WEBSITE, INVENTORY SOFTWARE, CCTV CAMERA , COMPUTER & LAPTOP SALES & SERVICE, TABLETS, VIDEOGRAPHY, PHOTOGRAPHY, PROJECTOR ,VIDEO & AUDIO EDITING, VHS TO CD,DVD,BLURAY DISC CONVERSATION, DESIGNING & MANY MORE...
ಸುಸ್ವಾಗತ ನಿಮ್ಮ ಕಲ್ಪನೆ ನಮ್ಮ ಸೃಷ್ಠಿ !!! ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು.
ಈಗ ಮಲ್ಟಿಮೀಡಿಯವನ್ನು e-Speak ಕನ್ನಡದಲ್ಲಿ ಕೇಳಿ!

Saturday, October 27, 2012

ಸುಸ್ವಾಗತ


ಲೈಫು ಇಷ್ಟೇನೆ..... ಅಂತ ಸುಸ್ತಾಗಿ ನಮ್ಮ ಗೂಡಲ್ಲಿ ಅಡಗಿಕೊಳ್ಳಲು ತಯಾರಾಗುವಾಗ ಅದರಿಂದ ಹೊರಗೆ ಎಳೆಯಲು ಎಷ್ಟೊಂದು ಕಾರ್ಯಕ್ರಮಗಳು. ಕೆಲಸ ಕಾರ್ಯಗಳು ಜೊತೆಗೆ ಸಮಾಜ ಸೇವೆ, ರಾಜಕೀಯ, ಸಂಘಟಿಸುವ ಪರಿಪಾಠ, ಪರಿಸರ ಮತ್ತು ವನ್ಯಜೀವಿಗಳ ಬಗ್ಗೆ ಆಸಕ್ತಿ, ಪೋಟೋಗ್ರಫಿ, ಆರ್ಟ್ ಎಗ್ಸಿಬಿಶನ್, ಮಕ್ಕಳಿಗಾಗಿ ನನ್ನದೇ ಆದ ಬಾಲವನ(ಇದು ಮಕ್ಕಳ ಲೋಕ)ಸ್ವಯಂ ಸಂಸ್ಥೆ, ತಿಳದಿದ್ದು, ತಿಳಿಯದಿದ್ದು, ಗೊತ್ತಿಲ್ಲದೆ ಇರುವಂತದ್ದು ಇಂತಹದರ ಜೊತೆ ಸಿಕ್ಕಾ ಪಟ್ಟೆ ಮಾತು, ಜೊತೆಗೆ ಒಂದಿಷ್ಟು ಗಾಢ ಮೌನ, ನಾಟಕದ ಷೋ ಅಂದ್ರೆ ಪ್ರಾಣ, ಹರಟೆ ಹೊಡೆಯಲು ಸಾಕಷ್ಟು ಗೆಳೆಯರು......... 
ಏನೆಲ್ಲಾ…
ಹುಟ್ಟಿದ್ದು ಗಡಿನಾಡ ಹಳ್ಳಿಯಲ್ಲಿ, ಓದಿದ್ದು ಅಲ್ಪ ಆದರೆ ತಿಳಿದುಕೊಂಡಿದ್ದು ಸಿಕ್ಕಾಪಟ್ಟೆ ಯಾವುದೋ ಕೆಲಸ ಮಾಡಲು ಹೋಗಿ ಮತ್ಯಾವುದೋ ಕೆಲಸ ಮಾಡಿ ವೃತ್ತಿ ಜೀವನವೆಂಬ ಯಾಂತ್ರಿಕ ಜೀವನದಲ್ಲಿ ಮುಳುಗಿ, ತೇಲಿ ಕಡೆಯದೇನೋ ಎಂಬಂತೆ ಮಲ್ಟಿಮೀಡಿಯಾ ಎಂಬ ನಾಮದೇಯ, ಗೊತ್ತು ಗುರಿ ಇಲ್ಲದ ವೃತ್ತಿ ಜೀವನ ಆರಂಭ. ಜೀವನದಲ್ಲಿ ಎಸ್ಟೊಂದು ಕೆಲಸಗಳು ಅಬ್ಬಾ ನೆನೆದರೆ ಅದ್ಬುತವೇನೂ ಎಂಬ ಜೀವನ ಹೇಳುತ್ತಿದ್ದರೆ ಮುಗಿಯದ ಕಥೆ..............................
ಹಾಗಾಗಿ ‘ಮಲ್ಟಿಮೀಡಿಯಾ’ದಲ್ಲಿ ಏನೇನಾಗುತ್ತೆ? ಇಲ್ಲಿ ಏನು ಸಿಗುತ್ತೆ ಅನ್ನೋ ಲಿಸ್ಟ್ ಇಲ್ಲಿ ಸಿಗುತ್ತೆ, ಬೇರೆ ವೃತ್ತಿಗಳ ವಿಚಾರಗಳ ಬಗ್ಗೆ ಮಾಹಿತಿ ಹಾಗೂ ಆಹ್ವಾನಗಳೂ ಇಲ್ಲಿರುತ್ತೆ. ಅಷ್ಟೇ ಅಲ್ಲ, ಬೇಕಾದ, ಬೇಡದ ವಿಚಾರಗೂ ಇಲ್ಲಿರುತ್ತೆ.
ಹಾಗಾಗಿ ,
ದಯವಿಟ್ಟು ತಪ್ಪದೇ ಬನ್ನಿ.
*****ಸರ್ವರಿಗೂ ಸುಸ್ವಾಗತ***** ಹಾಗೇ ಧನ್ಯವಾದಗಳು ಸಹ*****

