WEBSITE, INVENTORY SOFTWARE, CCTV CAMERA , COMPUTER & LAPTOP SALES & SERVICE, TABLETS, VIDEOGRAPHY, PHOTOGRAPHY, PROJECTOR ,VIDEO & AUDIO EDITING, VHS TO CD,DVD,BLURAY DISC CONVERSATION, DESIGNING & MANY MORE...
ಸುಸ್ವಾಗತ ನಿಮ್ಮ ಕಲ್ಪನೆ ನಮ್ಮ ಸೃಷ್ಠಿ !!! ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು.
ಈಗ ಮಲ್ಟಿಮೀಡಿಯವನ್ನು e-Speak ಕನ್ನಡದಲ್ಲಿ ಕೇಳಿ!

Friday, August 31, 2012

ಟಾಟಾ ಪವನ ಕಾರ್ Tata AirPod CAR

ಪೆಟ್ರೋಲ್ ಕಾರ್, ಡೀಸೆಲ್ ಕಾರ್, ಜೈವಿಕ ಇಂಧನ ಕಾರ್, ವಿದ್ಯುತ್ ಕಾರ್, ನೀರಿನ ಕಾರ್ ಮುಂತಾದ ಮರುಬಳಕೆಯ ಕಾರುಗಳನ್ನು ತಯಾರಿಸಿದ್ದು ಆಯಿತು, ಹಾರುವ ಕಾರನ್ನು ಅಭಿವೃದ್ದಿಪಡಿಸಿದ್ದಾಯಿತು. ಇದೀಗ (Air-Powered Car) ಸಂಕುಚಿತ ಗಾಳಿಯಿಂದ ಚಲಿಸುವ ಕಾರನ್ನು ನಮ್ಮ ದೇಶದ ಟಾಟಾ ಮೋಟರ್ಸ್ ರವರು ಹೊರತರುತ್ತಿದ್ದಾರೆ.

ಗಾಳಿ ಕಾರು!
ಕಾರ್ಬನ್-ಫೈಬರ್‌ನಿಂದ ಮಾಡಿದ ಬಹಳ ಗಟ್ಟಿಯಾದ ಸಿಲಿಂಡರ್‌ನಲ್ಲಿ 30 ಎಂಪಿಎ (4500 ಪಿಎಸ್‌ಐ ಅಥವಾ 310 ಬಾರ್) ಒತ್ತಡದಲ್ಲಿ ಭರ್ತಿಯಾಗಿರುವ ಗಾಳಿಯು ಹೊರಬರುವಾಗ ಉಂಟುಮಾಡುವ ಶಕ್ತಿಯ ಮೂಲಕವೇ ಯಂತ್ರದಲ್ಲಿ (ಹಿಂದೆ ಹಬೆಯಂತ್ರದಲ್ಲಿ  ಸಂಚಯವಾದ ಶಕ್ತಿ ರಭಸದಿಂದ ಹೊರಬಿದ್ದಾಗ ಉಗಿಬಂಡಿ ಚಲಿಸಿದಂತೆ) ಚಾಲನೆಯುಂಟಾಗುತ್ತದೆ.

ಇದೇ `ಕಂಪ್ರೆಸ್ಡ್ ಏರ್ ಕಾರ್`ನ ಸರಳ ತಂತ್ರಜ್ಞಾನ. ಇಂಥ `ಒತ್ತಡದ ಗಾಳಿ ಶಕ್ತಿ`ಯ ಕಾರಿನ ಪ್ರಯೋಗ 1920ರಿಂದಲೂ ನಡೆಯುತ್ತಿದೆ. ಈ ಕಾರಿನಲ್ಲಿ ಒತ್ತಡ ಗಾಳಿಯಿಂದ ಶಕ್ತಿ ಹೊರಬೀಳುತ್ತಿದ್ದರೆ ಅದೇ ಶಕ್ತಿಯ ಒಂದಂಶವನ್ನು ಬಳಸಿಕೊಂಡು ಸಿಲಿಂಡರ್‌ಗೆ ಮತ್ತೆ ಗಾಳಿ ತುಂಬಿ ಒತ್ತಡ ಉಂಟುಮಾಡುವುದಕ್ಕೆ ಪಂಪ್ ಸಹ ಜೋಡಣೆ ಆಗಿರುತ್ತದೆ. ಜತೆಗೆ ಆರಂಭದಲ್ಲಿ ಚಾಲನೆಗೆ ಶಕ್ತಿ ನೀಡಲು ಪುಟ್ಟ ಬ್ಯಾಟರಿಯೂ ಇರುತ್ತದೆ.

ಈ ಎಂಡಿಐ ತಂತ್ರಜ್ಞಾನದೊಟ್ಟಿಗೇ ಬ್ಯಾಟರಿ ಅಥವಾ ಗ್ಯಾಸೊಲಿನ್‌ನಿಂದ ಚಾಲನೆಗೊಳ್ಳುವ ಹೈಬ್ರಿಡ್ ಕಾರುಗಳ ಪ್ರಯೋಗವೂ ವಿವಿಧ ದೇಶಗಳಲ್ಲಿ ನಡೆಯುತ್ತಿದೆ.
`ಎಂಡಿಐ` ತಂತ್ರಜ್ಞಾನ ಎಂಬುದು `ಕಾನ್-ರಾಡ್ ಸಿಸ್ಟೆಂ`. ಇದರಲ್ಲಿ ಯಂತ್ರದ ಪಿಸ್ಟನ್ ಕಾರಿನ ಮಧ್ಯ, ಮೇಲ್ಭಾಗದಲ್ಲಿ 70 ಡಿಗ್ರಿ ಸೈಕಲ್ಸ್ ಲೆಕ್ಕದಲ್ಲಿ ಜೋಡಣೆಯಾಗಿ ಚಲಿಸುವಂತಹುದ್ದಾಗಿರುತ್ತದೆ.

ಈ ವಾಹನದ ಇನ್ನೊಂದು ವಿಶೇಷವೆಂದರೆ ಗೇರ್‌ಗಳ ಬದಲಾವಣೆ ಸ್ವಯಂಚಾಲಿತ ಹಾಗೂ ಎಲೆಕ್ಟ್ರಾನಿಕ್ ಸಿಸ್ಟಂ(ಎಂಡಿಐ ಅಭಿವೃದ್ಧಿಪಡಿಸಿದ್ದು) ಮೂಲಕ ನಿಯಂತ್ರಿತ. ಕಾರಿನ ವೇಗವೂ ಕಂಪ್ಯೂಟರೀಕೃತ. 

ಸಾಂಪ್ರದಾಯಿಕ ಇಂಧನಗಳಾದ ಪೆಟ್ರೋಲ್, ಡೀಸೆಲ್ ಬಳಸದೇ ಸಂಕುಚಿತ ಗಾಳಿಯಿಂದ ಚಲಿಸುವ ಟಾಟಾ ಮೋಟರ್ಸ್ ಏರ್ ಕಾರ್ ಯೋಜನೆಯೂ ಯಾವುದೇ ಅಡೆತಡೆಗಳಿಲ್ಲದೇ ಎರಡನೇ ಹಂತ ಪ್ರವೇಶಿಸಿದೆ. ಮೊದಲನೆಯ ಹಂತದಲ್ಲಿ ಕಂಪನಿಯು ಎರಡು ಕಾರುಗಳಿಗೆ ಪವನ ಕಾರ್ ತಂತ್ರಜ್ಞಾನ ಅಳವಡಿಸಿತ್ತು. ಇವೆರಡು ಕಾರುಗಳು ರಸ್ತೆಯಲ್ಲಿ ಯಶಸ್ವಿಯಾಗಿ ಚಲಿಸಿದ್ದವು. ಇದೀಗ ಇದನ್ನು ಉತ್ಪಾದನೆ ಮಾಡಿ, ಮಾರಾಟಕ್ಕೆ ಸಿದ್ಧಗೊಳಿಸುವುದು ಎರಡನೇ ಹಂತವಾಗಿದೆ. ಎರಡನೇ ಹಂತದಲ್ಲಿ ಕಂಪನಿಯು ಫೋಸಿಲ್ ಇಂಧನ ರಹಿತ ತಂತ್ರಜ್ಞಾನದ ಮೂಲಕ ಏರ್ ಕಾರ್ ಅಭಿವೃದ್ಧಿಪಡಿಸಲಿದೆ. ಏರ್ ಕಾರ್ ಬಿಡಿಭಾಗ ನಿರ್ಮಿಸುವುದು ಮತ್ತು ಏರ್ ಕಾರ್ ಮಾರಾಟಕ್ಕೆ ಸಿದ್ಧಗೊಳಿಸುವುದು ಕೂಡ ಈ ಹಂತದಲ್ಲಿ ಸೇರಿದೆ.

ಶೀಘ್ರದಲ್ಲಿ ಟಾಟಾ ಮೋಟರ್ಸ್ ದೇಶದಲ್ಲಿ ಸುಮಾರು 6 ಸಾವಿರ ಇಂತಹ ಕಾರುಗಳನ್ನು ಹೊರತರಲಿದೆ ಎಂದು ವರದಿಗಳು ಹೇಳಿವೆ. ಈ ಪವನಕಾರಿನ ಗಾಳಿಸಿಲಿಂಡರ್ ಒಮ್ಮೆ ಪೂರ್ತಿ ಫಿಲ್ ಮಾಡಿದರೆ ಸುಮಾರು 300 ಕಿಲೋಮೀಟರ್ ಸಾಗಬಹುದಂತೆ. ಇದಕ್ಕೆ ತಗುಲುವ ವೆಚ್ಚ ಕೇವಲ 2 ಡಾಲರ್. ಅಂದರೆ ಸುಮಾರು 110 ರುಪಾಯಿಗಳಾಗಬಹುದು.

ಇದು ಹಗುರ ಕಾರು. ಇದನ್ನು ಫೈಬರ್ ಗ್ಲಾಸ್ ಬಳಸಿ ಉತ್ಪಾದಿಸಲಾಗುತ್ತದೆ. ಇದು ಎಲೆಕ್ಟ್ರಾನಿಕ್ ಕಾರುಗಳಿಗಿಂತ ಅಗ್ಗವಾಗಿರಲಿದೆ. ಇದು ನಗರ ರಸ್ತೆ ಸವಾರಿಗೆ ಸೂಕ್ತವಾಗಿರಲಿದೆ ಎಂದು ಕಂಪನಿ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಜಾಲತಾಣ ಕೊಂಡಿ:  http://goo.gl/Xso49

Tuesday, August 28, 2012

ಯುಟ್ಯೂಬಿನ ಶೈಕ್ಷಣಿಕ ಚಾನೆಲ್


ಯುಟ್ಯೂಬ್ ವಿಡಿಯೋ ತುಣುಕುಗಳನ್ನು ಒದಗಿಸಿ, ಅಂತರ್ಜಾಲ ಬಳಕೆದಾರರ ಮನಗೆದ್ದ ಗೂಗಲ್ ತಾಣ. ಈಗದು ಶೈಕ್ಷಣಿಕ ವಿಷಯಗಳಿಗೆ ಸಂಬಂಧಿಸಿದ ಪ್ರತ್ಯೇಕ ಚಾನೆಲನ್ನು ಆರಂಭಿಸಿದೆ. ಇದರಲ್ಲಿ ವಿಖ್ಯಾತ ವಿಶ್ವವಿದ್ಯಾಲಯಗಳ ಪ್ರೊಫೆಸರುಗಳ ಉಪನ್ಯಾಸಗಳ ವಿಡಿಯೋ ತುಣುಕುಗಳು ಲಭ್ಯವಿವೆ. ಇವನ್ನು www.youtube.com/eduನಲ್ಲಿ ಪಡೆಯಬಹುದು.


