WEBSITE, INVENTORY SOFTWARE, CCTV CAMERA , COMPUTER & LAPTOP SALES & SERVICE, TABLETS, VIDEOGRAPHY, PHOTOGRAPHY, PROJECTOR ,VIDEO & AUDIO EDITING, VHS TO CD,DVD,BLURAY DISC CONVERSATION, DESIGNING & MANY MORE...
ಸುಸ್ವಾಗತ ನಿಮ್ಮ ಕಲ್ಪನೆ ನಮ್ಮ ಸೃಷ್ಠಿ !!! ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು.
ಈಗ ಮಲ್ಟಿಮೀಡಿಯವನ್ನು e-Speak ಕನ್ನಡದಲ್ಲಿ ಕೇಳಿ!

Saturday, March 30, 2013

ತಟ್ಟನೆ ಏನಾದರೂ ಹೊಳೆದಾಗ ಬರೆದಿಡಲು "ಕೀಪ್" ಗೂಗಲ್ ಸೇವೆ

 ಜನರು ತಟ್ಟನೆ ಏನಾದರೂ ಹೊಳೆದಾಗ, ಅದನ್ನು ಬರೆದಿಡುವ ಅಭ್ಯಾಸ ಹೋದಿದ್ದಾರೆ. ಈಗ ಸ್ಮಾರ್ಟ್‌ಫೋನ್ ಬಳಕೆದಾರರು, ಇದಕ್ಕೆ ಆನ್‌ಲೈನ್ ಸೇವೆಗಳನ್ನು ಬಳಸಬಹುದು. ಎವರ್‌ನೋಟ್ ಈ ಪೈಕಿ ಬಹುಜನಪ್ರಿಯ. ಜಾಲತಾಣ ಕೊಂಡಿ: https://evernote.com

ಈ ಸೇವೆಗೆ ಸದ್ಯ ಸುಮಾರು ಒಂದೂವರೆ ದಶಲಕ್ಷ ಬಳಕೆದಾರರಿದ್ದಾರೆ. ಮೈಕ್ರೋಸಾಫ್ಟ್ ಒನ್ ನೋಟ್ ಸೇವೆಯನ್ನು ಒದಗಿಸುತ್ತಿದೆ. ಈಗ ಇದಕ್ಕೆ ಹೊಸ ಸೇರ್ಪಡೆ ಗೂಗಲ್ ಕೀಪ್. ಮೈಕ್ರೋಸಾಫ್ಟ್ ಒನ್ ನೋಟ್ ಪಡೆಯಲು ಜಾಲತಾಣ ಕೊಂಡಿ:  microsoft.com/onenote


ಗೂಗಲ್ ಈ ಸೇವೆ ಒದಗಿಸುವುದರಲ್ಲಿ ತಡಮಾಡಿ, ತನ್ನನ್ನು ಕಠಿನ ಪರಿಸ್ಥಿತಿಗೆ ಒಡ್ಡಿ ಕೊಂಡಿದೆ ಎಂದು ಕೆಲ ವಿಶ್ಲೇಷಕರು ಪ್ರತಿಕ್ರಿಯಿಸಿದ್ದಾರೆ. ಗೂಗಲ್ ಕೀಪ್ ಚಿತ್ರಗಳನ್ನೂ ಬಳಸಲು ಅವಕಾಶವಿತ್ತಿದೆ. ಗೂಗಲ್ ಡ್ರೈವ್ ಇದರ ಉಳಿಕೆಗೆ ಬಳಕೆಯಾಗಲಿದೆ. ಗೂಗಲ್ ಕೀಪ್ ಬಳಸಿ ನಿಮ್ಮ ಮಾಹಿತಿಯನ್ನು ಉಳಿಸಲು ಜಾಲತಾಣ ಕೊಂಡಿ: drive.google.com/keep

 

ಛಾಯಚಿತ್ರಗಳನ್ನು ಹಂಚಿಕೊಳ್ಳಲು "ಪ್ಲಿಕ್ಕರ್"

