WEBSITE, INVENTORY SOFTWARE, CCTV CAMERA , COMPUTER & LAPTOP SALES & SERVICE, TABLETS, VIDEOGRAPHY, PHOTOGRAPHY, PROJECTOR ,VIDEO & AUDIO EDITING, VHS TO CD,DVD,BLURAY DISC CONVERSATION, DESIGNING & MANY MORE...
ಸುಸ್ವಾಗತ ನಿಮ್ಮ ಕಲ್ಪನೆ ನಮ್ಮ ಸೃಷ್ಠಿ !!! ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು.
ಈಗ ಮಲ್ಟಿಮೀಡಿಯವನ್ನು e-Speak ಕನ್ನಡದಲ್ಲಿ ಕೇಳಿ!

Saturday, December 29, 2012

ಕನ್ನಡ ಬರಲ್ವಾ? "ಮಾತಾಡಿ" ನೋಡಿ!


ಕನ್ನಡ ಈಗ ಬರೀ ರಾಜ್ಯದ ಸ್ಥಳೀಯ ಭಾಷೆಯಾಗಿ ಉಳಿದಿಲ್ಲ. ದೇಶದ ಇತರ ಪ್ರಾದೇಶಿಕ ಭಾಷೆಗಳ ಜೊತೆಯಲ್ಲಿ ಸರಿಯಾದ ಪೈಪೋಟಿ ನೀಡುವಂತಹ ಭಾಷೆಯಾಗಿ ಬೆಳೆದು ನಿಂತಿದೆ ಎನ್ನುವುದು ಪ್ರತಿಯೊಬ್ಬ ಕನ್ನಡಿಗನ ಅಂತರಾಳದ ಮಾತು.

ಕನ್ನಡೇತರರು ಸುಲಭವಾಗಿ ಕನ್ನಡ ಮಾತನಾಡಲು ಸಹಾಯಕವಾಗುವಂತಹ ವೆಬ್‌ಸೈಟ್‌ನ್ನು ಡ್ರೀಮ್ಸ್‌ ಇನ್ಫರಾ ಸಂಸ್ಥೆ ಆರಂಭಿಸಿದೆ. ಇಂಗ್ಲೀಷ್‌, ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಗಳ ಮುಖಾಂತರ ಮಾತಾಡಿ ಡಾಟ್ ಕಾಮ್ ಅಂತರ್ಜಾಲದಲ್ಲಿ ಸರಳವಾಗಿ ವಿಡಿಯೋ ಮುಖಾಂತರ ಕನ್ನಡ ಕಲಿಯಬಹುದಾಗಿದೆ. ಸದ್ಯಕ್ಕೆ ಹದಿನಾರು ವಿಡಿಯೋ ತುಣುಕುಗಳು ಜಾಲತಾಣದಲ್ಲಿ ಲಭ್ಯವಿದೆ. ಜಾಲತಾಣ ಕೊಂಡಿ: www.mathadi.com

Friday, December 28, 2012

ಚುಕುಬುಕು ಒಂದು ಓದಿನ ಬಂಡಿ!

