WEBSITE, INVENTORY SOFTWARE, CCTV CAMERA , COMPUTER & LAPTOP SALES & SERVICE, TABLETS, VIDEOGRAPHY, PHOTOGRAPHY, PROJECTOR ,VIDEO & AUDIO EDITING, VHS TO CD,DVD,BLURAY DISC CONVERSATION, DESIGNING & MANY MORE...
ಸುಸ್ವಾಗತ ನಿಮ್ಮ ಕಲ್ಪನೆ ನಮ್ಮ ಸೃಷ್ಠಿ !!! ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು.
ಈಗ ಮಲ್ಟಿಮೀಡಿಯವನ್ನು e-Speak ಕನ್ನಡದಲ್ಲಿ ಕೇಳಿ!

Monday, January 11, 2016

ಭಾರತಕ್ಕೆ ಲಗ್ಗೆ ಇಟ್ಟ ಮತ್ತೊಂದು ಚೀನಾದ ಎಲ್ಇ ಟಿವಿ ಕಂಪನಿಪ್ರಸ್ತುತ ಸಾಮಾಜಿಕ ಜಾಲ ತಾಣಗಳಲ್ಲಿ ಮಾರುಕಟ್ಟೆಗೆ ಬರುವ ಬಹುತೇಕ ಆನ್ಲೈನ್ ಮಾರಾಟಗಾರರು ತಮ್ಮ ವಸ್ತುಗಳನ್ನು ಮಾರಾಟ ಮಾಡಲು ಸಾಮಾಜಿಕ ಜಾಲತಾಣಗಳ ಮುಖೇನ ಗ್ರಾಹಕರನ್ನು ಸೆಳೆಯುವುದು ಸರ್ವೆಸಾಮಾನ್ಯ ಹಾಗೇಯೆ ಚೀನಾದ ಎಲ್‍ಇ ಟಿವಿ ಕಂಪನಿ ಅಕ್ಟೋಬರ್ ಮಾಹೆ 2015 ರಲ್ಲಿ ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ಟ್ವಿಟ್ಟರ್ ಹಾಗೂ ಪೇಸ್ ಬುಕ್ ನಲ್ಲಿ ಸುಮಾರು ಹದಿನೇಳು ಲಕ್ಷಕ್ಕಿಂತಲೂ ಅಧಿಕ ಅಭಿಮಾನಿಗಳನ್ನು ಹೊಂದಿ ಅಭಿಮಾನಿಗಳ ಮುಖೇನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿರಿ ಹಾಗೂ ಇದನ್ನು ಟ್ವೀಟಿಸಿ , ಕಾಮೆಂಟ್ಸ್ ಮಾಡುವ ಟಾಕ್ಸ್ ಗಳನ್ನು ನೀಡಿ ಆಯ್ಕೆಯಾದ ಸದಸ್ಯರುಗಳಿಗೆ “ರಾಷ್ಟ್ರೀಯ ಬಿಡುಗಡೆ” ಕಾರ್ಯಕ್ರಮಕ್ಕೆ ಉಚಿತ ವಿಮಾನಯಾನ ಹಾಗೂ ಊಟ, ವಸತಿ ವ್ಯವಸ್ಥೆ ಮಾಡುವ ಘೋಷಣೆ ಮಾಡಿರುತ್ತದೆ.

ಹಾಗೇ ಭಾರತದ ಪ್ರಮುಖ ನಗರಗಳಾದ ದೆಹಲಿ, ಬೆಂಗಳೂರು ಹಾಗೂ ಹೈದರಬಾದಿನಲ್ಲಿ “ಸೂಪರ್ ಪ್ಯಾನ್ ಮೀಟಪ್” ಎಂಬ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಿ ಬಿಡುಗಡೆಗೆ ಮುನ್ನವೇ ಎಲ್ ಇ ಟಿವಿಯ ಮೇರು ಉತ್ಪನ್ನವಾದ ಎಲ್ ಇ ಮ್ಯಾಕ್ಸ್ ಎಂಬ ಮೊಬೈಲ್ ಅನ್ನು (ಹ್ಯಾಂಡ್ಸ್ ಆನ್)ಸದಸ್ಯರುಗಳಿಗೆ ಉಪಯೋಗಿಸಲು ನೀಡಿ ಅವರುಗಳಿಂದ ಮೊಬೈಲ್ ಬಗ್ಗೆ ಸರ್ವೆ ಮಾಡಿ, ಸದಸ್ಯರುಗಳ ಕಂಪನಿ ಬಗ್ಗೆ ಇದ್ದ ಪ್ರಶ್ನೆಗಳಿಗೆ ಉತ್ತರಿಸುವ ಕಾರ್ಯಕ್ರಮವನ್ನು ಆಯೋಜಕರು ಹಮ್ಮಿಕೊಂಡು ಕಂಪನಿಯ ಉತ್ಪನ್ನಗಳನ್ನು ಉತ್ತಮ ಗುಣಮಟ್ಟಕ್ಕೆರಿಸುವ ಭರವಸೆ ನೀಡಿದರು.
ಕ್ವಾಲ್ಕಾಮ್ ತಂತ್ರಜ್ಞಾನವುಳ್ಳ ವಿಶ್ವದ ಪ್ರಥಮ ಸ್ಮಾರ್ಟ್ಫೋನ್ ಸ್ನ್ಯಾಪ್ಡ್ರಾಗನ್ 820 ಪ್ರೊಸೆಸರ್ ಡಿವೈಸ್ ಅನ್ನು ಚೀನಾದ ಇಂಟರ್ನೆಟ್ ಕಾಂಗ್ಲೊಮಿರೇಟ್ ಎಲ್ಇ ಟಿವಿ ತಿಳಿಸಿದೆ ಕಂಪೆನಿಯ ಎಲ್ ಮ್ಯಾಕ್ಸ್ ಪ್ರೊ ಕ್ವಾಲ್ಕಾಮ್ ಸ್ನ್ಯಾಪ್ಡ್ರಾಗನ್ 820 ಪ್ರೊಸೆಸರ್ ಹೊಂದಿರುವ ಪ್ರಥಮ ಸ್ಮಾರ್ಟ್ಫೋನ್ ಎಂದೆನಿಸಿದೆ.