ಎಂಐಟಿ,  ಸ್ಟಾನ್‌ಫರ್ಡ್, ಕೊಲಂಬಿಯಾ, ಕಾರ್ನೆಲ್, ಡ್ಯೂಕ್, ಹಾವರ್ಡ್, ಯಾಲೆ, ಕ್ಯಾಲಿಫೊರ್ನಿಯಾದ ಪ್ರಾಧ್ಯಾಪಕರುಗಳ ಉಪನ್ಯಾಸಗಳು ವಿವಿಧ ವಿಷಯಗಳ ಮೇಲೆ ಲಭ್ಯವಿವೆ. ದಂತವೈದ್ಯಕೀಯದ ಬಗ್ಗೆ ಮಿಚಿಗನ್ ವಿವಿಯ 426 ವಿಡಿಯೋಗಳಿವೆ. ಅಮೆರಿಕಾದ ವಿದ್ಯಾರ್ಥಿಗಳು ತಮ್ಮ ಕೋರ್ಸಿನ ಕೆಲವು ವಿಷಯಗಳನ್ನು ಸಂಪೂರ್ಣ ಆನ್‌ಲೈನ್ ಮೂಲಕವೇ ಪಡೆಯುವುದು ಮಾಮೂಲಿಯಾಗಿ ಬಿಟ್ಟಿದೆ. ಶೈಕ್ಷಣಿಕ ವೆಚ್ಚ ತಗ್ಗಿಸಲು ಈ ರೀತಿ ಕಲಿಯುವುದು ಸಹಾಯಕವಾಗುತ್ತದೆ.ಇಲ್ಲವಾದರೆ ತರಗತಿಗೆ ಹಾಜರಾಗಲು ದೂರದಿಂದ ಪ್ರಯಾಣಿಸಿ, ಸಮಯ-ಪ್ರಯತ್ನ ಮತ್ತು ಹಣ ಇವನ್ನು ವ್ಯಯಿಸಬೇಕಾಗುತ್ತದಲ್ಲ ಎನ್ನುವುದು ಅವರ ಲೆಕ್ಕಾಚಾರ.

ಕರ್ನಾಟಕ ರಾಜ್ಯ ಪತ್ರ

04 ಸೆಪ್ಟಂಬರ್ 2003 ರಿಂದ ಇದುವರೆವಿಗೂ ಲಭ್ಯವಿರುವ 11 ವರ್ಷಗಳ ಸುಮಾರು 377 ಕ್ಕೂ ಹೆಚ್ಚು ಕರ್ನಾಟಕ ರಾಜ್ಯ ಪತ್ರಗಳನ್ನು ಪಿ.ಡಿ.ಎಫ್ ಕಡತಗಳ ರೂಪದಲ್ಲಿ ಅಂತರ್ಜಾಲದಲ್ಲಿ ಪಡೆಯಲು ಕೊಂಡಿಯನ್ನು ಕ್ಲಿಕ್ಕಿಸಿ. http://gazette.kar.nic.in

ಶುಭ ಸಮಾರಂಭಗಳಿಗೊಂದು ಉಚಿತ ಅರ್ತಾಜಾಲ ತಾಣ

ನಿಮ್ಮ ಯಾವುದೇ ರೀತಿಯ ಶುಭ ಸಮಾರಂಭಗಳು ಹಾಗೂ ಇನ್ಯಾವುದೇ ರೀತಿಯ ಆಹ್ವಾನ ಪತ್ರಿಕೆಗಳನ್ನು ನಿಮ್ಮದೇ ರೀತಿಯ ವರ್ಣರಂಜಿತ ಉಚಿತ ಅರ್ತಾಜಾಲ ತಾಣವನ್ನು ರಚಿಸಿ ನಿಮ್ಮ ಸ್ನೇಹಿತರು, ಬಂಧು-ಬಳಗಕ್ಕೆ ನಿಮ್ಮ ಮಿಂಚಂಚೆ ಮುಖಾಂತರ  ಕಳುಹಿಸಲು ಈ ತಾಣಕ್ಕೆ ಬೇಟಿಕೊಡಬಹುದು. http://www.mywedding.com

ಇ-ವ್ಯವಹಾರದ ಮೂಲಕ ದಿನಬಳಕೆ ವಸ್ತು ಖರೀದಿ ಮಾಡಿ

ದಿನಬಳಕೆಯ ಸಾಬೂನಿನಂತಹ ಖರೀದಿಯನ್ನು ಅಂತರ್ಜಾಲದ ಇ-ವ್ಯವಹಾರದ ಮೂಲಕ ಮಾಡುವವರು ಹೆಚ್ಚಿಲ್ಲ. ಆದರೆ ಜನರಲ್ಲಿ ಅಂತಹ ಪ್ರವೃತ್ತಿಯನ್ನು ಹುಟ್ಟುಹಾಕಲು ಬಯಸಿರುವ ಜಾಲತಾಣ www.soap.com ಈಗ ಆರಂಭವಾಗಿದೆ. ಸಾಬೂನಿನಂತಹ ವಸ್ತುಗಳು ವಿಶೇಷ ಮುತುವರ್ಜಿವಹಿಸಿ ಖರೀದಿಸಬೇಕಾದ ವಸ್ತುವಲ್ಲ. ಟೂತ್‌ಪೇಸ್ಟ್, ಬ್ರಷ್, ಶಾಂಪೂ, ಡಿಟರ್ಜಂಟ್ ಮುಂತಾದ ಹಲವು ಸಾಮಗ್ರಿಗಳನ್ನು ನಾವು ನಿಗದಿತ ಬ್ರಾಂಡ್ ಹೆಸರಿನ ಮೂಲಕ ಖರೀದಿಸುವುದೇ ಹೆಚ್ಚು. ಹಾಗಾಗಿ ಇವುಗಳನ್ನು ಆನ್‌ಲೈನಿನಲ್ಲಿ ಖರೀದಿಸಿ, ಕೊರಿಯರ್ ಮೂಲಕ ತಕ್ಷಣ ಪಡೆಯಲು ಅವಕಾಶ ನೀಡುವ ಸೇವೆಯನ್ನು ಅಂತರ್ಜಾಲ ತಾಣವು ಒದಗಿಸುತ್ತದೆ.

http://www.diapers.com ಅಂತರ್ಜಾಲ ತಾಣದ ಯಶಸ್ಸಿನಿಂದ ಉತ್ತೇಜಿತರಾದವರು ಸೋಪ್.ಕಾಂ ತಾಣವನ್ನು ಆರಂಬಿಸಿದ್ದಾರೆ. ಡಯಾಪರ್.ಕಾಂ ತಾಣವು ಮಕ್ಕಳಿಗೆ ಅಗತ್ಯವಾದ ವಸ್ತುಗಳನ್ನು ಖರೀದಿಸಲು ಅವಕಾಶ ನೀಡುವ ತಾಣ.

ಕಡಿಮೆ ದರದಲ್ಲಿ ಚಿಕಿತ್ಸೆ ಲಭ್ಯವಿರುವ ಆಸ್ಪತ್ರೆ

ಆರೋಗ್ಯ ವಿಮೆ ಹೊಂದಿರುವ ಅಮೆರಿಕನ್ನರು ಆಸ್ಪತ್ರೆ ಶುಲ್ಕದ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಕಡಿಮೆ.ಆದರೀಗ ನಿಧಾನವಾಗಿ ಆ ಪರಿಪಾಠ ಬದಲಾಗುತ್ತಿದೆ. ಉದ್ಯೋಗದಾತರು ತಮ್ಮ ನೌಕರರ ಆರೋಗ್ಯ ವಿಮಾ ಸೌಲಭ್ಯವನ್ನು ಹಿಂದೆಗೆದು ಕೊಳ್ಳುತ್ತಿರುವುದರೊಂದಿಗೆ,  ನೌಕರರು ಸ್ವತ: ವಿಮೆ ಮಾಡಿಸಬೇಕಿದೆ. ಆದುದರಿಂದ ಹಣ ನೀಡದೇ, ಆಸ್ಪತ್ರೆ ವಾಸ ಅನುಭವಿಸುವ ದಿನಗಳು ಇನ್ನು ಮುಂದೆಯೂ ಸಿಗದಿರಬಹುದು. ಕಿಸೆಯಿಂದ ತೆತ್ತು ಚಿಕಿತ್ಸೆ ಪಡೆಯುವಾಗ, ಕಡಿಮೆ ದರದಲ್ಲಿ ಚಿಕಿತ್ಸೆ ಲಭ್ಯವಿರುವ ಆಸ್ಪತ್ರೆ ಅಥವಾ ವೈದ್ಯರ ಹುಡುಕಾಟ ಅಗತ್ಯವಿದೆ. ಇಂತಹ ಅಂತರ್ಜಾಲ ತಾಣಗಳು ಆರೋಗ್ಯ ಸೇವೆಯಲ್ಲಿ ಪಾರದರ್ಶಕತೆಯನ್ನು ತರಲು ಶ್ರಮಿಸುತ್ತಿವೆ. ಶಸ್ತ್ರಕ್ರಿಯೆಗೆ ವಿವಿಧ ಆಸ್ಪತ್ರೆಗಳಲ್ಲಿ ವಿಧಿಸಲಾಗುವ ದರವನ್ನು ಹೋಲಿಸಿ, ರೋಗಿಗೆ ಅನುಕೂಲ ಕಲ್ಪಿಸುವುದು ಇವರ ಕಾರ್ಯತಂತ್ರ. ವಿಮಾ ಕಂಪೆನಿಗಳು ಆಸ್ಪತ್ರೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ವಿವಿಧ ಚಿಕಿತ್ಸೆಗಳಿಗೆ ತಮ್ಮದೇ ದರ ನಿಗದಿ ಪಡಿಸುವ ಪದ್ಧತಿ ಸದ್ಯ ಚಾಲ್ತಿಯಲ್ಲಿದೆ. ಹಾಗಾಗಿ ಚಿಕಿತ್ಸೆಯ ನಿಜವಾದ ದರ ಎಷ್ಟು ಎನ್ನುವುದು ಗುಪ್ತವಾಗಿರುವುದು ಸದ್ಯದ ರೂಢಿ. ನೌಕರರಿಗೆ ಚಿಕಿತ್ಸೆ ಬೇಕಾದಾಗ, ದರ ಪಟ್ಟಿ ಆಧರಿಸಿದ ಪರಿಹಾರವನ್ನು ಉದ್ಯೋಗದಾತರು ನೀಡುತ್ತಾರೆ. ದುಬಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಯಸುವವರು ಹೆಚ್ಚಿನ ಹಣವನ್ನು ಸ್ವಂತವಾಗಿ ಭರಿಸುವುದು ಅನಿವಾರ್ಯ. ಮಾಹಿತಿಗೆ ಜಾಲತಾಣ ಕೊಂಡಿ: http://www.castlighthealth.com

ಗ್ಯಾಡ್ಜೆಟ್ ಟ್ರಾಕ್ (GadgetTrak )