ಈಗ ಮಲ್ಟಿಮೀಡಿಯವನ್ನು ಕನ್ನಡದಲ್ಲಿ ಕೇಳಿ! 

ನ್ನಡದಲ್ಲಿ ಅಕ್ಷರಗಳನ್ನು ಓದುವ ತಂತ್ರಾಂಶಗಳ ಬೆಳವಣಿಗೆ ಈಗಷ್ಟೇ ಆರಂಭವಾಗಿದೆ. ಈಗ ಆರಂಭಿಕವಾಗಿ  ಈ-ಸ್ಪೀಕ್ ಎಂಬ ಮುಕ್ತ ತಂತ್ರಾಂಶವನ್ನು ಓದುಗರ ಅನುಕೂಲಕ್ಕಾಗಿ ಕೊಡುತ್ತಿದ್ದೇವೆ. ಇದನ್ನು ರೂಪಿಸಿದವರು ಶ್ರೀ ಜೊನಾಥನ್ ಡಡ್ಡಿಂಗ್ಟನ್ ಎಂಬುವವರು. ಈ ತಂತ್ರಾಂಶಕ್ಕೆ ಕನ್ನಡ ಭಾಷೆಗೆ ಬೇಕಾದ ಅಗತ್ಯಗಳನ್ನು ರೂಪಿಸಿಕೊಟ್ಟವರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಅಬಸೆ ಗ್ರಾಮದಲ್ಲಿ ಕೃಷಿಕರಾಗಿರುವ ದೃಷ್ಟಿಸವಾಲಿನ ಯುವಕ ಶ್ರೀ ಶ್ರೀಧರ್ ರವರು. ಅವರಿಗೆ 'ಚಂದ್ರುಮಲ್ಟಿಮೀಡಿಯ’ ವತಿಯಿಂದ ಹೃತ್ಪೂರ್ವಕ ವಂದನೆಗಳು.