ಹೊಸ ವರ್ಷದ ಭರ್ಜರಿ ಖರೀದಿಗಾಗಿ ಟಾಪ್ ಫೋನ್ಸ್ ಇದು ಉತ್ತಮ ಬಳಕೆದಾರ ಅನುಭವವನ್ನು ನೀಡುವುದರ ಜೊತೆಗೆ ಇತರ ಪ್ರೊಸೆಸರ್ಗಳಗಿಂತಲೂ ಉತ್ತಮ ಡಿಸ್ಪ್ಲೇ ಗುಣಮಟ್ಟವನ್ನು ಪಡೆದುಕೊಂಡಿದೆ. ಫೋನ್ ಕುರಿತ ಮತ್ತಷ್ಟು ವಿವರಗಳನ್ನು ಪಡೆದುಕೊಳ್ಳೋಣ ಬನ್ನಿ.

ಎಲ್ಇಟಿವಿ ಈಗಾಗಲೇ ತನ್ನನ್ನು ವಿಶ್ವದ ಪ್ರಮುಖ ಅನ್ವೇಷಕರು ಎಂಬುದಾಗಿ ಸ್ಥಾಪಿಸಿಕೊಂಡಿದ್ದು ನಮ್ಮ ನಿರ್ಧಾರ ಸ್ನ್ಯಾಪ್ಡ್ರಾಗನ್ 820 ಪ್ರೊಸೆಸರ್ ಅನ್ನು ಸೇರಿಸಿಕೊಳ್ಳುವುದಾಗಿದೆ ಎಂಬುದಾಗಿ ಸಂಸ್ಥೆ ತಿಳಿಸಿದೆ.

ನಮ್ಮ ಗ್ರಾಹಕರಿಗೆ ಇಂಟರ್ ನೆಟ್, ಬೃಹತ್ ಪರದೆಯುಳ್ಳ ಟಿವಿಗಳು, ಮೊಬೈಲ್ ಪೋನ್, ಕ್ರೀಡಾ ಸಾಮಗ್ರಿ, ಪರಿಸರ ಸ್ನೇಹಿ ವಾಹನಗಳು, ಸ್ಮಾರ್ಟ್ ಸೈಕಲ್, ಬ್ಲೂಥೂತ್ ಹೆಡ್‍ ಸೆಟ್ ಹಾಗೂ ಹೊಸ ಹೊಸ ಡಿವೈಸ್ಗಳ ಮೂಲಕ ಆವರು ಆಸೆ ಆಕಾಂಕ್ಷೆಗಳನ್ನು ಈಡೇರಿಸುವುದು ಕಂಪೆನಿಯ ಗುರಿಯಾಗಿದ್ದು ಅದಕ್ಕಾಗಿ ನವೀನ ಮಾದರಿಯ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ ಎಂಬುದಾಗಿ ಮುಖ್ಯ ಆಪರೇಟಿಂಗ್ ಆಫೀಸರ್ ಜೂನ್ ಲಿಯಾಂಗ್ ತಿಳಿಸಿದ್ದಾರೆ.

ಲೀ ಮ್ಯಾಕ್ಸ್ ಪ್ರೊ ಸ್ನ್ಯಾಪ್ಡ್ರಾಗನ್ ಸೆನ್ಸ್ ಐಡಿ ಫಿಂಗರ್ ಪ್ರಿಂಟ್ ತಂತ್ರಜ್ಞಾನವನ್ನು ಒಳಗೊಂಡಿದ್ದು ಮೊಬೈಲ್ ಇಂಡಸ್ಟ್ರೀಯ ಪ್ರಥಮ ಸ್ಮಾರ್ಟ್ಫೋನ್ ಎಂದೆನಿಸಿದ್ದು ಭದ್ರತಾ ವ್ಯವಸ್ಥೆಯನ್ನು ಒಳಗೊಂಡಿದೆ ಮತ್ತು ಸಾಮರ್ಥ್ಯ ಆಧಾರಿತ ಬೆರಳಚ್ಚು ಸೆನ್ಸಾರ್ಗಳಿಗೆ ಪರ್ಯಾಯವಾಗಿದೆ.


