WEBSITE, INVENTORY SOFTWARE, CCTV CAMERA , COMPUTER & LAPTOP SALES & SERVICE, TABLETS, VIDEOGRAPHY, PHOTOGRAPHY, PROJECTOR ,VIDEO & AUDIO EDITING, VHS TO CD,DVD,BLURAY DISC CONVERSATION, DESIGNING & MANY MORE...
ಸುಸ್ವಾಗತ ನಿಮ್ಮ ಕಲ್ಪನೆ ನಮ್ಮ ಸೃಷ್ಠಿ !!! ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು.
ಈಗ ಮಲ್ಟಿಮೀಡಿಯವನ್ನು e-Speak ಕನ್ನಡದಲ್ಲಿ ಕೇಳಿ!

Friday, August 31, 2012

ಟಾಟಾ ಪವನ ಕಾರ್ Tata AirPod CAR

ಪೆಟ್ರೋಲ್ ಕಾರ್, ಡೀಸೆಲ್ ಕಾರ್, ಜೈವಿಕ ಇಂಧನ ಕಾರ್, ವಿದ್ಯುತ್ ಕಾರ್, ನೀರಿನ ಕಾರ್ ಮುಂತಾದ ಮರುಬಳಕೆಯ ಕಾರುಗಳನ್ನು ತಯಾರಿಸಿದ್ದು ಆಯಿತು, ಹಾರುವ ಕಾರನ್ನು ಅಭಿವೃದ್ದಿಪಡಿಸಿದ್ದಾಯಿತು. ಇದೀಗ (Air-Powered Car) ಸಂಕುಚಿತ ಗಾಳಿಯಿಂದ ಚಲಿಸುವ ಕಾರನ್ನು ನಮ್ಮ ದೇಶದ ಟಾಟಾ ಮೋಟರ್ಸ್ ರವರು ಹೊರತರುತ್ತಿದ್ದಾರೆ.

ಗಾಳಿ ಕಾರು!
ಕಾರ್ಬನ್-ಫೈಬರ್‌ನಿಂದ ಮಾಡಿದ ಬಹಳ ಗಟ್ಟಿಯಾದ ಸಿಲಿಂಡರ್‌ನಲ್ಲಿ 30 ಎಂಪಿಎ (4500 ಪಿಎಸ್‌ಐ ಅಥವಾ 310 ಬಾರ್) ಒತ್ತಡದಲ್ಲಿ ಭರ್ತಿಯಾಗಿರುವ ಗಾಳಿಯು ಹೊರಬರುವಾಗ ಉಂಟುಮಾಡುವ ಶಕ್ತಿಯ ಮೂಲಕವೇ ಯಂತ್ರದಲ್ಲಿ (ಹಿಂದೆ ಹಬೆಯಂತ್ರದಲ್ಲಿ  ಸಂಚಯವಾದ ಶಕ್ತಿ ರಭಸದಿಂದ ಹೊರಬಿದ್ದಾಗ ಉಗಿಬಂಡಿ ಚಲಿಸಿದಂತೆ) ಚಾಲನೆಯುಂಟಾಗುತ್ತದೆ.

ಇದೇ `ಕಂಪ್ರೆಸ್ಡ್ ಏರ್ ಕಾರ್`ನ ಸರಳ ತಂತ್ರಜ್ಞಾನ. ಇಂಥ `ಒತ್ತಡದ ಗಾಳಿ ಶಕ್ತಿ`ಯ ಕಾರಿನ ಪ್ರಯೋಗ 1920ರಿಂದಲೂ ನಡೆಯುತ್ತಿದೆ. ಈ ಕಾರಿನಲ್ಲಿ ಒತ್ತಡ ಗಾಳಿಯಿಂದ ಶಕ್ತಿ ಹೊರಬೀಳುತ್ತಿದ್ದರೆ ಅದೇ ಶಕ್ತಿಯ ಒಂದಂಶವನ್ನು ಬಳಸಿಕೊಂಡು ಸಿಲಿಂಡರ್‌ಗೆ ಮತ್ತೆ ಗಾಳಿ ತುಂಬಿ ಒತ್ತಡ ಉಂಟುಮಾಡುವುದಕ್ಕೆ ಪಂಪ್ ಸಹ ಜೋಡಣೆ ಆಗಿರುತ್ತದೆ. ಜತೆಗೆ ಆರಂಭದಲ್ಲಿ ಚಾಲನೆಗೆ ಶಕ್ತಿ ನೀಡಲು ಪುಟ್ಟ ಬ್ಯಾಟರಿಯೂ ಇರುತ್ತದೆ.

ಈ ಎಂಡಿಐ ತಂತ್ರಜ್ಞಾನದೊಟ್ಟಿಗೇ ಬ್ಯಾಟರಿ ಅಥವಾ ಗ್ಯಾಸೊಲಿನ್‌ನಿಂದ ಚಾಲನೆಗೊಳ್ಳುವ ಹೈಬ್ರಿಡ್ ಕಾರುಗಳ ಪ್ರಯೋಗವೂ ವಿವಿಧ ದೇಶಗಳಲ್ಲಿ ನಡೆಯುತ್ತಿದೆ.
`ಎಂಡಿಐ` ತಂತ್ರಜ್ಞಾನ ಎಂಬುದು `ಕಾನ್-ರಾಡ್ ಸಿಸ್ಟೆಂ`. ಇದರಲ್ಲಿ ಯಂತ್ರದ ಪಿಸ್ಟನ್ ಕಾರಿನ ಮಧ್ಯ, ಮೇಲ್ಭಾಗದಲ್ಲಿ 70 ಡಿಗ್ರಿ ಸೈಕಲ್ಸ್ ಲೆಕ್ಕದಲ್ಲಿ ಜೋಡಣೆಯಾಗಿ ಚಲಿಸುವಂತಹುದ್ದಾಗಿರುತ್ತದೆ.