ಚುಕುಬುಕು ಒಂದು ಓದಿನ ಬಂಡಿ! ಇದು ರೈಲೂ ಹೌದು, ಪ್ಲಾಟ್‌ಫಾರ್ಮೂ ಹೌದು. ಕನ್ನಡದ ಪುಸ್ತಕಪ್ರೇಮಿಗಳನ್ನೆಲ್ಲ ಒಂದೆಡೆ ಸೇರಿಸುವ ಚಂದದ ವೇದಿಕೆ ಅನ್ನಿ. ಒಂದು ಅಂದಾಜಿನ ಪ್ರಕಾರ ಪ್ರತಿವರ್ಷ ಮುದ್ರಣವಾಗುವ ಓದಲು ಯೋಗ್ಯವಾದ ಹೊಸ ಕನ್ನಡಪುಸ್ತಕಗಳ ಸಂಖ್ಯೆ ಏಳು ಸಾವಿರ. ಆದರೆ ಭಾನುವಾರದ ಪುರವಣಿಗಳ ಪುಸ್ತಕಪರಿಚಯ ವಿಭಾಗದಲ್ಲಿ ಚೂರು ಜಾಗ ಪಡೆಯುವ ಅದೃಷ್ಟ ಏಳೆಂಟು ಪುಸ್ತಕಗಳಿಗೆ ಮಾತ್ರ. ಅಂದರೆ ಶೇಕಡಾ ೮೫ರಷ್ಟು ಪುಸ್ತಕಗಳು ಬಂದದ್ದು ಓದುಗನಿಗೆ ತಿಳಿಯುವುದೇ ಇಲ್ಲ. ಅಂಗಡಿಗೆ ಹೋಗಿ ನೋಡೋಣವೆಂದರೆ ಇಡೀ ರಾಜ್ಯದಲ್ಲಿರುವುದು ಹತ್ತು - ಹನ್ನೆರೆಡು ಪುಸ್ತಕದಂಗಡಿಗಳು ಮಾತ್ರ. ಓದುಗ ಮತ್ತು ಪ್ರಕಾಶಕನ ನಡುವಿನ ಬಹುಮುಖ್ಯ ಕೊಂಡಿಯೊಂದು ತಪ್ಪಿಹೋಗಿದೆ ಎಂದು ನಿಮಗನ್ನಿಸುವುದಿಲ್ಲವೆ? ಅದಕ್ಕೇ ಚುಕ್ಕುಬುಕ್ಕು ಎಂಬ ಲಿಂಕ್ ಟ್ರೈನು ಬಂದಿರುವುದು 
ಇಷ್ಟದ ಲೇಖಕನ ಹೊಸ ಪುಸ್ತಕ ಬಂತೆ? ಹೊಸ ಲೇಖಕರು ಯಾರಾದರೂ ಚೆನ್ನಾಗಿ ಬರೆಯುತ್ತಿದ್ದಾರಾ? ಒಂದು ಕತೆ ಅಥವಾ ಒಂದು ಅಧ್ಯಾಯ ಓದಿ ಇಷ್ಟವಾದರೆ ಮಾತ್ರ ಕೊಂಡುಕೊಳ್ಳುವಂತಿದ್ದರೆ ಎಷ್ಟು ಚೆನ್ನಾಗಿರ್ತಿತ್ತು? ಓದುವ ಹಸಿವಿನ ನಿಮ್ಮ ಆತಂಕಗಳಿಗೆಲ್ಲ ಸಮಾಧಾನ ನೀಡುವಂತಿದೆ ನಮ್ಮ ಚುಕ್ಕುಬುಕ್ಕು. ಇಲ್ಲಿ ನೀವು ಹೊಸದಾಗಿ ಪ್ರಕಾಶನಗೊಂಡ ಪುಸ್ತಕದ ಬೆಲೆ ಪುಟಸಂಖ್ಯೆ ಮಾತ್ರವಲ್ಲ, ಪುಸ್ತಕದ ಸಾರಾಂಶ, ಲೇಖಕರ ಪರಿಚಯ, ಪುಸ್ತಕದ ಬಗ್ಗೆ ಅವರ ಮಾತು, ಮುನ್ನುಡಿ-ಬೆನ್ನುಡಿಕಾರರ ಅನಿಸಿಕೆಗಳನ್ನೆಲ್ಲಾ ಓದಬಹುದು. ಅಷ್ಟೇ ಅಲ್ಲ, ಪುಸ್ತಕದ ಒಂದು ಅಧ್ಯಾಯವನ್ನು ಕೂಡ ಉಚಿತವಾಗಿ ಓದಬಹುದು ಅಂದರೆ ಖುಷಿಯಾಯಿತಲ್ಲವೆ?! ಓದಿ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಬಹುದು. ಇಷ್ಟವಾದ ಪುಸ್ತಕಗಳನ್ನು ಕೊಳ್ಳಲು ಪ್ರಕಾಶಕರ ವಿಳಾಸ, ದೂರವಾಣಿ ಸಂಖ್ಯೆಗಳೂ ಇಲ್ಲಿ ಲಭ್ಯ. ಇನ್ನೇನು ತಾನೆ ಬೇಕು? 
ಅಷ್ಟೆಲ್ಲಾ ಶ್ರದ್ಧೆಯಿಂದ ಮುದ್ರಿಸಿದ ಪುಸ್ತಕ ಬಂದಿದೆ ಎಂದು ಓದುಗರಿಗೆ ತಿಳಿಯದೇ ಹೋಗುವ ಪ್ರಕಾಶಕನ ಸಂಕಟ ನಮಗೆ ಅರ್ಥವಾಗುತ್ತದೆ. ಸಾಪ್ತಾಹಿಕ ಪುರವಣಿಗಳಲ್ಲಿ ವಿಮರ್ಶೆಯ ಮಾತಿರಲಿ, ಸಾದರ ಸ್ವೀಕಾರದಲ್ಲಾದರೂ ಬಂದರೆ ಅದೇ ಭಾಗ್ಯವೆಂದು ಹಪಹಪಿಸುವ ಬದಲು ಚುಕ್ಕುಬುಕ್ಕು ಎಂಬ ಈ ವೇದಿಕೆಯನ್ನು ಬಳಸಿಕೊಂಡು ಹಬ್ಬ ಮಾಡಿ. ಹೌದು! ನಮ್ಮ ವೆಬ್‌ಸೈಟಿನಲ್ಲಿ ನಿಮ್ಮ ಪುಸ್ತಕದ ಬಗ್ಗೆ ನಾಲ್ಕು ಸಾಲು ಬರೆಯುವ ಬಗ್ಗೆ ನಾವು ಮಾತನಾಡುತ್ತಿಲ್ಲ. ನಿಮ್ಮ ಪುಸ್ತಕಕ್ಕೇ ಒಂದು ಚೆಂದದ ಕಿರುವೆಬ್‌ಸೈಟಿನ ಬಗ್ಗೆ ನಾವು ಮಾತನಾಡುತ್ತಿದ್ದೇವೆ. ನಾಲಕ್ಕು ಪೂರ್ಣ ವೆಬ್‌ಪುಟಗಳು ನಿಮ್ಮ ಕನಸಿನ ಪುಸ್ತಕಕ್ಕೆಂದೇ ಮೀಸಲು! ದೊಡ್ಡ ಮುಖಪುಟ, ಲೇಖಕನ ಪರಿಚಯ, ಸಾರಾಂಶ, ಉಚಿತಪುಟ, ವಿಮರ್ಶೆಗಳು, ಓದುಗರ ಅನಿಸಿಕೆಗಳು. ಒಂದು ಪುಸ್ತಕವನ್ನು ಸೆಲೆಬ್ರೇಟ್ ಮಾಡುವ ಇದಕ್ಕಿಂತ ಉತ್ತಮ ವಿಧಾನ ಬೇರೊಂದಿಲ್ಲ. ನೀವೇ ನೋಡಿ. ಚುಕ್ಕುಬುಕ್ಕು ಸಾಧ್ಯತೆಗಳನ್ನು ಬಳಸಿಕೊಳ್ಳಿ. ಸರಿಯಾದ ಓದುಗರನ್ನು ತಲುಪಿ. 

