WEBSITE, INVENTORY SOFTWARE, CCTV CAMERA , COMPUTER & LAPTOP SALES & SERVICE, TABLETS, VIDEOGRAPHY, PHOTOGRAPHY, PROJECTOR ,VIDEO & AUDIO EDITING, VHS TO CD,DVD,BLURAY DISC CONVERSATION, DESIGNING & MANY MORE...
ಸುಸ್ವಾಗತ ನಿಮ್ಮ ಕಲ್ಪನೆ ನಮ್ಮ ಸೃಷ್ಠಿ !!! ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು.
ಈಗ ಮಲ್ಟಿಮೀಡಿಯವನ್ನು e-Speak ಕನ್ನಡದಲ್ಲಿ ಕೇಳಿ!

Wednesday, June 20, 2012

ಎಟಿಎಂ ಕಾರ್ಡ್ ಬದಲು ಮೊಬೈಲ್ ಬಳಕೆ

'ಆಟೊಮ್ಯಾಟಿಕ್ ಟೆಲ್ಲರ್ ಮೆಷಿನ್' ಅರ್ಥಾತ್ ಸ್ವಯಂಚಾಲಿತ ಹಣ ವಿತರಿಸುವ ಯಂತ್ರ ಅಂದರೆ ಎಟಿಎಂ. (ATM) ಯಂತ್ರದಿಂದ ಹಣ ಪಡೆಯಲು ಇನ್ನು ಮುಂದೆ 'ಡೆಬಿಟ್ ಕಾರ್ಡ್' ಆಗಲೀ 'ಕ್ರೆಡಿಟ್ ಕಾರ್ಡ್' ಆಗಲೀ ಇರಲೇಬೇಕು ಎಂದೇನಿಲ್ಲ!
ಹೌದು ನಿಮ್ಮ ಮೊಬೈಲ್ ಪೋನ್ ಬಳಸಿಯೇ ಎಟಿಎಂನಿಂದ ನಿಮಗೆ ಬೇಕಾದಷ್ಟು ಹಣ ಪಡೆಯಬಹುದು! ಎಲ್ಲಾದರೂ ಉಂಟೆ? ಇದು ಹೇಗೆ ಸಾಧ್ಯ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ.