Friday, October 26, 2012

ಡಿಜಿಟಲ್ ಛಾಯಾಗ್ರಹಣ

ಡಿಜಿಟಲ್ ಛಾಯಾಗ್ರಾಹಕಗಳು ಈಗ ಸರ್ವೇಸಾಮಾನ್ಯವಾಗಿಬಿಟ್ಟಿವೆ. ಎಷ್ಟರ ಮಟ್ಟಿಗೆ ಎಂದರೆ ಫಿಲ್ಮ್ ಕ್ಯಾಮರಾಗಳು ಕಣ್ಣಿಗೆ ಬೀಳುವುದೇ ಇಲ್ಲವೆನ್ನಬಹುದು. ಪ್ರತಿ ದಿನ ಹೊಸ ಮಾದರಿಯ ಕ್ಯಾಮರಾಗಳು ಮಾರುಕಟ್ಟೆಗೆ ಬರುತ್ತಿವೆ. ಸಾದಾ ಕ್ಯಾಮರಾಗಳು ಮಾತ್ರವಲ್ಲ ಡಿಜಿಟಲ್ ಎಸ್ಎಲ್ಆರ್ ಕ್ಯಾಮರಾಗಳೂ ಜನಸಾಮಾನ್ಯರ ಕೈಗೆಟುಕುವ ಬೆಲೆಗೆ ಸಿಗುತ್ತಿವೆ. ವಿವಿಧ ನಮೂನೆಯ ಕ್ಯಾಮರಾಗಳ ವಿವರಗಳು, ಬೆಲೆ, ಅವುಗಳ ವಿಮರ್ಶೆ, ಬೇರೆ ಬೇರೆ ಕ್ಯಾಮರಾಗಳ ಹೋಲಿಕೆ, ಉತ್ತಮ ಛಾಯಾಚಿತ್ರ ಸ್ಪರ್ಧೆ, ಇತ್ಯಾದಿ ಎಲ್ಲ ಒಂದೆಡೆ ಕಲೆ ಹಾಕಿರುವ ಬಲು ಉಪಯುಕ್ತ ಜಾಲತಾಣ ಡಿಪಿರಿವ್ಯೂವ್.ಕಾಮ್.
ಡಿಜಿಟಲ್ ಕ್ಯಾಮರಾ ಕೊಳ್ಳುವ ಮೊದಲು ಈ ತಾಣಕ್ಕೊಮ್ಮೆ ಭೇಟಿ ನೀಡಿ. ಡಿಜಿಟಲ್ ಛಾಯಾಗ್ರಹಣದ ಮತ್ತು ಛಾಯಾಗ್ರಾಹಕಗಳ ಬಗ್ಗೆ ಚರ್ಚೆ, ವಿಮರ್ಶೆ ಮಾಡುವ ಸೌಲಭ್ಯವೂ ಇಲ್ಲಿದೆ. ಜಾಲತಾಣ ಕೊಂಡಿ ವಿಳಾಸ: www.dpreview.com.

ಫೋಟೋದಿಂದ ಕಲಾಚಿತ್ರಕ್ಕೆ

ಫೋಟೋ ನೋಡಿಕೊಂಡು ಅದರಂತೆಯೇ ಇರುವ ಕಲಾಚಿತ್ರ ರಚಿಸುವ ಕಲಾವಿದರನ್ನು ಕಂಡಿರಬಹುದು. ಅಂತಹವರ ಕೈಯಿಂದ ನಿಮ್ಮ ಅಥವಾ ನಿಮ್ಮ ಆಪ್ತರ ಚಿತ್ರಗಳನ್ನು ಬರೆಸಿರಲೂಬಹುದು. ಗಣಕವನ್ನು ಬಳಸಿ ಇಂತಹ ಚಿತ್ರ ತಯಾರಿಸುವಂತಿದ್ದರೆ ಒಳ್ಳೆಯದು ಅನ್ನಿಸಿದೆಯೇ? ನೀವು ಗ್ರಾಫಿಕ್ಸ್ ತಂತ್ರಾಂಶ ಪರಿಣತರಾದರೆ ಈ ಕೆಲಸವನ್ನು ನೀವೇ ಮಾಡಬಹುದು. ಆದರೆ ಅಂತಹ ಯಾವ ವಿದ್ಯೆಯೂ ನಿಮಗೆ ಗೊತ್ತಿಲ್ಲದಿದ್ದಲ್ಲಿ ಫೋಟೋದಿಂದ ಕಲಾಚಿತ್ರವನ್ನು ತಯಾರಿಸಲೆಂದೇ ಉಚಿತ ತಂತ್ರಾಂಶವೊಂದಿದೆ. ಅದರ ಹೆಸರು  FotoSketcher  ಇದನ್ನು ಬಳಸಿ ಫೋಟೋವನ್ನು ಹಲವು ನಮೂನೆಯಲ್ಲಿ ಕಲಾಚಿತ್ರವನ್ನಾಗಿಸಬಹುದು. ಈ ತಂತ್ರಾಂಶ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ ಕೊಂಡಿ: www.fotosketcher.com.