ಮ್ಯಾಕ್ ಮತ್ತು ವಿಂಡೋಸ್ ಪಿಸಿಗಳಿಗೆ ಇದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಆಂಡ್ರಾಯ್ಡ್, ಬ್ಲಾಕ್ಬೆರಿ, ಐಫೋನ್ ಮತ್ತು ವಿಂಡೋಸ್ ಮೊಬೈಲ್ ಆವೃತ್ತಿಗಳು ಲಭ್ಯವಿದೆ. ಮೋಬೈಲ್ ಆವೃತ್ತಿ ಒಂದು ವರ್ಷದ ಬಳಕೆಗೆ 19.95 ಡಾಲರ್ ದರ, ಐಪೋನ್ ಆವೃತ್ತಿ ಒಂದು ವರ್ಷದ ಬಳಕೆಗೆ 3.99 ಡಾಲರ್ ದರ, ಲ್ಯಾಪ್ಟಾಪ್ ಆವೃತ್ತಿ ಒಂದು ವರ್ಷದ ಬಳಕೆಗೆ 19.95 ಡಾಲರ್ ದರ, ಲ್ಯಾಪ್ಟಾಪ್ ಪ್ಯಾಮಿಲಿ ಎಲ್ಲಾ ಆವೃತ್ತಿ ಒಂದು ವರ್ಷದ ಬಳಕೆಗೆ 59.95 ಡಾಲರ್ ದರ ವಿಧಿಸಲಾಗುತ್ತದೆ. ಕಳುವಾದಂತ ಸಂದರ್ಭದಲ್ಲಿ ಇದು ಪ್ರತಿ 30 ನಿಮಿಷಕ್ಕೆ ನಕಲಿ ಬಳಕೆದಾರನ ಚಿತ್ರ ತೆಗೆದು ರವಾನಿಸುತ್ತದೆ.
ತಂತ್ರಾಂಶದಲ್ಲಿರುವ ದತ್ತಾಂಶವನ್ನು ಕಾಪಾಡುವುದರೊಂದಿಗೆ ಸಿಮ್ ಕಾರ್ಡ್ ಬದಲಾಯಿಸಿದರೆ ಮಾಹಿತಿ ರವಾನಿಸುತ್ತದೆ. ದತ್ತಾಂಶವನ್ನು ಅಳಿಸಬೇಕಾದರೆ ರಿಮೋಟ್ ರೀತಿಯಲ್ಲಿ ಅಳಿಸಿಹಾಕುವ ಸೌಲಭ್ಯ ಒದಗಿಸುತ್ತದೆ. ಸದ್ಯ ಲ್ಯಾಪ್‌ಟಾಪ್ ಇರುವ ಜಾಗದ ಸೆಲ್‌ಫೋನ್ ಟವರ್ ಲೊಕೇಶನ್ ಮತ್ತು ಜಿಪಿಎಸ್ ಡೇಟವನ್ನು ಬಳಕೆದಾರನ ಫ್ಲಿಕ್ಕರ್ ಖಾತೆಗೆ ರವಾನಿಸುತ್ತದೆ. ಈ ಮಾಹಿತಿ ಆಧರಿತ ಬಳಕೆದಾರ ಲ್ಯಾಪ್‌ಟಾಪ್ ಇರುವ ಸ್ಥಳದ ನಕಾಶೆ ರಚಿಸಿಕೊಳ್ಳಬಹುದು. ಇದು ಕೊಡುವ ಸ್ಥಳ ಮಾಹಿತಿ ಎಷ್ಟು ನಿಖರ ಎಂದರೆ ಸೂಚಿಸಿದ ಸ್ಥಳದ 300 ಅಡಿ ಒಳಗೆ ಕಳುವಾದ ವಸ್ತು ಸಿಗುತ್ತದೆ.
ಸೀಮಿತ ಸೌಲಭ್ಯಗಳಿರುವ ಉಚಿತ ಆವೃತ್ತಿಯ ತಂತ್ರಾಂಶಕ್ಕಾಗಿ ಹಾಗೂ ಹೆಚ್ಚಿನ ಮಾಹಿತಿಗೆ ಜಾಲತಾಣ  : http://www.gadgettrak.com

ಸಲಹೆ:  
ಅಂತರ್ಜಾಲದಲ್ಲಿ ಇಂತಹ ನೂರಾರು (anti-theft program) ತಂತ್ರಾಂಶಗಳು ಲಭ್ಯವಿದೆ. ಉಚಿತ ಎಂದುಕೊಂಡು ಸಿಕ್ಕವುಗಳನ್ನು ಡೌನ್‌ಲೋಡ್ ಮಾಡಿ ಅನುಸ್ಥಾಪಿಸಿಕೊಳ್ಳಬೇಡಿ. ದುಡ್ಡು ಕೊಡದೆ ಈ ತಂತ್ರಾಂಶವನ್ನು ಹಾಕಿಕೊಂಡರೆ ಅದು ಯಾವ ಮಾಹಿತಿಯನ್ನೂ ನೀಡುವುದಿಲ್ಲ.
ಅಷ್ಟೇ ಅಲ್ಲ, ನೀವು ಉಚಿತ ಆವೃತ್ತಿ ಬಳಸುತ್ತಿದ್ದರೆ, ನಿಮ್ಮ ವೈಯಕ್ತಿಕ ವಿವರ, ಪಾಸ್‌ವರ್ಡ್, ಗಣಕಯಂತ್ರದ ಮಾಹಿತಿ ಜೊತೆಗೆ ನೀವಿರುವ ಸ್ಥಳದ ನಕ್ಷೆಯೊಂದಿಗೆ ಸೀದಾ ಇದನ್ನು ನಿರ್ಮಿಸಿದ ತಂತ್ರಾಂಶ ಕಂಪನಿಗಳಿಗೇ ವರದಿ ಒಪ್ಪಿಸುತ್ತದೆ. ಸುಮ್ಮನೆ ರಿಸ್ಕ್ ಯಾಕೆ? ದುಡ್ಡು ಕೊಟ್ಟು ಲ್ಯಾಪ್‌ಟಾಪ್‌ನೊಳಗೊಂದು ಖಾಸಗಿ ಗೂಢಚಾರನನ್ನು ನೇಮಿಸಿ, ನಿಶ್ಚಿಂತೆಯಾಗಿರಿ.....

ಸಂಸ್ಕೃತ ಪದಕೋಶ

ನಿಮಗೆ ಅಷ್ಟೋ ಇಷ್ಟೋ ಸಂಸ್ಕೃತ ಸುಭಾಷಿತಗಳು ಗೊತ್ತು. ಅನೇಕ ಕಾವ್ಯಗಳ ಶ್ಲೋಕಗಳೆಲ್ಲ ಗೊತ್ತು. ಆದರೆ ಕೆಲವು ಪದಗಳು ಯಾಕೋ ಅರ್ಥವಾಗುತ್ತಿಲ್ಲ. ನೀವು ಹೀಗೆಲ್ಲ ಅಂದುಕೊಳ್ಳುತ್ತಿದ್ದರೆ ಈ ಜಾಲತಾಣಕ್ಕೆ ಭೇಟಿ ನೀಡಬಹುದು. "ಸ್ಪೋಕನ್ ಸಂಸ್ಕೃತ್"ಎಂಬ ಈ ಜಾಲತಾಣದಲ್ಲಿ ನಿಮಗೆ ಬೇಕಾದ ಪದಗಳನ್ನು ಕೊಟ್ಟು ಅದರ ಅರ್ಥವನ್ನು ಹುಡುಕಬಹುದು. ಇದು ನಾವು ಹುಡುಕಿದ ಪದದ ಅರ್ಥವನ್ನು ಇಂಗ್ಲಿಷ್ ನಲ್ಲಿ ತೋರಿಸುತ್ತದೆ. ಜೊತೆಗೆ ದೇವನಾಗರೀ ಲಿಪಿಯಲ್ಲಿ ಆ ಪದ ಕಾಣಿಸುತ್ತದೆ. ಇಂಗ್ಲಿಷ್ ಅರ್ಥವನ್ನೂ ತಿಳಿಯಬಹುದು. ಜೊತೆಗೆ ಅದರ ವ್ಯಾಕರಣಾಂಶಗಳೂ ಇಲ್ಲಿವೆ. ಸಂಸ್ಕೃತ ಆಸಕ್ತರು ಈ ಜಾಲತಾಣಕ್ಕೆ ಭೇಟಿ ನೀಡಿ ಪದ- ಅರ್ಥಗಳನ್ನು ಹುಡುಕಿಕೊಳ್ಳಬಹುದು. 
ಜಾಲತಾಣ ಕೊಂಡಿ: http://spokensanskrit.de