ಸ್ನ್ಯಾಪ್ಡ್ರಾಗನ್ ಸೆನ್ಸ್ ಐಡಿ ಫಿಂಗರ್ ಪ್ರಿಂಟ್ ತಂತ್ರಜ್ಞಾನವನ್ನು ಹೊಂದಿದ್ದು ಲೈವ್ನೆಸ್ ಡೈರೆಕ್ಶನ್ ಅನ್ನು ಪಡೆದುಕೊಂಡಿದೆ. ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ನೈಜ ಬೆರಳನ್ನು ಬಳಸಲಾಗಿದೆ ಎಂಬುದಾಗಿ ಖಾತ್ರಿಪಡಿಸಲಾಗಿದೆ.


ಲಿ ಮ್ಯಾಕ್ಸ್ ಪ್ರೊ ಕ್ವಾಲ್ಕಾಮ್ ಕ್ಚಿಕ್ ಚಾರ್ಜ್ 2.0 ವೈಶಿಷ್ಟ್ಯತೆಯನ್ನು ಪಡೆದುಕೊಂಡಿದ್ದು 75 % ಶೇಕಡದಷ್ಟು ವೇಗದ ಚಾರ್ಜಿಂಗ್ ಅನ್ನು ನೀಡುತ್ತದೆ.

ಎಲ್ಇಟಿವಿ ಸುಧಾರಿತ ಸ್ಮಾರ್ಟ್ಫೋನ್ ಆಗಿದ್ದು ಬಳಕೆದಾರರ ಬಯಕೆಗಳನ್ನು ಈಡೇರಿಸುವಂತೆ ತಯಾರಾಗಿದೆ. ಸ್ನ್ಯಾಪ್ಡ್ರಾಗನ್ 820 ಪ್ರೊಸೆಸರ್ ಇದರಲ್ಲಿದ್ದು ಸೆನ್ಸ್ ಐಡಿ ಫಿಂಗರ್ ಪ್ರಿಂಟ್ ತಂತ್ರಜ್ಞಾನ ಇದರಲ್ಲಿದೆ.

ಎಲ್ಇಟಿವಿ ಮಲ್ಟಿ ಬ್ಯಾಂಡ್ ವೈರ್ಲೆಸ್ ಕನೆಕ್ಟಿವಿಟಿಯನ್ನು ಪಡೆದುಕೊಂಡಿದ್ದು 4.6 ಜಿಬಿಪಿಎಸ್ ವೇಗ ಹಾಗೂ ಕಂಪ್ರೆಸ್ ಮಾಡಲಾಗದ ಕಂಟೆಂಟ್ ಟ್ರಾನ್ಸ್ಫರ್ ಅನ್ನು ಹೊಂದಿದೆ.

ಎಲ್ಇಟಿವಿ ಕ್ವಾಲ್ಕಾಮ್ ತಂತ್ರಜ್ಞಾನದ ಸಮ್ಮಿಶ್ರಣದೊಂದಿಗೆ ಬಂದಿದ್ದು ವೇಗದ ವೈಫೈ ಸಂಪರ್ಕವನ್ನು ಪಡೆದುಕೊಳ್ಳಲು ಅನುಕೂಲಕರವಾಗಿದೆ. ವರ್ಚುವಲ್ ರಿಯಾಲಿಟಿ ಗ್ಲಾಸಸ್ ಕೂಡ ಇದರಲ್ಲಿದೆ.

5 ಜನವರಿ 2016 ರಂದು ದೆಹಲಿಯಲ್ಲಿ ಹಲವು ಗ್ಯಾಜೆಟ್ಸ್ ಳನ್ನು ಕಂಪನಿ ಬಿಡುಗಡೆಗೊಳಿಸಿದ್ದು. ಸೂಪರ್ ಸೈಕಲ್, ವರ್ಚುಯಲ್ 3ಡಿ ಹೆಡ್ ಸೆಟ್ ಹಾಗೂ ಬ್ಲೂಥೂತ್ ಹೆಡ್ ಸೆಟ್ ಗಳನ್ನು ಬಿಡುಗಡೆಗೊಳಿಸಿದ್ದು. ಮತ್ತಷ್ಟು ಗ್ಯಾಜೆಟ್ಸ್‍ಗಳನ್ನು ಮುಂಬರುವ ಜನವರಿ 20 ರಂದು ಬಿಡುಗಡೆಗೊಳಿಸುವ ಭರವಸೆ ನೀಡಿದೆ.