ್ನು ನಿಮಗೆ ಬೇಕಾದ ಭಾಷೆಯಲ್ಲಿ ತರ್ಜುಮೆ ಮಾಡಿಕೊಡುವ ವಿಶೇಷತೆ ಈ ಆಪ್ ನಲ್ಲಿದೆ. ಉದಾಹರಣೆಗೆ: ನೀವು ಇಂಗ್ಲಿಷ್ ನಲ್ಲಿ “computer ” ಎಂದು ಟೈಪ್ ಮಾಡಿದರೆ ಅಥವ ಹೇಳಿದರೆ, ಈ ಆಪ್ ನಿಮಗೆ ಕನ್ನಡಲ್ಲಿ ಅದಕ್ಕೆ ಸಮಾನಾರ್ಥಕ ಪದವಾದ “ಗಣಕಯಂತ್ರ” ಎಂದು ಭಾಷಾಂತರಿಸಿ ಕೊಡುತ್ತದೆ.
ಕನ್ನಡ, ಹಿಂದಿ, ತಮಿಳು, ತೆಲುಗು, ಗುಜರಾತಿ ಸೇರಿದಂತೆ ಪ್ರಮುಖ ವಿದೇಶೀ ಭಾಷೆಗಳಾದ  ಆಫ್ರಿಕಾನ್ಸ್ ಅರೇಬಿಕ್, ಚೀನೀ (ಸರಳ), ಚೀನೀ (ಸಾಂಪ್ರದಾಯಿಕ), ಡ್ಯಾನಿಶ್, ಡಚ್, ಇಂಗ್ಲೀಷ್, ಫ್ರೆಂಚ್, ಫಿನ್ನಿಶ್, ಫಿಲಿಪಿನೋ, ಜರ್ಮನ್, ಗ್ರೀಕ್, ಹೀಬ್ರೂ, ಹಂಗೇರಿಯನ್, ಜಪಾನಿ, ಇಟಾಲಿಯನ್, ಇಂಡೋನೇಷ್ಯನ್, ಐರಿಷ್, ಕೊರಿಯನ್, ಲ್ಯಾಟಿನ್, ಮಲಯ, ನಾರ್ವೇಜಿಯನ್, ಪರ್ಷಿಯನ್, ಪೋಲಿಷ್,  ಪೋರ್ಚುಗೀಸ್, ರೊಮಾನಿಯನ್, ಸ್ಲೊವೇನಿಯನ್, ರಶಿಯನ್, ಸರ್ಬಿಯನ್, ಸ್ಲೋವಾಕ್, ಸ್ಪಾನಿಷ್, ಸ್ವೀಡಿಷ್, ಥಾಯ್, ಟರ್ಕಿಷ್, ಉಕ್ರೇನ್, ಉರ್ದು ಭಾಷೆಗಳಿಗೆ ಭಾಷಾಂತರ ಮಾಡುತ್ತದೆ.
ಬೇರೆ ರಾಜ್ಯಗಳಿಗೆ ಹೋಗುವ ಅಥವಾ ವಿದೇಶಗಳಿಗೆ ಪ್ರಯಾಣ ಮಾಡುವ ವಿದ್ಯಾರ್ಥಿಗಳಿಗೆ, ಪ್ರವಾಸಿಗಳಿಗೆ ಹಾಗು ವ್ಯಾಪಾರ ಮಾಡಲು ಹೊಗುವವರಿಗೆ ಈ ಆಪ್ ತುಂಬಾ ಅನುಕೂಲಕರವಾಗಿದ್ದು ಈ ಉಚಿತ ಆಪ್ ಅನ್ನು ಗೂಗಲ್ ಪ್ಲೇ ವೆಬ್ಸೈಟಿನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು. http://goo.gl/awuXb

Friday, June 29, 2012

ಗೂಗಲ್ ಟ್ಯಾಬ್ಲೆಟ್

ಗೂಗಲ್ ತನ್ನ ಅತಿ ನಿರೀಕ್ಷಿತ ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ 7 ಇಂಚ್ ಟ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡಿದೆ.
ನೆಕ್ಸಸ್ 7 ಎಂದು ಹೆಸರಿಡಲಾಗಿರುವ ಈ ಟ್ಯಾಬ್ಲೆಟ್ ನಲ್ಲಿ ಆಂಡ್ರಾಯ್ಡ್ ನ ಹೊಸ ಆವೃತ್ತಿ ಜೆಲ್ಲಿ ಬೀನ್ ಇರಲಿದ್ದು, 199 ಡಾಲರ್ ಗೆ ಬಿಡುಗಡೆಯಾಗಿದೆ. (ಅಂದಾಜು 11 ಸಾವಿರ ರೂಪಾಯಿ).
ಅಮೇರಿಕಾ, ಕೆನಡಾ ಹಾಗು ಆಸ್ಟ್ರೇಲಿಯಾ ದೇಶಗಳಲ್ಲಿ ಆನ್ಲೈನ್ ಬಕಿಂಗ್ ಶುರುವಾಗಿದ್ದು ಜುಲೈ ಮಧ್ಯಭಾಗದ ವೇಳೆಗೆ ಭಾರತದ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ.
ಒಂದು ಕಡೆ ಆಪಲ್ ನ ಟ್ಯಾಬ್ಲೆಟ್, ಐಪ್ಯಾಡ್ ಬೆಲೆ ಶುರುವಾಗುವುದೇ 499 ಡಾಲರ್ ನಿಂದ. ಐಪ್ಯಾಡ್ 2 ಕೂಡ 25 ಸಾವಿರಕ್ಕೆ ಕಡಿಮೆ ಇಲ್ಲದ ಕಾರಣ ಗೂಗಲ್ ನ ನೆಕ್ಸಸ್ ಟ್ಯಾಬ್ಲೆಟ್ ಖಂಡಿತವಾಗಿಯೂ ಆಪಲ್ ಹಾಗು ಅಮೆಜಾನ್ ಕಿಂಡಲ್ ಟ್ಯಾಬ್ಲೆಟ್ ಬುಡಕ್ಕೆ ಸೈಲೆಂಟ್ ಆಗಿ ಬಿಸಿ ಮಾಡುವುದಂತೂ ಗ್ಯಾರಂಟಿ.
ನೆಕ್ಸಸ್ 7 ನ ವಿಶೇಷತೆಗಳು ಗೊತ್ತಾ:
 • ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ ತಂತ್ರಾಂಶ
 • 7 ಇಂಚ್ ನ HD ಸ್ಕ್ರೀನ್
 • 1280×800 ಪಿಕ್ಸೆಲ್ ರೆಸಲ್ಯೂಶನ್ IPS ಡಿಸ್ಪ್ಲೇ
 • 1.3 GHz ಕ್ವಾಡ್ ಕೋರ್ ಟೆಗ್ರಾ 3 ಪ್ರೋಸೆಸರ್
 • GeForce 12 ಕೋರ್ ಗ್ರಾಫಿಕ್ಸ್
 • 1 GB ರಾಮ್
 • ವಾಯ್ಸ್ ಸರ್ಚ್
 • 1.2 ಮೆಗಾ ಪಿಕ್ಸೆಲ್ ಮುಂಬದಿಯ ಕ್ಯಾಮರಾ
 • ವೈಫೈ, ಬ್ಲೂಟೂತ್ ಹಾಗು NFC (ನಿಯರ್ ಫೀಲ್ಡ್ ಕನೆಕ್ಟಿವಿಟಿ)
 • 9 ಗಂಟೆ ಬ್ಯಾಟರಿ ಬ್ಯಾಕಪ್
 • 300 ಗಂಟೆ ಸ್ಟಾಂಡ್ ಬೈ
 • 340 ಗ್ರಾಂ ತೂಕ
 • ಗೂಗಲ್ ಪ್ಲೇ ಸಂಪರ್ಕ (ಆಂಡ್ರಾಯ್ಡ್ ಆಪ್ ಗಳಿಗೆ)
 11 ಸಾವಿರಕ್ಕೆ ಬರುವ ಈ ಟ್ಯಾಬ್ಲೆಟ್ ಅನ್ನು ತೈವಾನ್ ನ ಅಸೂಸ್ ಉತ್ಪಾದನೆ ಮಾಡಿದ್ದು, ಸರಕಾರದ ಆಕಾಶ್ 2 ಅಗ್ಗದ ಟ್ಯಾಬ್ಲೆಟ್ ಬರುವುದಕ್ಕೆ ಕಾದು, ಕೊಳ್ಳುವ ಬದಲು ಭಾರತೀಯ ಗ್ರಾಹಕರು ಇನ್ನೆರಡು ವಾರ ಇದಕ್ಕೆ ಕಾದು ಉತ್ತಮವಾದ ನೆಕ್ಸಸ್ 7 ಕೊಳ್ಳುವುದು ಒಳಿತು. ಹೆಚ್ಚಿನ ಮಾಹಿತಿಗೆ ಜಾಲತಾಣ ವಿಳಾಸ: http://www.google.com/nexus/#/7
Related Posts Plugin for WordPress, Blogger...

Wednesday, June 27, 2012

ಆನ್‌ಲೈನ್‌ನಲ್ಲಿ ಭವಿಷ್ಯ ನಿಧಿ ಮಾಹಿತಿ ಪಡೆಯುವುದು ಹೇಗೆ?

ಭವಿಷ್ಯ ನಿಧಿ (Employees' Provident Fund) ಖಾತೆಗೆ ಇಲ್ಲಿಯವರೆಗೆ ಎಷ್ಟು ಹಣ ಜಮಾ ಆಗಿದೆ? ಅದರಲ್ಲಿ ನಿಮ್ಮ ಕಾಣಿಕೆ ಎಷ್ಟು, ಉದ್ಯೋಗದಾತರ ಕೊಡುಗೆ ಎಷ್ಟು? ಎಂಬ ವಿಷಯಗಳು ನಿಮಗೆ ತಿಳಿದಿದೆಯಾ? ಹೋಗಲಿ, ನಮ್ಮ ಖಾತೆಯಲ್ಲಿ ಎಷ್ಟು ಉಳಿತಾಯವಾಗಿದೆ, ಎಲ್ಲಿ ಈ ವಿಷಯಗಳನ್ನೆಲ್ಲ ತಿಳಿದುಕೊಳ್ಳಬೇಕು ಎಂಬುದಾದರೂ ತಿಳಿದಿದೆಯಾ?

ಇನ್ನು ಮುಂದೆ ಭವಿಷ್ಯ ನಿಧಿ(ಎಂಪ್ಲಾಯೀಸ್ ಪ್ಲಾವಿಡೆಂಟ್ ಫಂಡ್)ಯ ಬಗ್ಗೆ ತಿಳಿದುಕೊಳ್ಳಲು ಪಿಎಫ್ ಕಚೇರಿಗೆ ಎಡತಾಕುವ ಅಗತ್ಯವಿಲ್ಲ. ಇಂಟರ್ನೆಟ್ ಸಂಪರ್ಕವಿದ್ದರೆ ಇದ್ದಲ್ಲಿಂದಲೇ ಆನ್ ಲೈನ್ ಮುಖಾಂತರವೇ ಈ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. www.epfindia.com ಅಂತರ್ಜಾಲ ತಾಣ ಜಾಲಾಡಿ ನಮಗೆ ಅಗತ್ಯವಿರುವ ಸೇವೆಯ ಲಿಂಕ್ ಅನ್ನು ಕ್ಲಿಕ್ಕಿಸಿ ಮಾಹಿತಿಯನ್ನು ಪಡೆಯಬಹುದಾಗಿದೆ.

ನಿಮ್ಮ ಖಾತೆಯಿರುವ ಪ್ರಾದೇಶಿಕ ಪಿಎಫ್ ಕಚೇರಿಯನ್ನು ಆಯ್ಕೆ ಮಾಡಿಕೊಂಡು, ಯಾವುದೇ ನೊಂದಾವಣೆ ಕೂಡ ಇಲ್ಲದೆ ಅಗತ್ಯ ಮಾಹಿತಿಯನ್ನು ಪಡೆಯಬಹುದು. ಏನಾದರೂ ಕುಂದುಕೊರತೆಗಳಿದ್ದರೆ ವೆಬ್ ಸೈಟಿನಲ್ಲಿ ನೊಂದಾಯಿಸಿಕೊಂಡು ತೊಂದರೆಗಳನ್ನು ನಿವೇದಿಸಿಕೊಳ್ಳಬಹುದು.