ನಮ್ಮ ಬದುಕಿನ ಹಲವು ಅಮೂಲ್ಯ ಕ್ಷಣಗಳನ್ನು ಹಂಚಿಕೊಳ್ಳಲು ಅಂರ್ತಜಾಲದಲ್ಲಿ ಹಲವಾರು ಜಾಲತಾಣಗಳಿವೆ. ಕೆಲವು ಜಾಲತಾಣಗಳಲ್ಲಿ ವಿಡಿಯೋ ತುಣುಕುಗಳನ್ನು ಹಂಚಿಕೊಂಡರೆ! ಕೆಲವು ಜಾಲತಾಣಗಳು ಕೇವಲ ಛಾಯಾಚಿತ್ರಗಳನ್ನು ಮಾತ್ರ ಹಂಚಿಕೊಳ್ಳಬಹುದಾಗಿದೆ. ಅಂತಹ ಹಲವು ಜಾಲತಾಣಗಳ ಪೈಕಿ "ಪ್ಲಿಕ್ಕರ್" ಜಾಲತಾಣವೂ ಒಂದ. ನೀವು ಕ್ಯಾಮೆರಾ, ಮೊಬೈಲ್ ಕ್ಯಾಮೆರಾಗಳಲ್ಲಿ ಕ್ಲಿಕ್ಕಿಸಿದ ಚಿತ್ರಗಳನ್ನು ಈ ಜಾಲತಾಣದಲ್ಲಿ ಹಂಚಿಕೊಳ್ಳಬಹುದು. ಈ ಜಾಲತಾಣದಲ್ಲಿ ಕ್ಷಣ ಮಾತ್ರಕ್ಕೆ ವಿಶ್ವದ್ಯಾಂತ ಸಾವಿರಾರು ಪೋಟೋಗಳು ಅಂತರ್ಜಾಲಕ್ಕೆ ಅಪ್ ಲೋಡ್ ಆಗುತ್ತದೆ. ಈ ಜಾಲತಾಣಕ್ಕೆ ಯಾಹೂ, ಪೇಸ್ ಬುಕ್ ಹಾಗೂ ಗೂಗಲ್ ಜಾಲತಾಣಗಳ ಮಿಂಚಂಚೆ ಮುಖಾಂತರ ಪ್ರವೇಶ ಪಡೆದು ನೀವು ತಿಂಗಳಿಗೆ ಸುಮಾರು 100 ಎಂಬಿಗಳಷ್ಟು ಪೋಟೋ ಹಂಚಿಕೊಳ್ಳಬಹುದು. ಬ್ಲಾಗ್ ಗಳು ಹಾಗೂ ಖಾಸಗಿ ಜಾಲತಾಣಗಳಿಗೂ ಸಹ ಅಪ್ ಲೋಡ್ ಆದಂತಹ ಪೋಟೋಗಳನ್ನು ಶೇರ್ ಮಾಡಿಕೊಳ್ಳಬಹುದು. ಆಪಲ್ ಕಂಪನಿಯ ಐಪೋನ್ ಮೊಬೈಲ್ಗೆ ಆಪ್ ಸಹ ಪ್ಲಿಕ್ಕರ್ ಜಾಲತಾಣದಿಂದ ಪಡೆಯಬಹುದಾಗಿದೆ. ವಿಶ್ವದ ಪ್ರಖ್ಯಾತ ಛಾಯಾಗ್ರಾಹಕರ ಅತ್ಯುತ್ತಮ ಪೋಟೋಗಳನ್ನು ವೀಕ್ಷಿಸಲು ಅವಕಾಶವಿದೆ. ನೀವು ಅಪ್ ಲೋಡ್ ಮಾಡಿದಂತಹ ಛಾಯಾಚಿತ್ರಗಳನ್ನು ನೀವು ಖಾಸಗಿಯಾಗಿ ಸಹ ಇಡಬಹುದು. ಅಥವಾ ಮಿತ್ರರಿಗೆ ಹಂಚಿಕೊಳ್ಳಲೂ ಬಹುದು. ಜಾಲತಾಣ ಕೊಂಡಿ ವಿಳಾಸ: www.flickr.com

ವಸತಿ ಹುಡುಕಾಟಕ್ಕೆ ವೆಬ್‌ಸೈಟ್

http://www.findyourpg.com ತಾಣವನ್ನು ವಿದ್ಯಾರ್ಥಿಗಳೇ ರೂಪಿಸಿದ್ದಾರೆ. ದೇಶದ ಬೇರೆಡೆಯಿಂದ ಕಲಿಕೆ, ನೌಕರಿಗೆ ಆಗಮಿಸುವವರಿಗೆ ದೆಹಲಿಗೆ ಬಂದೊಡನೆ ಪಿಜಿ ವಸತಿಯನ್ನು ಹುಡುಕುವುದೇ ಪ್ರಯಾಸದ ಕೆಲಸವಾಗಿದ್ದನ್ನು ಅನುಭವಿಸಿದ ಕೆಲವರು, ದೆಹಲಿಯ ಪಿಜಿ ಸೇವೆಗಳ ದತ್ತಾಂಶ ಸಂಗ್ರಹಿಸಿ,ಮಾಲೀಕರನ್ನು ಸಂಪರ್ಕಿಸಿ,ಅವರಿಂದ ವಸತಿ ದರ,ಲಭ್ಯ ಸೇವೆಗಳು, ಸ್ಥಾನ,ನೀತಿ ನಿಯಮಾವಳಿಗಳನ್ನು ಪಟ್ಟಿ ಮಾಡಿ, ತಾಣದಲ್ಲಿ ವಿವರ ನೀಡಲು ಅನುಮತಿ ಯಾಚಿಸಿದರು.ಕೆಲವರು ಈ ಬಗ್ಗೆ ಉತ್ಸಾಹ ತೋರಲಿಲ್ಲವಾದರೂ ನಿಧಾನವಾಗಿ ಪರಿಸ್ಥಿತಿ ಬದಲಾಗಿದೆ.ಪಿಜಿ ಸೇವೆ ಬಯಸುವವರು ತಾಣದ ಬಗ್ಗೆ ಉತ್ಸಾಹ ಹೊಂದಿದ್ದರೆ.

