WEBSITE, INVENTORY SOFTWARE, CCTV CAMERA , COMPUTER & LAPTOP SALES & SERVICE, TABLETS, VIDEOGRAPHY, PHOTOGRAPHY, PROJECTOR ,VIDEO & AUDIO EDITING, VHS TO CD,DVD,BLURAY DISC CONVERSATION, DESIGNING & MANY MORE...
ಸುಸ್ವಾಗತ ನಿಮ್ಮ ಕಲ್ಪನೆ ನಮ್ಮ ಸೃಷ್ಠಿ !!! ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು.
ಈಗ ಮಲ್ಟಿಮೀಡಿಯವನ್ನು e-Speak ಕನ್ನಡದಲ್ಲಿ ಕೇಳಿ!

Tuesday, January 22, 2013

ಸ್ಟನ್ ಗನ್ ಶಾಕ್ ಟ್ರೀಟ್ಮೆಂಟ್

ದೆಹಲಿ ಗ್ಯಾಂಗ್ ರೇಪ್ ನಡೆದ ನಂತರ ಇತ್ತೀಚೆಗೆ ಅತೀ ಹೆಚ್ಚೆಚ್ಚು ಸುದ್ದಿಗಳು ಮಿದ್ಯನ್ಮಾನ ಹಾಗೂ ಮುದ್ರಣ ಮಾಧ್ಯಮಗಳಲ್ಲಿ ದಿನಕ್ಕೆ ಹಲವಾರು ರೇಪ್ ಸುದ್ದಿಗಳು ವರದಿಯಾಗಿತ್ತಿರುತ್ತವೆ ಅಲ್ಲವೇ?

ನಮ್ಮ ಹೆಣ್ಮಕ್ಕಳು ಈಗ ಹೆಚ್ಚತ್ತುಕೊಂಡಿದ್ದಾರೆ, ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಕರಾಟೆ, ಕುಂಗ್ ಪು, ಇತರೇ ರಕ್ಷಣಾ ವಿದ್ಯೆಗಳ ಕಲಿಕೆಯ ಜೊತೆಗೆ! ಕಾರದ ಪುಡಿ, ಪೆಪ್ಪರ್ ಸ್ಪ್ರೇ, ಸ್ಟನ್ ಗನ್ ಗಳ ಮೊರೆಹೋಗುತ್ತಿದ್ದಾರೆ.

ಕಾನೂನಿನ ಕಡಿವಾಣ, ಕಟ್ಟುಪಾಡುಗಳಿದ್ದರೂ ಸಹ ಸ್ಟನ್ ಗನ್ ಗಳಂತಹ ರಕ್ಷಣಾ ಸಾಧನಗಳನ್ನು ಹೆಣ್ಮಕ್ಕಳು ಆನ್ಲೈನ್ ಜಾಲತಾಣಗಳಿಂದ ಖರೀದಿಸುತ್ತಿರುವುದು ಹೆಚ್ಚಾಗುತ್ತಿದೆ. ಇಂತಹ ರಕ್ಷಣಾ ಸಾಧನಗಳನ್ನು ಮಾರಾಟ ಮಾಡುತ್ತಿರುವ ಸ್ಮಾರ್ಟ್ ಸ್ಟನ್ ಕಂಪನಿಯ ಸ್ಟನ್ ಗನ್ ಉತ್ಪನ್ನದ ಪರಿಚಯ:

ಸ್ಟನ್ ಗನ್ಗಳ ಕಾರ್ಯವೈಕರಿ / ಉಪಯೋಗ

ಸ್ವನ್ ಗನ್ ಬಳಸಿ ಸುಮಾರು 150 ಕೆವಿಯಿಂದ 500 ಕೆವಿಯ ವರೆಗೂ ವಿದ್ಯತ್ ಶಾಕ್ ಕೊಡಬಹುದು. ಸ್ಟನ್ ಗನ್ ಆನ್ ಮಾಡಿ ಅದರ ಬೆಳಕು ಅತ್ಯಾಚಾರಿಗಳಿಗೆ ಬೀಳುವಂತೆ ಮಾಡಿದರೆ ಸಾಕು, ಅವರು ಶಕ್ತಿ ಕಳೆದುಕೊಳ್ಳುತ್ತಾರೆ. 30 ಸೆಕೆಂಡ್ ನಿಂದ 1 ನಿಮಿಷದವರೆಗೂ ಶಾಕ್ ಕೊಟ್ಟರೆ ಸಾಕು ದಾಳಿಕೋರರು ಚೇತರಿಸಿಕೊಳ್ಳಲು ಅರ್ಧತಾಸು ಬೇಕು ಎನ್ನುತ್ತಾರೆ ತಯಾರಕರು. ಒಂದು ಬಾರಿ ಚಾರ್ಜ್ ಮಾಡಿದರೆ 2 ಗಂಟೆಗಳವರೆಗೆ ಬಳಸಬಹುದಂತೆ. ಇಂತಹ ಹಲವಾರು ರಕ್ಷಣಾ ಸಾಧನಗಳನ್ನು ಅನ್ಲೈನ್ ನಲ್ಲಿ ಮಾರಾಟ ಮಾಡುತ್ತಿರುವ ವಿದೇಶಿ ಜಾಲತಾಣವಾದ ಸ್ಮಾರ್ಟ್ ಸ್ಟನ್ ಡಾಟ್ ಕಾಂ ನಲ್ಲಿ ಮತ್ತಷ್ಟು ರಕ್ಷಣಾ ಸಾಧನಗಳನ್ನು ಕೊಳ್ಳಲು ವಿಳಾಸ: www.smartstun.com

ಭ್ರಷ್ಟಾಚಾರದ ವಿರುದ್ದ ಹೋರಾಡಲು ವೆಬ್ ಸೈಟ್

ಜನಾಗ್ರಹ ಸಂಘಟನೆಯು ಭ್ರಷ್ಟಾಚಾರದ ವಿರುದ್ದ ಹೋರಾಡಲು  ಐ ಪೇಡ್ ಎ ಬ್ರೈಬ್ ಡಾಟ್ ಕಾಮ್ ಎಂಬ ಜಾಲತಾಣವನ್ನು ಆರಂಭಿಸಿದೆ. 
 
ಯಾವ ಇಲಾಖೆಯ ಅಧಿಕಾರಿಗೆ ಎಷ್ಟು ಲಂಚ ನೀಡಲಾಗಿದೆ, ಯಾರು ನಿಷ್ಠಾವಂತ ಅಧಿಕಾರಿ ಮತ್ತು ಭ್ರಷ್ಟಾಚಾರ ಹೋರಾಟಗಾರರ ಬಗ್ಗೆ  ಇತ್ಯಾದಿ ವಿವರಗಳನ್ನು ಜಾಲತಾಣದಲ್ಲಿ ಬರೆಯಲು ನಾಗರಿಕರಿಗೆ ಅವಕಾಶ ಕಲ್ಪಿಸಲಾಗಿದೆ.
 
ವಾಹನಗಳ ನೋಂದಣಿ ಮಾಡುವಾಗ, ಮನೆ, ಭೂಮಿ ಮಾರಾಟಕ್ಕೆ ಅಗತ್ಯವಿರುವ ಪ್ರಮಾಣಪತ್ರ ಅಥವಾ ಮತ್ಯಾವುದೇ ಪರಿಸ್ಥಿತಿಯಲ್ಲಿ ಅಧಿಕಾರಿ ಸಿಬ್ಬಂದಿಗೆ ಲಂಚ ನೀಡಿರಬಹುದು. ಈ ಭ್ರಷ್ಟಾಚಾರದ ಮಾಹಿತಿಯನ್ನು ಸಾರ್ವಜನಿಕರ ಗಮನಕ್ಕೆ ತರಲು  ಐ ಪೇಡ್ ಎ ಬ್ರೈಬ್ ಡಾಟ್ ಕಾಮ್  ಜಾಲತಾಣವನ್ನು ಆರಂಭಿಸಲಾಗಿದೆ.
 