ಮೊಬೈಲ್ ಸಂದೇಶ : ನಮ್ಮ ಖಾತೆಯಲ್ಲಿ ನಮೂದಿಸಲಾಗಿರುವ ಸರಿಯಾದ ಇಪಿಎಫ್ ನಂಬರ್ ತಿಳಿಸಿ ಮೊಬೈಲ್ ಮುಖಾಂತರವೂ ನೌಕರರ ಮತ್ತು ಮಾಲಿಕರ ಕೊಡುಗೆ ಎಷ್ಟು, ಮತ್ತು ಎಷ್ಟು ಜಮಾ ಆಗಿದೆ ಎಂಬ ವಿವರಗಳನ್ನು ಪಡೆಯಬಹುದು. ದೇಶದಲ್ಲಿರುವ 120 ಪಿಎಫ್ ಕಚೇರಿಗಳಲ್ಲಿ 112 ಕಚೇರಿಗಳು ಆನ್ ಲೈನ್ ಮೂಲಕ ಮಾಹಿತಿಯನ್ನು ನೌಕರರಿಗೆ ನೀಡುತ್ತಿವೆ. ಅದನ್ನು ಪಡೆಯುವ ಬಗೆ ನೌಕರರಿಗೆ ತಿಳಿದಿರಬೇಕು ಮತ್ತು ಅಂತರ್ಜಾಲ ಬಳಸುವ ಬಗೆ ಗೊತ್ತಿರಬೇಕು.

"ಸ್ಪರ್ಶ" ಮೂಲಕ ಕಾಪಿ ಮಾಡಿ!

ಒಂದು ಸಾಧನದಿಂದ ಕಡತಗಳನ್ನು ಇನ್ನೊಂದು ಸಾಧನಕ್ಕೆ ನಕಲು ಮಾಡುವುದು ತ್ರಾಸದಾಯಕವೇ ಸರಿ.ಬ್ಲೂಟೂತ್,ನಿಸ್ತಂತು ಸಂಪರ್ಕಗಳ ಮೂಲಕ ಈ ಕ್ರಿಯೆ ಸಾಕಷ್ಟು ಸರಳವಾಗಿದೆ.ಜತೆಗೆ ಆಂಡ್ರಾಯಿಡ್ ಅಪ್ಲಿಕೇಶನ್‌ಗಳನ್ನು ಡೆಸ್ಕ್‌ಟಾಪ್ ಕಂಪ್ಯೂಟರಿನಲ್ಲಿ ಇಳಿಸಿಕೊಂಡು,ತನ್ನ ಮೊಬೈಲ್ ಸಾಧನದಲ್ಲಿ ಅನುಸ್ಥಾಪಿಸಲು ಅನುವು ಮಾಡುವಂತಹ ಅನುಕೂಲತೆಗಳೂ ಈಗ ಲಭ್ಯ.ಸ್ಪರ್ಶ ಸಂವೇದಿ ತೆರೆಯುಳ್ಳ ಸಾಧನಗಳಲ್ಲಿ ಬಳಸಲು ತಂತ್ರಾಂಶವನ್ನು ಎಂಐಟಿಯ ಖ್ಯಾತ ಸಂಶೋಧಕ ಪ್ರಣವ್ ಮಿಸ್ತ್ರಿ ಸಿದ್ಧ ಪಡಿಸಿದ್ದಾರೆ. "ಸ್ಪರ್ಶ" ಎಂದೇ ತಂತ್ರಾಂಶದ ಹೆಸರು.ಇದನ್ನು ಎರಡೂ ಸಾಧನದಲ್ಲಿ ಅಳವಡಿಸಿಕೊಳ್ಳಬೇಕು.ಎರಡೂ ಸಾಧನದಲ್ಲಿ ಒಂದೇ ಫೋಲ್ಡರ್ ಬಳಸುತ್ತಿರಬೇಕು.ಆಗ ಒಂದು ಸಾಧನದ ತೆರೆಯನ್ನು ಸ್ಪರ್ಶಿಸುವ ಮೂಲಕ,ಕಡತವನ್ನು ಕಾಪಿ ಮಾಡಿಕೊಂಡು,ಅದನ್ನು ನಮ್ಮ ದೇಹದಲ್ಲಿ ಧರಿಸಿದೆವೆಯೋ ಎನ್ನುವಂತ ಪರಿಣಾಮ ಉಂಟು ಮಾಡಬೇಕು.ನಂತರ ಇನ್ನೊಂದು ಸಾಧನದ ತೆರೆಯನ್ನು ಮುಟ್ಟಿದರೆ ಸರಿ,ಕಡತ ಅಲ್ಲಿಗೆ ವರ್ಗಾವಣೆಯಾಗಲಾರಂಭಿಸುತ್ತದೆ.ಮನುಷ್ಯ-ಕಂಪ್ಯೂಟರ್ ನಡುವಣ ಸಂವಹನವನ್ನು ಸಲೀಸುಗೊಳಿಸಲು ಪ್ರಣವ್ ಮಿಸ್ತ್ರಿ ಇಂತಹ ಅನೇಕ ಯೋಜನೆಗಳನ್ನು ಟೆಡೆಕ್ಸ್ ಎನ್ನುವ ಸಮಾವೇಶದಲ್ಲಿ ಸೋದಾಹರಣವಾಗಿ ತೋರಿಸಿ,ಯುವಜನರ ಕಣ್ಮಣಿಯಾಗಿರುವುದು ನಿಮಗೆ ತಿಳಿದೇ ಇದೆ.ಈ ತಂತ್ರಾಂಶವನ್ನು ಆಪರೇಟಿಂಗ್ ವ್ಯವಸ್ಥೆಯ ತಂತ್ರಾಂಶದ ಭಾಗವಾಗಿಸಿ,ನಕಲು ಮಾಡುವುದನ್ನು ಸುಲಭವಾಗಿಸಬಹುದು ಎಂಬುದು ಮುಂದಿನ ಯೋಜನೆ.

Tuesday, June 26, 2012

ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ಟ್ಯಾಬ್ಲೆಟ್

ಆರ್ಟ್ ಆಫ್ ಲಿವಿಂಗ್ ನ ಸ್ಥಾಪಕರಾದ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ವಿಚಾರಧಾರೆಗಳಿರುವ ವೀಡಿಯೋಗಳು, ಆರ್ಟ್ ಆಫ್ ಲಿವಿಂಗ್ ಭಜನೆಗಳು, ಪುಸ್ತಕಗಳು ಇರುವ ಆಂಡ್ರಾಯ್ಡ್ ಟ್ಯಾಬ್ಲೆಟ್ ಒಂದನ್ನು ಚೆನ್ನೈ ಮೂಲದ EAFT ಟೆಕ್ನಾಲಜೀಸ್ ಎಂಬ ಕಂಪನಿ ಆರ್ಟ್ ಆಫ್ ಲಿವಿಂಗ್ ಜೊತೆ ಕೈ ಜೋಡಿಸಿ ಹೊರತಂದಿದೆ.
ಎನ್ಲೈಟನ್ ಎಂಬ ಹೆಸರಿನ ಈ ಟ್ಯಾಬ್ಲೆಟ್ ಆಂಡ್ರಾಯ್ಡ್ 2.3 ಹಾಗು ಆಂಡ್ರಾಯ್ಡ್ 4.0ಗಳಲ್ಲಿ ಬರಲಿದ್ದು ಸುಮಾರು 20 ಸಾವಿರ ರೂಪಾಯಿ ಮೌಲ್ಯದ ವೀಡಿಯೋ ಹಾಗು ಗುರೂಜಿಯ ಇತರೆ ಮಾಹಿತಿ ಇರುವ 16 GB ಕಾರ್ಡ್ ಉಚಿತವಾಗಿ ಇದರ ಜೊತೆ ಬರಲಿದೆ.
 • 7 ಇಂಚಿನ 5 ಪಾಯಿಂಟ್ ಮಲ್ಟಿ ಟಚ್ ಸ್ಕ್ರೀನ್
 • ಆಂಡ್ರಾಯ್ಡ್ 2.3 ತಂತ್ರಾಂಶ
 • 1.2 GHz, ARM ಕಾರ್ಟೆಕ್ಸ್ A8 ಪ್ರೋಸೆಸರ್
 • 512 MB ರಾಮ್
 • ವಿಡಿಯೋ ಕ್ಯಾಲ್ಲಿಂಗ್ ಇರುವ VGA ಮುಂಬದಿಯ ​​ಕ್ಯಾಮೆರಾ
 • 16 GB ಆಂತರಿಕ ಮೆಮೊರಿ, 32 GB ವಿಸ್ತರಿಸಬಹುದಾದ ಮೆಮೊರಿ
 • ವೈಫೈ,ಬ್ಲೂಟೂತ್, USB ಹಾಗು ಡಾಂಗಲ್ ಮೂಲಕ 3G ಸಂಪರ್ಕ
 • ಮಿನಿ HDMI ಪೋರ್ಟ್
 • ಬ್ಯಾಟರಿಯ ಸಾಮರ್ಥ್ಯ 4000 mAh
 ಈ ಟ್ಯಾಬ್ಲೆಟ್ ನ ಬೆಲೆ 16.999 ರೂಪಾಯಿ.
http://www.eaft.in/      http://www.artofliving.org 

ಓದಲು ಪ್ರೇರೇಪಿಸುವ ತಾಣ

http://www.goodreads.com ಅಂತರ್ಜಾಲ ತಾಣವು ಉತ್ತಮ ಪುಸ್ತಕಗಳನ್ನು ಓದಲು ಜನರನ್ನು ಪ್ರೇರೇಪಿಸುವ ಉದ್ದೇಶವನ್ನು ಹೊಂದಿದ ಅಂತರ್ಜಾಲ ತಾಣವಾಗಿದೆ.ಇಲ್ಲಿ ಜನರು ತಾವು ಓದಿದ ಪುಸ್ತಕಗಳ ಜಾಡು ಹಿಡಿದಿಡಲು ಅನುಕೂಲಕರವಾಗಿದೆ.ಹಾಗೆಯೇ,ತಮ್ಮ ಮಿತ್ರರಿಂದ ಪುಸ್ತಕ ಓದಿಗೆ ಸಲಹೆ ಪಡೆಯಲು,ತಾವು ಸ್ವತ: ಓದಿದ ಪುಸ್ತಕಗಳನ್ನು ಇತರರಿಗೆ ಶಿಫಾರಸು ಮಾಡಲೂ ಕೂಡಾ ಅಂತರ್ಜಾಲ ತಾಣ ಅನುಕೂಲ ಕಲ್ಪಿಸುತ್ತದೆ. ತಾಣವು www.discovereads.com ಎಂಬ ಇನ್ನೊಂದು ತಾಣವನ್ನು ತನ್ನದಾಗಿಸಿಕೊಂಡಿದೆ. www.discovereads.com ಜನರೋದುವ ಪುಸ್ತಕಗಳು,ಅವರು ಇತರತಿಗೆ ಮಾಡಿದ ಶಿಫಾರಸ್ಸು ಇವುಗಳ ಮೇಲೆ ಕಣ್ಣಿರಿಸಿ, ಅವುಗಳ ಮುಖಾಂತರ ಉತ್ತಮ ಪುಸ್ತಕಗಳನ್ನು ಶಿಫಾರಸು ಮಾಡುತ್ತದೆ.