1500 ಥೀಮ್ ಗಳೊಂದಿಗೆ ಹೊಸ ಬ್ರೌಸರ್ ಎಪಿಕ್

ಸುಮಾರು 1500ಕ್ಕೂ ಥೀಮ್ ಗಳೊಂದಿಗೆ ಶ್ರೀಮಂತಿಕೆಯೇ ಮೈವೆತ್ತಿದ್ದಂತಿರುವ ಎಪಿಕ್ ಮೊದಲ ನೋಟಕ್ಕೆ ಎಲ್ಲರನ್ನು ಮೋಡಿ ಮಾಡದೆ ಬಿಡದು.
ಆಂಟಿ ವೈರಸ್ ವುಳ್ಳ ಪ್ರಪ್ರಥಮ ಬ್ರೌಸರ್, ಖಾಸಗಿ ಬ್ರೌಸಿಂಗ್, ಸುರಕ್ಷತೆಯಲ್ಲಿ ಉತ್ಕೃಷ್ಟ ಸೇವೆ, ಪ್ರಥಮ ಬಾರಿಗೆ ಸೈಡ್ ಬಾರ್ ನಲ್ಲಿ ಆಪ್ಸ್ ಇರುವ ಬ್ರೌಸರ್ ಎಂದೆಲ್ಲ ಗುಣವಿಶೇಷಗಳೊಂದಿಗೆ ಜಾಲಿಗರ ಮುಂದೆ ನಿಲ್ಲುವ ಎಪಿಕ್ ತನ್ನ ಘೋಷಣೆಗೆ ತಕ್ಕಂತೆ ಇದೆ.
ಮೊಟ್ಟ ಮೊದಲ ಅನುಭವ ಕಥನ ಹಾಗೂ ಅನಿಸಿಕೆ ಹೀಗಿದೆ.
* ಮೊದಲಿಗೆ ವಿಡಿಯೋವುಳ್ಳ ಅಥವಾ ಫ್ಲಾಶ್ ಬಳಕೆ ಮಾಡಿರುವ ವೆಬ್ ಸೈಟ್ ತೆರೆಯಲು ಪ್ರಯತ್ನಿಸಿದೆ. ವೆಬ್ ತಾಣದಲ್ಲಿ ಫ್ಲಾಶ್ ಅಥವಾ ವಿಡಿಯೋ ಇರುವುದು ಕಂಡು ಬಂದ ತಕ್ಷಣ, ವಿಡಿಯೋವನ್ನು ಪ್ರತ್ಯೇಕವಾಗಿ ಸೈಡ್ ಬಾರ್ ನಲ್ಲಿ ವೀಕ್ಷಿಸಲು ಅಥವಾ ಪ್ಲೇ ಲಿಸ್ಟ್ ಗೆ ಸೇರಿಸಲು ಕೇಳುವ ಸಂದೇಶ ಬರುತ್ತದೆ.
* ಎಪಿಕ್ ತೆರೆದ ತಕ್ಷಣ ಕಣ್ ತಣಿಸುವುದು ಅದರ ಥೀಮ್ ಅಥವಾ ವಾಲ್ ಪೇಪರ್ ಆಗಿ ಅಥವಾ ಎರಡನ್ನೂ ಅಳವಡಿಸುವ ಸೌಲಭ್ಯ ಇದೆ.
* ಜನ, ಸಂಸ್ಕೃತಿ, ಧರ್ಮ, ಪ್ರಾದೇಶಿಕತೆ, ಕ್ರೀಡೆ, ಸಿನಿಮಾ, ಕಲೆ, ಸಂಗೀತ, ರಾಜಕೀಯ, ಪ್ರಕೃತಿ ಹೀಗೆ ವಿವಿಧ ರಂಗದ ಹೆಸರಾಂತ ವ್ಯಕ್ತಿ ಸ್ಥಳ ಹಾಗೂ ವಿಶೇಷ ಚಿತ್ರಗಳ ಥೀಮ್ ಗಳು ಅದ್ಭುತವಾಗಿದೆ. ವೀತಮ್ಮ ನೆಚ್ಚಿನ ಥೀಮ್ ರೂಪಿಸಿಕೊಳ್ಳಲು ವೀಕ್ಷಕರಿಗೆ ಅವಕಾಶ ಕೂಡ ಇದೆ.
* ಕನ್ನಡಕ್ಕೂ ತಕ್ಕಮಟ್ಟಿನ ಮಾನ್ಯತೆ ಸಿಕ್ಕಿದ್ದು ಡಾ. ರಾಜ್ ಕುಮಾರ್ , ಡಾ.ವಿಷ್ಣುವರ್ಧನ್ ರಿಂದ ಹಿಡಿದು ರಮ್ಯಾ, ಗಣೇಶ್, ಉಪೇಂದ್ರ ಎಲ್ಲಾ ಥೀಮ್ ನಲ್ಲಿ ಸೇರಿಬಿಟ್ಟಿದ್ದಾರೆ.ಕರ್ನಾಟಕದ ವೈಶಿಷ್ಟ್ಯಗಳು ಎಲ್ಲಾ ರಂಗದ ಥೀಮ್ ಗಳಲ್ಲೂ ಇರುವುದು ವಿಶೇಷ.
* ಆದರೂ ಥೀಮ್ ಗಳಲ್ಲಿ ಕೆಲವು ಎದ್ದು ಕಾಣಬಲ್ಲ ಲೋಪಗಳಿವೆ. ಆಧ್ಯಾತ್ಮ ನಾಯಕರಲ್ಲಿ ಶ್ರೀರಾಮಕೃಷ್ಣ ಪರಮಹಂಸ,       
* ವಿಶ್ವದೆಲ್ಲೆಡೆಯ ಸುದ್ದಿ ನಿಮ್ಮ ಬೆರಳ ತುದಿಯಲ್ಲಿ ಸಿಗುತ್ತದೆ. ವಿಶ್ವ, ರಾಷ್ಟ್ರೀಯ, ಸ್ಥಳೀಯ, ಕ್ರೀಡೆ, ಮನರಂಜನೆ, ಅರೋಗ್ಯದ   ಸುದ್ದಿಗಳು ತಕ್ಷಣಕ್ಕೆ ಸಿಗುತ್ತದೆ.
* ನೆಚ್ಚಿನ ಸುದ್ದಿವಾಹಿನಿಗಳನ್ನು ಓದಲು ನೀವು ಬುಕ್ ಮಾರ್ಕ್ ಮಾಡಿಕೊಳ್ಳುವ ಬದಲು ರೆಡಿಮೇಡ್ ಬುಕ್ ಮಾರ್ಕ್ ಆಗಿ ಸಿದ್ಧವಾಗಿದೆ ಎಪಿಕ್.
* ಕ್ರಿಕೆಟ್ ಲೈವ್ ಸ್ಕೋರ್ ಹಾಗೂ ಸುದ್ದಿಗೆ ಪ್ರತ್ಯೇಕ ವಿಭಾಗ ರೂಪಿಸಲಾಗಿದೆ.
* ವ್ಯಾಪಾರ ವಹಿವಾಟು, ಷೇರುಪೇಟೆ ಸುದ್ದಿಯನ್ನು ಒಂದೆಡೆ ಸಿಗುವಂತೆ ಮಾಡಿದ ಎಪಿಕ್ ನಿಜಕ್ಕೂ ಅಭಿನಂದನಾರ್ಹ.
* ನಗರವಾರು ಕಾರ್ಯಕ್ರಮಗಳ ಪಟ್ಟಿ ಸಿಗುತ್ತದೆ.
* ಜೋಕ್ಸ್ ಫಾರ್ ದ ಡೇ ಒಳ್ಳೆ ಪ್ರಯೋಗ.
* ಎನ್ ಡಿಟಿವಿ ಲೈವ್ ಟಿವಿಯ ವಿವಿಧ ವಿಡಿಯೋ ಇದೆ.
* ವಿಡಿಯೋ ವಿಭಾಗದಲ್ಲಿ ಕನ್ನಡ ಸೇರಿದಂತೆ ಇತರೆ ಭಾಷೆಯ ಸುದ್ದಿ ಹಾಗೂ ಮನರಂಜನೆ.
ಆಂಟಿ ವೈರಸ್ ಒಂದು ಬಿಗ್ ಪ್ಲಸ್ ಎನ್ನಬಹುದಾದರೂ ಆಗಲೇ ಗಣಕದಲ್ಲಿರುವ ಆಂಟಿ ವೈರಸ್ ಗೂ ಇದಕ್ಕೂ ಏನು ವ್ಯತ್ಯಾಸ ಇದು ಹೇಗೆ ವಿಭಿನ್ನ. ಎರಡರ ನಡುವೆ ಪೈಪೋಟಿಯಲ್ಲಿ ಗಣಕದ ಗತಿಯೇನು ಎಂಬ ಚಿಂತೆ ಮೂಡುವುದು ಸಹಜ. ನಿಮ್ಮ ಗಣಕದಲ್ಲಿ ಈಗಾಗಲೇ ಆಂಟಿವೈರಸ್ ಸರಿ ಇದ್ದರೆ ಬ್ರೌಸರ್ ಅಂಟಿ ವೈರಸ್ ಗೆ ಹೆಚ್ಚಿನ ತೊಂದರೆ ಕೊಡದಿರುವುದೇ ಲೇಸು. ಇಲ್ಲದಿದ್ದರೆ ಬ್ರೌಸರ್ ಅಂಟಿ ವೈಸರ್ ಅತ್ಯುತ್ತಮ ಸಾಧನ.
* ಮಿನಿ ಟೆಕ್ಸ್ಟ್ ಎಡಿಟರ್(word processor) ಹಾಗೂ ಇಂಡಿಕ್ ಟ್ರಾನ್ಸ್ ಲಿಟೆರೇಷನ್ ಟೂಲ್ ಗಳು ಬ್ರೌಸರ್ ನಿಂದ ನಿಮ್ಮನ್ನು ಹೊರಕ್ಕೆ ಕಳಿಸದೆ ಹಿಡಿದಿಟ್ಟುಕೊಳ್ಳಲು ಮಾಡಿದ ಸೌಲಭ್ಯ ಎನ್ನಬಹುದು.
* ಎಪಿಕ್ ರೈಟ್ ನಲ್ಲಿ ಯೂನಿಕೋಡ್ ಇಂಡಿಕ್ ಅಥವಾ ಇತರೆ ಶೈಲಿಯಲ್ಲಿ ಬೇಕಾದ್ದು ಬರೆಯಬಹುದು.
* ವೆಬ್ ಸ್ನಿಪೆಟ್ಸ್ ಸುಲಭವಾಗಿ ಬಳಕೆ ಮಾಡಲು ಅನುಕೂಲ ಕಲ್ಪಿಸಲಾಗಿದೆ.
* ವಿಡಿಯೋ ಪ್ಲೇ ಲೀಸ್ಟ್ ಇದೆ. ಎಕ್ಸ್ ಪ್ಲೋರರ್ , ಕಾರ್ಯಕ್ರಮ ಪಟ್ಟಿ ತಯಾರಿಕೆಗೆ ಅವಕಾಶ, ಟೈಮರ್ ಇತ್ಯಾದಿ ಕೂಡ ಲಭ್ಯ.
* ಸಾಮಾಜಿಕ ಜಾಲತಾಣ ಫೇಸ್ ಬುಕ್, ಆರ್ಕುಟ್ , ಜೀಮೇಲ್, ಯಾಹೂ ಮೇಲ್ ಅಲ್ಲದೆ ಟ್ವಿಟ್ಟರ್ ಕೂಡಾ ಸೈಡ್ ಬಾರ್ ನಲ್ಲಿ ಸ್ಥಾನ ಗಳಿಸಿದೆ.
* ಗೂಗಲ್ ಮ್ಯಾಪ್ಸ್ , ಕೆಲಸ ಹುಡುಕುವವರಿಗೆ ಜಾಲತಾಣಗಳು, ಪ್ರವಾಸಿಗರಿಗೆ ತಾಣ ಸೂಚಿಗಳಿವೆ.
* ಉಳಿದಂತೆ ಫೈರ್ ಫಾಕ್ಸ್ ನಲ್ಲಿದ್ದಂತೆ ಡೌನ್ ಲೋಡ್ , ಹಿಸ್ಟರಿ, ಆಡ್ ಆನ್ಸ್ ಇದೆ.
* ಕೊನೆಯದಾಗಿ ಹಾಗೂ ಮುಖ್ಯವಾಗಿ ಎಪಿಕ್ ನ ವಿಶೇಷ ಅಡ್ ಆನ್ಸ್ ಗಳು ತುಂಬಾ ಸಹಕಾರಿಯಾಗಿ ಹೊರ ಹೊಮ್ಮಿದೆ.
* ಫೈಲ್ ಮ್ಯಾನೇಜರ್ ಸೌಲಭ್ಯದ ಮೂಲಕ ಜೀಮೇಲ್ ಖಾತೆ ಬಳಸಿ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿಡಬಹುದಾಗಿದೆ.
 
ಆದ್ರೆ ಗಣಕದ ಮೆಮೊರಿಯನ್ನು ಎಪಿಕ್ ಹೆಚ್ಚು ಬಳಕೆ ಮಾಡುವುದರ ಮೂಲಕ ಕಡಿಮೆ ವೇಗದ ಗಣಕಗಳಲ್ಲಿ ಜನಪ್ರಿಯತೆ ಕಳೆದು ಕೊಳ್ಳುವ ಸಂಭವವೂ ಇದೆ. ಒಟ್ಟಾರೆ ಹೊಸದರ ಅನ್ವೇಷಣೆ, ಹುಡುಕಾಟಕ್ಕೆ ಹಾದಿ ತೋರುವ ಬ್ರೌಸರ್ ಗಳಿಗೆ ಜಾಲಿಗರು ಜಾರಿ ಹೋಗುವುದಂತೂ ಖಂಡಿತಾ.
WOT ಎಂಬ ಸುರಕ್ಷಿತ ಬ್ರೌಸಿಂಗ್ ಗಾಗಿ ಇರುವ ಸಾಧನ ಕೂಡಾ ಇದರಲ್ಲಿದೆ. ಇದರ ಮೂಲಕ ನೀವು ವೀಕ್ಷಿಸುವ ಬ್ರೌಸರ್ ನ ಸುರಕ್ಷತೆ ಬಗ್ಗೆ ವೋಟ್ ಮಾಡಿ ತಿಳಿಸಬಹುದು. ಆತಂಕಕಾರಿ ತಾಣಗಳು ಕಂಡು ಬಂದರೆ ತಡೆಗಟ್ಟಲು ಇದು ಸಹಕಾರಿಯಾಗಿದೆ.
ಕೊನೆಯದಾಗಿ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಮೊಝಿಲ್ಲಾಗಾಗಿ ಎಪಿಕ್ ಅನ್ನು ಅಭಿವೃದ್ಧಿಪಡಿಸಿದ್ದು ಹಿಡನ್ ರಿಫ್ಲೆಕ್ಸ್ ಎಂಬ ಬೆಂಗಳೂರಿನ ಪುಟ್ಟ ಕಂಪೆನಿ. ಇನ್ನೇಕೆ ತಡ ನಿಮ್ಮ ಗಣಕಕ್ಕೆ ಎಪಿಕ್ ಬ್ರೌಸರ್ http://www.epicbrowser.com ಅನ್ನು ಇಳಿಸಿಕೊಳ್ಳಿ.