ಈ ಜಾಲತಾಣವನ್ನು ಈಗಾಗಲೇ ವಿಶ್ವಾದ್ಯಾಂತ ಲಕ್ಷಾಂತರ ಜನರು ವೀಕ್ಷಿಸಿ, ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭ್ರಷ್ಟಾಚಾರದ ಪಿಡುಗು ಭಾರತ ದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ವಿಶ್ವಾದ್ಯಂತವಿದ್ದು ಭಾರತ, ಕೀನ್ಯ, ಗ್ರೀಸ್, ಜಿಂಬಾಂಬ್ವೆ, ಪಾಕಿಸ್ತಾನ ಹಾಗೂ (ಪಿಲಿಪೈನ್ಸ್ ಮತ್ತು ಮಾಂಗೋಲೀಯ) ದೇಶಗಳ ಮಾಹಿತಿ ಶೀಘ್ರದಲ್ಲಿ ಸಿಗಲಿದೆ. ಸುಮಾರು 7 ದೇಶಗಳ ಭ್ರಷ್ಟಾಚಾರದ ಮಾಹಿತಿ ಈ ಜಾಲತಾಣದಲ್ಲಿ ಸಿಗುವುದರಿಂದ ಈ  ಸಮಸ್ಯೆ ಎಷ್ಟು ಇದೆ ಎಂಬುದು ಇದರಿಂದ ಗೊತ್ತಾಗಲಿದೆ.

ಈಗಾಗಲೇ ಜಾಲತಾಣದಲ್ಲಿ 493 ನಗರಗಳ 22,337 ಮಾಹಿತಿಗಳು, 82,58,63,606 ರೂಪಾಯಿಗಳಷ್ಟು ಭ್ರಷ್ಟಾಚಾರದ ಮಾಹಿತಿ ಜಾಲತಾಣದಲ್ಲಿ ಲಭ್ಯವಿದ್ದು. ನೀವೂ ಸಹ ಈ ಆಂದೋಲನದಲ್ಲಿ ಭಾಗವಹಿಸಿ ಭ್ರಷ್ಟಾಚಾರದ ಕಥೆಯನ್ನು ಸಾರ್ವಜನಿಕರ ಗಮನಕ್ಕೆ ತರಲು ಪ್ರಯತ್ನಿಸಬಾರದೇಕೆ ?. ಹೆಚ್ಚಿನ ಮಾಹಿತಿಗೆ ಜಾಲತಾಣ ವಿಳಾಸ ಕೊಂಡಿ: www.ipaidabribe.com