Friday, October 5, 2012

ಅರ್ಜಿಗಳು

 ಪಾಸ್‌ಪೋರ್ಟ್‌ಗೆ ಅರ್ಜಿ ಗುಜರಾಯಿಸಬೇಕಾಗಿದೆ. ಆದರೆ ಅರ್ಜಿ ಎಲ್ಲಿ ಸಿಗುತ್ತದೆ? ವಾಹನದ ಪರವಾನಗಿ ಪತ್ರ ಕಳೆದುಹೋಗಿದೆ. ಇನ್ನೊಂದು ಪ್ರತಿ ಬೇಕಾಗಿದೆ. ಅದಕ್ಕೂ ಅರ್ಜಿ ಹಾಕಬೇಕಾಗಿದೆ. ಹೀಗೆ ಒಂದಲ್ಲ ಒಂದು ನಮೂನೆಯ ಅರ್ಜಿ ಎಲ್ಲರಿಗೂ ಬೇಕಾಗಿ ಬರುತ್ತದೆ. ಇಲ್ಲಿ ನೀಡಿರುವ ಎರಡು ಉದಾಹರಣೆಗಳಲ್ಲಿ ಆಯಾ ಖಾತೆಯ ಜಾಲತಾಣಕ್ಕೆ ಭೇಟಿ ನೀಡಿ ಹುಡುಕಾಡಿದರೆ ಅರ್ಜಿ ಸಿಗುತ್ತದೆ. ಎಲ್ಲ ಅರ್ಜಿಗಳು ಒಂದೇ ಕಡೆ ಸಿಗುವಂತಿದ್ದರೆ ಒಳ್ಳೆಯದು ಅಂದುಕೊಳ್ಳುತ್ತಿದ್ದೀರಾ? ಅದೂ ಸಿದ್ಧವಾಗಿದೆ.
Income Tax, EPFO, Passport,State Govt,Central Govt, Legal, RTI, LIC ಇನ್ನಿತರೆ ಇಲಾಖೆಗಳಿಗೆ ಸಂಬಂಧಪಟ್ಟ 6000 ಅರ್ಜಿ ನಮೊನೆಗಳನ್ನು www.downloadformsindia.com ಜಾಲತಾಣಕ್ಕೆ ಭೇಟಿ ನೀಡಿ ನಿಮಗೆ ಬೇಕಾದ ರಾಜ್ಯ ಅಥವಾ ಕೆಂದ್ರ ಸರಕಾರದ ಸೂಕ್ತ ಖಾತೆಯ ಅರ್ಜಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಥವಾ ಒಂದು ಪೇಜಿಗೆ 10 ರೂಪಾಯಿಗಳಂತೆ ಭಾರತದ ಎಲ್ಲಿಗೆ ಬೇಕಾದರೂ ಅಂಚೆ ಮೂಲಕ ತರಿಸಿಕೊಳ್ಳಬಹುದು.

ಆತ್ಮಹತ್ಯೆ ಬೇಡ

 ಖಿನ್ನತೆ ಒಂದು ಬಹುಸಾಮಾನ್ಯ ಖಾಯಿಲೆ. ಇದು ಹೆಚ್ಚಾಗಿ ಹಲವು ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಭಾವನೆ ಸಾಮಾನ್ಯವಾಗಿ ಪ್ರತಿ ವ್ಯಕ್ತಿಗೂ ಒಮ್ಮೆಯಾದರೂ ಬಂದೇ ಬರುತ್ತದೆ. ಕೆಲವರಿಗೆ ಇಂತಹ ಸಂದರ್ಭದಲ್ಲಿ ಒತ್ತಡ ತಡೆದುಕೊಳ್ಳಲಾರದೆ ಆತ್ಮಹತ್ಯೆ ಮಾಡಿಕೊಂಡೇ ಬಿಡುತ್ತಾರೆ. ಇಂತಹವರಿಗೆ ಆಪ್ತಸಲಹೆ ಅತಿ ಮುಖ್ಯ. ಅತ್ಮೀಯರಲ್ಲಿ ಹೇಳಿಕೊಳ್ಳಲಾಗುವುದಿಲ್ಲ. ಅದಕ್ಕಾಗಿಯೇ ಸಹಾಯವಾಣಿ ಇದೆ. ಅಂತರಜಾಲತಾಣವೂ ಇದೆ. ಅಂತಹ ಒಂದು ಜಾಲತಾಣ www.aasra.info. ನಿಮ್ಮ ಪರಿಚಯದವರು ಯಾರಾದರೂ ನಿಮ್ಮಲ್ಲಿ ಆಗಾಗ “ಈ ಜೀವನ ಸಾಕಾಗಿದೆ. ಸಾಯೋಣ ಅನ್ನಿಸುತ್ತಿದೆ” ಎಂದೆಲ್ಲ ಗಳಹುತ್ತಿದ್ದರೆ ಅವರಿಗೆ ಈ ಜಾಲತಾಣಕ್ಕೆ ಭೇಟಿ ನೀಡಲು ಸಲಹೆ ನೀಡಿ ಅಥವಾ 24 ಗಂಟೆಗಳ ಉಚಿತ ಸಹಾಯವಾಣಿ ಸಂಖ್ಯೆ 91-22-27546669 ನೀಡಿ.

