WEBSITE, INVENTORY SOFTWARE, CCTV CAMERA , COMPUTER & LAPTOP SALES & SERVICE, TABLETS, VIDEOGRAPHY, PHOTOGRAPHY, PROJECTOR ,VIDEO & AUDIO EDITING, VHS TO CD,DVD,BLURAY DISC CONVERSATION, DESIGNING & MANY MORE...
ಸುಸ್ವಾಗತ ನಿಮ್ಮ ಕಲ್ಪನೆ ನಮ್ಮ ಸೃಷ್ಠಿ !!! ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು.
ಈಗ ಮಲ್ಟಿಮೀಡಿಯವನ್ನು e-Speak ಕನ್ನಡದಲ್ಲಿ ಕೇಳಿ!

Monday, August 19, 2013

ವಿಂಡೋಸ್ ಲೈವ್ ಸ್ಕೈಡ್ರೈವ್: ನಿಮ್ಮ ದತ್ತಾಂಶವನ್ನು ಆನ್‌ಲೈನ್‌ನಲ್ಲಿ ಸಂಗ್ರಹಿಸಿಡುವ ತಾಣ

ನೀವೊಬ್ಬ ಆನ್‌ಲೈನ್ ಬಳಕೆದಾರರಾಗಿದ್ದು, ಪದೇ ಪದೇ ಪ್ರವಾಸ ಮಾಡುತ್ತಿರುವವರಾದರೆ ಮತ್ತು ಹೋದಲ್ಲೆಲ್ಲಾ ಫೈಲುಗಳನ್ನು ಹೊತ್ತೊಯ್ಯುವುದು ಕಷ್ಟವಾಗಿದ್ದರೆ, ಇದೀಗ ಆನ್‌ಲೈನ್‌ನಲ್ಲಿಯೇ ನಿಮಗೆ ಬೇಕಾದ ಕಡತಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ಮತ್ತು ಹೋದೆಡೆಯಲ್ಲಿ ಲಾಗಿನ್ ಆಗಿ ಅದನ್ನು ಬಳಸಬಹುದಾದ ಅವಕಾಶಗಳು ಸಾಕಷ್ಟಿವೆ. ಅವುಗಳಲ್ಲಿ ಅತ್ಯಂತ ಸರಳವಾದ, ಸುಲಭವಾದ ವ್ಯವಸ್ಥೆಯನ್ನು ಮೈಕ್ರೋಸಾಫ್ಟ್ ತಾಣವೇ ಒದಗಿಸಿಕೊಟ್ಟಿದೆ. ಅದುವೇ ವಿಂಡೋಸ್ ಲೈವ್ ಸ್ಕೈಡ್ರೈವ್. ಅಂದರೆ ಇದು ಆಕಾಶದಲ್ಲಿ ಫೈಲುಗಳನ್ನು ಸಂಗ್ರಹಿಸಿಟ್ಟುಕೊಂಡಂತೆ!

 ವಿಂಡೋಸ್ ಲೈವ್ ಸ್ಕೈಡ್ರೈವ್ ಎಂಬುದು ಆನ್‌ಲೈನ್‌ನಲ್ಲಿ ನಮ್ಮ ಕಡತಗಳನ್ನು ಸಂಗ್ರಹಿಸಿಡುವ ತಾಣ. ಅಂದರೆ ಇದು ಕೂಡ ನಿಮ್ಮ ಹಾರ್ಡ್ ಡಿಸ್ಕ್‌ನಂತೆಯೇ ಕೆಲಸ ಮಾಡುತ್ತದೆ. ಉಚಿತವಾಗಿಯೇ ಲಭ್ಯವಿರುವ ವ್ಯವಸ್ಥೆಯಲ್ಲಿ 25 ಜಿಬಿವರೆಗೆ ನಮ್ಮ ಫೈಲುಗಳನ್ನು ನಾವು ಸುರಕ್ಷಿತವಾಗಿ ಕಾಯ್ದಿಡಬಹುದಾಗಿದೆ.

ಇಷ್ಟು ಮಾತ್ರವಲ್ಲದೆ, ನಮ್ಮ ಚಿತ್ರಗಳು, ಸಂಗೀತ, ವೀಡಿಯೋ ಮತ್ತು ದಾಖಲೆಗಳನ್ನೆಲ್ಲಾ ಗೆಳೆಯರು, ಬಂಧುಗಳೊಂದಿಗೆ ಆನ್‌ಲೈನ್‌ನಲ್ಲಿಯೇ ಹಂಚಿಕೊಳ್ಳಬಹುದಾದ ವ್ಯವಸ್ಥೆ ಇದಾಗಿದ್ದು, ನಮ್ಮ ಕನ್ನಡ ಆನ್‌ಲೈನ್ ಬಳಕೆದಾರರಿಗೂ ಇದನ್ನು ಪರಿಚಯಿಸುವ ಉದ್ದೇಶ ಈ ಲೇಖನದ್ದು.