Sunday, January 13, 2013

ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾಲತಾಣ

 "ವಿದ್ಯಾರಣ್ಯ" ಕನ್ನಡ ವಿಶ್ವವಿದ್ಯಾಲಯಕ್ಕೆ ಇಟ್ಟ ಸಾರ್ಥಕನಾಮ.
ಪ್ರಾಕೃತಿಕವಾಗಿ ಮೋಹಕವಾಗಿದ್ದು ತನ್ನ ತಗ್ಗು ದಿಣ್ಣೆಗಳಿಂದ ಕಣ್ಮನ ಸೆಳೆಯುವ ಸುಮಾರು 700 ಎಕರೆಗಳ ವಿಸ್ತಾರವಾದ ಆವರಣವಿದು. ಇಲ್ಲಿಯ ಕಟ್ಟಡಗಳು ವಿಜಯನಗರ ಕಾಲದ ಮಂಟಪಗಳ ವಿಶಿಷ್ಟತೆಯಲ್ಲಿ ರೂಪುಗೊಂಡಿದೆ. ವಿಶ್ವವಿದ್ಯಾಲಯದ ಮುಂಭಾಗಗಳಲ್ಲಿರುವ 'ಅಕ್ಷರ'ದಲ್ಲಿ ಗ್ರಂಥಾಲಯ ಮತ್ತು ವಸ್ತುಸಂಗ್ರಹಾಲಯಗಳಿವೆ. "ಕ್ರಿಯಾಶಕ್ತಿ'' ಆಡಳಿತದ ಕೇಂದ್ರ. ಸಾಂಸ್ಕೃತಿಕ ಚಟುವಟಿಕೆಗಳ ತಾಣ. 'ಭುವನ ವಿಜಯ'. ವಿವಿಧ ನಿಕಾಯಗಳ ವಿವಿಧ ವಿಭಾಗಗಳು 'ತ್ರಿಪದಿ', 'ಕೂಡಲಸಂಗಮ', 'ತುಂಗಭದ್ರ', 'ಘಟಿಕಾಲಯ', 'ಕೇಶೀರಾಜ', 'ಹರಿಹರ', 'ನಾಗವರ್ಮ', 'ಅಕ್ಕ', 'ಅಲ್ಲಮ', 'ನಾದಲೀಲೆ', 'ಕಂಠಪತ್ರ', 'ಜಕ್ಕಣ ಮಂಟಪ' ಮುಂತಾದ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.
ಪಂಪ ಸಭಾಂಗಣ ಸಾಹಿತ್ಯ ಚಟುವಟಿಕೆಗಳ ತಾಣ. "ಸಿರಿಗನ್ನಡ'' ಸಂಶೋಧನಾ ಗ್ರಂಥಾಲಯ "ಸರ್ವಜ್ಞ" ಕಟ್ಟಡದಲ್ಲಿ ಆವರಣದ ಹೃದಯಭಾಗದಲ್ಲಿ ತಲೆಯೆತ್ತಿ ನಿಂತಿದೆ. ಬುಡಕಟ್ಟು ಮತ್ತು ಜಾನಪದ ಅಧ್ಯಯನದ ನೆಲೆಯಾಗಿ ಗ್ರಾಮೀಣ ವಾಸ್ತು ಶೈಲಿಯಲ್ಲಿರುವುದು 'ಗಿರಿಸೀಮೆ'. ಗ್ರೀಕ್ ರಂಗಭೂಮಿಯ ವಿನ್ಯಾಸದಲ್ಲಿ ರೂಪುಗೊಂಡ 'ನವರಂಗ' ಬಯಲು ರಂಗಭೂಮಿ ಕೆರೆಯ ತಟದಲ್ಲಿ ಸುಂದರವಾಗಿ ಮೈದೆಳೆದು ನಿಂತಿದೆ. ಪ್ರಸಾರಾಂಗ ಸೇರಿದಂತೆ ವಿಶ್ವವಿದ್ಯಾಲಯದ ಇಡೀ ಆವರಣ ವಿಶಿಷ್ಟ ರೀತಿಯಲ್ಲಿ ರೂಪುಗೊಂಡಿದ್ದು ಬಸವಣ್ಣನವರ 'ಅಂತರಂಗ-ಬಹಿರಂಗ' ಸೌಂದರ್ಯದ ಸಮನ್ವಯ ಇಲ್ಲಿ ನಡೆದಿದೆ. ವಿಶ್ವವಿದ್ಯಾಲಯದ ಉದ್ದೇಶ ಸಾಧಿಸಲು ಆಡಳಿತ ವಿನ್ಯಾಸ, ಶಿಕ್ಷಣ ವಿನ್ಯಾಸ ಮತ್ತು ಪೂರಕ ವಿನ್ಯಾಸಗಳೆಂಬ ತ್ರಿಮುಖ ವಿನ್ಯಾಸಗಳನ್ನು ರೂಪಿಸಲಾಗಿದೆ. ಮತ್ತಷ್ಟು ಮಾಹಿತಿ ಹೆಕ್ಕಲು  ಅಂತರ ಜಾಲತಾಣ ಕೊಂಡಿ: www.kannadauniversity.org

ಹಾಗೆಯೇ  ಶ್ರೀ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ನೆನಪಿಗಾಗಿ ಕನ್ನಡ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿರುವ ಕುವೆಂಪು ಕನ್ನಡ ತಂತ್ರಾಂಶ ಆವೃತ್ತಿ 2.0 ನ್ನು  ಪಡೆಯಲು>
ಕುವೆಂಪು ಕನ್ನಡ ತಂತ್ರಾಂಶ ಆವೃತ್ತಿ 2.0ನ್ನು ಡೌನ್ ಲೋಡ್ ಮಾಡಿಕೊಳ್ಳಲುಇಲ್ಲಿ ಕ್ಲಿಕ್ ಮಾಡಿ
( File Format : Zip File Size : 13.7 MB Updated Date : 04.02.2011 )
ಯೂನಿಕೋಡ್ ಆವೃತ್ತಿ 1.0ನ್ನು ಡೌನ್ ಲೋಡ್ ಮಾಡಿಕೊಳ್ಳಲುಇಲ್ಲಿ ಕ್ಲಿಕ್ ಮಾಡಿ
( File Format : Zip File Size : 8.85 MB Updated Date : 04.02.2011 )
ಕುವೆಂಪು ಕನ್ನಡ ತಂತ್ರಾಂಶ ಎನ್.ಟಿ. ಆವೃತ್ತಿ 1.0ನ್ನು ಡೌನ್ ಲೋಡ್ ಮಾಡಿಕೊಳ್ಳಲುಇಲ್ಲಿ ಕ್ಲಿಕ್ ಮಾಡಿ
( File Format : Zip File Size : 3.93 MB Updated Date : 04.02.2011)