ಪ್ರಸಾರಕೇಂದ್ರ


ಬಾನುಲಿ ಹಾಗೂ ದೂರದರ್ಶನ ಕೇಂದ್ರಗಳು ಗೊತ್ತಲ್ಲ? ಅದೇ ರೀತಿ ಅಂತರಜಾಲದ ಮೂಲಕ ರೇಡಿಯೋ ಹಾಗೂ ಟಿ.ವಿ. ಪ್ರಸಾರ ಕೇಂದ್ರಗಳನ್ನು ಸ್ಥಾಪಿಸಬಹುದು. ಅದಕ್ಕೆ ತುಂಬ ಹಣ ಖರ್ಚು ಆಗುತ್ತದೆ. ಸುಲಭದಲ್ಲಿ ಒಂದು ಪ್ರಸಾರ ಕೇಂದ್ರ ಪ್ರಾರಂಭಿಸಬೇಕೇ? ಅದಕ್ಕೆಂದೇ ಒಂದು ತಂತ್ರಾಂಶ ಉಚಿತವಾಗಿ www.sopcast.com ಜಾಲತಾಣದಲ್ಲಿ ಲಭ್ಯವಿದೆ. ಈ ತಂತ್ರಾಂಶದ ವೈಶಿಷ್ಟ್ಯವೇನೆಂದರೆ ಇದು ವ್ಯಕ್ತಿಯಿಂದ ವ್ಯಕ್ತಿಗೆ (person-to-person, P2P) ವಿಧಾನವನ್ನು ಬಳಸುತ್ತದೆ. ಟೊರೆಂಟ್ ಬಳಸುವವರಿಗೆ ಈ ವಿಧಾನ ಪರಿಚಿತ. ನಿಮ್ಮ ಗಣಕವನ್ನು ಬ್ರಾಡ್‌ಬಾಂಡ್ ಮೂಲಕ ಅಂತರಜಾಲಕ್ಕೆ ಸಂರ್ಕಿಸಿ ಈ ತಂತ್ರಾಂಶ ಮೂಲಕ ಹಾಡು, ಚಲನಚಿತ್ರಗಳನ್ನು ಜಗತ್ತಿಗೆಲ್ಲ ಪ್ರಸಾರ ಮಾಡಬಹುದು. ಅದನ್ನು ನೋಡುವವರಲ್ಲೂ ಅದೇ ತಂತ್ರಾಂಶ ಇರತಕ್ಕದ್ದು. ನಿಮ್ಮ ಸಂಘದ ಕಾರ್ಯಕ್ರಮ, ಮಗಳ ಹುಟ್ಟುಹಬ್ಬದ ಆಚರಣೆ, ಮದುವೆ, ಏನೇ ಇರಬಹುದು, ಈ ವಿಧಾನದಲ್ಲಿ ನಿಮ್ಮ ಮಿತ್ರರಿಗೆಲ್ಲ ಪ್ರಸಾರ ಮಾಡಬಹುದು. ವಿಂಡೋಸ್, ಮ್ಯಾಕ್, ಲಿನಿಕ್ಸ್ ಹಾಗೂ ಆಂಡ್ರಾಯ್ಡ್ ತಂತ್ರಾಂಶಗಳು ಡೌನ್ಲೋಡ್ ಗೆ ಲಭ್ಯವಿದೆ.