ಕೃತಕ ಕ್ಯಾಮರ

 ಡಿಜಿಟಲ್ ಕ್ಯಾಮರಾಗಳು ಈಗ ಸರ್ವೇಸಾಮಾನ್ಯವಾಗಿವೆ. ಅವುಗಳಲ್ಲೂ ಹಲವು ನಮೂನೆಗಳಿವೆ. ಪರಿಣತರು ಬಳಸುವುದು ಎಸ್‌ಎಲ್‌ಆರ್ (SLR = Single Lens Reflect) ಕ್ಯಾಮರಾಗಳು. ಈ ಕ್ಯಾಮರಾಗಳ ಪ್ರಮುಖ ಸೌಲಭ್ಯ ಎಂದರೆ ಹಲವು ನಮೂನೆಯ ಲೆನ್ಸ್‌ಗಳನ್ನು (ಮಸೂರ) ಜೋಡಿಸಬಹುದು. ಈಗೀಗ ಇಂತಹ ಕ್ಯಾಮರಾಗಳ ಬೆಲೆ ೨೦ ಸಾವಿರ ರೂ.ಗಳಿಂದ ಪ್ರಾರಂಭವಾಗುತ್ತವೆ. ಅಂದರೆ ಸಾಮಾನ್ಯ ಮಂದಿಯ ಕೈಗೆಟುಕಬಲ್ಲವು. ಈ ಕ್ಯಾಮರಾಗಳನ್ನು ಬಳಸಲು ಪರಿಣತಿ ಬೇಕು. ಅವುಗಳಲ್ಲಿ ಇರುವ ಶಟ್ಟರ್ ವೇಗ, ಅಪೆರ್ಚರ್ ಅಗಲ, ಐಎಸ್‌ಓ ಸಂಖ್ಯೆ ಇತ್ಯಾದಿಗಳನ್ನು ಕಲಿತುಕೊಳ್ಳಬೇಕು. ಒಂದು ಘಟನೆಯನ್ನು ಚಿತ್ರೀಕರಿಸಿದಾಗ ಅದು ಬೇರೆ ಬೇರೆ ಆಯ್ಕೆಗಳಲ್ಲಿ ಹೇಗೆ ಮೂಡಿಬರಹುದು ಎಂಬ ಮಾಹಿತಿ ತಿಳಿದಿರಬೇಕು. ಇದನ್ನು ಕೃತಕ ಕ್ಯಾಮರಾ ಮೂಲಕ ಕಲಿಸುವ ಜಾಲತಾಣ camerasim.com.

Saturday, June 23, 2012

ಇಂಟರ್ನೆಟ್ ನ ಸ್ಪೀಡ್ ಟೆಸ್ಟ್ ಮಾಡಿಇತ್ತೀಚಿನ ದಿನಗಳಲ್ಲಿ ಅತಿವೇಗದ ಇಂಟರ್ನೆಂಟ್ ಭಾರತದಲ್ಲಿ ಲಭ್ಯವಿದೆ. ಇಂಟರ್ನೆಟ್ ಸೌಲಭ್ಯ ಕೊಡುವ ಕಂಪನಿಗಳಿಗೇನೂ ಕಡಿಮೆಯಿಲ್ಲ. ಜೊತೆಗೆ ಹತ್ತಾರು ಆಫ‌ರ್ ಗಳು. ಆದಾಗ್ಯೂ ಸಹ ಕೆಲವೊಮ್ಮೆ ನಾವು ಕೊಂಡ ಕನೆಕ್ಷನ್ ಗೂಗಲ್ ಮುಖಪುಟವನ್ನೂ ಕೂಡ ತೆರೆಯಲು ಅಳುತ್ತದೆ. ಈ ಕಂಪೆನಿಗಳ SLA (Service Level Agreement) ಅಥವಾ ಕರಾರಿನ ಪ್ರಕಾರ ಅವು ತಿಂಗಳಿಗೆ ಏನಿಲ್ಲವೆಂದರೂ ೯೯% ಸಂಪರ್ಕ ಸಾಧ್ಯತೆಯನ್ನು ಕೊಡುತ್ತೇವೆಂದು ಆಶ್ವಾಸನೆ ನೀಡಿರುತ್ತವೆ ಜೊತೆಗೆ ಹಣಕ್ಕೆ ತಕ್ಕಂತೆ ವೇಗ ಕೂಡ ನಿರ್ಧಾರವಾಗಿರುತ್ತದೆ.
ಹಣ ಕೊಟ್ಟು ಕನೆಕ್ಷನ್ ಪಡೆದ ನಂತರ ಆಗಾಗ ಇಂಟರ್ನೆಟ್ ವೇಗ ಸರಿಯಿದೆಯೇ, ನಮಗೆ ಐ.ಎಸ್.ಪಿ ಹೇಳಿದಷ್ಟು uptime ಸಿಗುತ್ತಿದೆಯೇ ಎಂದು ಗ್ರಾಹಕರಾದ ನಾವು ಪರೀಕ್ಷಿಸಿಕೊಳ್ಳಬೇಕಾಗುತ್ತದೆ.
ಇಂಟರ್ನೆಟ್ ವೇಗ ಪರೀಕ್ಷಿಸಲು ಸುಲಭ ಮಾರ್ಗ  www.speedtest.net  ಎಂಬ ವೆಬ್‌ಸೈಟ್ ಬಳಸುವುದು.

ಇಲ್ಲವಾದಲ್ಲಿ, ಯಾವುದಾದರೂ ಒಂದು ದೊಡ್ಡಗಾತ್ರದ ಫೈಲನ್ನು ಡೌನ್ಲೋಡ್ ಮಾಡುತ್ತಾ ಅದರ ಡೌನ್ಲೋಡ್ ವೇಗ ಪರೀಷಿಸುವುದು. ಫಲಿತಾಂಶದಲ್ಲಿ ಸಂದೇಹ ಬರುವಷ್ಟು ಸ್ಪೀಡ್ ಕಡಿಮೆ ಇದ್ದರೆ ಮರೆಯದೆ ನಿಮ್ಮ ಐ.ಎಸ್.ಪಿ ಗೆ ಒಂದು ಕಾಲ್ ಹಾಕಿ.

ಪರಿಸರಪ್ರಿಯರಾಗಿ

 ಜೂನ್ ೫ ವಿಶ್ವ ಪರಿಸರ ದಿನ. ಪ್ರಪಂಚಾದ್ಯಂತ ಪರಿಸರದ ಬಗ್ಗೆ ಜನರಿಗೆ ತಿಳಿವಳಿಕೆ ಮೂಡಿಸಲು ಆ ದಿನ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ವಿಶ್ವ ಪರಿಸರ ಕಾರ್ಯಕ್ರಮಗಳ ಬಗ್ಗೆ ಒಂದು ಜಾಲತಾಣವಿದೆ. ಅದರ ವಿಳಾಸ www.unep.org. ವಿಶ್ವ ಪರಿಸರ ದಿನ, ಜೀವ ವೈವಿಧ್ಯ, ಹವಾಮಾನದ ಬದಲಾವಣೆ, ಹಲವಾರು ಬಹುಮಾಧ್ಯಮ ಕಡತಗಳು, ಪರಿಸರ ಕಾರ್ಯಕ್ರಮಗಳ ಕ್ಯಾಲೆಂಡರ್, ಹೀಗೆ ಹಲವಾರು ಉಪಯುಕ್ತ ಮಾಹಿತಿಗಳು ಈ ಜಾಲತಾಣದಲ್ಲಿ ಲಭ್ಯ.

Wednesday, June 20, 2012

Google ಸ್ಟ್ರೀಟ್‌ ವ್ಯೂ : ಜಗತ್ತಿನ ಗಲ್ಲಿ ಗಲ್ಲಿಗಳನ್ನೂ ಜಾಲಾಡಿ

ಸ್ಟ್ರೀಟ್‌ ವ್ಯೂನ ಸಹಾಯದಿಂದ 360 ಡಿಗ್ರಿ ಆಯಾಮದ ಚಿತ್ರಣದ ಮೂಲಕ ಪ್ರಪಂಚದಾದ್ಯಂತ ಸ್ಥಳಗಳನ್ನು ಪರಿಶೋಧಿಸಲು Google Maps ನಿಮಗೆ ಅನುಮತಿಸುತ್ತದೆ. ನೀವು ಉಪಹಾರಮಂದಿರಗಳನ್ನು ಪರಿಶೀಲಿಸಬಹುದು, ನೆರೆಹೊರೆಯವರನ್ನು ಭೇಟಿಯಾಗಬಹುದು, ಅಥವಾ ನಿಮ್ಮ ಮುಂದಿನ ಪ್ರಯಾಣದ ಯೋಜನೆ ಹಾಕಬಹುದು.

ಸ್ಟ್ರೀಟ್‌ ವ್ಯೂ ಬಳಕೆ

Google Maps ನಲ್ಲಿ ಕಂಡುಬರುವ ಸ್ಟ್ರೀಟ್‌ ವ್ಯೂ 360 ಡಿಗ್ರಿ ಮಟ್ಟದ ಗಲ್ಲಿ ಹಂತದ ಚಿತ್ರಣಗಳ ಮೂಲಕ ಜಗತ್ತಿನ ಉದ್ದಗಲಕ್ಕೂ ಇರುವ ಸ್ಥಳಗಳಿಗೆ ಭೇಟಿ ನೀಡಲು ನಿಮಗೆ ಅವಕಾಶ ಕಲ್ಪಿಸಿಕೊಡುತ್ತದೆ. ಸ್ಟ್ರೀಟ್‌ ವ್ಯೂ ಅನ್ನು ಬಳಸಿಕೊಂಡು ನೀವು ಉಪಹಾರಮಂದಿರಕ್ಕೆ ಭೇಟಿ ನೀಡುವ ಮೊದಲೇ ಅದರ ಬಗ್ಗೆ ಮಾಹಿತಿ ಸಂಗ್ರಹಿಸಬಹುದು. ನಿಮ್ಮ ಮುಂದಿನ ರಜಾದಿನಗಳಲ್ಲಿ ಭೇಟಿ ನೀಡಲು ಸೂಕ್ತವೆನಿಸುವ ಮನಮೋಹಕ ಸ್ಥಳಗಳನ್ನು ಹುಡುಕಿಕೊಂಡು ಜಗತ್ತಿನಾದ್ಯಂತ ಒಮ್ಮೆ ಅಲೆದಾಡಬಹುದು. ಅಥವಾ ನೀವು ಭೇಟಿ ನೀಡಬಹುದಾದ ಅಕ್ಕಪಕ್ಕದ ಸ್ಥಳಗಳನ್ನೂ ಒಮ್ಮೆ ಪರಿಶೀಲಿಸಬಹುದು.

ಮತ್ತೇಕೆ ತಡ, ಈಗಲೇ ಪ್ರಾರಂಭಿಸಿ !

Google Maps ನಲ್ಲಿ ಪೆಗ್‌ಮ್ಯಾನ್‌‌ ಎಳೆಯುವುದು
 • ಈಗ Google Maps ನಲ್ಲಿ ಗಲ್ಲಿ ಹಂತದ ಚಿತ್ರಣವನ್ನು ವೀಕ್ಷಿಸುವ ಬಗೆ ಹೇಗೆ ಎಂಬುದನ್ನು ನೋಡೋಣ. ಮೊದಲು ನೀವು ವೀಕ್ಷಿಸ ಬಯಸುವ ಸ್ಥಳಕ್ಕೆ ಪೆಗ್‌ಮ್ಯಾನ್‌ ಅನ್ನು ಕ್ಲಿಕ್ ಮಾಡಿ ಮತ್ತು ಎಳೆದು ತನ್ನಿ. ಆಗ ಸ್ಟ್ರೀಟ್‌ ವ್ಯೂ ಚಿತ್ರಣದೊಂದಿಗಿನ ರಸ್ತೆಗಳು ನೀಲಿ ಅಂಚಿನೊಂದಿಗೆ ನಿಮ್ಮೆದುರು ಕಾಣಿಸಿಕೊಳ್ಳುತ್ತವೆ.
 • ಸ್ಟ್ರೀಟ್‌ ವ್ಯೂ ಚಿತ್ರಣ ಲಭ್ಯವಿರುವ ಪ್ರದೇಶಗಳಲ್ಲಿ ದಾರಿಯುದ್ದಕ್ಕೂ ಝೂಮ್ ಮಾಡುವ ಮೂಲಕ ಕೂಡ ನೀವು ಸ್ಟ್ರೀಟ್‌ ವ್ಯೂ ಅನ್ನು ಪ್ರವೇಶಿಸಬಹುದಾಗಿದೆ.
ಸ್ಟ್ರೀಟ್‌ ವ್ಯೂ ಜೊತೆ ನಿಮ್ಮ ಒಡನಾಟವನ್ನು ಪ್ರಾರಂಭಿಸಲು Google Maps ಗೆ ಭೇಟಿ ನೀಡಿ.
ಇನ್ನಷ್ಟು ಮಾಹಿತಿಗಳಿಗಾಗಿ ದಯವಿಟ್ಟು Google Maps ಬಳಕೆದಾರ ಮಾರ್ಗದರ್ಶನದ ಮೇಲೊಮ್ಮೆ ಕಣ್ಣು ಹಾಯಿಸಿ.