Monday, January 7, 2013

ಮಹಿಳೆಯ ರಕ್ಷಣೆಗೆ "ಫೈಟ್‌ಬ್ಯಾಕ್‌" ತಂತ್ರಾಂಶ

ಮಹಿಳೆಯರಿಗೆ ಒಂದು ಶುಭಸುದ್ಧಿ!
ಇತ್ತೀಚೆಗೆ ದೆಹಲಿ ಗ್ಯಾಂಗ್‌ ರೇಪ್‌ ನಡೆದ ಬಳಿಕ ಟೆಕ್‌ ಮಹೀಂದ್ರಾ ಉಚಿತವಾದ "ಫೈಟ್‌ಬ್ಯಾಕ್‌" ತಂತ್ರಾಂಶವನ್ನು ನೀಡುತ್ತಿದೆ.
ನಗರದಲ್ಲಿ ಸಂಚರಿಸುವ ಮಹಿಳೆಯರ ರಕ್ಷಣೆಗಾಗಿ ಟೆಕ್‌ ಮಹೀಂದ್ರಾ ಒಂದು "ಫೈಟ್‌ಬ್ಯಾಕ್‌" ತಂತ್ರಾಂಶ ತಯಾರಿಸಿದೆ. ಈ ಅಪ್ಲಿಕೇಶನ್‌ ಮುಖಾಂತರ ತೊಂದರೆಯಲ್ಲಿರುವ ವ್ಯಕ್ತಿ ಒಂದು ಒಂದು  ಬಟನ್‌ ಒತ್ತಿದರೆ ಮಾಡಿದ್ರೆ ಸಾಕು ತೊಂದರೆಯಲ್ಲಿದ್ದರೆ ಆ ವ್ಯಕ್ತಿಯ ಸ್ಥಳವನ್ನು ಪತ್ತೆಹಚ್ಚಬಹುದು. ಈ ತಂತ್ರಾಂಶ ನಿಮ್ಮ ಸ್ಥಳವನ್ನು ಜಿಪಿಎಸ್‌ ಮುಖಾಂತರ ಪತ್ತೆಹಚ್ಚಿ ಆಪ್ತರಿಗೆ ಸಂದೇಶ ಕಳುಹಿಸುತ್ತದೆ.
ನೀವು ಫೈಟ್‌ ಬ್ಯಾಕ್‌ ಜಾಲತಾಣಕ್ಕೆ  ಭೇಟಿ ನೀಡಿ  ಸೇರಿದರೆ ಸಾಕು. ಸೇರಿದ ನಂತರ ನಿಮ್ಮ ಐದು ಜನ ಆಪ್ತರ ಸಂಚಾರಿ  ಸಂಖ್ಯೆ ಮತ್ತು ಮಿಂಚಂಚೆಯನ್ನು ಇದರಲ್ಲಿ ನಮೂದಿಸಬೇಕು. ಒಂದು ವೇಳೆ ನೀವು ಫೇಸ್‌ಬುಕ್‌ ಲಾಗಿನ್‌ ಆದ್ರೆ ನೀವು ತೊಂದರೆಯಲ್ಲಿದ್ದಾಗ ಈ ಅಪ್ಲಿಕೇಶನ್‌ ಬಳಸಿದರೆ ನಿಮ್ಮ ಫೇಸ್‌ಬುಕ್‌ನಲ್ಲೂ ನಿಮ್ಮ ಮಾಹಿತಿ ಪೊಸ್ಟ್‌ ಆಗುತ್ತದೆ.
ಈ ತಂತ್ರಾಂಶವನ್ನು ಟೆಕ್‌ ಮಹೀಂದ್ರ ಒಂದು ವರ್ಷ ಹಿಂದೆ ಬಿಡುಗಡೆ ಮಾಡಿತ್ತು. ಆದ್ರೆ ಒಂದು ವರ್ಷಕ್ಕೆ 100 ರೂಪಾಯಿ ನೀಡಿ ಚಂದದಾರರಾದ್ರೆ ಆದ್ರೆ ಮಾತ್ರ ನೀವು ಈ ಆಪ್ಲಿಕೇಶನ್‌ ಬಳಸಬಹುದಿತ್ತು. ಇದೀಗ "ಫೈಟ್‌ಬ್ಯಾಕ್‌" ತಂತ್ರಾಶ ಉಚಿತವಾಗಿ ಸಿಗುತ್ತಿದ್ದು ನಿಮಗೆನಾದ್ರೂ ಈ ಆಪ್ಲಿಕೇಶನ್‌ ಇಷ್ಟವಾಗಿದ್ರೆ ಫೈಟ್‌ಬ್ಯಾಕ್‌ ಜಾಲತಾಣಕ್ಕೆ ಭೇಟಿನೀಡಿ. ನೋಕಿಯಾ, ಬ್ಲಾಕ್ಬೆರ್ರಿ, ಆಂಡ್ರಾಯ್ಡ್ ತಂತ್ರಾಂಶಗಳಿಗಾಗಿ ಕೊಂಡಿ:  http://www.fightbackmobile.com