ಪವರ್‌ಪಾಯಿಂಟ್ ಪ್ರಸೆಂಟೇಶನ್ ಸ್ಲೈಡ್‌ ಹಂಚಿಸಭೆ, ವಿಚಾರ ಸಂಕಿರಣ, ಕಮ್ಮಟ, ಗೋಷ್ಠಿಗಳಲ್ಲಿ ಮಂಡಿಸಬೇಕಾದ ವಿಷಯವನ್ನು ಪರಿಣಾಮಕಾರಿಯಾಗಿ ತಿಳಿಸಲು ಸಾಮಾನ್ಯವಾಗಿ ಗಣಕ ಬಳಸಿ ಪ್ರೆಸೆಂಟೇಶನ್ ಮಾಡಲಾಗುತ್ತದೆ. ಬಹುಜನರು ಇದಕ್ಕಾಗಿ ಬಳಸುವುದು ಮೈಕ್ರೋಸಾಫ್ಟ್ ಪವರ್‌ಪಾಯಿಂಟ್ ತಂತ್ರಾಂಶ. ಈ ರೀತಿ ತಯಾರಿಸಿದ ಪ್ರಸೆಂಟೇಶನ್ ಸ್ಲೈಡ್‌ಗಳನ್ನು ಜಗತ್ತಿಗೆ ಹಂಚಲು ಒಂದು ಜಾಲತಾಣ ಇದೆ. ಅದರ ವಿಳಾಸ - www.slideshare.net.
ಈ ಜಾಲತಾಣ ಬಹುಮಟ್ಟಿಗೆ ಯುಟ್ಯೂಬ್ ಮಾದರಿಯಲ್ಲಿ ಕೆಲಸ ಮಾಡುತ್ತದೆ. ನೀವು ಇಲ್ಲಿ ನಿಮ್ಮ ಪ್ರೆಸೆಂಟೇಶನ್ ಸ್ಲೈಡ್‌ಗಳನ್ನು ಸೇರಿಸಿ ಅದರ ಕೊಂಡಿಯನ್ನು ನಿಮ್ಮ ಮಿತ್ರರಿಗೆ ಕಳುಹಿಸಿದರೆ ಅವರು ತಮ್ಮ ಗಣಕದಲ್ಲಿ ಅಂತರಜಾಲದ ಮೂಲಕ ಈ ಸ್ಲೈಡ್‌ಗಳನ್ನು ನೋಡಬಹುದು. ಜಾಲತಾಣದಲ್ಲಿ ಈಗಾಗಲೆ ಇರುವ ಸಾವಿರಾರು ಪ್ರಸೆಂಟೇಶನ್ ಸ್ಲೈಡ್‌ಗಳನ್ನು ವಿಷಯವಾರು ವಿಂಗಡಿಸಿರಿಸಲಾಗಿದೆ.

ಭಾರತೀಯ ವಿದ್ಯುನ್ಮಾನ ಗ್ರಂಥಾಲಯ


 ಪುಸ್ತಕಗಳನ್ನು ಅಂಕೀಕರಿಸಿ ಅಂದರೆ ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿ ಅದನ್ನು ಗಣಕದಲ್ಲಿ, ಸಿ.ಡಿ.ಯಲ್ಲಿ ಅಥವಾ ಅಂತರಜಾಲದಲ್ಲಿ ಓದಲು ಅನುವಾಗುವಂತೆ ಮಾಡುವ ವಿಧಾನಕ್ಕೆ e-book ಅರ್ಥಾತ್ ವಿದ್ಯುನ್ಮಾನ ಪುಸ್ತಕ ಎನ್ನುತ್ತಾರೆ. ಈ ರೀತಿಯ ವಿದ್ಯುನ್ಮಾನ ಪುಸ್ತಕಗಳಿಗೆಂದೇ ಹಲವಾರು ಜಾಲತಾಣಗಳಿವೆ. ಭಾರತ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆ ಭಾರತೀಯ ವಿದ್ಯುನ್ಮಾನ ಪುಸ್ತಕ ಭಂಡಾರ. ಇದು ಅಂತರಜಾಲದಲ್ಲಿ ಉಚಿತವಾಗಿ ಓದಲು ಲಭ್ಯವಿದೆ. ಅದರ ವಿಳಾಸ www.new.dli.ernet.in. ಕನ್ನಡವೂ ಸೇರಿದಂತೆ ಭಾರತದ ಎಲ್ಲ ಭಾಷೆಯ ಸಹಸ್ರಾರು ಪುಸ್ತಕಗಳು ಇಲ್ಲಿ ಓದಲು ಲಭ್ಯವಿವೆ. ಆದರೆ ಪುಸ್ತಕಗಳನ್ನು ಜಾಲತಾಣದಲ್ಲಿಯೇ ಓದಬೇಕು. ಅವುಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ಸವಲತ್ತನ್ನು ನೀಡಿಲ್ಲ. ಬಹುಶಃ ಇದಕ್ಕೆ ಪುಸ್ತಕಗಳ ಹಕ್ಕುಸ್ವಾಮ್ಯದ ಸಮಸ್ಯೆ ಅಡ್ಡಿಯಾಗಿರಬೇಕು.