  • ಪುಸ್ತಕಗಳಲ್ಲದೆ ಚುಕ್ಕುಬುಕ್ಕುವಿನಲ್ಲಿ ಮತ್ತೇನಿದೆ?
ಚುಕ್ಕುಬುಕ್ಕುವನ್ನು ಒಂದು ಲವಲವಿಕೆಯ ಓದುಗರ ಕೂಡುಸ್ಥಳವನ್ನಾಗಿಸಬೇಕೆಂಬುದು ನಮ್ಮ ಆಶಯ. ಇಲ್ಲಿ ಸದಾ ಯಾವುದಾದರೊಂದು ಸ್ಪರ್ಧೆ, ಚರ್ಚೆಗಳು ನಡೆಯುತ್ತಿರುತ್ತವೆ. ನೀವು ಪಾಲ್ಗೊಳ್ಳಬಹುದು. ಬಹುಮಾನಗಳನ್ನು ಗೆಲ್ಲಬಹುದು. ಈ ತಾಣ ಏನಾಗಿ ರೂಪುಗೊಳ್ಳಬೇಕೆಂಬುದು ನಿಮ್ಮ ಪಾಲ್ಗೊಳ್ಳುವಿಕೆಯ ಮೇಲೆಯೂ ಅವಲಂಬಿತವಾಗಿದೆ. ಮತ್ತೆ ಮತ್ತೆ ಭೇಟಿಕೊಡಿ. ನಿಮ್ಮ ತಾಣವನ್ನಾಗಿ ಇದನ್ನು ರೂಪಿಸಿ.
 ಚುಕ್ಕುಬುಕ್ಕು ಜಾಲತಾಣ ಕೊಂಡಿ: http://chukkubukku.com