Tuesday, January 1, 2013

ರಾಷ್ಟ್ರಕವಿ ಕುವೆಂಪು ಅವರ ಬಗ್ಗೆ ಮಾಹಿತಿ ನೀಡುವ ಜಾಲತಾಣ


ಪ೦ಚಮ೦ತ್ರ ಮತ್ತು ಸಪ್ತಸೂತ್ರ
“ಮರ್ತ್ಯಜೀವನದ ತಾಟಸ್ಥ್ಯಮ೦ ಕಡೆಕಡೆದು
ಶ್ರದ್ಧೆ ಸ೦ದೇಹಗಳನಿರದೆ ಹೊಡೆದೆಬ್ಬಿಸುವ,
ಮೇಣ್ ಜನತೆ ಜನತೆಯೊಳ್ ಪಕ್ಷಪಕ್ಷ೦ಗಳ೦
ಕೆರಳಿಸುವ ಶತಶತ ಮತ೦ಗಳ೦ ತಾಮಲ್ಲಿ
ರಾರಾಜಿಸಿದುವಗ್ನಿವರ್ಣದ ವೃಕ೦ಗಳೋಲ್,
ಜೋಲ್ವ ಜಿಹ್ವೆಯೊಳತಿ ಭಯಾನಕ೦-!”