ಜಾಲತಾಣ ಪ್ರತಿಮಾಡಿಕೊಳ್ಳಿ

ನಿಮಗಿಷ್ಟವಾದ ಜಾಲತಾಣವೊಂದಿದೆ. ಅದರಲ್ಲಿ ನೂರಾರು ಲೇಖನಗಳಿವೆ. ಆ ಲೇಖನಗಳನ್ನು ಮತ್ತೆ ಮತ್ತೆ ಓದಬೇಕಾಗಿದೆ. ಅಂದರೆ ನೀವು ಯಾವಾಗಲೂ ಅಂತರಜಾಲದ ಸಂಪರ್ಕದಲ್ಲಿ ಇರಬೇಕು ಎಂದಾಯಿತು. ಆ ಸೌಕರ್ಯ ನಿಮಗಿಲ್ಲವಾದಲ್ಲಿ ಎನು ಮಾಡಬಹುದು? ಇಡಿಯ ಜಾಲತಾಣವನ್ನೇ ನಿಮ್ಮ ಗಣಕಕ್ಕೆ ಪ್ರತಿ ಮಾಡಿಕೊಳ್ಳುವಂತಿದ್ದರೆ ಎಷ್ಟು ಒಳ್ಳೆಯದಿತ್ತು ಎಂದು ಯೋಚಿಸುತ್ತಿದ್ದೀರಾ? ಅದಕ್ಕೂ ತಂತ್ರಾಂಶ ಲಭ್ಯವಿದೆ. HTTrack ಹೆಸರಿನ ಈ ತಂತ್ರಾಂಶ ಬೇಕಿದ್ದಲ್ಲಿ httrack.com ಜಾಲತಾಣಕ್ಕೆ ಭೇಟಿ ನೀಡಿ. ಜಾಲತಾಣವೊಂದನ್ನು ಪ್ರತಿ ಮಾಡಲು ಇದರಲ್ಲಿ ಹಲವು ಸವಲತ್ತುಗಳಿವೆ. ಈ ಜಾಲತಾಣವನ್ನು ಬಿಟ್ಟು ಹೊರಗೆ ಹೋಗಬೇಡ, ಈ ಪುಟದಿಂದ ಇಂತಿಷ್ಟೇ ಕೊಂಡಿಗಳಷ್ಟು ಕೆಳಕ್ಕೆ ಇಳಿ, ಇತ್ಯಾದಿ. ಈ ಆಯ್ಕೆಗಳನ್ನು ಎಚ್ಚರಿಕೆಯಿಂದ ನಿಗದಿಪಡಿಸಬೇಕು. ಇಲ್ಲವಾದಲ್ಲಿ ಅದು ಇಡಿಯ ಅಂತರಜಾಲವನ್ನೇ ನಿಮ್ಮ ಗಣಕಕ್ಕೆ ಪ್ರತಿಮಾಡಿಬಿಟ್ಟೀತು!

ಛಾಯಾಚಿತ್ರ ತಿದ್ದಿ

ಡಿಜಿಟಲ್ ಕ್ಯಾಮರಾಗಳು ಈಗ ಸರ್ವೇಸಾಮಾನ್ಯವಾಗಿವೆ. ಮೊಬೈಲ್ ಫೋನ್‌ಗಳಲ್ಲೂ ಉತ್ತಮ ಗುಣಮಟ್ಟದ ಕ್ಯಾಮರಾಗಳು ಅಳವಡಿಕೆಯಾಗುತ್ತಿವೆ. ಹೀಗೆ ತೆಗೆದ ಛಾಯಾಚಿತ್ರಗಳನ್ನು ತಿದ್ದಬೇಕಾದರೆ ಏನು ಮಾಡಬೇಕು. ದುಡ್ಡಿದ್ದರೆ ಅಡೋಬಿಯವರ ದುಬಾರಿ ಫೋಟೋಶಾಪ್ ತಂತ್ರಾಂಶ ಕೊಂಡುಕೊಂಡು ಬಳಸಬಹುದು. ಅಥವಾ ಅವರದೇ ಉಚಿತ ಅಂತರಜಾಲ ಆವೃತ್ತಿ ಬಳಸಬಹುದು. ಎರಡೂ ಬೇಡ. ಬಹುಮಟ್ಟಿಗೆ ಜನಸಾಮಾನ್ಯರಿಗೆ ಬೇಕಾದಂತಹ ಎಲ್ಲ ಸೌಲಭ್ಯಗಳಿರುವ ಹಾಗೂ ಉಚಿತವಾಗಿರುವ ಒಂದು ತಂತ್ರಾಂಶ ಬೇಕೇ? ಹಾಗಿದ್ದರೆ ನೀವು www.photobie.com ಜಾಲತಾಣಕ್ಕೆ ಭೇಟಿ ನೀಡಬೇಕು. ಫೋಟೊ ತಿದ್ದುವುದಲ್ಲದೆ ಸಣ್ಣಮಟ್ಟಿನ ಚಿತ್ರಸಂಚಲನೆ (ಅನಿಮೇಶನ್) ಕೂಡ ತಯಾರಿಸಬಹುದು.