Wednesday, December 26, 2012

ಹಳದಿ ಬಣ್ಣದ ಅಂಟುಚೀಟಿ Yellow Stickies

ಹಳದಿ ಬಣ್ಣದ ಅಂಟುಚೀಟಿ ಬಳಸಿದ್ದೀರಿ ತಾನೆ. ಏನೇನೋ ಕೆಲಸಗಳನ್ನು ಮಾಡಬೇಕಾಗಿದೆ. ಕೆಲವೆಲ್ಲ ಮರೆತು ಹೋಗುತ್ತವೆ. ಅದಕ್ಕಾಗಿ ಅಲ್ಲಿ ಇಲ್ಲ ಸಿಕ್ಕ ಸಿಕ್ಕಲ್ಲೆಲ್ಲ ಹಳದಿ ಬಣ್ಣದ (ಈಗೀಗ ಬೇರೆ ಬೇರೆ ಬಣ್ಣಗಳಲ್ಲು ಬರುತ್ತಿವೆ) ಅಂಟಿಸಿ ಪುನಃ ತೆಗೆಯಬಹುದಾದ ಸ್ಟಿಕೀ ನೋಟ್ಸ್‌ಗಳನ್ನು ಬಳಸುವ ಅಭ್ಯಾಸ ನಮ್ಮಲ್ಲಿ ಹಲವರಿಗಿದೆ. ಗಣಕಗಳಲ್ಲೂ ಇದೇ ಮಾದರಿಯ ಸ್ಟಿಕಿನೋಟ್ಸ್ ತಂತ್ರಾಂಶ ಲಭ್ಯವಿದೆ. ಇದು ವಿಂಡೋಸ್ ಜೊತೆ ಬರುವ ಸ್ಟಿಕಿನೋಟ್ಸ್ ತಂತ್ರಾಂಶಕ್ಕಿಂತ ಚೆನ್ನಾಗಿದೆ. ಇದರಲ್ಲಿ ಚಿತ್ರಗಳನ್ನೂ ಸೇರಿಸಬಹುದು. ಸ್ನೇಹಿತರ ಜೊತೆ ಹಂಚಿಕೊಳ್ಳಲೂಬಹುದು.
ಅಂತಹ ಒಂದು ಉಚಿತ ತಂತ್ರಾಂಶ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ.   http://www.zhornsoftware.co.uk/stickies/download.html