ಸ್ಟ್ರೀಟ್‌ ವ್ಯೂನಲ್ಲೊಂದು ಸುತ್ತು

ಸ್ಟ್ರೀಟ್‌ ವ್ಯೂ ನಿಯಂತ್ರಣ ಫಲಕ

ತಿರುಗಿಸಿ

ಸ್ಟ್ರೀಟ್‌ ವ್ಯೂನಲ್ಲಿ ನಿಮ್ಮ ದೃಷ್ಟಿಯನ್ನು ಹೊರಳಿಸಲು ಈ ಕೆಳಕಂಡಂತೆ ಮಾಡಿ,
 • ನಿಯಂತ್ರಣ ಫಲಕನಿಯಂತ್ರಣ ಫಲಕದ ಮೇಲ್ಭಾಗದ ಎಡ ಮೂಲೆಯಲ್ಲಿ ಕಾಣಿಸುವ ಚಕ್ರವನ್ನು ಬಳಸಿ
 • ಕೀಬೋರ್ಡ್ ಬಾಣದ ಗುರುತುಗಳುಅಥವಾ ನಿಮ್ಮ ಕೀಬೋರ್ಡ್‌ನಲ್ಲಿನ ಎಡ ಮತ್ತು ಬಲ ಬಾಣದಗುರುತುಗಳನ್ನು ಬಳಸಿ
 • ಕಂಪ್ಯೂಟರ್ ಮೌಸ್ಅಥವಾ ನಿಮ್ಮ ಮೌಸ್‌ನ ಮುಖಾಂತರ ಕ್ಲಿಕ್ ಮತ್ತು ಡ್ರ್ಯಾಗ್ ಮಾಡಿ.
 ಸ್ಟ್ರೀಟ್‌ ವ್ಯೂ ನಲ್ಲಿ ಇರಿಸಲಾದ ಬಿಳಿ ಬಾಣಗಳು

ನಡೆಯಿರಿ

ಗಲ್ಲಿಯಲ್ಲಿ ನಡೆದಾಡಬೇಕೇ? ಹಾಗಾದರೆ,
 • ಸ್ಟ್ರೀಟ್‌ ವ್ಯೂದಲ್ಲಿನ ಬಾಣದ ಗುರುತುಗಳುಗಲ್ಲಿಯಲ್ಲಿರಿಸಲಾದ ಯಾವುದಾದರೂ ಒಂದು ಬಿಳಿ ಬಣ್ಣದ ಬಾಣದ ಗುರುತುಗಳನ್ನು ಕ್ಲಿಕ್ ಮಾಡಿ
 • ಕೀಬೋರ್ಡ್ ಬಾಣದ ಗುರುತುಗಳುಅಥವಾ ನಿಮ್ಮ ಕೀಬೋರ್ಡ್‌ನಲ್ಲಿನ ಮೇಲಿನ ಮತ್ತು ಕೆಳಗಿನ ಬಾಣದ ಗುರುತುಗಳನ್ನು ಬಳಸಿ.
 ಸ್ಟ್ರೀಟ್‌ ವ್ಯೂನಲ್ಲಿನ ಚಪ್ಪಟೆಯಾದ ಆಕೃತಿಗಳು

ಜಂಪ್‌ ಮಾಡಿ

ಜಂಪ್‌ ಮಾಡಲು ಮತ್ತು ಸ್ಥಳವನ್ನು ವೀಕ್ಷಿಸಲು,
 • ಸ್ಟ್ರೀಟ್‌ ವ್ಯೂ ಚಪ್ಪಟೆಯಾದ ಆಕೃತಿನಿಮ್ಮ ಮೌಸ್ ಸೂಚಿಸುತ್ತಿರುವ ಆಯತಾಕಾರದ 'ವ್ಯಾಫೆಲ್' ಅಥವಾ ಗುಂಡಗಿನ 'ಚಪ್ಪಟೆ' ಆಕೃತಿಯ ಮೇಲೆ ಕ್ಲಿಕ್ ಮಾಡಿ.
 • ವರ್ಧಕ ಮಸೂರಚಪ್ಪಟೆ ಆಕೃತಿಯಲ್ಲಿಯೇ ವರ್ಧಕ ಮಸೂರವಿದ್ದರೆ, ಅದನ್ನು ಕ್ಲಿಕ್ ಮಾಡುವುದರಿಂದ ಪ್ರಸ್ತುತ ಚಿತ್ರವನ್ನು ಅನ್ನು ಝೂಮ್ ಮಾಡುತ್ತದೆ. 
Google ಸ್ಟ್ರೀಟ್‌ ವ್ಯೂ ಜಾಲತಾಣಕ್ಕೆ ಬೇಟಿ: http://maps.google.co.in/intl/kn/help/maps/streetview/index.html

ಆಂಡ್ರಾಯ್ಡ್ ಮೋಬೈಲ್ ಗೆ ಬರುವ ವೈರಸ್ ಗಳು

ಡ್ರಾಯ್ಡ್ 09 -----> ಬ್ಯಾಂಕಿಂಗ್ ಫಿಶಿಂಗ್ ಅಪ್ಲಿಕೇಷನ್
ಬೂಟ್ ನೆಟ್ -----> ಆನ್ ಲೈನ್ ಬ್ಯಾಂಕಿಂಗ್ ಮಾಹಿತಿ ಕದಿಯಲು 
ಟಾಪ್ ಸ್ನೇಕ್ -----> ಜಿಪಿಎಸ್ ನ ವ್ಯವಸ್ಥೆಯನ್ನು ಹಾಳುಮಾಡುವ ವೈರಸ್
ಫೇಕ್ ಪ್ಲೇಯರ್ 13 -----> ತಾನೇ ಸ್ವಯಂ ಚಾಲಿತವಾಗಿ ಅನಾಮಿಕ ಸಂಖ್ಯೆ ಗಳಿಗೆ ಎಸ್ ಎಂ ಎಸ್ ಕಳುಹಿಸುವ ವೈರಸ್ 
ಎಂ.ಎಸ್.ಒ -----> ಮೊಬೈಲ್ ಮೂಲಕ ನಡೆಯುವ ಹಣಕಾಸು ವಹಿವಾಟು ಕದಿಯುವ ವೈರಸ್.
ಬಿಟ್ ಇನ್ಪೋ ಸ್ಟೀಲರ್ -----> ಮೆಮೊರಿ ಕಾರ್ಡ್ಗಳಿಗೆ ಹರಡುವ ವೈರಸ್
ಮೈ ಅವರ್ ನೆಟ್, ಡ್ರೀಮ್, ಜೆಮಿನಿ  ಹೀಗೆ ಇನ್ನೂ ಹಲವಾರು ವೈರಸ್ ಗಳಿದ್ದು. ವೈರಸ್ ಗಳಿಂದ ಮೊಬೈಲ್ ಪೋನ್ ಗಳನ್ನು ರಕ್ಷಿಸಿಕೊಳ್ಳಲು ಇರುವ ಬುಲ್ ಗಾರ್ಡ್ ಮೊಬೈಲ್ ಸೆಕ್ಯೂರಿಟಿ, ಕ್ಯಾಸ್ಟ್ರಸ್ಕಿ ಮೊಬೈಲ್ ಸೆಕ್ಯೂರಿಟಿ,ಇ ಎಸ್ ಇ ಟಿ ಮುಂತಾದ 20 ಕ್ಕಿಂತ ಹೆಚ್ಚಿನ ವೈರಸ್ ಗಳಿಂದ ರಕ್ಷಿಸುವ ತಂತ್ರಾಂಶಗಳು ಗೂಗಲ್ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಗೂಗಲ್ ಪ್ಲೇ ಜಾಲತಾಣದಲ್ಲಿ ವೈರಸ್ ಗಳಿಂದ ರಕ್ಷಿಸುವ ಉಚಿತ ತಂತ್ರಾಂಶಗಳಿಗಾಗಿ ಬೇಟಿ ನೀಡಿ :http://goo.gl/1pDt7

ಎಟಿಎಂ ಕಾರ್ಡ್ ಬದಲು ಮೊಬೈಲ್ ಬಳಕೆ

'ಆಟೊಮ್ಯಾಟಿಕ್ ಟೆಲ್ಲರ್ ಮೆಷಿನ್' ಅರ್ಥಾತ್ ಸ್ವಯಂಚಾಲಿತ ಹಣ ವಿತರಿಸುವ ಯಂತ್ರ ಅಂದರೆ ಎಟಿಎಂ. (ATM) ಯಂತ್ರದಿಂದ ಹಣ ಪಡೆಯಲು ಇನ್ನು ಮುಂದೆ 'ಡೆಬಿಟ್ ಕಾರ್ಡ್' ಆಗಲೀ 'ಕ್ರೆಡಿಟ್ ಕಾರ್ಡ್' ಆಗಲೀ ಇರಲೇಬೇಕು ಎಂದೇನಿಲ್ಲ!
ಹೌದು ನಿಮ್ಮ ಮೊಬೈಲ್ ಪೋನ್ ಬಳಸಿಯೇ ಎಟಿಎಂನಿಂದ ನಿಮಗೆ ಬೇಕಾದಷ್ಟು ಹಣ ಪಡೆಯಬಹುದು! ಎಲ್ಲಾದರೂ ಉಂಟೆ? ಇದು ಹೇಗೆ ಸಾಧ್ಯ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ.