ರಕ್ತದಾನಿಗಳು ಬೇಕೇ?

ಅಂತರ್ಜಾಲ ತಾಣದಲ್ಲಿ ರಕ್ತದಾನಿಗಳು ನೋಂದಾಯಿಸಿಕೊಳ್ಳುವ ವ್ಯವಸ್ಥೆಯಿದೆ. ಹೆಸರು, ವಿಳಾಸ, ಸಂಪರ್ಕಸಂಖ್ಯೆ ಇತ್ಯಾದಿ ವಿವರಗಳೊಂದಿಗೆ ನೋಂದಾಯಿಸಿ ಕೊಳ್ಳಬೇಕಾಗುತ್ತದೆ. ರಕ್ತದ ಗುಂಪನ್ನೂ ನೀಡಬೇಕಾಗುತ್ತದೆ. ರಕ್ತ ಬೇಕಾದವರು ತಮ್ಮ ಊರು, ರಕ್ತದ ಗುಂಪು ನೀಡಿ, ದಾನಿಗಳ ವಿವರಗಳನ್ನು ಪಡೆದುಕೊಳ್ಳಬಹುದು. ನಂತರ ದಾನಿಯನ್ನು ನೇರವಾಗಿ ಸಂಪರ್ಕಿಸಿ, ರಕ್ತದಾನದ ವ್ಯವಸ್ಥೆ ಮಾಡಿಕೊಳ್ಳಬಹುದು. ಸಂಪರ್ಕ ವಿಳಾಸಗಳು ತಪ್ಪಿದ್ದರೆ, ಅದನ್ನು ಅಂತರ್ಜಾಲ ತಾಣಕ್ಕೆ ತಿಳಿಸಿದರೆ, ಅಂತಹ ವ್ಯಕ್ತಿಗಳ ವಿವರಗಳನ್ನು ಕಿತ್ತು ಹಾಕಬಹುದು.

ಯಾರು ಏನು ಹೇಳಿದರು?

ಭಾಷಣ ಮಾಡುವಾಗ, ತರಗತಿಯಲ್ಲಿ ಪಾಠ ಮಾಡುವಾಗ, ಲೇಖನ ಬರೆಯುವಾಗ ಆಗಾಗ ಅಲ್ಲಲ್ಲಿ ಖ್ಯಾತನಾಮರ ಮಾತುಗಳನ್ನು ಉದಾಹರಿಸುವ ಅಭ್ಯಾಸ ಇದೆ ತಾನೆ? ಹೀಗೆ ಉದಾಹರಿಸಲು ಪ್ರಸಿದ್ಧ ಮಾತುಗಳನ್ನು ಬರೆದಿಟ್ಟುಕೊಳ್ಳುವ ಅಭ್ಯಾಸವೂ ಕೆಲವರಿಗಿದೆ. ಕೆಲವೊಮ್ಮೆ ಇಂತಹ ಮಾತುಗಳು ಜೀವನಕ್ಕೆ ದಾರಿದೀಪವಾಗಿಯೂ ಬೇಕಾಗುತ್ತವೆ. ಇಂತಹ ಜಗತ್ಪ್ರಸಿದ್ಧ ಮಾತುಗಳ ಜಾಲತಾಣ www.brainyquote.com. ನೀವು ಆಗಾಗ ಇಲ್ಲಿಗೆ ಭೇಟಿ ನೀಡಿ ಕೊಟೇಶನ್‌ಗಳನ್ನು ಓದಬಹುದು, ಅವುಗಳಿಗೆ ಚಂದಾದಾರರಾಗಬಹುದು, ನಿಮ್ಮ ಗಣಕದ ಪರದೆಯಲ್ಲಿ ಒಂದು ಬದಿಯಲ್ಲಿ ಈ ಮಾತುಗಳು ಬರುತ್ತಾ ಇರುವಂತೆ ಮಾಡಬಹುದು, ನಿಮ್ಮ ಬ್ಲಾಗ್‌ತಾಣದಲ್ಲಿ ಅವು ಮೂಡುವಂತೆ ಮಾಡಬಹುದು -ಇತ್ಯಾದಿ ಸವಲತ್ತುಗಳಿವೆ.