Tuesday, December 25, 2012

ಆಗಸದಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ನೋಡಿ

ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರವನ್ನು (ಐ.ಎಸ್.ಎಸ್.) ನೋಡಬೇಕು ಎಂಬ ಆಸೆ ಇದೆಯೇ? ಅಂತಹ ಆಸೆ ಇದ್ದರೆ ಅದಕ್ಕೆ ಈಗ ಅವಕಾಶ ಇದೆ. ನಿಮ್ಮ ಮನೆಯ ಮೇಲಿನಿಂದ ಐ.ಎಸ್.ಎಸ್ ಹಾದು ಹೋಗುವುದಿದ್ದರೆ ಬರಿಗಣ್ಣಿನಿಂದ ಅದನ್ನು ನೋಡುವುದಕ್ಕೆ ಸಾಧ್ಯ ಇದೆ. ಇದಕ್ಕಾಗಿ ನಾಸಾ ಹೊಸ ಎಸ್.ಎಂ.ಎಸ್ ಸೇವೆಯನ್ನು ಆರಂಭಿಸಿದೆ.
"ಐ.ಎಸ್.ಎಸ್ ನೋಡಿ" ಎಂಬ ಕೇಂದ್ರವನ್ನು ನಾಸಾ ಆರಂಭಿಸಿದೆ. ಅಲ್ಲಿ ನೀವು ನೋಂದಣಿ ಮಾಡಿಕೊಂಡರೆ ಐ.ಎಸ್.ಎಸ್ ನಿಮ್ಮ ಮನೆಯ ಮೇಲೆ ಹಾದು ಹೋಗುವ ಸಂದರ್ಭದಲ್ಲಿ ನಾಸಾ ನಿಮಗೆ ಎಸ್.ಎಂ.ಎಸ್ ಕಳುಹಿಸುತ್ತದೆ. ಆಗ ನೀವು ಬರಿಗಣ್ಣಿನಿಂದ ಐ.ಎಸ್.ಎಸ್ ಅನ್ನು ನೋಡಬಹುದು.
ಮುಂಜಾನೆ ಮತ್ತು ಮುಸ್ಸಂಜೆ ಆಕಾಶ ಅತ್ಯಂತ ಶುಭ್ರವಾಗಿರುವಾಗ ಬಾಹ್ಯಾಕಾಶ ಕೇಂದ್ರ ಅತ್ಯಂತ ಸ್ಪಷ್ಟವಾಗಿ ಕಾಣಿಸುತ್ತದೆ. ಇದು ವೇಗವಾಗಿ ಹಾದು ಹೋಗುವ ಬೆಳಕಿನ ಕಿರಣದಂತೆ ಕಾಣಿಸುತ್ತದೆ.  ಜಾಲತಾಣ ಕೊಂಡಿ: http://spotthestation.nasa.gov

ಎರಡನೇ ವರ್ಷದ ಹರುಷದಲ್ಲಿ

ಈ ಡಿಸೆಂಬರ್ 25-12-2012ರ [ಎರಡು ವರ್ಷ] ದ ಹೊತ್ತಿಗೆ ಸರಿಯಾಗಿ 
ಚಂದ್ರು ಮಲ್ಟಿಮೀಡಿಯ ಅಂತರಜಾಲ ತಾಣ ವಿಶ್ವದಾದ್ಯಂತ "28000+" ಹೆಚ್ಚು ಬಾರಿ ತೆರೆದುಕೊಂಡಿದೆ.
ಚಂದ್ರು ಮಲ್ಟಿಮೀಡಿಯ ಅಂತರಜಾಲ ತಾಣದಿಂದಾಗಿ ವಿಶ್ವದಾದ್ಯಂತ ಗೆಳೆಯರು ಸಿಕ್ಕಿದ್ದಾರೆ.
ಜೊತೆಗೆ ನನ್ನ ನೆಚ್ಚಿನ ದಿನ ಪತ್ರಿಕೆಯಾದ ಸಂಯುಕ್ತ ಕರ್ನಾಟಕದಲ್ಲಿ "ಟೆಕ್ ಕನ್ನಡ" ಎಂಬ ಶಿರ್ಷೀಕೆಯಡಿಯಲ್ಲಿ  ತಂತ್ರಜ್ಞಾನದಿಂದ ಸಾಮಾನ್ಯನೆಡೆಗೆ ಎಂಬ ಅಂಕಣದಲ್ಲಿ ತಂತ್ರಜ್ಞಾನ, ಕಲಿಕೆ, ಎಲೆಕ್ಟ್ರಾನಿಕ್ ಉಪಕರಣಗಳ ಬಳಕೆ ಮುಂತಾದ ವಿಚಾರಗಳನ್ನು ಓದುಗರಿಗೆ ತಲುಪಿಸುವ ಪ್ರಯತ್ನಕ್ಕೆ ಅನುವು ಮಾಡಿಕೊಟ್ಟ ಸಯುಂಕ್ತ ಕರ್ನಾಟಕ ದಿನ ಪತ್ರಿಕೆಯ ಸುದ್ದಿ ಸಂಪಾದಕರಾದ ಶ್ರೀಯುತ ಚಾಮರಾಜ ಸವಡಿ ರವರಿಗೆ ನಾನು ಕೃತಜ್ಞ.
ವೆಬ್ ಲೋಕದಲ್ಲಿ ಇಷ್ಟಪಟ್ಟು ಬರೆದುದನ್ನು ಅಷ್ಟೇ ಖುಷಿಯಿಂದ ಓದಿ ಪ್ರೋತ್ಸಾಹಿಸುವ ನಿಮ್ಮಂಥ ಗೆಳೆಯರು.
 ಅದಕ್ಕೆ ನನ್ನ ದೊಡ್ಡ ನಮನಗಳು.