ಬ್ರಿಟನ್ ಮೂಲದ ಮೊಬೈಲ್ ಅಪ್ಲಿಕೇಷನ್ ಅಭಿವೃದ್ದಿಪಡಿಸುವ ತಜ್ಞರು 'ಗೆಟ್ ಕ್ಯಾಷ್' ಎನ್ನುವ ಹೊಸತಂತ್ರಾಂಶ ಆಧಾರಿತ ಸೌಲಭ್ಯವೊಂದನ್ನು ಅಭಿವೃದ್ದಿಪಡಿಸಿದ್ದಾರೆ. ಸ್ಮಾರ್ಟ್ ಪೋನ್ ನಲ್ಲಿ ಈ ತಂತ್ರಾಂಶ ಅನುಸ್ಥಾಪಿಸಿಕೊಂಡರೆ ಪ್ರತಿ ಬಾರಿ 100 ಪೌಂಡ್ ನಷ್ಟು (ಸದ್ಯ ಈ ಅಪ್ಲಿಕೇಷನ್ ಬ್ರಿಟನ್ ನಲ್ಲಿ ಮಾತ್ರ ಬಿಡುಗಡೆಯಾಗಿದೆ) ನಗದನ್ನು 'ಎಟಿಎಂ' ನಿಂದ ಡ್ರಾ ಮಾಡಿಕೊಳ್ಳಬಹುದು.
ರಾಯಲ್ ಬ್ಯಾಂಕ್ ಆಫ್ ಸ್ಕಟ್ಲೆಂಡ್ ( ಆರ್ ಬಿ ಎಸ್ ) ತನ್ನ ಗ್ರಾಹಕರಿಗೆ ಇತ್ತೀಚೆಗೆ 'ಗೆಟ್ ಕ್ಯಾಷ್' ಅಪ್ಲಿಕೇಷನ್ ಪರಿಚಯಿಸಿದೆ. ಬ್ಯಾಂಕಿನ 1.80 ಕೋಟಿ ಗ್ರಾಹಕರು ಈ ಸೌಕರ್ಯ ಪಡೆಯಬಹುದು ಎಂದು ಹೇಳಿದೆ. ಆದರೆ, ಈಗಿರುವ ಸಮಸ್ಯೆ ಏನೆಂದರೆ, ಈ ಅಪ್ಲಿಕೇಷನ್ ಬಳಸಿ ಕೇವಲ 'ಆರ್ ಬಿ ಎಸ್' "ಎಟಿಎಂ"ನಿಂದ ಮಾತ್ರ ನಗದು ಪಡೆದುಕೊಳ್ಳಬಹುದು. ಇತರೆ ಬ್ಯಾಂಕ್ 'ಎಟಿಎಂ'ಗಳಿಗೂ ಈ ಸೌಲಭ್ಯ ವಿಸ್ತರಿಸುವ ಕುರಿತು ಬ್ಯಾಂಕ್ ಚಿಂತನೆ ನಡೆಸುತ್ತಿದೆ. ಸದ್ಯ ಲಂಡನ್ ನಲ್ಲಿರುವ 8 ಸಾವಿರ ಆರ್ ಬಿ ಎಸ್ ಎಟಿಎಂಗಳಲ್ಲಿ  "ಗೆಟ್ ಕ್ಯಾಷ್" ಅಪ್ಲಿಕೇಷನ್ ಬಳಕೆಗೆ ಅವಕಾಶವಿದೆ ಎಂದು ಆರ್ ಬಿ ಎಸ್ ಬ್ಯಾಂಕ್ ನ ಜಾಲತಾಣದಲ್ಲಿ ಪ್ರಕಟಿಸಿದೆ. 
ಸ್ಮಾರ್ಟ್ ಪೋನ್ ನಲ್ಲಿ "ಗೆಟ್ ಕ್ಯಾಷ್" ಅಪ್ಲಿಕೇಷನ್ ತೆರೆದು ವಿತ್ ಡ್ರಾ ಆಯ್ಕೆ ಮಾಡಿಕೊಂಡು ಎಷ್ಟು ಮೊತ್ತಬೇಕು ಎಂಬುದನ್ನು ನಮೂದಿಸಿದರೆ " ಆರ್ ಅಂಕಿಗಳ ಗುಪ್ತ ಸಂಖ್ಯೆಯನ್ನು ಕೇಳೂತ್ತದೆ. ಆ ಸಂಖ್ಯೆಯನ್ನು ದಾಖಲಿಸುತ್ತಿದ್ದಂತೆ 'ಎಟಿಎಂ' ನಿಂದ ಹಣ ಹೊರಬಹುತ್ತದೆ. ಈ ಸೇವೆಗಾಗಿ ಗ್ರಾಹಕರು ಬ್ಯಾಂಕ್ ಗೆ ಮೊಬ್ಐಲ್ ಸಂಖ್ಯೆ ನೀಡಿ ನೋಂದಾಯಿಸಿಕೊಳ್ಳಬೇಕು. ಪ್ರತಿ ವಹಿವಾಟಿಗೂ ಗುಪ್ತ ಸಂಖ್ಯೆ ಬದಲಾಗುತ್ತಿರುತ್ತದೆ. ಬ್ಯಾಂಕ್ ಮೂಲಕ ಗಂಟೆಗಳ ವಾಯಿದೆ ಹೊಂದಿರುತ್ತದೆ.
ಈ ಆಪ್ಲಿಕೇಷನ್ ಬಳಸಿ ಈಗ ಒಮ್ಮೆ 100 ಪೌಂಡ್ ಮಾತ್ರ ವಿತ್ ಡ್ರಾ ಮಾಡಿಕೊಳ್ಳಬಹುದು. ಗ್ರಾಹಕರ ಪ್ರತಿಕ್ರಿಯೆ ಆದರಿಸಿ 250 ಪ್ಔಂಡ್ ವರೆಗೂ ವಿಸ್ತರಿಸಲಾಗುವುದು ಎಂದು ಬ್ಯಾಂಕ್ ಹೇಳಿದೆ. ಬ್ಯಾಂಕ್ ನಿಂದ ಬರುವ ಗುಪ್ತ ಸಂಖ್ಯೆಯನ್ನು ಸ್ನೇಹಿತರಿಗೆ ಕಳುಹಿಸಿದರೆ ಅವರು ಕೂಡ ಎಟಿಎಂ ನಿಂದ ನಗದು ಡ್ರಾ ಮಾಡಿಕೊಳ್ಳಬಹುದಾಗಿದೆ. ಈ ಸೇವೆಗಾಗಿ ಐಪೋನ್, ಐಪ್ಯಾಡ್, ಬ್ಲಾಕ್ ಬೆರಿ ಸೇರಿದಂತೆ ಆಂಡ್ರಾಯ್ಡ್ ಸ್ಮಾರ್ಟ್ ಪೋನ್ ಗಳಿಗೆ ಬಳಕೆದಾರರು ಗೆಟ್ ಕ್ಯಾಷ್ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಳ್ಳುವಂತೆಯೂ ಬ್ಯಾಂಕ್ ತನ್ನ ಖಾತೆದಾದದರಿಗೆ ಹೇಳಿದೆ. 

ಆರ್ ಬಿ ಎಸ್ ಬ್ಯಾಂಕಿನ ಜಾಲತಾಣದಲ್ಲಿ ಹೆಚ್ಚಿನ ಮಾಹಿತಿ ಹಾಗೂ ತಂತ್ರಾಂಶಗಳಿಗಾಗಿ ಕೊಂಡಿ: http://goo.gl/4emb6

ಭಾರತದಲ್ಲಿಯ ಎಲ್ಲಾ ರಾಷ್ಟ್ರೀಯ, ಅಂತರಾಷ್ಟ್ರೀಯ ಬ್ಯಾಂಕ್ ಗಳೂ ಇಂತಹ ಸೇವೆಯನ್ನು ನೀಡುವುದಾದರೇ ಹೇಗಿರುತ್ತದೆ ಯೋಚಿಸಿ? 

Monday, June 18, 2012

ಜಾನಪದ ಲೋಕ

ಪ್ಯಾಟಿ ಮಂದಿ ನೋಡಿ, ಹಳ್ಳಿ ಲೈಪು.......
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರಾಮನಗರದಿಂದ 8 ಕಿ.ಮೀ. ದೂರದಲ್ಲಿ ಬಲಗಡೆಗೆ 15 ಎಕರೆ ವಿಶಾಲವಾದ ಜಾಗದಲ್ಲಿ ಜಾನಪದ ಲೋಕ ಸೃಷ್ಟಿಯಾಗಿದ್ದು, ಪ್ರವಾಸಿಗರನ್ನು ಜನಪದ ವಿಶೇಷತೆಗಳಿಂದ ಸ್ವಾಗತಿಸುತ್ತಿದೆ. ಮುಖ್ಯ ದ್ವಾರದಲ್ಲಿ ನಗುತ್ತಿರುವ ನಿಗಿ ನಿಗಿ ಸೂರ್ಯ ನಂದಿ ಧ್ವಜಗಳ ಮಧ್ಯೆ "ಬನ್ನಿ ಒಳ ಬನ್ನಿ" ಎನ್ನುತ್ತಾನೆ. 1994ರ ಮಾ.12ರಂದು ಆರಂಭವಾದ ಈ ವಿಸ್ಮಯ ಲೋಕ ಜಗತ್ತಿನ ಪ್ರಮುಖ ಸಾಂಸ್ಕೃತಿಕ ಲೋಕಗಳಲ್ಲೊಂದು ಎಂಬುದು ಕನ್ನಡಿಗ ಹೆಮ್ಮೆ. 'ಗಜಮುಖನೇ ಗಣಪತಿಯೇ ನಿನಗೆ ವಂದನೆ' ಎಂದೆನ್ನೆಲು ಅಲ್ಲೊಂದು ಪುಟ್ಟದಾದ, ಚೊಕ್ಕವಾದ ಗಣೇಶ ಮಂದಿರ. ಅನಂತರ ಅನಾವರಣಗೊಳ್ಳುತ್ತೆ ನಮ್ಮ ಮುಂದೊಂದು ಅನುಪಮ 'ಜಾನಪದ ಜಗತ್ತು'.
ಏನುಂಟು..... ಏನಿಲ್ಲ.......
ಲೋಕಮಹಲ್, ಶಿಲ್ಪಮಾಳ,ಆಯಗಾರರ ಮಾಳ,ತೊಟ್ಟಿಮನೆ,ಕಂಬಗಳ ಮನೆ ಹೀಗೆ ಒಂದೊಂದು ವಸ್ತು ಸಂಗ್ರಹಾಗರಕ್ಕೆ ಒಂದೊಂದು ವಿಶ್ಇಷ್ಟ ಹೆಸರು.ದಾರಿ ದಿಕ್ಕು ತೋರಲು ಗೋಕುಲಾಷ್ಟಮಿ ಕೃಷ್ಣನ ಪಾದದ ಗುರುತು. ತೊಗಲು ಗೊಂಬೆ, ಆಯುಧಗಳು, ಮದುವೆ,ಸೀಮಂತ ಮುಂತಾದ ಶಾಸ್ತ್ರಗಳಲ್ಲಿ ಬಳಸುವ ವಸ್ತುಗಳು,ಜನಪದ ವಾದ್ಯಗಳು, ಆಟಿಕೆಗಳು, ವರ್ಣಚಿತ್ರಗಳು, ಗ್ರಾಮೀಣ ಕಸಬುಗಳ ಉಪಕರಣಗಳು, ತಾಳೆ ಗರಿಗಳು ಇನ್ನೂ ಮುಂತಾದ 500ಕ್ಕೂ ಹೆಚ್ಚು ಜಾನಪದ ಸಲಕರಣೆಗಳನ್ನು ಕಲಾತ್ಮಕವಾಗಿ ವೈಜ್ಞಾನಿಕವಾಗಿ ಜತನದಿಂದ ಕಾಪಾಡಲಾಗಿದೆ. ಇಲ್ಲಿ 1200 ವರ್ಷಗಳಿಗೂ ಹಳೆಯದಾದ ಶಾಸನ, ವೀರಗಲ್ಲು, ಲಿಪಿಗಳು ಕಾಣಸಿಗುತ್ತವೆ. 
ಇಂದು ಎಕರೆ ಜಾಗದಲ್ಲಿ ನಿರ್ಮಿತವಾಗಿರುವ ಸ್ವಚ್ಛಂದ ಕೊಳ, ನೆಮ್ಮದಿಯಿಂದ ಈಜುತ್ತಿರುವ ಬಾತು ಕೋಳಿಗಳು, ಮತ್ತು ಮಕ್ಕಳಿಗಾಗಿ ದೋಣಿ ವಿಹಾರ 1000 ಜನ ಕುಳಿತುಕೊಳ್ಳಲು ಸಾಧ್ಯವಾಗುವಂಥ ಗ್ರೀಕ್ ಮಾದರಿಯ ರಂಗ ಮಂದಿರ, ಅಲ್ಲೆ ವಸ್ತುಗಳನ್ನು ತಯಾರು ಮಾಡುತ್ತಿರುವ ಕರಕುಶಲ ಕರ್ಮಿಗಳು, ತಮ್ಮಷ್ಟಕ್ಕೆ ತಾವೇ ಗೀಗಿ ಪದ ಹಾಡಿಕೊಳ್ಳುತ್ತಿರುವ ಜನಪದರು, ನೃತ್ಯಾಭ್ಯಾಸ ಮಾಡುತ್ತಿರುವ ಕಲಾವಿದರು ಎಲ್ಲರನ್ನೂ ಕಾಣಬಹುದು.
ಕೇಳಲು.......... ನೋಡಲು..........
ಅಚ್ಚರಿ ಮತ್ತು ಅಷ್ಟೇ ಹೆಮ್ಮೆ ಪಡಬಹುದಾದ ಮತ್ತೊಂದು ವಿಷಯವೆಂದರೆ ಜಾನಪದ ಕಲೆಗಳ ಬಗ್ಗೆ ಒಂದೇ ಸಮನೆ 1800 ಗಂಟೆಗಳ ಕಾಲ ಕುಳಿತು ನೋಡಬಹುದಾದಷ್ಟು ವಿಡಿಯೋ ಸಂಗ್ರಹವಿದೆ. ಸುಮಾರು 800 ಗಂಟೆಗಳಷ್ಟು ಬಿಡುವಿಲ್ಲದೇ ಕೇಳಬಹುದಾದಷ್ಟು ಧ್ವನಿಮುದ್ರಿಕೆಗಳ ಸಂಗ್ರಹವಿದೆ. ಇಲ್ಲಿ ವಿಡಿಯೋ ಥಿಯೇಟರ್ ಕೂಡ ಇದೆ.ಬಗಲಲ್ಲೆ ಒಂದು ಜಾನಪದ ಸಂಶೋಧನಾ ಕೇಂದ್ರವಿದ್ದು, ಸಂಬಂಧಪಟ್ಟ ಕಲೆಗಳಲ್ಲಿ ಡಿಪ್ಲೋಮಾ ಮತ್ತು ಸರ್ಟಿಫಿಕೇಟ್ ಕೋರ್ಸ್ ಗಳನ್ನು ನಡೆಸಲಾಗುತ್ತಿದೆ.
ಜಾನಪದ ಸೊಗಡು ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಈ ಲೋಕದಲ್ಲಿ ನಡೆಸುತ್ತಿರುವ ಕೋರ್ಸ್ ಗಳು, ಸಾಹಸ ಮೆಚ್ಚುವಂಥದ್ದು. ಮಂಗಳವಾರ ಹೊರತುಪಡಿಸಿ ಮಿಕ್ಕೆಲ್ಲ ದಿನಗಳಂದು ಬೆಳಿಗ್ಗೆ 9.30 ರಿಂದ ಸಂಜೆ 5.30 ರವರೆವಿಗೂ ಚಟುವಟಿಕೆಯಿಂದಿರುವ ಈ ಕೆಂದ್ರದಲ್ಲಿ ಪ್ರತಿ ತಿಂಗಳ ಕೋನೆ ಭಾನುವಾರ ಹಲವಾರು ಜನಪದ ಕಲೆಗಳ ಪ್ರದರ್ಶನ ಇರುತ್ತದೆ. ಜಾನಪದ ಸಂಸ್ಕೃತಿ ಮೇಲೆ ಬೆಳಕು ಚೆಲ್ಲುವಂಥ ಈ ಕಾರ್ಯಕ್ರಮ ತಪ್ಪದೇ ವೀಕ್ಷಿಸುವ ಮನಸ್ಸು ಎಲ್ಲರದ್ದಾಗಲಿ.
200 ವರ್ಷಗಳ ಹಳೆಯ ಬಂಡಿ, ಜೇಡಿ ಮಣ್ಣಿನಿಂದಾದ ಮಡಕೆ, ಕುಡಿಕೆ, ದೀಪದ ಬುಡ್ಡಿಗಳು ಇಂದಿನ ಐಟಿ-ಬಿಟಿ ಮಂದಿ ಜೀವನ ಹಾಗೂ ಹಳ್ಳಿ ಜನರ ಝೀವನಕ್ಕೆ ಇರುವ ಅಜ-ಗಜಾಂತರ ವ್ಯತ್ಯಾಸದ ಬಗ್ಗೆ ಚಿಂತನೆ ಹಚ್ಚುತ್ತವೆ. ತರಾವರಿ ತಿಂಡಿ-ತಿನಿಸುಗಳೂ ಇಲ್ಲಿ ಲಭ್ಯ. 
ಹೀಗೇ ಬನ್ನಿ
ಜಾನಪದ ಪರಿಷತ್ ನಡೆಸುತ್ತಿರುವ ಈ ಜಾನಪದ ಲೋಕ 15 ಎಕರೆ ಪ್ರದೇಶ ಹೊಂದಿದೆ. ಇಲ್ಲಿನ ಬಯಲು ರಂಗ ಮಂದಿರದಲ್ಲಿ ಜಾನಪದ ಸಂಸ್ಕೃತಿಯ ತರಬೇತಿ ನಡೆಯುತ್ತದೆ. ಬೆಂಗಳೂರಿನಿಂದ 53 ಕಿ.ಮಿ. ದೂರದಲ್ಲಿದ್ದು, ಬಸ್ ವ್ಯವಸ್ಥೆ ಇದೆ.
ಭೇಟಿ ನೀಡಿ.. http://www.janapadaloka.org/