ಒಟ್ಟಾರೆಯಾಗಿ ಹೇಳಬಹುದಾದರೆ, ಈ ಸ್ಕೈಡ್ರೈವ್ ಎಂಬ ಆನ್‌ಲೈನ್ ಹಾರ್ಡ್ ಡ್ರೈವ್‌ನಲ್ಲಿ ಉಳಿಸಿದ ಯಾವುದೇ ಫೈಲನ್ನು ನಾವು ವಿಶ್ವಾದ್ಯಂತ ದತ್ತಾಂಶ ಹಂಚಿಕೊಳ್ಳಲು ಬಳಸಬಹುದಾಗಿದೆ. ಮಾಹಿತಿ, ದತ್ತಾಂಶ ಹಂಚಿಕೆ ಎಂಬುದು ಇಂದಿನ ದಿನಗಳಲ್ಲಿ ಜಾಗತಿಕ ಅನಿವಾರ್ಯವೂ ಆಗಿಬಿಟ್ಟಿದೆ. ಫ್ರೀಲ್ಯಾನ್ಸ್ ಆಗಿ ಕೆಲಸ ಮಾಡುವ ಬಳಕೆದಾರರಿಗೆ ಕೂಡ ಸಂಬಂಧಿತ ಫೈಲ್‌ಗಳನ್ನು ತರಿಸಿಕೊಳ್ಳಲು, ಕಳುಹಿಸಲು ಇದು ಅತ್ಯಂತ ಸುಲಭ ಮಾರ್ಗವೂ ಹೌದು. ವೆಬ್ ಆಧಾರಿತವಾದ, ಯಾವುದೇ ಕ್ಷಣ ಮತ್ತು ಯಾವುದೇ ಸ್ಥಳದಲ್ಲಿ ಫೈಲ್‌ಗಳನ್ನು ಆಕ್ಸೆಸ್ ಮಾಡಬಹುದಾದ ವ್ಯವಸ್ಥೆಯಿದು.

25 ಜಿಬಿ ಎಂದರೆ ಕಡಿಮೆ ಜಾಗವೇನಲ್ಲ. ಹೀಗಾಗಿ ಸಂಚಾರಿ ಸಂಗ್ರಹತಾಣವಾಗಿ ಇದು ಎಲ್ಲರಿಗೂ ಉಪಯುಕ್ತ. ಉದಾಹರಣೆಗೆ, ನೂರಾರು ಡಾಕ್ಯುಮೆಂಟ್‌ಗಳು, ಚಿತ್ರಗಳು, ಆಡಿಯೋ ಕಡತಗಳು, ವೀಡಿಯೋ ಕಡತಗಳನ್ನೆಲ್ಲವನ್ನೂ ನೀವು ಈ ಸಂಗ್ರಹಾಲಯದಲ್ಲಿ ಇರಿಸಬಹುದಾಗಿದೆ. ಇದರಲ್ಲಿ ಮುಕ್ತ (ಪಬ್ಲಿಕ್), ಖಾಸಗಿ ಮತ್ತು ವೈಯಕ್ತಿಕ ಫೋಲ್ಡರ್‌ಗಳನ್ನು ಕೂಡ ರಚಿಸಿ, ನಮಗೆ ಬೇಕಾದವುಗಳನ್ನು ಮಾತ್ರವೇ ಇತರರೊಂದಿಗೆ ಹಂಚಿಕೊಳ್ಳಬಹುದು ಮತ್ತು ಇತರರಿಗೆ ಅದನ್ನು ಪರಿಷ್ಕರಿಸಲು ಅಗತ್ಯವಿದ್ದರೆ, ಅವರಿಗೆ ಅನುಮತಿಯನ್ನೂ ನೀಡಬಹುದು ಇಲ್ಲವಾದಲ್ಲಿ, ಅದನ್ನು ಓದಲು ಮಾತ್ರವೇ ಎಂಬ ಷರತ್ತಿನೊಂದಿಗೆ ಇರಿಸಬಹುದು.

ಈ ಆನ್‌ಲೈನ್ ಟೂಲ್ ಅನ್ನು ನಿಮ್ಮದಾಗಿಸಿಕೊಳ್ಳಬೇಕಿದ್ದರೆ, ನೀವು ಹಾಟ್‌ಮೇಲ್ ಖಾತೆ ಹೊಂದಿರಬೇಕಾಗುತ್ತದೆ. ಇದು ನಿಮ್ಮ ಖಾಸಗಿ ಸ್ಥಳವಾಗಿದ್ದು, ಬೇಕೆಂದಾಗ ಫೈಲುಗಳನ್ನು ಡಿಲೀಟ್ ಮಾಡಿ, ಇನ್ನಷ್ಟನ್ನು ಸೇರಿಸಿಕೊಳ್ಳಬಹುದು.

ಹಾಗಿದ್ದರೆ, ಅದು ಹೇಗಿದೆ ಅಂತ ತಿಳಿಯಬೇಕೇ? ಇಲ್ಲಿ ನೋಡಿ: http://skydrive.live.com/

No comments:

Post a Comment