Thursday, December 6, 2012

ಗೂಗಲ್ ಸ್ಟೀಟ್‌ವ್ಯೂ

ಗೂಗಲ್ ಸ್ಟ್ರೀಟ್‌ವ್ಯೂ ಸೇವೆಯು ಜಗತ್ತಿನ ಸುಮಾರು ಹದಿನೇಳು ದೇಶಗಳ ರಸ್ತೆಯ ದೃಶ್ಯಗಳನ್ನು ನೇರವಾಗಿ ಜನರಿಗೆ ಒದಗಿಸುತ್ತದೆ. ಕಾರು, ಬಸ್, ಇನ್ನಿತರೆ ವಾಹನಗಳು, ಜನರು ಹಿಡಿದಿರುವ ಕ್ಯಾಮರಾದ ಮೂಲಕ ರಸ್ತೆಯ ದೃಶ್ಯಗಳನ್ನು ನೇರವಾಗಿ ಸೆರೆಹಿಡಿದು, ಗೂಗಲ್ ಮ್ಯಾಪ್ ತಾಣದ ಮೂಲಕ ಅದನ್ನು ಜನರೊಂದಿಗೆ ಹಂಚಿಕೊಳ್ಳುವ ಗೂಗಲ್ ಸ್ಟ್ರೀಟ್‌ವ್ಯೂ ಸೇವೆಯು ನಾರ್ವೆ, ಸಿಂಗಾಪೂರ್, ಕೆನಡಾ, ಮಲೇಶ್ಯಾ, ಥೈಲ್ಯಾಂಡ್, ಅಮೆರಿಕಾ, ಲಂಡನ್, ಸ್ವೀಡನ್, ಡೆನ್ಮಾರ್ಕ್, ಟೈವಾನ್, ಇಟೆಲಿ, ಡೆನ್ಮಾರ್ಕ್ ಮೊದಲಾದ ಜಗತ್ತಿನ ಸುಮಾರು ಹದಿನೇಳು ದೇಶಗಳ ದೃಶ್ಯಗಳನ್ನು ಒಳಗೊಂಡಿದೆ. ಗೂಗಲ್ ತನ್ನ ಸ್ಟ್ರೀಟ್‌ವ್ಯೂನಲ್ಲಿ ಇಪ್ಪತ್ತೈದು ಸಾವಿರ ಮೈಲು ವಿವರಗಳನ್ನು ಹೊಂದಿದೆ. ಜಾಲತಾಣ ಕೊಂಡಿ: http://goo.gl/22Cly  ಅಥವಾ http://maps.google.co.in/intl/en/help/maps/streetview

ಸೃಜನಶೀಲರಿಗೆ ಸಾಮಾಜಿಕ ಜಾಲತಾಣ (ಕ್ಯುಕಿ)