          ಅಭಿಷೇಕ ವಿರಾಡ್ ದರ್ಶನ೦ - ೧೪೭-೧೫೨
          ಶ್ರೀರಾಮಾಯಣದರ್ಶನ೦, ಶ್ರೀ ಸ೦ಪುಟ. ಸ೦.೧೩

ಪ್ರತಿಯೊ೦ದು ಮಗುವೂ ಹುಟ್ಟುತ್ತಲೇ ವಿಶ್ವಮಾನವ, ಬೆಳೆಯುತ್ತಾ ನಾವು ಅದನ್ನು ಅಲ್ಪಮಾನವನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ‘ವಿಶ್ವಮಾನವ’ನನ್ನಾಗಿ ಮಾಡುವುದೆ ವಿದ್ಯೆಯ ಕರ್ತವ್ಯವಾಗಬೇಕು.
ಹುಟ್ಟುವಾಗ ‘ವಿಶ್ವಮಾನವ’ನಾಗಿಯೆ ಹುಟ್ಟಿದ ಮಗುವನ್ನು ನಾವು ದೇಶ, ಭಾಷೆ, ಮತ, ಜಾತಿ, ಜನಾ೦ಗ, ವರ್ಣ ಇತ್ಯಾದಿ ಉಪಾಧಿಗಳಿ೦ದ ಬದ್ದನನ್ನಾಗಿ ಮಾಡುತ್ತೇವೆ. ಅವೆಲ್ಲವುಗಳಿ೦ದ ಪಾರಾಗಿ ಅವನನ್ನು ‘ಬುದ್ಧ’ನನ್ನಾಗಿ, ಅ೦ದರೆ ವಿಶ್ವಮಾನವನನ್ನಾಗಿ ಪರಿವರ್ತಿಸುವುದೇ ನಮ್ಮ ವಿದ್ಯೆ, ಸ೦ಸ್ಕೃತಿ, ನಾಗರೀಕತೆ ಎಲ್ಲದರ ಆದ್ಯ ಕರ್ತವ್ಯವಾಗಬೇಕು. ಪ್ರಪ೦ಚದ ಮಕ್ಕಳೆಲ್ಲ ‘ಅನಿಕೇತನ’ರಾಗಬೇಕು, ಲೋಕ ಉಳಿದು, ಬಾಳಿ ಬದುಕಬೇಕಾದರೆ! ಮಾನವ ವಿಕಾಸದ ಹಾದಿಯಲ್ಲಿ ಆಯಾ ಕಾಲದ ಅಗತ್ಯವನ್ನು ಪೂರೈಸಲು ಮಹಾಪುರುಷರು ಸ೦ಭವಿಸಿ ಹೋಗಿದ್ದಾರೆ. ಆವರಲ್ಲಿ ಕೆಲವರ ವಾಣಿ ವಿಶಿಷ್ಟ ಧರ್ಮವಾಗಿ ರೂಪುಗೊ೦ಡು ಕಡೆಗೆ ಮತವಾಗಿ ಪರಿಮಿತವಾಯಿತು. ಮಾನವರನ್ನು ಕೂಡಿಸಿ ಬಾಳಿಸಬೇಕೆ೦ಬ ಉದ್ದೇಶದಿ೦ದ ಹುಟ್ಟಿಕೊ೦ಡ ಮಹಾತ್ಮರ ವಾಣಿ ಮತವಾಗಿ ಮಾದಕವಾಯಿತು. ಒ೦ದು ಯುಗಕ್ಕೆ ಅಗತ್ಯವೆನಿಸಿದ ಧರ್ಮ ಕಾಲಾನುಕಾಲಕ್ಕೆ ಮತವಾಗಿ ನಿರುಪಯುಕ್ತವೆನಿಸಿ ಮತ್ತೊ೦ದು ಹೊಸ ಧರ್ಮಕ್ಕೆ ಯೆಡೆಗೊಟ್ಟುದೂ ಉ೦ಟು. ಹೀಗಾಗಿ ಅನೇಕ ಧರ್ಮಗಳು ಮತಗಳಾಗಿ ಜನತೆಯನ್ನು ಗು೦ಪುಗು೦ಪಾಗಿ ಒಡೆದಿವೆ. ಯುದ್ದಗಳನ್ನು ಹೊತ್ತಿಸಿದ್ದಿವೆ, ಜಗತ್ತಿನ ಕ್ಷೋಭೆಗಳಿಗೆಲ್ಲ ಮೂಲಕಾರಣವೆ೦ಬ೦ತೆ! ವಿಜ್ಞಾನಯುಗದ ಪ್ರಾಯೋಗಿಕ ದೃಷ್ಟಿಗೆ ಇನ್ನುಮೇಲೆ ಮತ ಮೌಢ್ಯ ಒಪ್ಪಿಗೆಯಾಗದು. ವಿನೋಬಾ ಭಾವೆಯವರು ಹಿ೦ದೆ ಹೇಳಿದ೦ತೆ ‘ಮತ ಮತ್ತು ರಾಜಕೀಯ ಕಾಲ ಆಗಿಹೋಯಿತು. ಇನ್ನೇನಿದ್ದರೂ ಆಧ್ಯಾತ್ಮ ಮತ್ತು ವಿಜ್ಞಾನದ ಕಾಲ ಬರಬೇಕಾಗಿದೆ.’   

