WEBSITE, INVENTORY SOFTWARE, CCTV CAMERA , COMPUTER & LAPTOP SALES & SERVICE, TABLETS, VIDEOGRAPHY, PHOTOGRAPHY, PROJECTOR ,VIDEO & AUDIO EDITING, VHS TO CD,DVD,BLURAY DISC CONVERSATION, DESIGNING & MANY MORE...
ಸುಸ್ವಾಗತ ನಿಮ್ಮ ಕಲ್ಪನೆ ನಮ್ಮ ಸೃಷ್ಠಿ !!! ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು.
ಈಗ ಮಲ್ಟಿಮೀಡಿಯವನ್ನು e-Speak ಕನ್ನಡದಲ್ಲಿ ಕೇಳಿ!

Monday, May 20, 2013

ಗೂಗಲ್‌ ಕ್ರೋಮ್ ಪಿಕ್ಸೆಲ್ ಲ್ಯಾಪ್‌ಟಾಪ್


ಗೂಗಲ್ ಯಂತ್ರಾಂಶ ತಯಾರಿಗಿಳಿದದ್ದು ಹಳೆ ಸುದ್ದಿ. ಸ್ಯಾಮ್‌ಸಂಗ್, ಏಸರ್, ಲೆನೋವೋ, ಎಚ್‌ಪಿ ಕಂಪೆನಿಗಳು ಗೂಗಲ್‌ಗಾಗಿ ಸಾಧನಗಳನ್ನು ತಯಾರಿಸುತ್ತವೆ. ಆದರೆ ಪಿಕ್ಸೆಲ್ ಲ್ಯಾಪ್‌ಟಾಪ್‌ನಲ್ಲಿ ಬಿಡಿಭಾಗಗಳನ್ನು ಇತರ ಕಂಪೆನಿಗಳಿಂದ ಖರೀದಿಸಿ, ಗೂಗಲ್ ಸ್ವತ: ತಯಾರಿಸಿದೆ.
ಇದರ ತೆರೆ ಮ್ಯಾಕ್‌ಬುಕ್ಕಿನ ರೆಟಿನಾ ಡಿಸ್‌ಪ್ಲೇಯಷ್ಟೇ ಸ್ಪಷ್ಟತೆ ಹೊಂದಿದೆ. ಪ್ರತಿ ಇಂಚಿಗೆ ಇನ್ನೂರ‍ ಮೂವತ್ತೊಂಭತ್ತು, ಒಟ್ಟಾರೆಯಾಗಿ ನಲವತ್ತಮೂರು ಲಕ್ಷ ಪಿಕ್ಸೆಲುಗಳನ್ನು ತೆರೆಯ ಮೇಲಿದೆ. ಹಾಗಾಗಿ ಇದರಲ್ಲಿ ಚಿತ್ರ ಮತ್ತು ಲಿಪಿಗಳನ್ನು ಸ್ಪಷ್ಟವಾಗಿ ಕಾಣಲು ಸಾಧ್ಯವಾಗುತ್ತದೆ. ಮಾತ್ರವಲ್ಲ ಇದರ ತೆರೆ ಸ್ಪರ್ಶಸಂವೇದಿ ಕೂಡಾ. ಹಾಗಾಗಿ ವಿಂಡೋಸ್8ನಂತಹ ಆಪರೇಟಿಂಗ್ ವ್ಯವಸ್ಥೆಗಳಿಗಿದು ಹೇಳಿ ಮಾಡಿಸಿದ ಹಾಗಿದೆ. ಆದರೆ ಇದರಲ್ಲಿ ಗೂಗಲ್‌ಕ್ರೋಮ್ ಆಪರೇಟಿಂಗ್ ವ್ಯವಸ್ಥೆಯನ್ನು ಬಳಸಲಾಗಿದೆ. ಪದಸಂಸ್ಕಾರದಂತಹ ದೈನಂದಿನ ತಂತ್ರಾಂಶಗಳನ್ನು ಕ್ಲೌಡ್‌ಸೇವೆಗಳ ಮುಖಾಂತರ ಇಂಟರ್‌ನೆಟ್ಟಿನಿಂದ ಪಡೆಯುವಲ್ಲಿ ಅವಕಾಶ ಕಲ್ಪಿಸಲಾಗಿದೆ. ನಾಲ್ಕನೇ ತಲೆಮಾರಿನ ಫೋರ‍್‌ಜಿ ಸಂಪರ್ಕಕ್ಕಿದರಲ್ಲಿ ಅವಕಾಶವಿದೆ.
ಸದ್ಯಕ್ಕಂತೂ ಈ ಕ್ರೋಮ್ ಪಿಕ್ಸೆಲ್ ಲ್ಯಾಪ್ ಟಾಪ್ ಗೋಗಲೆ ಪ್ಲೇ ಆನ್ಲೈನ್ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಭಾರತೀಯ ಮಾರುಕಟ್ಟೆಗೆ ಇನ್ನೂ ಬಾರದ ಈ ಲ್ಯಾಪ್ ಟಾಪ್, ವಿದೇಶಗಳಲ್ಲಿನ ಉತ್ತಮ ಮಾರುಕಟ್ಟೆಯಲ್ಲಿ ಲಭ್ಯವಿದೆ.  ಹೆಚ್ಚಿನ ವಿವರಗಳಿಗೆ ಜಾಲತಾಣ ಕೊಂಡಿಗಳು:  http://www.google.co.in/intl/en/chrome/devices/chromebook-pixel/   ಹಾಗೂ ಆನ್ಲೈನ್ ಮಾರುಕಟ್ಟೆ ಗೂಗಲ್ ಪ್ಲೇ ವಿಳಾಸ : https://play.google.com/store/devices/details?id=chromebook_pixel_wifi ಹಾಗೂ ಬೆಸ್ಟ್ ಬೈ ಸ್ಟೋರ್ಸ್ಗಳ ವಿಳಾಸ ಕೊಂಡಿ: http://www.google.co.in/intl/en/chrome/devices/chromebook-pixel/#stores

No comments:

Post a Comment