ಮೈಸೂರು ಅರಮನೆ 3D

ಮೈಸೂರು ಅಂಬಾವಿಲಾಸ ಅರಮನೆ ಜಗದ್ವಿಖ್ಯಾತ. ಇದೊಂದನ್ನೇ ನೋಡಲೆಂದು ಭಾರತಕ್ಕೆ ಬರುವ ಪ್ರವಾಸಿಗರಿದ್ದಾರೆ. ನೀವು ಮೈಸೂರು ಅರಮನೆ ನೊಡಿದ್ದೀರಾ? ನೋಡಿಲ್ಲವಾದರೆ ಅದನ್ನು ನೋಡಬೇಕಾದರೆ ಮೈಸೂರಿಗೇ ಹೋಗಬೇಕಾಗಿಲ್ಲ. ಅರಮನೆಯ ಪೂರ್ತಿ ಮೂರು ಆಯಾಮಗಳ ಚಿತ್ರ ಹಾಗೂ ವಾಸ್ತವ ಸದೃಶ ಪ್ರತಿಕೃತಿ ನೋಡಬೇಕಾದರೆ ನೀವು mysorepalace.tv ಜಾಲತಾಣಕ್ಕೆ ಭೇಟಿ ನೀಡಬೇಕು. ಅರಮನೆಯ ಒಳಗೆಲ್ಲ ಓಡಾಡಿದಂತೆ ನಿಮಗೆ ಭಾಸವಾಗುವ ಪ್ರತಿಕೃತಿಗಳು ಇಲ್ಲಿವೆ. ಅರಮನೆಯ ಬಗ್ಗೆ ಇತರೆ ಮಾಹಿತಿಗಳೂ ಇಲ್ಲಿವೆ. ಅರಮನೆ ನೋಡಿದವರಿಗೂ ನೋಡಿದ ಅನುಭವ ಮತ್ತೊಮ್ಮೆ ಮೂಡುವಂತೆ ಮಾಡುವ ಅತ್ಯತ್ತಮ ಜಾಲತಾಣ ಇದು. ಕನ್ನಡ ಭಾಷೆಯಲ್ಲೂ ಇದೆ.

ಭ್ರಮಾಲೋಕ

ಕೆಲವು ಚಿತ್ರಗಳನ್ನು ನೋಡಿದಾಗ ಅದರೊಳಗೆ ಇನ್ನೋನೋ ಇದ್ದಂತೆ ಭಾಸವಾಗುತ್ತದೆ. ಮತ್ತೆ ಕೆಲವು ಚಿತ್ರಗಳು ಚಲನೆಯ ಭ್ರಮೆಯನ್ನು ಮೂಡಿಸುತ್ತವೆ. ನಿಜವಾಗಿ ನೋಡಿದರೆ ಚಿತ್ರ ಚಲಿಸುತ್ತಿರುವುದಿಲ್ಲ. ಇಂತಹ ಭ್ರಮೆಗಳನ್ನು ಸೃಷ್ಟಿಸುವ ಹಲವು ನಮೂನೆಯ ಚಿತ್ರಗಳನ್ನು ನೋಡಬೇಕಾದರೆ ನೀವು ಭೇಟಿ ನೀಡಬೇಕಾದ ಜಾಲತಾಣ www.moillusions.com. ಇಲ್ಲಿರುವ ಚಿತ್ರಗಳನ್ನು ಹಲವು ವಿಭಾಗಗಳಲ್ಲಿ ನೀಡಲಾಗಿದೆ. ನಿಮಗಿಷ್ಟವಾದ ವಿಭಾಗಕ್ಕೆ ನೀವು ಭೇಟಿ ನೀಡಬಹುದು.

ಗ್ರಹ, ನಕ್ಷತ್ರ, ಬ್ರಹ್ಮಾಂಡ

ನಿಮ್ಮ ಮನೆಯಲ್ಲಿ ಶಾಲೆಗೆ ಹೋಗುವ ಮಕ್ಕಳಿದ್ದಾರೆಯೇ? ಗ್ರಹ, ನಕ್ಷತ್ರ, ಬ್ರಹ್ಮಾಂಡಗಳ ಬಗ್ಗೆ ಪ್ರಶ್ನೆ ಕೇಳುತ್ತಿದ್ದಾರೆಯೇ? ಕುತೂಹಲಭರಿತ ಮಕ್ಕಳಿಗೆ ಸೌರವ್ಯೂಹ, ಗ್ರಹ, ನಕ್ಷತ್ರಗಳ ಬಗ್ಗೆ ತಿಳಿಹೇಳುವ ಕೆಲವು ಅಂತರಜಾಲ ತಾಣಗಳಿವೆ. ಅವು www.solarviews.com, kids.msfc.nasa.gov, www.dustbunny.com/afk.ಇಲ್ಲಿ ಖಗೋಳಶಾಸ್ತ್ರದ ತಿಳಿವಳಿಕೆ ಪಡೆಯವುದರ ಜೊತೆ ಕೆಲವು ಅಟಗಳನ್ನೂ ಅಡಬಹುದು.

ಒಡಿಸ್ಸಿ360.ಕಾಂ ಪುಸ್ತಕದಂಗಡಿ

ಇಂಟರ್ನೆಟ್, ಮೊಬೈಲ್, ಟ್ಯಾಬ್ಲೆಟ್, ಐಪ್ಯಾಡ್ ಜಮಾನಾದಲ್ಲಿ ನಮಗಿಷ್ಟವಾದ ಪುಸ್ತಕ ಕೊಳ್ಳಲು ಅಂಗಡಿಯಿಂದ ಅಂಗಡಿಗೆ ಓಡಾಡಬೇಕಾಗೇ ಇಲ್ಲ. ಆನ್ ಲೈನ್ ಪುಸ್ತಕದಂಗಡಿ ಹೊಕ್ಕುಬಿಟ್ಟರೆ ಬೆರಳತುದಿಯಲ್ಲೇ ಕೊಳ್ಳುವ ವಹಿವಾಟು ಮಾಡಿಮುಗಿಸಬಹುದು. ಇದಕ್ಕಾಗಿ ಕೂಡ ಆ ಈ ಆನ್ ಲೈನ್ ಸ್ಟೋರ್ ಶೋಧಿಸಬೇಕಿಲ್ಲ. ಒಡಿಸ್ಸಿ ಇಂಡಿಯಾ ಲಿ.ನ ಒಡಿಸ್ಸಿ360.ಕಾಂ 50 ಲಕ್ಷಕ್ಕೂ ಹೆಚ್ಚಿನ ವೈವಿಧ್ಯಮಯ ಪುಸ್ತಕಗಳನ್ನು ನಿಮ್ಮ ಮುಂದೆ ಹರವಿ ಕೂಡುತ್ತದೆ. ಆಯ್ಕೆ ಮಾಡಬೇಕಾದ ಕೆಲಸ ಮಾತ್ರ ನಿಮ್ಮದು.

ಆರ್ಚರ್ ನಂಥ ಸಾರ್ವಕಾಲಿಕ ಶ್ರೇಷ್ಠ ಪುಸ್ತಕಗಳಿಂದ ದಿ ಡಾ ವಿನ್ಸಿ ಕೋಡ್ ಪುಸ್ತಕ ಬರೆದಂಥ ಡಾನ್ ಬ್ರೌನ್ ಬರೆದ ಪುಸ್ತಕಗಳವರೆಗೆ ಎಲ್ಲ ಪುಸ್ತಕಗಳು ಇಲ್ಲಿ ಲಭ್ಯ. ಪುಸ್ತಕಗಳನ್ನು ಓದುತ್ತಲೇ ನಮ್ಮನ್ನು ನಾವು ವಿಭಿನ್ನ ದೃಷ್ಟಿಕೋನಗಳಿಂದ ನೋಡುವಂತಹ, ನಮ್ಮ ಜೀವನವನ್ನೇ ಹೊಸದಾಗಿ ಶೋಧಿಸಿಕೊಳ್ಳುವಂತಹ ಸಾಹಿತ್ಯ, ಸಂಸ್ಕೃತಿಯಿಂದ ಶ್ರೀಮಂತವಾಗಿರುವಂಥ ಹೊತ್ತಗೆಗಳು ಕಂಪ್ಯೂಟರ್ ಸ್ಕ್ರೀನ್ ಮೇಲೆ ಹರವಿಕೊಳ್ಳುತ್ತವೆ.