Wednesday, August 22, 2012

ಟಿ.ವಿ ನೋಡುಗರಿಗೆ ಗೈಡ್


ನ್ಯಾಷನಲ್ ಜಿಯಾಗ್ರಫಿ ಚಾನೆಲ್ನಲ್ಲಿ ಒಳ್ಳೆಯ ಡಾಕ್ಯುಮೆಂಟರಿ ಬಂದಿದೆ ಎಂದೋ ಅಥವಾ ಸ್ಟಾರ್ ಮೂವಿಸ್ ನಲ್ಲಿ ಒಳ್ಳೆಯ ಸಿನಿಮಾ ಬಂದಿದೆ, ನೋಡಿ ಎಂದೋ ನಿಮ್ಮ ಗೆಳೆಯರು ಹೇಳಿರಬಹುದು. ಆದರೆ ಬರುವ ಒಂದು ವಾರದ ಅವಧಿಯಲ್ಲಿ ಯಾವ್ಯಾವ ಚಾನೆಲ್ ಗಳಲ್ಲಿ ಏನೇನು ಕಾರ್ಯಕ್ರಮವಿದೆ ಅಂತ ತಿಳಿದುಕೊಳ್ಳಬೇಕೇ? "tvnow.in'' ಜಾಲತಾಣಕ್ಕೆ ಬನ್ನಿ.ಇಲ್ಲಿ ಹತ್ತಾರು ಭಾಷೆಗಳ ಹಲವು ಚಾನೆಲ್ ಗಳಲ್ಲಿ ಪ್ರಸಾರವಾಗುವ ಕಾಯಕ್ರಮ ಯಾವ ವಿಭಾಗಕ್ಕೆ (ವಿಜ್ಞಾನ, ಇತಿಹಾಸ, ಸಿನಿಮಾ, ಡಾಕ್ಯುಮೆಂಟರಿ, ಕ್ರೀಡೆ, ಸಂಗೀತ, ಹಾಸ್ಯ ಇತ್ಯಾದಿ) ಸೇರಿದ್ದು ಎಂಬ ವಿವರಗಳೂ ಇವೆ. ಟಿವಿಯಲ್ಲಿ ಬೆಸ್ಟ ಕಾಯಕ್ರಮಗಳನ್ನು ಮಾತ್ರ ನೋಡುತ್ತೇನೆ ಎಂದುಕೊಳ್ಳುವವರು ಬುಕ್ ಮಾಕ್ ಮಾಡಿಕೊಳ್ಳಬೇಕಾದ ತಾಣವಿದು. www.tvnow.in

Saturday, August 18, 2012

ಕನ್ನಡಕಗಳಿಲ್ಲದೆ 3ಡಿ ನೋಡಿ
ಇನ್ನು ಮುಂದೆ 3ಡಿ ಸಿನಿಮಾಗಳನ್ನು ವೀಕ್ಷಿಸುವಾಗ ಕನ್ನಡಕಗಳನ್ನು ಧರಿಸಬೇಕಾಗಿಲ್ಲ. ಆರಾಮವಾಗಿ ಬರಿಯ ಕಣ್ಣುಗಳಿಂದ ಸಿನಿಮಾ ವೀಕ್ಷಿಸಬಹುದು.

ಮುಂದಿನ ತಿಂಗಳು ಬರ್ಲಿನ್‌ನಲ್ಲಿ ನಡೆಯುವ ಅಂತಾರಾಷ್ಟ್ರೀಯ ಸಿನಿಮಾ ಸಂಘಟಕರ ಉದ್ಯಮದಲ್ಲಿ ಅಟೋಸ್ಟಿರಿಯೋಸ್ಕೋಪಿಕ್ ಡಿಸ್‌ಪ್ಲೇಗೆ 3ಡಿ ಸಿನಿಮಾಗಳನ್ನು ಹೊಂದಿಸುವಂತಹ ನೂತನ ತಂತ್ರಜ್ಞಾನ ಬಿಡುಗಡೆಗೊಳ್ಳಲಿದೆ. ಫ್ರಾನ್‌ಹಾಫರ್, ಹೆನ್ರಿಕ್ ಹರ್ಟ್ಸ್ ಸಂಸ್ಥೆಯ ಸಂಶೋಧಕರು ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ.

ಇನ್ನು ಮುಂದೆ ಮನೆಯಲ್ಲೆ ಕೂತು ಆರಾಮವಾಗಿ ಸೋಫಾಕ್ಕೆ ಆತುಕೊಂಡು 3ಡಿ ಸಿನಿಮಾಗಳನ್ನು ಎಂಜಾಯ್ ಮಾಡಬಹುದು. ಕನ್ನಡಕಗಳ ಕಿರಿಕಿರಿಯಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ.

3ಡಿ ಸಿನಿಮಾಗಳು ಬ್ಲೂ ರೇ ತಂತ್ರಜ್ಞಾನದ ರೂಪದಲ್ಲಿದ್ದು ಎರಡು ಆಯಾಮಗಳನ್ನು ಒಳಗೊಂಡಿದೆ. ಎರಡು ಕಣ್ಣುಗಳಿಗೆ ಎರಡು ಪ್ರತ್ಯೇಕ ಇಮೇಜ್‌ಗಳು ದಕ್ಕುತ್ತವೆ. ಅಟೋಸ್ಟಿರಿಯೋಸ್ಕೋಪಿಕ್ ತಂತ್ರಜ್ಞಾನ ಇದಾಗಿದ್ದು ಇಲ್ಲಿ ಕಾಣಿಸುವ 3 ಆಯಾಮದ ಚಿತ್ರಗಳನ್ನು ಯಾವ ಕೋನದಲ್ಲಾದರೂ ನೋಡಿ ಆನಂದಿಸಬಹುದು. ಸೋಫಾದ ಮೇಲೆ ಎಲ್ಲಿ ಕೂತರೂ ನೋಡಲು ಅನುಕೂಲಕರವಾಗಿರುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಈಗಾಗಲೆ ಇದಕ್ಕೆ ಸಂಬಂಧಪಟ್ಟ ಸಾಫ್ಟ್‌ವೇರ್ ಅನ್ನು ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.

ಅಟೋಸ್ಟಿರಿಯೋಸ್ಕೋಪಿಕ್ ಡಿಸ್‌ಪ್ಲೇಗಳು ಮಾರುಕಟ್ಟೆಗೆ ಇನ್ನಷ್ಟೆ ಬರಬೇಕಿದ್ದು ಗ್ರಾಹಕರು ಇನ್ನಷ್ಟು ಕಾಯಬೇಕಾಗಿದೆ. ಉಚಿತ ತಂತ್ರಾಂಶ ಹಾಗೂ ವಿವರಗಳಿಗೆ ಜಾಲತಾಣ: http://www.dimencodisplays.com

Saturday, August 11, 2012

50ಗಿಗಾ ಪಿಕ್ಸೆಲ್ ಕ್ಯಾಮರಾದತ್ತ

ಸದ್ಯಕ್ಕೀಗ ನಾವು ಬಳಸುವ ಕ್ಯಾಮರಾಗಳು ಮೆಗಾಪಿಕ್ಸೆಲ್‌ನಲ್ಲಿ ತಮ್ಮ ಸ್ಪಷ್ಟತೆಯನ್ನು ಹೊಂದಿರುತ್ತವೆ.ಮೆಗಾಪಿಕ್ಸೆಲ್ ಕ್ಯಾಮರಾದಲ್ಲಿ, ಸ್ಪಷ್ಟ ಚಿತ್ರ ಪಡೆಯಲು, ಚಿತ್ರ ತೆಗೆದ ಜಾಗದ ವಿಸ್ತೀರ್ಣ ಕಂಪ್ಯೂಟರ್ ತೆರೆಯಲ್ಲಿ ಪ್ರದರ್ಶಿಸುವ ಪುಟದಲ್ಲಿರುವ ಶಬ್ದವು ಹಿಡಿಸುವ ಜಾಗವೆಂದು ಕೊಂಡರೆ, ಗಿಗಾಪಿಕ್ಸೆಲ್ ಕ್ಯಾಮರಾವನ್ನು ಇಡೀ ಕಂಪ್ಯೂಟರ್ ತೆರೆಯ ಜಾಗದ ಚಿತ್ರ ಹಿಡಿಯಲು ಬಳಸಬಹುದು.ದೊಡ್ಡ ವಿಸ್ತೀರ್ಣದ ಪ್ರದೇಶವನ್ನು ಕ್ಯಾಮರದಲ್ಲಿ ಸೆರೆ ಹಿಡಿಯಬೇಕಾದಾಗ, ಆ ವಿಸ್ತೀರ್ಣದ ಪ್ರದೇಶದ ಸಣ್ಣ ಸಣ್ಣ ಭಾಗಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿದು, ನಂತರ ಅವನ್ನು ಕಂಪ್ಯೂಟರಿನಲ್ಲಿ ಜೋಡಿಸುವುದೇ ಸದ್ಯ ಲಭ್ಯವಿರುವ ತಂತ್ರ. ಸಂಶೋಧಕರೀಗ ಹಲವು ಕ್ಯಾಮರಾಗಳನ್ನು ಬಳಸಿ, ಒಂದೇ ಬಾರಿಗೆ ಇಡೀ ವಿಸ್ತೀರ್ಣವನ್ನು ಸೆರೆಹಿಡಿಯ ಬಾರದೇಕೆ ಎಂದು ಆಲೋಚಿಸುತ್ತಿದ್ದಾರೆ.
ಇದನ್ನು ಸಾಧಿಸಲು ಡ್ಯೂಕ್‌ನ ಇಂಜಿನಿಯರಿಂಗ್ ಕಾಲೇಜಿನ ಸಂಶೋಧಕರು ಕೀಟಗಳ ಸಂಯುಕ್ತಾಕ್ಷಿಗಳ ರಚನೆಯನ್ನು ಬಳಸುತ್ತಿದ್ದಾರೆ. ಇದರಲ್ಲಿ ಕೀಟದ ಕಣ್ಣಿಗೆ ಒಂದೇ ಲೆನ್ಸ್ ಮೂಲಕ ಬಂದ ನೋಟ, ಹಲವು ಭಾಗಗಳಾಗಿ ಪ್ರತ್ಯೇಕಗೊಳ್ಳುತ್ತದೆ.

ಡ್ಯೂಕ್‌ನ ಸಂಶೋಧಕರ ಅವೇರ್28 ಎನ್ನುವ ವ್ಯವಸ್ಥೆಯಲ್ಲಿ, ಒಂದು ದೊಡ್ಡ ಲೆನ್ಸ್ ಮೂಲಕ ಬಂದ ದೊಡ್ಡ ವಿಸ್ತೀರ್ಣದ ನೋಟ, ತೊಂಬತ್ತೆಂಟು ಭಾಗಗಳಾಗಿ ವಿಭಜನೆ ಹೊಂದಿ, ತೊಂಬತ್ತೆಂಟು ಬೇರೆ ಬೇರೆ ಸಂವೇದಕಗಳಲ್ಲಿ ದಾಖಲಾಗುವ ಮೂಲಕ ಅವನ್ನು ಕಂಪ್ಯೂಟರಿನಲ್ಲಿ ಸಮಗ್ರ ಚಿತ್ರವಾಗಿ ಮೂಡುತ್ತದೆ. ಹೆಚ್ಚಿನ ನೋಟಕ್ಕೆ: http://goo.gl/YfXth