ಬ್ರಿಟನ್ ಮೂಲದ ಮೊಬೈಲ್ ಅಪ್ಲಿಕೇಷನ್ ಅಭಿವೃದ್ದಿಪಡಿಸುವ ತಜ್ಞರು 'ಗೆಟ್ ಕ್ಯಾಷ್' ಎನ್ನುವ ಹೊಸತಂತ್ರಾಂಶ ಆಧಾರಿತ ಸೌಲಭ್ಯವೊಂದನ್ನು ಅಭಿವೃದ್ದಿಪಡಿಸಿದ್ದಾರೆ. ಸ್ಮಾರ್ಟ್ ಪೋನ್ ನಲ್ಲಿ ಈ ತಂತ್ರಾಂಶ ಅನುಸ್ಥಾಪಿಸಿಕೊಂಡರೆ ಪ್ರತಿ ಬಾರಿ 100 ಪೌಂಡ್ ನಷ್ಟು (ಸದ್ಯ ಈ ಅಪ್ಲಿಕೇಷನ್ ಬ್ರಿಟನ್ ನಲ್ಲಿ ಮಾತ್ರ ಬಿಡುಗಡೆಯಾಗಿದೆ) ನಗದನ್ನು 'ಎಟಿಎಂ' ನಿಂದ ಡ್ರಾ ಮಾಡಿಕೊಳ್ಳಬಹುದು.
ರಾಯಲ್ ಬ್ಯಾಂಕ್ ಆಫ್ ಸ್ಕಟ್ಲೆಂಡ್ ( ಆರ್ ಬಿ ಎಸ್ ) ತನ್ನ ಗ್ರಾಹಕರಿಗೆ ಇತ್ತೀಚೆಗೆ 'ಗೆಟ್ ಕ್ಯಾಷ್' ಅಪ್ಲಿಕೇಷನ್ ಪರಿಚಯಿಸಿದೆ. ಬ್ಯಾಂಕಿನ 1.80 ಕೋಟಿ ಗ್ರಾಹಕರು ಈ ಸೌಕರ್ಯ ಪಡೆಯಬಹುದು ಎಂದು ಹೇಳಿದೆ. ಆದರೆ, ಈಗಿರುವ ಸಮಸ್ಯೆ ಏನೆಂದರೆ, ಈ ಅಪ್ಲಿಕೇಷನ್ ಬಳಸಿ ಕೇವಲ 'ಆರ್ ಬಿ ಎಸ್' "ಎಟಿಎಂ"ನಿಂದ ಮಾತ್ರ ನಗದು ಪಡೆದುಕೊಳ್ಳಬಹುದು. ಇತರೆ ಬ್ಯಾಂಕ್ 'ಎಟಿಎಂ'ಗಳಿಗೂ ಈ ಸೌಲಭ್ಯ ವಿಸ್ತರಿಸುವ ಕುರಿತು ಬ್ಯಾಂಕ್ ಚಿಂತನೆ ನಡೆಸುತ್ತಿದೆ. ಸದ್ಯ ಲಂಡನ್ ನಲ್ಲಿರುವ 8 ಸಾವಿರ ಆರ್ ಬಿ ಎಸ್ ಎಟಿಎಂಗಳಲ್ಲಿ  "ಗೆಟ್ ಕ್ಯಾಷ್" ಅಪ್ಲಿಕೇಷನ್ ಬಳಕೆಗೆ ಅವಕಾಶವಿದೆ ಎಂದು ಆರ್ ಬಿ ಎಸ್ ಬ್ಯಾಂಕ್ ನ ಜಾಲತಾಣದಲ್ಲಿ ಪ್ರಕಟಿಸಿದೆ. 
ಸ್ಮಾರ್ಟ್ ಪೋನ್ ನಲ್ಲಿ "ಗೆಟ್ ಕ್ಯಾಷ್" ಅಪ್ಲಿಕೇಷನ್ ತೆರೆದು ವಿತ್ ಡ್ರಾ ಆಯ್ಕೆ ಮಾಡಿಕೊಂಡು ಎಷ್ಟು ಮೊತ್ತಬೇಕು ಎಂಬುದನ್ನು ನಮೂದಿಸಿದರೆ " ಆರ್ ಅಂಕಿಗಳ ಗುಪ್ತ ಸಂಖ್ಯೆಯನ್ನು ಕೇಳೂತ್ತದೆ. ಆ ಸಂಖ್ಯೆಯನ್ನು ದಾಖಲಿಸುತ್ತಿದ್ದಂತೆ 'ಎಟಿಎಂ' ನಿಂದ ಹಣ ಹೊರಬಹುತ್ತದೆ. ಈ ಸೇವೆಗಾಗಿ ಗ್ರಾಹಕರು ಬ್ಯಾಂಕ್ ಗೆ ಮೊಬ್ಐಲ್ ಸಂಖ್ಯೆ ನೀಡಿ ನೋಂದಾಯಿಸಿಕೊಳ್ಳಬೇಕು. ಪ್ರತಿ ವಹಿವಾಟಿಗೂ ಗುಪ್ತ ಸಂಖ್ಯೆ ಬದಲಾಗುತ್ತಿರುತ್ತದೆ. ಬ್ಯಾಂಕ್ ಮೂಲಕ ಗಂಟೆಗಳ ವಾಯಿದೆ ಹೊಂದಿರುತ್ತದೆ.
ಈ ಆಪ್ಲಿಕೇಷನ್ ಬಳಸಿ ಈಗ ಒಮ್ಮೆ 100 ಪೌಂಡ್ ಮಾತ್ರ ವಿತ್ ಡ್ರಾ ಮಾಡಿಕೊಳ್ಳಬಹುದು. ಗ್ರಾಹಕರ ಪ್ರತಿಕ್ರಿಯೆ ಆದರಿಸಿ 250 ಪ್ಔಂಡ್ ವರೆಗೂ ವಿಸ್ತರಿಸಲಾಗುವುದು ಎಂದು ಬ್ಯಾಂಕ್ ಹೇಳಿದೆ. ಬ್ಯಾಂಕ್ ನಿಂದ ಬರುವ ಗುಪ್ತ ಸಂಖ್ಯೆಯನ್ನು ಸ್ನೇಹಿತರಿಗೆ ಕಳುಹಿಸಿದರೆ ಅವರು ಕೂಡ ಎಟಿಎಂ ನಿಂದ ನಗದು ಡ್ರಾ ಮಾಡಿಕೊಳ್ಳಬಹುದಾಗಿದೆ. ಈ ಸೇವೆಗಾಗಿ ಐಪೋನ್, ಐಪ್ಯಾಡ್, ಬ್ಲಾಕ್ ಬೆರಿ ಸೇರಿದಂತೆ ಆಂಡ್ರಾಯ್ಡ್ ಸ್ಮಾರ್ಟ್ ಪೋನ್ ಗಳಿಗೆ ಬಳಕೆದಾರರು ಗೆಟ್ ಕ್ಯಾಷ್ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಳ್ಳುವಂತೆಯೂ ಬ್ಯಾಂಕ್ ತನ್ನ ಖಾತೆದಾದದರಿಗೆ ಹೇಳಿದೆ. 

ಆರ್ ಬಿ ಎಸ್ ಬ್ಯಾಂಕಿನ ಜಾಲತಾಣದಲ್ಲಿ ಹೆಚ್ಚಿನ ಮಾಹಿತಿ ಹಾಗೂ ತಂತ್ರಾಂಶಗಳಿಗಾಗಿ ಕೊಂಡಿ: http://goo.gl/4emb6

ಭಾರತದಲ್ಲಿಯ ಎಲ್ಲಾ ರಾಷ್ಟ್ರೀಯ, ಅಂತರಾಷ್ಟ್ರೀಯ ಬ್ಯಾಂಕ್ ಗಳೂ ಇಂತಹ ಸೇವೆಯನ್ನು ನೀಡುವುದಾದರೇ ಹೇಗಿರುತ್ತದೆ ಯೋಚಿಸಿ? 

No comments:

Post a Comment