ಇಂದಿನ ದಿನಗಳಲ್ಲಿ ಪುಸ್ತಕ ಓದುವವರೇ ಕಡಿಮೆಯಾಗಿದ್ದಾರೆ ಎಂದು ಹಲಬುವವರು ಹಲಬುತ್ತಲೇ ಇರಲಿ ಎನ್ನುವಂತೆ ಪುಸ್ತಕಲೋಕ ಜನಮಾನಸವನ್ನು ಹೊಕ್ಕಿದೆ. ಉದ್ಯೋಗ, ಶಿಕ್ಷಣ, ಆರೋಗ್ಯ, ಮಕ್ಕಳು, ವಿಜ್ಞಾನ, ತಂತ್ರಜ್ಞಾನ, ಯೋಗ, ವ್ಯಕ್ತಿತ್ವ ವಿಕಸನ, ಪ್ರೀತಿ ಪ್ರೇಮ, ಡೇಟಿಂಗ್, ಲೈಂಗಿಕತೆ... ವಿಷಯಸೂಚಿ ಯಾವುದೇ ಇರಲಿ ಎತ್ತಿಕೊಂಡು ಓದುವಂಥ ಸ್ಥಿತಿ ನಿರ್ಮಾಣವಾಗಿದೆ. ಬಿಟ್ಟಿ ಓದುವವರ ಸಂಖ್ಯೆ ಕುಗ್ಗುತ್ತಿದ್ದು, ಕೊಂಡು ಓದುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವ ಸಂದರ್ಭದಲ್ಲಿ ನಿಮ್ಮನ್ನು ಹಿಡಿದಿಡುವಂಥ ಅನೇಕಾನೇಕ ಪುಸ್ತಕಗಳು ಓಡಿಸ್ಸೆಯಲ್ಲಿವೆ.
ಅದರಲ್ಲೂ ಮಕ್ಕಳ ಕಲ್ಪನೆಗೆ ಇಂಬು ಹಚ್ಚುವ ಅಮರಚಿತ್ರ ಕಥಾ, ಪೌರಾಣಿಕ, ಐತಿಹಾಸಿಕ, ಸಾಹಿತ್ಯ, ಜಾನಪದ ಪುಸ್ತಕಗಳು, ಎಲ್ಲ ವಯಸ್ಸಿನವರನ್ನು ಸೆಳೆಯುತ್ತಿರುವ ಗ್ರಾಫಿಕ್ಸ್ ನಲ್ಲಿರುವ ಕಾದಂಬರಿಗಳು ಇಲ್ಲಿ ದೊರೆಯುತ್ತವೆ. ದೇಶದ ಯಾವುದೇ ಪುಸ್ತಕದ ಅಂಗಡಿಗಳಲ್ಲಿ ದೊರೆಯದಂಥ ವೈವಿಧ್ಯಮಯ ಪುಸ್ತಕಗಳು ಇಲ್ಲಿ ಲಭ್ಯವಿವೆ. ಇಷ್ಟು ಮಾತ್ರವಲ್ಲ, ಆಕರ್ಷಕ ರಿಯಾಯಿತಿ ಮತ್ತು ಅನೇಕ ಕೊಡುಗೆಗಳನ್ನು ಒಡಿಸ್ಸಿ ಪುಸ್ತಕ ಕೊಳ್ಳುವವರಿಗೆ ನೀಡುತ್ತಿದೆ. ಪುಸ್ತಕದ ರವಾನೆ ಕೂಡ ಉಚಿತ.

ಪುಸ್ತಕಗಳ ಹೊರತಾಗಿ, ಈ ಇ-ಕಾಮರ್ಸ್ ಪೋರ್ಟಲ್ ನಲ್ಲಿ ಎಲ್ಲಾ ಬಗೆಯ ಸಿನೆಮಾ ಮತ್ತು ಆಟಿಕೆಗಳು ದೊರೆಯುತ್ತವೆ. ಮದುವೆ, ಹುಟ್ಟುಹಬ್ಬ, ಮುಂಜಿ ಸಂದರ್ಭ ಯಾವುದೇ ಇರಲಿ ಮೆಚ್ಚಿನವರಿಗೆ ಉಡುಗೊರೆ ನೀಡಲು ಒಡಿಸ್ಸಿ ಗಿಫ್ಟ್ ವೋಚರ್ ಗಳು ಇಲ್ಲಿ ದೊರೆಯುತ್ತವೆ. ಇಲ್ಲಿ ಪುಸ್ತಕ ಮತ್ತು ಇತರೆ ವಸ್ತುಗಳನ್ನು ಓಡಿಸ್ಸೆ ಆನ್ ಲೈನ್ ಪುಸ್ತಕ ಮಳಿಗೆಯಲ್ಲಿ ಕೊಳ್ಳುವುದೇ ಒಂದು ವಿಭಿನ್ನ, ವಿಶಿಷ್ಟ ಅನುಭವ. ಕಿರಿಕಿರಿ ಇಲ್ಲದ ವಿಶಿಷ್ಟ ಅನುಭವಕ್ಕೆ ನಿಮ್ಮನ್ನು ನೀವು ತೆರೆದುಕೊಳ್ಳಿ. ದಿನದ ಇಪ್ಪತ್ನಾಲ್ಕು ಗಂಟೆಯೂ ಒಡಿಸ್ಸಿ ಪುಸ್ತಕದಂಗಡಿ ನಿಮಗಾಗಿ ಬಾಗಿಲು ತೆರೆದಿದೆ.

Sunday, June 17, 2012

ಏಸರ್ ಐಕಾನಿಯ ಟ್ಯಾಬ್ ಆಂಡ್ರಾಯ್ಡ್ 4.0 ಟ್ಯಾಬ್ಲೆಟ್

ಲ್ಯಾಪ್ಟಾಪ್ ಉತ್ಪಾದನೆಯಲ್ಲಿ ಸಾಕಷ್ಟು ಹೆಸರುವಾಸಿಯಾಗಿರುವ ಏಸರ್ ಕಂಪನಿಯು, ಐಕಾನಿಯ ಬ್ರಾಂಡ್ ನ ಸರಣಿಯಲ್ಲಿ ಹೊಸ ಟ್ಯಾಬ್ಲೆಟ್ ಅನ್ನು ಅನಾವರಣಗೊಳಿಸಿದೆ.
ಏಸರ್ ಐಕಾನಿಯ ಟ್ಯಾಬ್ A110 ಹೆಸರಿನ ಈ ಆಂಡ್ರಾಯ್ಡ್ 4.0 ಟ್ಯಾಬ್ಲೆಟ್ ನ ವಿಶೇಷ ಏನೆಂದರೆ, ಇದು ಖ್ಯಾತ ಗ್ರಾಫಿಕ್ ಕಾರ್ಡ್ ಉತ್ಪಾದಕ NVIDIAದ, NVIDIA ಟೆಗ್ರಾ 3 ಪ್ರೋಸೆಸರ್ ಹೊಂದಿದೆ.
ಇದರ ಫೀಚರುಗಳು ಈ ರೀತಿ ಇವೆ:
 • 7 ಇಂಚ್ ನ ಕೆಪಾಸಿಟಿವ್ ಮಲ್ಟಿ ಟಚ್ ಸ್ಕ್ರೀನ್
 • 1024 x 600 ಪಿಕ್ಸೆಲ್ ರೆಸಲ್ಯೂಶನ್
 •  ಲೈಟ್ ಸೆನ್ಸರ್ ಹಾಗು ಪ್ರಾಕ್ಸಿಮಿಟಿ ಸೆನ್ಸರ್
 • ಕ್ವಾಡ್ ಕೋರ್ NVIDIA ದ ಟೆಗ್ರಾ 3 ಪ್ರೋಸೆಸರ್
 • 1 GB ರಾಮ್
 • 2 ಮೆಗಾಪಿಕ್ಸೆಲ್ ಮುಂಬದಿಯ ಕ್ಯಾಮರಾ(ವಿಡಿಯೋ ಕಾಲಿಂಗ್ ಅನುಕೂಲ ಒದಗಿಸುತ್ತದೆ)
 • 8000 MB ಆಂತರಿಕ ಮೆಮೊರಿ
 • 32 GB ವರೆಗೂ ವಿಸ್ತರಿಸಬಹುದಾದ ಮೆಮೊರಿ
 • 3G ಸೌಲಭ್ಯ
 • ಬ್ಲೂಟೂತ್ 3.0,ವೈಫೈ,USB 2.0, ಜಿಪಿಎಸ್
 • ಸ್ಟೀರಿಯೋ ಸ್ಪೀಕರ್ ಗಳು
 • ಆಂತರಿಕ ಯೂಟ್ಯೂಬ್ (ಡೌನ್ಲೋಡ್ ಮಾಡಿ ವೀಡಿಯೋ ನೋಡುವ ಪ್ರಮೇಯ ಇರುವುದಿಲ್ಲ)
 • ಫೇಸ್ ಬುಕ್ ಹಾಗು ಟ್ವಿಟರ್ ಆಪ್
 • ವೆಬ್ ಬ್ರೌಸಿಂಗ್ ಗೆ ಸಹಾಯ ಮಾಡುವ HTML, HTML5, XHTML ಮತ್ತು ಫ್ಲಾಶ್
 • ಟ್ಯಾಬ್ಲೆಟ್ ನಿಂದ ಟಿವಿಗೆ ಕನೆಕ್ಟ್ ಮಾಡಲು ಮೈಕ್ರೋ HDMI ಪೋರ್ಟ್
 ಜುಲೈ ವೇಳೆಗೆ ಮಾರುಕಟ್ಟೆಗೆ ಬರಲಿರುವ ಈ ಟ್ಯಾಬ್ಲೆಟ್ ನ ಬೆಲೆಯನ್ನು ಏಸರ್ ಇನ್ನೂ ನಿಗದಿಪಡಿಸಿಲ್ಲ.
ಹೆಚ್ಚಿನ ಮಾಹಿತಿಗಾಗಿ ಜಾಲತಾಣ: http://goo.gl/sIz9c 

Friday, June 15, 2012

ಪ್ರಜಾವಾಣಿ ದಿನ ಪತ್ರಿಕೆಯಲ್ಲಿ ನನ್ನ ಜಾಲತಾಣ ಹಾಗೂ ಬ್ಲಾಗ್ ಗಳ ಬಗ್ಗೆ ಅಂಕಣ.

ಪ್ರಜಾವಾಣಿ ದಿನ ಪತ್ರಿಕೆಯ ಜೂನ್ 1ರ ಮೆಟ್ರೊ ಬೆಂಗಳೂರು ಪುರವಣಿಯಲ್ಲಿ ಪ್ರಕಟಗೊಂಡ ಬ್ಲಾಗಿಲನು ತೆರೆದು ಕನ್ನಡ ಬ್ಲಾಗ್ ಗಳ ಇಣುಕು ನೋಟದಲ್ಲಿ "ಹಲವು ಚಂದ್ರರು"! ಎಂಬ ಶಿರ್ಷಿಕೆಯಲ್ಲಿ ನನ್ನ ಜಾಲತಾಣ ಹಾಗೂ ಬ್ಲಾಗ್ ಗಳ ಬಗ್ಗೆ ಅಂಕಣ.