ಪೇಫೋನು ಬೂತ್ ವೈ-ಫೈ ಹಾಟ್‌‍ಸ್ಪಾಟು

ಹಿಂದೆಲ್ಲಾ ಎಸ್‌ಟಿಡಿ ಅಥವಾ ಐಎಸ್‌ಟಿಡಿ ಕರೆಗಳನ್ನು ಮಾಡಲು, ರಸ್ತೆ ಬದಿಯ ಫೋನ್ ಬೂತುಗಳನ್ನು ಅವಲಂಬಿಸುವವರ ಸಂಖ್ಯೆ ಹೆಚ್ಚಿತ್ತು. ಮೊಬೈಲ್ ಕರೆಗಳು ಜನಪ್ರಿಯವಾದ ನಂತರ ಅವುಗಳತ್ತ ಹಾಯುವವರ ಸಂಖ್ಯೆ ಇಳಿಯುತ್ತಾ ಬಂತು. ಈಗ ಅಂತಹ ಫೋನು ಬೂತುಗಳು,ನಾಣ್ಯ ಬಳಸಿ ಫೋನು ಮಾಡುವವರೇ ಇಲ್ಲವೆನ್ನಬೇಕು. ನ್ಯೂಯಾರ್ಕ್ ನಗರದಲ್ಲಿಯೂ ಪೇಫೋನು ಬೂತುಗಳು ಹನ್ನೆರಡು ಸಾವಿರದಷ್ಟಿವೆ. ಒಂದು ಕಾಲದಲ್ಲಿ ಇಲ್ಲಿನ ಸುಮಾರು ಎಂಟು ದಶಲಕ್ಷದಷ್ಟು ಜನಸಂಖ್ಯೆಗೆ ಇವು ಸಂಪರ್ಕ ಕೊಂಡಿಯಾಗಿದ್ದುವು. ಈಗ ಅವು ಮೂಲೆಗುಂಪಾಗಿವೆ. ಅವುಗಳನ್ನು ಉಚಿತ ವೈ-ಫೈ ಬಿಂದುಗಳಾಗಿಸಿ, ಅವುಗಳ ಮುನ್ನೂರು ಅಡಿ ಪರಿಧಿಯಲ್ಲಿ ಇಂಟರ್ನೆಟ್ ಜಾಲಾಟಕ್ಕೆ ಸಾಧ್ಯವಾಗಿಸುವ ಮೂಲಕ, ಹಳೆಯ ಬೂತುಗಳು ಮತ್ತೆ ಬಳಕೆಗೆ ಬರುವಂತೆ ಮಾಡುವ ಪ್ರಸ್ತಾಪ ಇದೆ. ಪ್ರಾಯೋಗಿಕವಾಗಿ, ಸುಮಾರು ಇಪ್ಪತ್ತು ಪೇಪೋನು ಬೂತುಗಳೀಗ ವೈ-ಫೈ ಹಾಟ್‌‍ಸ್ಪಾಟುಗಳಾಗಿವೆ. ಜನರೀಗ ಅವುಗಳ  ಸುತ್ತ, ತಮ್ಮ ಸಾಧನಗಳಲ್ಲಿ ಇಂಟರ್ನೆಟ್ ಸಂಪರ್ಕವನ್ನು ಪಡೆಯಲು ಬಳಸುವ ಮೂಲಕ ಪೇಪೋನು ಬೂತುಗಳು ಮತ್ತೆ ಜನಸಂದಣಿಯನ್ನಾಕರ್ಷಿಸುತ್ತಿವೆ. ಹೆಚ್ಚಿನ ನೋಟಕ್ಕೆ :  http://goo.gl/1NpW8

SMS ಮಾಡಿ ವಸ್ತುವು ಅಸಲಿ-ನಕಲಿ ಎಂದು ತಿಳಿದುಕೊಳ್ಳಿ

ನೀವು ಕೊಂಡ ವಸ್ತುವು ಅಸಲಿಯೋ ನಕಲಿಯೋ ಎನ್ನುವುದು ಗೊತ್ತಾಗದಷ್ಟು ಸಾಮ್ಯತೆ ಇರುವ ಹಾಗೆ ನಕಲು ಮಾಡುವ ಕಂಪೆನಿಗಳಿಗಿನ್ನು ಉಳಿಗಾಲವಿಲ್ಲ. ಫಾರ್ಮಾಸೆಕ್ಯೂರ್ ಎನ್ನುವ ಕಂಪೆನಿಯು ಪ್ರತಿ ಅಸಲಿ ವಸ್ತುವಿಗೆ ಒಂದು ಪ್ರತ್ಯೇಕ ಕೋಡ್ ಅನ್ನು ಮುದ್ರಿಸಲು ಕಂಪೆನಿಗಳ ಜತೆ ಒಡಂಬಡಿಕೆ ಮಾಡಿಕೊಂಡಿದೆ. ಈ ಸಂಖ್ಯೆಯನ್ನು ಫಾರ್ಮಾಸೆಕ್ಯೂರ್ ಕಂಪೆನಿಯ 9901099010 ಮೊಬೈಲ್ ಸಂಖ್ಯೆಗೆ  ಎಸ್ಸೆಮ್ಮೆಸ್ ಮಾಡಿ, ವಸ್ತುವು ಅಸಲಿ-ನಕಲಿ ಎಂದು ತಿಳಿದುಕೊಳ್ಳಬಹುದು. ಹಲವು ಔಷಧ ಕಂಪೆನಿಗಳ ಜತೆ ಒಡಂಬಡಿಕೆ ಈಗಾಗಲೇ ಆಗಿದೆ. ಇನ್ನುಳಿದ ವಸ್ತುಗಳನ್ನು ತಯಾರಿಸುವ ಕಂಪೆನಿಗಳಿಗೂ ಇದನ್ನು ಅಳವಡಿಸಲು ತಯಾರಿ ನಡೆದಿದೆ. ಹೆಚ್ಚಿನ ಮಾಹಿತಿಗೆ : http://www.pharmasecure.com ಹಾಗೂ http://verifymymedicine.com

ಎಟಿಎಂ, ಎಟಿಪಿ, ಈಗ ಎಟಿಎಫ್

ಹಣ ಪಡೆಯಲು ಎಟಿಎಂ (ATM), ವಿದ್ಯುತ್ ಬಿಲ್ ಪಾವತಿಸಲು ಎಟಿಪಿ (ATP) ನಂತರ ಆದಾಯಕರ ಪಾವತಿಸಲು ಎಟಿಎಫ್ (ATF) ಅಂದರೆ ಅಟೊಮೇಟೆಡ್ ಟ್ಯಾಕ್ಸ್ ಫೈಲಿಂಗ್ ಬಂದಿದೆ.
Taxsmile.com ಕಂಪೆನಿಯು ಟ್ಯಾಕ್ಸ್ ರಿಟರ್ನ್‌ನ್ನು ಸಿದ್ಧ ಪಡಿಸಿ, ಆನ್‌ಲೈನ್‌ನಲ್ಲಿ ಅದರ ಸಲ್ಲಿಕೆಗೆ ಅನುವು ಮಾಡುವ ಎಟಿಎಫ್‌ಗಳನ್ನು ಕೆಫೆ ಡೇ ಹೋಟೆಲಿನ ಸಹಭಾಗಿತ್ವದೊಡನೆ ಸ್ಥಾಪಿಸಿದೆ. ದರ ಇನ್ನೂರೈವತ್ತು ರುಪಾಯಿ.ಆದಾಯಕರ ಪಾವತಿ ವಿವರಗಳನ್ನು ಟೈಪಿಸಿದರೆ, ಎಟಿಎಫ್ ಆದಾಯಕರ ರಿಟರ್ನ್ ಫಾರ್ಮನ್ನು ಸಿದ್ಧ ಪಡಿಸುತ್ತದೆ. ಡಿಜಿಟಲ್ ಸಹಿ ಇದ್ದರೆ ಆನ್‌ಲೈನ್ ಮೂಲಕ ಇದನ್ನು ಆದಾಯಕರ ಇಲಾಖೆಗೆ ಸಲ್ಲಿಸಬಹುದು.ಈ ಸೇವೆ ಬೆಂಗಳೂರು ಮತ್ತು ಮುಂಬೈಯಲ್ಲಿ ಸದ್ಯ ಲಭ್ಯವಿದೆ.

ಔಟ್‌ಲುಕ್ (outlook) ಹೊಸ ಮಿಂಚಂಚೆ

ಮೈಕ್ರೋಸಾಫ್ಟ್ ಕಂಪೆನಿಯು ಹಾಟ್‌ಮೇಲ್ ಎನ್ನುವ ಮಿಂಚಂಚೆ ಸೇವೆಯನ್ನು ಜನರಿಗೆ ಒದಗಿಸುತ್ತಿತ್ತು. ಈಗ ಅದು ಔಟ್‌ಲುಕ್ ಎಂಬ ಹೊಸ ಹೆಸರನ್ನು ಬಳಸಿ ಹೊಸ ಗಿರಾಕಿಗಳ ಮನಗೆಲ್ಲಲು ಪ್ರಯತ್ನಿಸಲಿದೆ. ಜಿಮೇಲ್ ಅಂತಹ ಗೂಗಲ್ ಮಿಂಚಂಚೆಯ ಜನಪ್ರಿಯತೆಗೆ ಕಡಿವಾಣ ಹಾಕಲು ಔಟ್‌ಲುಕ್‌ಗೆ ಸಾಧ್ಯವಾಗಬಹುದೇ ಎನ್ನುವುದು ಕುತೂಹಲದ ವಿಷಯವಾಗಿದೆ.ಮೊದಲ ಗಂಟೆಯಲ್ಲಿಯೇ ಸುಮಾರು ದಶಲಕ್ಷ ಜನ ಔಟ್‌ಲುಕ್ ಸೇವೆಗೆ ನೋಂದಾಯಿಸಿಕೊಂಡು, ಬೆನ್ನು ತಟ್ಟಿರುವುದು ವಿಶೇಷವಾಗಿದೆ. ಕಂಪೆನಿಯ ಸಿಇಓ ಆದ ಬಾಮರ್ ಅವರ ಹೆಸರಿನ ಮಿಂಚಂಚೆಯನ್ನು ಯಾರೋ ಈಗಾಗಲೇ ನೋಂದಾಯಿಸಿಕೊಂಡಿರುವ ಘಟನೆಯೂ ಕುತೂಹಲ ಮೂಡಿಸಿದೆ. ನಿವು ಇನ್ನೂ ಔಟ್ ಲುಕ್ ಮಿಂಚಂಚೆ ಖಾತೆ ಹೊಂದಿಲ್ಲವಾದರೆ? ನೊಂದಾಯಿಸಿಕೊಳ್ಳಲು ಜಾಲತಾಣ ವಿಳಾಸ ಕೊಂಡಿ: http://goo.gl/cMUK7

ಬ್ರಹ್ಮಾಂಡದ 3ಡಿ ನಕ್ಷೆ

ಖಗೋಳಪ್ರಿಯರಿಗೊಂದು ಸಿಹಿ ಸುದ್ದಿ! ಬ್ರಹ್ಮಾಂಡದ ರಹಸ್ಯಗಳು ನಿಗೂಢ. ಅದನ್ನು ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ ಬೃಹತ್ 3ಡಿ ನಕ್ಷೆ ರೂಪುಗೊಂಡಿದೆ.

ವಿಶಾಲ ಆಕಾಶ, ನಕ್ಷತ್ರ ಪುಂಜಗಳು, ಕಪ್ಪು ರಂಧ್ರಗಳು ಇವೆಲ್ಲವನ್ನೂ ನಕ್ಷೆಯಲ್ಲಿ ಬಿಂಬಿಸಲಾಗಿದೆ. ಸ್ಲೋನ್ ಡಿಜಿಟಲ್ ಸ್ಕೈ ಸಮೀಕ್ಷೆ-3(ಎಸ್‌ಡಿಎಸ್‌ಎಸ್-3) ಆಧರಿಸಿ ಈ ನಕ್ಷೆಯನ್ನು ರೂಪಿಸಲಾಗಿದೆ. ಲಕ್ಷಾಂತರ ನಕ್ಷತ್ರ ಪುಂಜಗಳು, ಅವುಗಳು ಇರುವ ಸ್ಥಳ ಮತ್ತು ಅಂತರಗಳನ್ನು ನಕ್ಷೆಯಲ್ಲಿ ಗುರುತಿಸಲಾಗಿದೆ.