ಇಂದು ಜಗತ್ತಿನ ಅಂರ್ತಜಾಲದಲ್ಲಿ ಫೇಸ್ಬುಕ್, ಟ್ವಿಟ್ಟರ್, ಲಿಂಕ್ಡಿನ್, ಗೂಗಲ್ ಪ್ಲಸ್, ಆರ್ಕುಟ್, ಯೂಟ್ಯೂಬ್ ಗೀಗೆ ಹಲವು ಹತ್ತು ಸಾಮಾಝಿಕ ಮಾಧ್ಯಮಗಳಿವೆ. ಇಂಥದೇ, ಇದಕ್ಕಿಂತ ಸೂಕ್ಷ್ಮ ಹಾಗೂ ಸೃಜನಶೀಲತೆಗೆ ಮೀಸಲಾದ ಬಹು ನಿರೀಕ್ಷಿತ ಸಾಮಾಜಿಕ ಮಾಧ್ಯಮ "ಕ್ಯುಕಿ" ಜಾಗತಿಕ ಮಟ್ಟದಲ್ಲಿ  ಹುಟ್ಟಿಕೊಂಡಿದೆ. ಕಲಾ ಪ್ರಪಂಚದಲ್ಲಿ ಈ ರಾಷ್ಟ್ರದ ಇಬ್ಬರು ಹೆಮ್ಮೆಯ ಪುತ್ರರೆನಿಸಿದ ಮುಂಬೈನ ಪ್ರಖ್ಯಾತ ಚಲನಚಿತ್ರ ನಿರ್ದೇಶಕ, ನಟ, ನಿರ್ಮಾಪಕ ಶೇಖರ್ ಕಫೂರ್ ಮತ್ತು ಆಸ್ಕರ್, ಗ್ರಾಮ್ಮೀ ಪ್ರಶಸ್ತಿ ವಿಜೇತ, ಪ್ರಸ್ತುತ ಭಾರತೀಯ ಚಲನಚಿತ್ರ ಸಂಗೀತ ದಿಗ್ಗಜ ಎ.ಆರ್.ರೆಹಮಾನ್ ಕ್ಯುಕಿಯ ಅಪ್ಪ,ಅಮ್ಮಂದಿರು.

ಭಾರತದ ಮೂಲೆ ಮೂಲೆಯಲ್ಲಿರುವ ಸಾವಿರಾರು ಕ್ರಿಯಾಶೀಲ ಮನಸ್ಸುಗಳು ತೆರೆದುಕೊಳ್ಳಲು "ಕ್ಯುಕಿ" ಸೂಕ್ತ ವೇದಿಕೆಯಾಗಿ ರೂಪಗೊಳ್ಳುತ್ತಿದ್ದು ಕಲಾ ಪ್ರಪಂಚದಲ್ಲಿ ಭಾರತೀಯ ಮನಸ್ಸುಗಳ ಕಲ್ಪನೆಯ ಮೂರ್ತಸ್ವರೂಪ ಪಡೆಯಲು "ಕ್ಯುಕಿ" ಮೊದಲ ಮೆಟ್ಟಿಲಾಗಲಿದೆ. ನಮ್ಮ ದೇಶಾದ್ಯಂತ ಪ್ರತಿಭಾನ್ವೇಷಣೆಯಲ್ಲಿ ಯುವ ಮನಸ್ಸುಗಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಒಂದು ಸೃಜನಶೀಲ ಸಾಮಾಜಿಕ ಜಾಲತಾಣ ರೂಪಿಸಿದ್ದಾರೆ. ಜಾಲತಾಣದಲ್ಲಿ ಆಗಲೇ ಸೃಜನಶೀಲ ಮನಸುಗಳು ಖಾತೆ ತೆರಿದಿದ್ದು ಅಸಂಖ್ಯಾತ ಸಂಖ್ಯೆಯಲ್ಲಿ ಖಾತೆಗಳು ತೆರೆಯಬೇಕಾಗಿದೆ. ಜಾಲತಾಣ ವಿಳಾಸ ಕೊಂಡಿ: http://www.qyuki.com