ಮುಕ್ತ ಗ್ರಂಥಾಲಯ

ಅಂತರಜಾಲದಲ್ಲಿ ಪುಸ್ತಕಗಳ ಅಂಗಡಿಗಳು ಇರುವುದು ತಿಳಿದೇ ಇರಬಹುದು. ಅಂತೆಯೇ ಗ್ರಂಥಾಲಯಗಳೂ ಇವೆ. ಅಂತಹ ಒಂದು ಮುಕ್ತ ಗ್ರಂಥಾಲಯ openlibrary.org. ಇದರ ವೈಶಿಷ್ಟ್ಯವೇನೆಂದರೆ ಇದಕ್ಕೆ ನಾವು ನೀವು ಎಲ್ಲರೂ ಪುಸ್ತಕ ಅಥವಾ ಪುಸ್ತಕದ ಸೂಚಿ ಹಾಗೂ ಕೊಂಡಿ ಸೇರಿಸಬಹುದು. ಇದರಲ್ಲಿ ಲಕ್ಷಕ್ಕಿಂತಲೂ ಅಧಿಕ ವಿದ್ಯುನ್ಮಾನ ಪುಸ್ತಕಗಳಿವೆ. ಮೊದಲೇ ತಿಳಿಸಿದಂತೆ ಇದು ಗ್ರಂಥಾಲಯ. ಅಂದರೆ ಪುಸ್ತಕವನ್ನು ನೀವು ಓದಿ ಹಿಂತಿರುಗಿಸಬೇಕು. ಅಂತರಜಾಲದ ಮೂಲಕ ದೊರಕುವ ವಿ-ಪುಸ್ತಕಗಳನ್ನು ಓದಿ ಹಿಂತಿರುಗಿಸುವುದು ಎಂದರೆ ಹೇಗೆ ಎಂಬ ಅನುಮಾನವೇ? ಅದಕ್ಕೆ ಹಲವು ವಿಧಾನಗಳಿವೆ. ಒಂದು ಅತಿ ಸರಳ ವಿಧಾನವೆಂದರೆ ಜಾಲತಾಣದಲ್ಲೇ ಓದುವುದು. ಭೌತಿಕ ಪುಸ್ತಕದ ಪುಟ ಮಗುಚಿದಂತೆ ಜಾಲತಾಣದಲ್ಲೂ ಪುಟ ಮಗುಚಿದ ಅನುಭವ ಮೂಡುವಂತೆ ಮಾಡುವ ತಂತ್ರಾಂಶದ ಬಳಕೆ ಇಲ್ಲಿ ಆಗಿದೆ. ಇತರೆ ವಿಧಾನಗಳೂ ಇವೆ. ಈ ಜಾಲತಾಣವಲ್ಲದೆ ಇತರೆ ಜಾಲತಾಣಗಳಲ್ಲಿ ದೊರೆಯುವ ಪುಸ್ತಕಗಳಿಗೆ ಕೊಂಡಿಯೂ ಇಲ್ಲಿದೆ.  

Thursday, June 14, 2012

ಮೊಬೈಲ್ ಪತ್ತೆ ಸಲೀಸು

(IMEI) ಐಎಂಇಐ  ಇದೊಂದು ಯೂನಿಕ್ ಐಡೆಂಟಿಟಿ ಸಂಖ್ಯೆ. ಪ್ರತಿಯೊಂದು ಮೊಬೈಲ್ ಹ್ಯಾಂಡ್ ಸೆಟ್ ಗೂ ಆ ಸಂಖ್ಯೆ ಬದಲಾಗುತ್ತದೆ. ಅಷ್ಟೆ ಅಲ್ಲ, ಯಾರಾದರೂ ಸಿಮ್ ಕಾರ್ಡ್ ಬದಲಾಯಿಸಿದರೆ ಅದರ ಸುಳಿವು ಮೊಬೈಲ್ ಆಪರೇಟರ್ ಗಳಿಗೆ ಸಿಗುತ್ತದೆ. http://www.indiatrace.com ಯು.ಆರ್.ಎಲ್ ಲಿಂಕ್ ನಲ್ಲಿ 10 ಅಂಕೆಯ ಮೊಬೈಲ್ ಸಂಖ್ಯೆ ನಮೂದಿಸಿ, ಆಪರೇಟರ್ ವಿವರ ಸೇರಿದಂತೆ, ಆ ಹ್ಯಾಂಡ್ ಸೆಟ್ ಬಳಕೆಯಲ್ಲಿ ಇರುವ ಸ್ಥಳ ಪತ್ತೆ ಹಚ್ಚಬಹುದು. ಇದೊಂದು ಉಚಿತ ಸಾಪ್ಟ್ ವೇರ್. ಇದರ ಸಹಾಯದಿಂದ ಲ್ಯಾಂಡ್ ಲೈನ್, ವೆಹಿಕಲ್ ಟ್ರ್ಯಾಕಿಂಗ್ ,ಐಪಿ (ಇಂಟರ್ ನೆಟ್ ಪ್ರೋಟೋಕಾಲ್)ಅಡ್ರೆಸ್ ಪತ್ತೆಗೂ ಸಹಕಾರಿಯಾಗಿದೆ. 
ಟ್ರ್ಯಾಕಿಂಗ್ ಸಾಪ್ಟ್ ವೇರ್
ಗ್ರಿಂಪ್ಸ್, ಗೂಗಲ್ ಲ್ಯಾಟಿಟೂಡ್, ಬಡ್ಡಿವೇ, ಸಾರ್ಟ್ ಪ್ರೋಟೆಕ್ಟ್, ಡಿಎಸ್ಎಂಪಿ, ರಿಮೋಟ್ ಟ್ರ್ಯಾಕರ್, ಟೋಟಕ್ ಕೇರ್, ಮೋಬೈಲ್ ಡಿಪೆನ್ಸ್, ಮೋಲೋಗೋಗೋ, ಲೀಕೆಟ್ ಎ, ಎಫ್ ಸೆಕ್ಯೂರ್, ಎಂ ಗಾರ್ಡ್ (ಸೋನಿ ಎರಿಕ್ಸನ್)  ಕೆಪ್ರೋಸ್ಕಿ, ಥೆಪ್ಟ್ ಅವೇರ್ ಮತ್ತು ಅಡ್ವಾನ್ಸ್ ಡಿವೈಸ್ ಲಾಕ್ ಪ್ರೋ ಮೊದಲಾದ ತಂತ್ರಜ್ಞಾನಗಳು ಹ್ಯಾಂಡ್ ಸೆಟ್  ಪತ್ತೆಗೆ ನೆರವಾಗುತ್ತವೆ. 
ನೀವೂ ಇಂತಹ ತಂತ್ರಜ್ಞಾನಗಳನ್ನು ಬಳಸಿ ನಿಮ್ಮ ಮೊಬೈಲ್ ನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಬಾರದೇಕೆ?

ಆಪಲ್ iOS 6.0

 ಆಪಲ್ ಕಂಪನಿ ಹೊಸ ಆವೃತ್ತಿಯ ಹಲವು ವೈಶಿಷ್ಟ್ಯಗಳನ್ನು ಹೊಂದಿರುವ iOS 6 ಎಂಬ ತಂತ್ರಾಂಶವನ್ನು ಅನಾವರಣಗೊಳಿಸುತ್ತಿದೆ. ಮತ್ತು ಇದು ನಿಮ್ಮ ಐಪೋನ್, ಐಪಾಡ್ ಅಥವಾ ಐಪಾಡ್ ಟಚ್ ಗಳನ್ನು ನಿಸ್ತಂತು ರೂಪದಲ್ಲಿ ಆಪ್ಗ್ರೇಡ್ ಮಾಡಬಹುದಾಗಿದೆ.


ಜೂನ್ 11 ರಿಂದ ಜೂನ್ 15 ರ ವರೆಗೆ ನಡೆಯುವ ಈ ಕಾನ್ಫರೆನ್ಸ್ ನಲ್ಲಿ ಈಗಾಗಲೇ iOS 6 ಬಿಡುಗಡೆಯ ಬಗ್ಗೆ ಬ್ಯಾನರ್ ಗಳನ್ನು ಹಾಕಲಾಗಿದ್ದು ಸಾಕಷ್ಟು ಸುದ್ದಿಯಾಗಿದೆ. ಆಪಲ್ ನ iOS 6.0 ದಲ್ಲಿ ಹೊಸ ಹೊಸ ಫೀಚರುಗಳ ನಿರೀಕ್ಷೆ ಇದ್ದು, ಗೂಗಲ್ ಮ್ಯಾಪ್ಸ್ ರೀತಿಯಲ್ಲಿ 3D ಮ್ಯಾಪ್ಸ್ ಬರಬಹುದು ಎಂದು ನಿರೀಕ್ಷಿಸಲಾಗುತ್ತಿದೆ.

ಬರಿ iOS 6.0 ತಂತ್ರಾಂಶದ ಅನಾವರಣವಷ್ಟೇ ಅಲ್ಲದೆ ಐಪ್ಯಾಡ್ ಗಳಿಗೆ ಸಿರಿ ವಾಯ್ಸ್ ರೆಕಗ್ನಿಶನ್ ತಂತ್ರಾಂಶ ಹಾಗು iOS ಗೆ ಫೇಸ್ ಬುಕ್ ಅನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಅನುಕಲನ ಮಾಡಬಹುದು ಎಂಬ ನಿರೀಕ್ಷೆಯೂ ಇದೆ.
ಪಾಸ್ ಬುಕ್ ಎಂಬ ತಂತ್ರಾಂಶದಲ್ಲಿ ನಿಮ್ಮ ಬೋರ್ಡಿಂಗ್ ಪಾಸುಗಳನ್ನು, ಚಲನಚಿತ್ರ ಟಿಕೆಟ್ಗಳನ್ನು  ಮತ್ತು ಠೇವಣಿ ಪುಸ್ತಕ ಮುಂತಾದ ವೈಯಕ್ತಿಕ ದಾಖಲೆಗಳನ್ನು ನಿಮ್ಮ ಐಫೋನ್ ಅಥವಾ ಐಪಾಡ್ ಟಚ್ ನಲ್ಲಿ ಸ್ಕ್ಯಾನ್ ಮಾಡಬಹುದು.
ಇದು ಮೊದಲನೇ ಆವೃತ್ತಿಯ ಐಪ್ಯಾಡ್  ಹಾಗು ಹಳೆಯ ಐಪಾಡ್ ಟಚ್ ಗಳಿಗೆ ಹೊಂದಾಣಿಕೆಯಾಗಲಿಕ್ಕಿಲ್ಲ ಎಂಬ ಗುಮಾನಿಯೂ ಇದೆ.
ಆಪಲ್ ನ  iOS 6.0 ತಂತ್ರಾಂಶದ  ಹೆಚ್ಚಿನ ಮಾಹಿತಿಗಾಗಿ ಜಾಲತಾಣ: http://www.apple.com/ios/ios6

ಗೂಗಲ್ ಮ್ಯಾಗಜೀನ್

ಗೂಗಲ್ ಸದ್ದಿಲ್ಲದೆ ಮಾಧ್ಯಮ ಜಗತ್ತಿಗೆ ಕಾಲಿರಿಸಿದೆ.ಆನ್‌ಲೈನ್ ಮ್ಯಾಗಜೀನ್ ಥಿಂಕ್ ಕ್ವಾರ್ಟರ್ಲೀಯನ್ನದು ಪ್ರಕಟಿಸಲಾರಂಭಿಸಿದೆ.http://thinkquarterly.co.uk ಐಪಿ ವಿಳಾಸದಲ್ಲಿದು ಲಭ್ಯವಿದೆ.ದತ್ತಾಂಶ ಮತ್ತದು ಹೇಗೆ ಮುಖ್ಯ ಎನ್ನುವುದನ್ನು ಪತ್ರಿಕೆಯಲ್ಲಿ ಚರ್ಚಿಸಲಾಗಿದೆ.ಸದ್ಯಕ್ಕಂತೂ ಪತ್ರಿಕೆಯು ಉಚಿತವಾಗಿ ಲಭ್ಯ.ಗೂಗಲ್ ತನ್ನ ಬಳಗದವರಿಗಾಗಿ ಇದನ್ನು ಪ್ರಕಟಿಸಿರುವುದಾಗಿ ಹೇಳಿಕೊಂಡಿದೆ.ಸಂದರ್ಶನ,ಲೇಖನಗಳು,ಚಿತ್ರಗಳು ಮ್ಯಾಗಜೀನ್ ಮುಖ್ಯ ತಿರುಳು.ಗೂಗಲ್ ಇದನ್ನು ಪತ್ರಿಕೆ ಎಂದು ಕರೆಯದೆ "ಪುಸ್ತಕ" ಎಂದು ಕರೆದುಕೊಂಡಿರುವುದು ವಿಶೇಷ.ಲಂಡನ್‌ನಿಂದ ಪ್ರಕಾಶಿತ ಥಿಂಕ್ ಕ್ವಾರ್ಟರ್ಲಿಯನ್ನು,ಚರ್ಚ್ ಆಫ್ ಲಂಡನ್ ಎನ್ನುವ ಏಜನ್ಸಿ ಸಿದ್ಧ ಪಡಿಸಿದೆ.