ಈ ತನಕ ಲಭ್ಯವಿರದ ಬ್ರಹ್ಮಾಂಡದ ಬೃಹತ್ ನಕ್ಷೆಯನ್ನು ನಾವು ಬಯಸಿದ್ದೆವು. ಬ್ರಹ್ಮಾಂಡ ವಿಕಾಸವನ್ನು ಅರ್ಥ ಮಾಡಿಕೊಳ್ಳಲು ಈ ನಕ್ಷೆ ನೆರವಾಗಲಿದ. ಜಾಲತಾಣ ಕೊಂಡಿ: http://www.sdss3.org

Wednesday, August 8, 2012

ಕನ್ನಡದ ಮೊದಲ ಸುಭಾಷಿತ ಆಂಡ್ರಾಯ್ಡ್ App !


ಕನ್ನಡಿಗರಾದ ನಮಗೆ ನಮ್ಮ ಭಾಷೆಯ ಬಗ್ಗೆ ಎಷ್ಟು ಹೆಮ್ಮೆ, ಆಭಿಮಾನವಿದೆಯೋ ಅಷ್ಟೇ ಗೌರವ ನಮಗೆ ಸಂಸ್ಕೃತದ ಬಗ್ಗೆಯೂ ಇದೆ. ಹಾಗಾಗಿ  ಅದರ ರಸಸ್ವಾದ ನಮ್ಮ ಜನರಿಗೂ ದಕ್ಕಲಿ ಎಂದೇ ಹಲವಾರು ಮಹನೀಯರು ಸಂಸೃತದಿಂದ ಕನ್ನಡಕ್ಕೆ ಬೃಹತ್ ಗ್ರಂಥಗಳಿಂದ ಹಿಡಿದು, ಭಗವದ್ಗೀತೆಯನ್ನೂ ಅನುವಾದಿಸಿ ಅದರ ರುಚಿಯನ್ನು ಉಣಬಡಿಸಿದ್ದಾರೆ.
ಈ ನಿಟ್ಟಿನಲ್ಲಿ ಹೊಸದೊಂದು ಪ್ರಯತ್ನ ನಡೆಸಿ ಸಂಸ್ಕೃತ ಸುಭಾಷಿತಗಳನ್ನು ಪದ್ಯಾನುವಾದ ಮಾಡಿರುವ ಹಂಸಾನಂದಿ ಕಾವ್ಯನಾಮಾಂಕಿತ ರಾಮಪ್ರಸಾದ್ ಕೆ ವಿ ರವರ ಖ್ಯಾತ ಪುಸ್ತಕ ಹಂಸನಾದ ದ ಆಂಡ್ರಾಯ್ಡ್ ಆಪ್ ಒಂದನ್ನು ಸಿದ್ದಪಡಿಸಿದೆ, ಸಾರಂಗ ಇನ್ಫೋಟೆಕ್.

ಆಕೃತಿ ಪ್ರಕಾಶನದ ಗುರುಪ್ರಸಾದ್ ಹೊರತಂದಿರುವ ಪುಸ್ತಕವನ್ನ ಸಾರಂಗ ಇನ್ಫೋಟೆಕ್ ಸಂಸ್ಥೆಯ ಹರಿಪ್ರಸಾದ್ ನಾಡಿಗ್ ಅವರು ಸಂಪದ ವೆಬ್ ತಾಣದ ಮೂಲಕ ಎಲ್ಲರಿಗೂ ಚಿರಪರಿಚಿತರು. ಈಗ ಈ ಪುಸ್ತಕದ ಆಂಡ್ರಾಯ್ಡ್ ಆಪ್ ಅನ್ನು ಹೊರತಂದಿದ್ದು, ಇದು ಪುಸ್ತಕವನ್ನು ಆಂಡ್ರಾಯ್ಡ್ ಆಪ್ ಆಗಿ ಮಾಡಿದ ಕನ್ನಡದ ಮೊದಲ ಸುಭಾಷಿತ ಆಪ್ ಆಗಿದೆ.
ಈ ಉಚಿತ ಆಪ್(App) ಮೂಲಕ ನೀವು ಪುಸ್ತಕದಲ್ಲಿರುವ ಸುಮಾರು 150ಕ್ಕೂ ಹೆಚ್ಚು ಸುಭಾಷಿತಗಳನ್ನು ಕನ್ನಡದಲ್ಲಿ ಓದುವುದಷ್ಟೇ ಅಲ್ಲದೆ, ನಿಮ್ಮ ಸ್ನೇಹಿತರಿಗೆ ಫೇಸ್ ಬುಕ್ ಹಾಗು ಟ್ವಿಟರ್ ಮೂಲಕ ಶೇರ್ ಕೂಡ ಮಾಡಬಹುದಾಗಿದೆ. ವಿಶೇಷವೇನೆಂದರೆ ಇದನ್ನು ಯೂನಿಕೋಡ್ ಬೆಂಬಲವಿಲ್ಲದ ಸಾಧನಗಳಲ್ಲೂ ಓದಬಹುದಾಗಿದೆ.
ಇದನ್ನು ಅಭಿವೃದ್ಧಿಪಡಿಸಿದ ಸಾರಂಗ ಇನ್ಫೋಟೆಕ್ ನ ಹರಿಪ್ರಸಾದ್ ನಾಡಿಗ್ ಹಾಗು ಪುಸ್ತಕದ ಲೇಖಕ ಹಂಸಾನಂದಿ ರವರಿಗೆ ನಮ್ಮ ಅಭಿನಂದನೆಗಳು.
ಇದನ್ನು ಗೂಗಲ್ ಪ್ಲೇ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು.http://goo.gl/LPggN

ಕಂಪ್ಯೂಟರ್ ಮೂಲಕ ಸ್ಮಾರ್ಟ್ ಫೋನ್ ನಿಯಂತ್ರಣ

ನಿಮ್ಮ ಕಂಪ್ಯೂಟರ್ ನ ಮೂಲಕವೆ ನಿಮ್ಮ ಸ್ಮಾರ್ಟ್ ಫೋನ್ ಅನ್ನು ನಿಯಂತ್ರಿಸಿ, ಯಾವುದೇ USB ಹಾಗು ತಂತು ಸಂಪರ್ಕವಿಲ್ಲದ, ಫೈಲುಗಳನ್ನು ಕಳುಹಿಸಲು, ಆಪ್ ಗಳನ್ನು install ಮಾಡಲು, ರಿಂಗ್ ಟೋನ್, ವಾಲ್ ಪೇಪರ್ ಕಳುಹಿಸಲು, ನಿಮ್ಮ ಫೋನಿನ ಸ್ಕ್ರೀನ್ ಶಾಟ್ ತೆಗೆದುಕೊಳ್ಳಲು ಈಗ ಆಂಡ್ರಾಯ್ಡ್ ಆಪ್ ಒಂದು ಬಂದಿದೆ.
ಇದನ್ನು ಉಪಯೋಗಿಸಲು ನಿಮ್ಮ ಕಂಪ್ಯೂಟರ್/ಲ್ಯಾಪ್ಟಾಪ್ ಹಾಗು ಸ್ಮಾರ್ಟ್ ಫೋನ್ ಒಂದೇ ವೈಫೈ ಸಂಪರ್ಕ ಹೊಂದಿದ್ದರೆ ಸಾಕು. ಹೀಗಿದ್ದಾಗ ನೀವು ಯಾವುದೇ ವೆಬ್ ಬ್ರೌಸರ್( ಇಂಟರ್ನೆಟ್ ಎಕ್ಸ್ಪ್ಲೋರರ್ 8 ,ಗೂಗಲ್ ಕ್ರೋಮ್ 12, ಫೈರ್ ಫಾಕ್ಸ್ 3.6, ಸಫಾರಿ 5) ಇದ್ದರೂ ಅದರ ಮೂಲಕ ನಿಮ್ಮ ಸ್ಮಾರ್ಟ್ ಫೋನ್ ಅನ್ನು ನಿಯಂತ್ರಿಸಬಹುದಾಗಿದೆ, ಈ ಆಪ್ ಮೂಲಕ.
ಇದನ್ನು ಉಪಯೋಗಿಸಿ ಕನೆಕ್ಟ್ ಮಾಡುವ ವಿಧಾನ :
1) Airdroid ಎನ್ನುವ ಈ App ಅನ್ನು ಮೊದಲಿಗೆ ನಿಮ್ಮ ಸ್ಮಾರ್ಟ್ ಫೋನ್ ಗೆ ಡೌನ್ಲೋಡ್ ಮಾಡಿಕೊಳ್ಳಿ.
2) ನಂತರ ಕಂಪ್ಯೂಟರ್ ನಲ್ಲಿ ಯಾವುದೇ ವೆಬ್ ಬ್ರೌಸರ್ open ಮಾಡಿ http://web.airdroid.com ಎಂದು ಟೈಪ್ ಮಾಡಿ ನಿಮ್ಮ ಸ್ಮಾರ್ಟ್ ಫೋನ್ ಗೆ ಕಳುಹಿಸಲಾಗಿರುವ  ಪಾಸ್ವರ್ಡ್ ಅನ್ನು ಟೈಪ್ ಮಾಡಿ.
3) ಪಾಸ್ವರ್ಡ್ ಹೊಡೆದ ಮೇಲೆ ಅದು ನಿಮ್ಮ ಫೋನಿನ ಕಾಂಟ್ಯಾಕ್ಟ್, ಆಪ್ಸ್ ಹಾಗು ಮಲ್ಟಿ ಮೀಡಿಯಾ ಫೈಲನ್ನು ತೋರಿಸುತ್ತದೆ.
4)ಇದನ್ನು ಉಪಯೋಗಿಸಿಕೊಂಡು ನೀವು ಮೆಸೇಜ್ ಕಳುಹಿಸಬಹುದು, ಫೈಲುಗಳನ್ನು ಕಳುಹಿಸಬಹುದು, ಆಪ್ ಗಳನ್ನು install ಮಾಡಬಹುದು ಹಾಗು ಫೋನಿನ ಸ್ಕ್ರೀನ್ ಶಾಟ್ ಅನ್ನು ಕೂಡ ತೆಗೆದುಕೊಳ್ಳಬಹುದಾಗಿದೆ.
ಈ ಉಚಿತ ಆಪ್ ಗೂಗಲ್ ಪ್ಲೇ ನಲ್ಲಿ ಸಿಗಲಿದ್ದು, ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

Friday, August 3, 2012

ಅಡುಗೆ, ಮೊಬೈಲ್ ಚಾರ್ಜ್ Stove!