ಭಾಷಾವಿಜ್ಞಾನದ ಪಿತಾಮಹ ನೋಮ್ ಚಾಮ್ ಸ್ಕಿ ಜಾಲತಾಣ

ಇತ್ತೀಚೆಗೆ ನಮ್ಮ ಗುರುಗಳಾದ ಶೂದ್ರ ಶ್ರೀನಿವಾಸ್ ರವರ "ಶೂದ್ರ" ಪತ್ರಿಕೆಯ 40ನೇ ವಾರ್ಷಿಕೋತ್ಸವ ಜೆ.ಪಿ.ನಗರದ ಕಾವಿ ಮನೆ ಶಾಲೆಯ ನೆಲದ ಮಾತು ವೇದಿಕೆಯಲ್ಲಿ ನಡೆಯಿತು. ನಾನೂ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಆ ಕಾರ್ಯಕ್ರಮದಲ್ಲಿ ನೋಮ್ ಚಾಮ್ ಸ್ಕಿ ರವರ ಬಗ್ಗೆ ಒಂದು ಉಪನ್ಯಾಸವನ್ನು ಏರ್ಪಡಿಸಿದ್ದರು. ಅವರ ಬಗ್ಗೆ ಉಪನ್ಯಾಸ ವನ್ನು ಕೇಳಿದ ಮೇಲೆ ಚಾಮ್‍ ಸ್ಕಿ ರವರ ಬಗ್ಗೆ ಜಾಲತಾಣದಲ್ಲಿ ಜಾಲಾಡಿದಾಗ! ಅವರ ವಿಚಾರಗಳ ಮಹಾ ಬಂಡಾರವೆ ನನಗೆ ದೊರಕಿತು.

ಇಂಗ್ಲೀಷ್ ಲೇಖಕ ಹಾಗೂ ಚಿಂತಕ ನೋಮ್ ಚಾಮ್ ಸ್ಕಿ. ಈ ಪ್ರತಿಭಾವಂತ ಲೇಖಕನಿಗೆ ಆಧುನಿಕ  ಭಾಷಾವಿಜ್ಞಾನದ ಪಿತಾಮಹ ಎಂದು ಬಿರುದು ಇದೆ. ನೋಬೆಲ್ ಪ್ರಶಸ್ತಿ ಪುರಸ್ಕೃತರಾದ ಈ ಲೇಖಕರ ಜಾಲತಾಣ ಅಂತರ್ಜಾಲದಲ್ಲಿದೆ. ಇದರಲ್ಲಿ ಅವರ ಉಪನ್ಯಾಸ, ಪತ್ರಗಳು, ಚರ್ಚೆಗಳು, ಆಡಿಯೋ ಮತ್ತು ವಿಡಿಯೋ ತುಣುಕುಗಳು ಹಾಗೂ ಅವರ ಕುರಿತಾದ ಪುಸ್ತಕಗಳು, ಲೇಖನಗಳು, ಸಂದರ್ಶನಗಳು ಹಾಗೂ ಇನ್ನಿತರೆ ವಿಷಯಗಳು ಆಗ್ಗಿಂದಿಗ್ಗೆ ಅಪ್ ಡೇಟ್ ಆಗುತ್ತಿರುತ್ತವೆ. ನೋಮ್ ಚಾಮ್ ಸ್ಕಿ ರವರ ಬಗ್ಗೆ ಆಸಕ್ತಿ ಇರುವ ಆಸಕ್ತರು ಜಾಲತಾಣದಲ್ಲಿ ಜಾಲಾಡಬಹುದು. ಜಾಲತಾಣ ವಿಳಾಸ ಕೋಂಡಿ: www.chomsky.info

Sunday, March 10, 2013

ಕ್ನನಡಿಗನ ಸಾಧನೆ "ಟ್ಯಾನ್ ಪೇಜ್" ಸಾಮಾಜಿಕ ಜಾಲತಾಣ

ಇತ್ತೀಚೆಗಷ್ಟೆ ನಮ್ಮ ದೇಶದ ಸಂಗೀತ ದಿಗ್ಗಜ ಹಾಗೂ ನಟ, ನಿರ್ಮಾಪಕ ಶೇಖರ್ ಕಪೂರ್ ಇಬ್ಬರೂ "ಕ್ಯುಕಿ"  ಎಂಬ ಒಂದು ಸೃಜನಶೀಲ ಸಾಮಾಜಿಕ ಜಾಲತಾಣವನ್ನು ಜಗತ್ತಿಗೆ ಅರ್ಪಿಸಿದ್ದು ನಿಮಗೆಲ್ಲಾ ಗೊತ್ತೇ ಇದೆ.