ಇಡೀ ವಿಶ್ವಕ್ಕೆಲ್ಲಾ ವಿಶ್ವಮಾನವ ಸಂದೇಶ ನೀಡಿದ ರಾಷ್ಟ್ರದ ಮಹಾನ್ ಕವಿ ಕುಪ್ಪಳಿ ವೆಂಕಟಪ್ಪಗೌಡ (ವೆಂಕಟಯ್ಯಗೌಡ) ಪುಟ್ಟಪ್ಪ (ಕೆ. ವಿ. ಪುಟ್ಟಪ್ಪ - ಕುವೆಂಪು) ಅವರ ಜನನ, ಬಾಲ್ಯ ಹಾಗೂ ಜೀವನ. ನೆನಪು, ಕೃತಿಗಳು, ಅಪರೂಪದ ಛಾಯಾಚಿತ್ರಗಳು, ಹಸ್ತಪ್ರತಿಗಳು ಹಾಗೂ ವಿಶ್ವಮಾನವ ಸಂದೇಶದ ಬಗ್ಗೆ ಮಾಹಿತಿ ನೀಡುವ ಕುವೆಂಪು.com ಅಂತರ್ಜಾಲ ತಾಣ. http://kuvempu.com

ಹಬ್ಬ ಹರಿದಿನಗಳ ಮಾಹಿತಿಗೆ ಜಾಲತಾಣ

ಇತ್ತೀಚೆಗಷ್ಟೆ ದೀಪಾವಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿಕೊಂಡಿದ್ದೇವೆ. ಇದರ ಹಿನ್ನೆಲೆ ನಮ್ಮಲ್ಲಿ ಬಹುತೇಕರಿಗೆ ಗೊತ್ತು. ಜತೆಗೆ ಅನೇಕ ಧರ್ಮಗಳ ಬೀಡಾದ ಭಾರತದಲ್ಲಿ ಸದಾ ಹಬ್ಬಗಳು ಜರುಗುತ್ತಲೇ ಇರುತ್ತವೆ. ಹಾಂಗತ ಎಲ್ಲರಿಗೂ, ಎಲ್ಲಾ ಧರ್ಮಗಳ ಹಬ್ಬಗಳ ಬಗೆಗೂ ಗೊತ್ತಿರುತ್ತದೆ ಅಂತೇನಿಲ್ಲ.
ನಿಮಗೇನಾದರೂ ಬೇರೆ ಬೇರೆ ಧರ್ಮಗಳ, ಮಹತ್ವದ ಹಬ್ಬಗಳ ಬಗ್ಗೆ ತಿಳಿದುಕೊಳ್ಳಬೇಕೆನಿಸುವುದೇ? ಹಾಗಿದ್ದರೆ ಈ ಜಾಲತಾಣಕ್ಕೆ ಬೇಟಿನೀಡಲೇಬೇಕು. ಯಾವ್ಯಾವ ಹಬ್ಬಗಳನ್ನು ಯಾವ್ಯಾವಾಗ, ಎಲ್ಲೆಲ್ಲಿ ಆಚರಿಸುತ್ತಾರೆ? ಅದರ ಮಹತ್ವ ಏನು? ಎನ್ನುವಂತಹ ವಿವರಗಳಿವೆ.
ಅಲ್ಲದೆ ಯಾವ ವಿವರ ನಿಮಗೆ ಬೇಕೋ ಅದು ತಕ್ಷಣ ಕೈಗೆಟಕುವಂತೆ ಆಕಾರಾದಿಯಾಗಿ, ತಿಂಗಳುಗಳ ಪ್ರಕಾರ, ರಾಜ್ಯಗಳ ಪ್ರಕಾರ, ಪ್ರಮುಖ ದಿನಗಳ ಪ್ರಕಾರ, ರಜಾದಿನಗಳ ಪ್ರಕಾರ, ಆಹಾರ ಪದ್ದತಿಗಳ ಪ್ರಕಾರ, ದೇವರು, ದೇವತೆಗಳ ಪ್ರಕಾರ ಮತ್ತು ಧರ್ಮಗಳ ವಿಭಾಗದ ಮೂಲಕ ಹೀಗೆ ಹೀಗೆ ಬೇರೆ ಬೇರೆ ಗುಂಪುಗಳಾಗಿ ವಿಂಗಡಿಸಲಾಗಿದೆ. ಹೀಗಾಗಿ ಇಲ್ಲಿಗೊಮ್ಮೆ ನಿಮ್ಮ ಬೇಟಿ ನೀಡಿ ನಮ್ಮ ದೇಶದ ಸಂಪ್ರದಾಯಗಳ ಬಗ್ಗೆ ಮಾಹಿತಿ ಪಡೆಯಲು ಜಾಲತಾಣ ಕೊಂಡಿ:  http://www.festivalsofindia.in