ಮಳೆಗಾಲ ಶುರು ಆಯ್ತು ಅಂದ್ರೆ ಬೆಂಗಳೂರಿನ ಸುತ್ತಮುತ್ತ, ಪಶ್ಚಿಮ ಘಟ್ಟಗಳಲ್ಲಿ ನೆಂದು ಚಾರಣ ಹೊರಡೋದಕ್ಕೆ ಮನಸ್ಸು ಹಾತೊರೆಯುತ್ತೆ. ಕೆಲಸ ಮಾಡಿ stress ಆಗಿರೋ ಮೆದುಳಿಗೆ ಒಂಥರಾ ರಿಲ್ಯಾಕ್ಸ್ ಆಗಲು ಟ್ರೆಕ್ಕಿಂಗ್ ಅತ್ಯುತ್ತಮವಾಗಿದ್ದು, ಪ್ರಕೃತಿಯ ಮಡಿಲಲ್ಲಿ ಕೂಲ್ ಆಗಿ ಎಂಜಾಯ್ ಮಾಡ್ತಾ ಅದನ್ನ ಸವಿಯೋ ಮಜಾನೇ ಬೇರೆ.
ಅದರಲ್ಲೂ ಒಂದಕ್ಕಿಂತ ಹೆಚ್ಚು ದಿನ ಚಾರಣಕ್ಕೆ ಹೊರಡುವವರು ಅಡುಗೆ ಮಾಡಿಕೊಳ್ಳುವುದಕ್ಕೆ ಅಂತ ಸ್ಟವ್, ಹೆಚ್ಚುವರಿ ಬಟ್ಟೆ, ಮೊಬೈಲ್ ನ ಬ್ಯಾಟರಿ, ಎಲ್ಲಾ ತೆಗೆದುಕೊಂಡು ಹೋಗಬೇಕು. ಸ್ಮಾರ್ಟ್ ಫೋನ್ ಇದ್ದರಂತೂ ಎಷ್ಟೇ ಚಾರ್ಜ್ ಮಾಡಿ ತೆಗೆದುಕೊಂಡು ಹೋದರೂ ಪ್ರಯೋಜನವಾಗುವುದಿಲ್ಲ. ನೆಟ್ವರ್ಕ್ ಇಲ್ಲದಿದ್ದರೂ ರಾತ್ರಿ ಕ್ಯಾಂಪ್ ಫೈರ್ ಹಾಕೊಂಡು ಹಾಡು ಕೇಳೋಣಾ ಅಂತಂದ್ರೂ ಏನೂ ಮಾಡಕ್ಕಾಗಲ್ಲ.
ಇದಕ್ಕೆಲ್ಲಾ ಒಂದೇ shot ನಲ್ಲಿ ಪರಿಹಾರ ಕೊಡೋದಕ್ಕೆ ಅಂತ ಬೈಯೋ ಲೈಟ್ ಅಂತ ಕಂಪನಿಯೊಂದು ಸ್ಟವ್ ಒಂದನ್ನು ಕಂಡುಹಿಡಿದಿದ್ದು, ಇದನ್ನು ಉಪಯೋಗಿಸಿಕೊಂಡು ಕಾಡಿನಲ್ಲಿ ಸಿಗುವ ಕಡ್ಡಿ, ಪುರಲೆಗಳನ್ನ ಬಳಸಿ ಅಡುಗೆ ಮಾಡಬಹುದು ಹಾಗೆಯೇ USB ಮೂಲಕ ಚಾರ್ಜ್ ಆಗುವ ಎಲ್ಲ ಎಲೆಕ್ಟ್ರಾನಿಕ್ ಗ್ಯಾಡ್ಜೆಟ್ ಹಾಗು ಸ್ಮಾರ್ಟ್ ಫೋನುಗಳನ್ನು ಚಾರ್ಜ್ ಮಾಡಬಹುದಾಗಿದೆ!
ಬರಿ ಟ್ರೆಕ್ಕಿಂಗ್ ಮಾಡಲಷ್ಟೇ ಅಲ್ಲದೆ ತೋಟದ ಮನೆಗಳಲ್ಲಿ ಅಡುಗೆ ಮಾಡಿಕೊಳ್ಳಲು, ಹಳ್ಳಿಗಳಲ್ಲಿ ಕೂಡ ಇದನ್ನು ಉಪಯೋಗಿಸಬಹುದು, ಹೊಗೆರಹಿತವಾಗಿ ಕಾರ್ಯನಿರ್ವಹಿಸುತ್ತದೆ.
ಕೇವಲ 935 ಗ್ರಾಂ ತೂಕದ ಈ ಬಯೋಲೈಟ್ ಸ್ಟವ್ ಕೊಂಡೊಯ್ಯಲು ಹಗುರವಾಗಿದ್ದು, ಒಂದು ಲೀಟರ್ ನೀರನ್ನು 4 ನಿಮಿಷದಲ್ಲಿ ಬಿಸಿ ಮಾಡಬಹುದಾಗಿದೆ.
ಸ್ಟೈನ್ಲೆಸ್ ಸ್ಟೀಲ್ ನಿಂದ ಮಾಡಲ್ಪಟ್ಟಿರುವ ಇದರ ಬೆಲೆ ಸುಮಾರು 7 ಸಾವಿರ ರೂಪಾಯಿ ಆಗಿದ್ದು (VAT ಹಾಗು ಇತರೆ ತೆರಿಗೆಗಳು ಹೊರತುಪಡಿಸಿ) ನೀವು ಇಲ್ಲಿ ಬುಕ್ ಮಾಡಬಹುದಾಗಿದೆ.  http://shop.biolitestove.com/BioLite-CampStove_p_15.html


Wednesday, August 1, 2012

ಎರಡು ಎಚ್ಡಿ ಟಚ್ಸ್ಕ್ರೀನ್ಗಳುಳ್ಳ ಕಲ್ಪನೆಯ ಮೈಕ್ರೋಸಾಫ್ಟ್ ಸರ್ಫೇಸ್ ಮೊಬೈಲ್


ಕಲ್ಪನೆಯ ಎರಡು ಎಚ್ಡಿ ಟಚ್ಸ್ಕ್ರೀನ್ಗಳುಳ್ಳ ಮೈಕ್ರೋಸಾಫ್ಟ್ ಸರ್ಫೇಸ್ ಮೊಬೈಲ್ ವಿಂಡೋಸ್ 8 ತಂತ್ರಾಂಶ ಹೊಂದಿದ್ದು. ಮೇಲ್ಮೈ ದೂರವಾಣಿ ಸಂಪರ್ಣ ಪ್ರೊಫೈಲ್ ತನಕ ಕಾಣವ ಮತ್ತು ಬಹಳ ದುಂಡದಾದ ಸರ್ಪೇಸ್ ಮೊಬೈಲ್ ಸಾಧವಾಗಿದೆ. ಫೋನ್ನನ್ನು ತಿರುಗಿಸುವ ಮೂಲಕ ಮತ್ತೊಂದು ಪರದೆಯನ್ನು ತೆರೆಯುವುದರ ಮೂಲಕ, ಬಹುಕಾರ್ಯಕ ಒಂದು ಹೊಸ ರೀತಿಯ inaugurates ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ.ಪರದೆಯ ಪ್ರದೇಶಗಳನ್ನು ಸ್ವಲ್ಪ ಮಟ್ಟಿಗೆ ಬಾಗಿದ ಮತ್ತು ದುಂಡಗೆ ವಿನ್ಯಾಸ ಮಾಡಿರುವುದರಿಂದ ಎರಡು ಪರದೆಗಳನ್ನು ಬದಿಯಿಂದ ನೋಡಬಹುದು.ಸರ್ಫೇಸ್ ಮೊಬೈಲ್ 8 ಮೆಗಾಪಿಕ್ಸೆಲ್ ಹಿಂದಿನ ಮತ್ತು ಮುಂದಿನ ಕ್ಯಾಮೆರಾ ಹೊಂದಿರುತ್ತವೆ ಹಾಗೂ ಚಾಸಿಸ್ ದಪ್ಪ ಕೇವಲ 8mm ಆಗಿದೆ. ಹೆಚ್ಚಿನ ನೋಟಕ್ಕೆ ಜಾಲತಾಣ ಕೋಂಡಿ : http://goo.gl/rhhfb

ಗೂಗಲ್ ನಿಂದ 2013 ಕ್ಕೆ "ಕೀ ಲೈಮ್ ಪೈ 6.0" ಆಂಡ್ರಾಯ್ಡ್ ತಂತ್ರಾಂಶ

ಆಂಡ್ರಾಯಿಡ್ ಆಪರೇಟಿಂಗ್ ವ್ಯವಸ್ಥೆಯ ವಿವಿಧ ಆವೃತ್ತಿಗಳಿಗೆ ತಿನಸಿನ ಹೆಸರು ಇಡುವ ಸಂಪ್ರದಾಯವನ್ನು ಗೂಗಲ್ ರೂಢಿಗೆ ತಂದಿದೆ.ಸದ್ಯದ ಆವೃತ್ತಿಯನ್ನು ಜೆಲ್ಲಿಬೀನ್ ಎಂಬ ಹೆಸರಿನಿಂದ ಕರೆಯಲಾಗುತ್ತಿದೆ. ಮುಂದಿನ ಆವೃತ್ತಿಯು ಮುಂದಿನ ವರ್ಷ 2013ಕ್ಕೆ ಸಿದ್ಧವಾಗಲಿದ್ದು, ಅದಕ್ಕೆ ಕೀ ಲೈಮ್ ಪೈ 6.0 ಎಂಬ ಹೆಸರಿಡಲಾಗಿದೆ.ಹೊಸ ಆವೃತ್ತಿಯನ್ನು ನಕ್ಸಸ್2, ಸ್ಯಾಂ‌ಮ್ಸಂಗ್‌ನ ಗ್ಯಾಲಕ್ಸಿ ನಕ್ಸಸ್ 2 ಮುಂತಾದ ಫೋನುಗಳಲ್ಲಿ ಬಳಸಲು ತಕ್ಷಣ ಆರಂಭಿಸಬಹುದು. ಆದರೆ ಇತರ ಆಂಡ್ರಾಯಿಡ್ ಫೋನುಗಳಲ್ಲಿ ಕೀ ಲೈಮ್ ಪೈ 6.0 ಬಳಕೆಯ ವಿಷಯವನ್ನು ಯಂತ್ರಾಂಶ ತಯಾರಕರು ನಿರ್ಧರಿಸಬೇಕಾಗುತ್ತದೆ. ಸದ್ಯ ಈಗಿನ ಆಂಡ್ರಾಯಿಡ್ ಟ್ಯಾಬ್, ಫೋನುಗಳಲ್ಲಿ ಆಂಡ್ರಾಯಿಡ್ ಜಿಂಜರ್ ಬ್ರೆಡ್, ಹನಿಕೋಂಬ್ ಮತ್ತು ಐಸ್ಕ್ರೀಮ್ ಸ್ಯಾಂಡ್ವಿಚ್ ಆವೃತ್ತಿ ಬಳಕೆಯಾಗುತ್ತಿದೆ.
 
ಗೂಗಲ್ ಕಂಪನಿಯು ಇದುವರೆವಿಗೂ ಬಿಡುಗಡೆಗೊಳಿಸಿರುವ ಆಂಡ್ರಾಯ್ಡ್  ಮೊಬೈಲ್ ತಂತ್ರಾಂಶಗಳು
ಆಂಡ್ರಾಯ್ಡ್  1.5 ಓಎಸ್ (ಕಪ್ಕೇಕ್) (ಏಪ್ರಿಲ್ 2009)
ಆಂಡ್ರಾಯ್ಡ್  1.6 ಓಎಸ್ (ಡೋನಟ್) (ಸೆಪ್ಟೆಂಬರ್ 2009)
ಆಂಡ್ರಾಯ್ಡ್  2.0 ಓಎಸ್ (ಎಕ್ಲೈರ್) (ಅಕ್ಟೋಬರ್ 2009)
ಆಂಡ್ರಾಯ್ಡ್  2.2 ಓಎಸ್ (ಫ್ರೊಯೋ) (ಮೇ 2010)
ಆಂಡ್ರಾಯ್ಡ್  2.3 ಓಎಸ್ (ಜಿಂಜರ್ಬ್ರೆಡ್) (ಡಿಸೆಂಬರ್ 2010)
ಆಂಡ್ರಾಯ್ಡ್  3.0 ಓಎಸ್ (ಹನಿಕೋಂಬ್) (ಫೆಬ್ರವರಿ 2011)
ಆಂಡ್ರಾಯ್ಡ್  4.0 ಓಎಸ್ (ಐಸ್ಕ್ರೀಮ್ ಸ್ಯಾಂಡ್ವಿಚ್) (ಅಕ್ಟೋಬರ್ 2011)
ಆಂಡ್ರಾಯ್ಡ್  5.0 ಓಎಸ್ ("ಜೆಲ್ಲಿ ಬೀನ್") (ಬಹುಶಃ 2012ರ ವರ್ಷಾಂತ್ಯದಲ್ಲಿ ತಂತ್ರಾಂಶ ಸಂಪರ್ಣ ಬಳಕೆಗೆ ಬರಬಹುದು)
ಆಂಡ್ರಾಯ್ಡ್  6.0 ಓಎಸ್ ("ಕೀ ಲೈಮ್ ಪೈ") (ಮುಂದಿನ ಬಿಡುಗಡೆ ಬಹುಶಃ 2013 ರಲ್ಲಿ )