ಇಂದು ಜಗತ್ತಿನ ಅಂರ್ತಜಾಲದಲ್ಲಿ ಫೇಸ್ಬುಕ್, ಟ್ವಿಟ್ಟರ್, ಲಿಂಕ್ಡಿನ್, ಗೂಗಲ್ ಪ್ಲಸ್, ಆರ್ಕುಟ್, ಯೂಟ್ಯೂಬ್ ಗೀಗೆ ಹಲವು ಹತ್ತು ಸಾಮಾಜಿಕ ಮಾಧ್ಯಮಗಳಿವೆ. ಪೇಸ್ ಬುಕ್ ಗೆ ಹೋಲುವಂತಹ "ಟ್ಯಾನ್ ಪೇಜ್" ಎಂಬ ಹೆಸರಿನ ಸಾಮಾಜಿಕ ಜಾಲತಾಣ ಅಭಿವೃದ್ಧಿಪಡಿಸುವ ಮೂಲಕ ಮಾಹಿತಿ ತಂತ್ರಜ್ಞಾನಕ್ಕೆ ಶಿರಸಿಯ ಸಿದ್ದಾಪುರ ತಾಲೂಕಿನ ಮಾವಿನಕೂಡ್ಲು  ಎಂಬ ಹಳ್ಳಿಯ ಬಿ.ಎಸ್.ಸಿ. ವಿಧ್ಯಾರ್ಥಿ  ನಿರಂಜನ ಭಟ್  ಕಾಲಿಟ್ಟಿದ್ದಾರೆ.

ಟ್ಯಾನ್ ಪೇಜ್ ನಲ್ಲಿ ಏನೇನಿದೆ.

ಅಪ್ಪಟ ಸಾಮಾಜಿಕ ಜಾಲತಾಣ ಆಗಿರುವ ವೆಬ್ ಸೈಟ್ ಸಂಪೂರ್ಣ ಉಚಿತ.ಗೂಗಲ್ ಮೂಲಕ ಟ್ಯಾನ್ ಪೇಜ್ ಪ್ರವೇಶ ಮಾಡಬಹುದಾಗಿದ್ದು. ನಿಮ್ಮ ಇಮೇಲ್ ಮತ್ತು ಪಾಸ್ ವರ್ಡ್ ನಮೂದಿಸಿ ಟ್ಯಾನ್ ಪೇಜ್ ಖಾತೆ ತೆರೆಯಬಹುದು. ಸೋಷಿಯಲ್ ನೆಟ್‍ ವರ್ಕಿಂಗ್ ವೆಬ್ ಸೈಟ್ಗಳಲ್ಲಿರುವ ಸೌಲಭ್ಯಗಳು ಟ್ಯಾನ್ ಪೇಜ್ ನಲ್ಲಿವೆ. ಇದಲ್ಲದೆ ಮಾರಾಟವಾಗಬೇಕಿರುವ ವಸ್ತುಗಳ ಚಿತ್ರಗಳನ್ನು ಪೋಸ್ಟ್ ಮಾಡುವ ಮೂಲಕ ವ್ಯಾಪಾರವನ್ನೂ ಮಾಡಬಹುದು. ಬರಹಗಾರರು ತಮ್ಮ ಬರವಣಿಗೆಗಳನ್ನೂ ಸಹ ಈ ಜಾಲತಾಣದ ಮೂಲಕ ಬರೆಯಬಹುದಾಗಿದ್ದು.ಅದಲ್ಲದೆ ಆನ್ ಲೈನ್ ರಸಪ್ರಶ್ನೆ ಕಾರ್ಯಕ್ರಮವನ್ನೂ ಈ ಜಾಲತಾಣದ ಮೂಲಕ ಆಯೋಜಿಸಬಹುದು. ವಿಡಿಯೋ ಹಾಗೂ ಆಡಿಯೋ ತುಣುಕುಗಳನ್ನು ಸಹ ಪೋಸ್ಟ್ ಮಾಡಬಹುದು. ಇಂತಹ ಇನ್ನೂ ಹಲವಾರು ಉಪಯೋಗಗಳನ್ನು ಒಳೊಂಡಿರುವ ಟ್ಯಾನ್ ಪೇಜ್ ಜಾಲತಾಣ ಉಚಿತವಾಗಿದ್ದು. ಜಾಲತಾಣ ವಿಳಾಸ ಕೊಂಡಿ: tanpage.com