ಈ ವಾಹನದ ಇನ್ನೊಂದು ವಿಶೇಷವೆಂದರೆ ಗೇರ್‌ಗಳ ಬದಲಾವಣೆ ಸ್ವಯಂಚಾಲಿತ ಹಾಗೂ ಎಲೆಕ್ಟ್ರಾನಿಕ್ ಸಿಸ್ಟಂ(ಎಂಡಿಐ ಅಭಿವೃದ್ಧಿಪಡಿಸಿದ್ದು) ಮೂಲಕ ನಿಯಂತ್ರಿತ. ಕಾರಿನ ವೇಗವೂ ಕಂಪ್ಯೂಟರೀಕೃತ. 

ಸಾಂಪ್ರದಾಯಿಕ ಇಂಧನಗಳಾದ ಪೆಟ್ರೋಲ್, ಡೀಸೆಲ್ ಬಳಸದೇ ಸಂಕುಚಿತ ಗಾಳಿಯಿಂದ ಚಲಿಸುವ ಟಾಟಾ ಮೋಟರ್ಸ್ ಏರ್ ಕಾರ್ ಯೋಜನೆಯೂ ಯಾವುದೇ ಅಡೆತಡೆಗಳಿಲ್ಲದೇ ಎರಡನೇ ಹಂತ ಪ್ರವೇಶಿಸಿದೆ. ಮೊದಲನೆಯ ಹಂತದಲ್ಲಿ ಕಂಪನಿಯು ಎರಡು ಕಾರುಗಳಿಗೆ ಪವನ ಕಾರ್ ತಂತ್ರಜ್ಞಾನ ಅಳವಡಿಸಿತ್ತು. ಇವೆರಡು ಕಾರುಗಳು ರಸ್ತೆಯಲ್ಲಿ ಯಶಸ್ವಿಯಾಗಿ ಚಲಿಸಿದ್ದವು. ಇದೀಗ ಇದನ್ನು ಉತ್ಪಾದನೆ ಮಾಡಿ, ಮಾರಾಟಕ್ಕೆ ಸಿದ್ಧಗೊಳಿಸುವುದು ಎರಡನೇ ಹಂತವಾಗಿದೆ. ಎರಡನೇ ಹಂತದಲ್ಲಿ ಕಂಪನಿಯು ಫೋಸಿಲ್ ಇಂಧನ ರಹಿತ ತಂತ್ರಜ್ಞಾನದ ಮೂಲಕ ಏರ್ ಕಾರ್ ಅಭಿವೃದ್ಧಿಪಡಿಸಲಿದೆ. ಏರ್ ಕಾರ್ ಬಿಡಿಭಾಗ ನಿರ್ಮಿಸುವುದು ಮತ್ತು ಏರ್ ಕಾರ್ ಮಾರಾಟಕ್ಕೆ ಸಿದ್ಧಗೊಳಿಸುವುದು ಕೂಡ ಈ ಹಂತದಲ್ಲಿ ಸೇರಿದೆ.

ಶೀಘ್ರದಲ್ಲಿ ಟಾಟಾ ಮೋಟರ್ಸ್ ದೇಶದಲ್ಲಿ ಸುಮಾರು 6 ಸಾವಿರ ಇಂತಹ ಕಾರುಗಳನ್ನು ಹೊರತರಲಿದೆ ಎಂದು ವರದಿಗಳು ಹೇಳಿವೆ. ಈ ಪವನಕಾರಿನ ಗಾಳಿಸಿಲಿಂಡರ್ ಒಮ್ಮೆ ಪೂರ್ತಿ ಫಿಲ್ ಮಾಡಿದರೆ ಸುಮಾರು 300 ಕಿಲೋಮೀಟರ್ ಸಾಗಬಹುದಂತೆ. ಇದಕ್ಕೆ ತಗುಲುವ ವೆಚ್ಚ ಕೇವಲ 2 ಡಾಲರ್. ಅಂದರೆ ಸುಮಾರು 110 ರುಪಾಯಿಗಳಾಗಬಹುದು.

ಇದು ಹಗುರ ಕಾರು. ಇದನ್ನು ಫೈಬರ್ ಗ್ಲಾಸ್ ಬಳಸಿ ಉತ್ಪಾದಿಸಲಾಗುತ್ತದೆ. ಇದು ಎಲೆಕ್ಟ್ರಾನಿಕ್ ಕಾರುಗಳಿಗಿಂತ ಅಗ್ಗವಾಗಿರಲಿದೆ. ಇದು ನಗರ ರಸ್ತೆ ಸವಾರಿಗೆ ಸೂಕ್ತವಾಗಿರಲಿದೆ ಎಂದು ಕಂಪನಿ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಜಾಲತಾಣ ಕೊಂಡಿ:  http://goo.gl/Xso49

No comments:

Post a Comment