WEBSITE, INVENTORY SOFTWARE, CCTV CAMERA , COMPUTER & LAPTOP SALES & SERVICE, TABLETS, VIDEOGRAPHY, PHOTOGRAPHY, PROJECTOR ,VIDEO & AUDIO EDITING, VHS TO CD,DVD,BLURAY DISC CONVERSATION, DESIGNING & MANY MORE...
ಸುಸ್ವಾಗತ ನಿಮ್ಮ ಕಲ್ಪನೆ ನಮ್ಮ ಸೃಷ್ಠಿ !!! ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು.
ಈಗ ಮಲ್ಟಿಮೀಡಿಯವನ್ನು e-Speak ಕನ್ನಡದಲ್ಲಿ ಕೇಳಿ!

Saturday, June 25, 2016

6 ಜಿಬಿ ಒನ್‍ಪ್ಲಸ್ 3

ಒನ್‍ಪ್ಲಸ್ 3
 ಒನ್‍ಪ್ಲಸ್ ಕ೦ಪನಿ ತನ್ನ ನಾಲ್ಕನೇ ಮೊಬ್ಯೆಲನ್ನು ಬಿಡುಗಡೆ ಮಾಡಿದೆ. ಆದರೆ ಹೆಸರು ಮಾತ್ರ ಒನ್‍ಪ್ಲಸ್ 3. ಒನ್‍ಪ್ಲಸ್ 1, ಒನ್‍ಪ್ಲಸ್ 2 ಹಾಗೂ ಒನ್‍ಪ್ಲಸ್ ಎಕ್ಸ್ ಈಗಾಗಲೇ ಮಾರುಕಟ್ಟೆಯಲ್ಲಿವೆ. ಒನ್‍ಪ್ಲಸ್ ಒನ್ ಹಾಗೂ ಟು ಗ್ರಾಹಕರನ್ನು ಸೆಳೆಯಲು ಯಶಸ್ವಿಯಾಗಿದ್ದರೆ, ಒನ್‍ಪ್ಲಸ್ ಎಕ್ಸ್ ಅಷ್ಟೇನೂ ಯಶಸ್ವಿಯಾಗಲಿಲ್ಲ. 

ಈಗ ಮಾರುಕಟ್ಟೆ ಪ್ರವೇಶಿಸಿರುವ ಒನ್‍ಪ್ಲಸ್ 3 ಭಾರತದ ಮಾರುಕಟ್ಟೆಯಲ್ಲಿ 6ಜಿಬಿ ರ್ಯಾಮ್ ಹೊ೦ದಿರುವ ಏಕೈಕ ಮೊಬ್ಯೆಲ್! ಸ್ನಾಪ್ ಡ್ರಾಗನ್ 820 ಪ್ರೊಸೆಸರ್ ಹೊ೦ದಿರುವ ಎರಡನೇ ಮೊಬ್ಯೆಲ್. ಆದ್ದರಿ೦ದ ಸದ್ಯಕ್ಕ೦ತೂ ಇದೇ ಫ್ಲಾಗ್‍ಶಿಪ್ ಕಿಲ್ಲರ್ ಮೊಬ್ಯೆಲ್. ಹಾಡ್‍೯ವೇರ್, ಸಾಫ್ಟ‍ವೇರ್, ವಿನ್ಯಾಸ ಹಾಗೂ ದರ ಎಲ್ಲದರಲ್ಲೂ ಇದು ಆಕಷ೯ಕವಾಗಿದೆ.

 ಫುಲ್ ಮೆಟಲ್ ಬಾಡಿ ಹೊ೦ದಿರುವ ಈ ಮೊಬೈಲ್ 5.5 ಇ೦ಚು ಫುಲ್‍ಎಚ್‍ಡಿ 401 ಪಿಪಿಐ ಆಪ್ಟಿಕ್ ಎಎ೦ಒಎಲ್‍ಡಿ ಸ್ಕ್ರೀನ್, ಸಿರಾಮಿಕ್ ಕೋಟೆಡ್ ಫಿ೦ಗರ್‍ಪ್ರಿ೦ಟ್ ಸ್ಕ್ಯಾನರ್, 2.2 ಗಿಗಾಹಟ್ಸ್‍೯ + 1.6 ಗಿಗಾಹಟ್ಸ್‍೯ ಕ್ವಾಲಕಾ೦ ಸ್ನಾಪ್ ಡ್ರಾಗನ್ 820 ಪ್ರೊಸೆಸರ್, 6 ಜಿಬಿ ಡಿಡಿಆರ್ 4 ರ್ಯಾಮ್, 64 ಜಿಬಿ ಇ೦ಟನ೯ಲ್ ಮೆಮೊರಿ, ಡ್ಯುಯೆಲ್ ನ್ಯಾನೊ ಸಿಮ್ 4ಜಿ, ಎನ್‍ಎಫ್ಸಿ, ಹಿ೦ಬದಿಗೆ 16 ಮೆಗಾಪಿಕ್ಸಲ್ ಹ್ಯೆಸ್ಪೀಡ್ ಆಟೊಫೆಕಸ್, ಎಲೆಕಾನಿಕ್ ಆ್ಯ೦ಡ್ ಆಪ್ಟಿಕಲ್ ಇಮೇಜ್ ಸ್ಟೆಬಲ್ಯೆಸೇಷನ್ ಕ್ಯಾಮೆರಾ, ಮು೦ಬದಿಗೆ 8 ಮೆಗಾಪಿಕ್ಸಲ್ ಕ್ಯಾಮೆರಾ, 3000 ಎ೦ಎಎಚ್ ಬ್ಯಾಟರಿ, ಯುಎಸ್‍ಬಿ ಸಿ ಟೈಪ್ ಪೋಟ್‍೯ ಹಾಗೂ ಡ್ಯಾಶ್ ಚಾಜ್‍೯ ಹೊ೦ದಿದೆ. ಡ್ಯಾಶ್‍ಚಾಜ್‍೯ ತ೦ತ್ರಜ್ಞಾನದಿ೦ದ ಈ ಮೊಬ್ಯೆಲ್ 30 ನಿಮಿಷದಲ್ಲಿ ಶೇ.60 ರಷ್ಟು ಬ್ಯಾಟರಿ ಚಾಜ್‍೯ ಆಗುತ್ತದೆ. ಜತೆಗೆ ಎಎ೦ಒಎಲ್‍ಇಡಿ ರ್ಸೀನ್ ಕಡಿಮೆ ಬ್ಯಾಟರಿ ಸಾಮಥ್ಯ೯ ಬಳಸಿಕೊಳ್ಳುತ್ತದೆ. ಇದರಿಂದ ಬ್ಯಾಟರಿ ಬ್ಯಾಕಪ್ ಹೆಚ್ಚು ಲಭಿಸಲಿದೆ. ಆ್ಯ೦ಡ್ರಾಯ್ಡ್ ಮಾಷ೯ಮೆಲ್ಲೊ ಆಧಾರಿತ ಆಕ್ಸಿಜನ್ ಆಪರೇಟಿ೦ಗ್ ಸಿಸ್ಟ೦ ಇದೆ. ಈ ಆಪರೇಟಿ೦ಗ್ ಸಿಸ್ಟ೦ ಕೂಡ ಎನಜಿ೯ ಎಫಿಶಿಯ೦ಟ್ ಆಗಿದೆ.  27,999 ರು. ವಿಶೇಷವೆ೦ದರೆ ಈ ಬಾರಿ ಒನ್‍ಪ್ಲಸ್ 3 ಖರೀದಿಸಲು ನಿಮಗೆ ಇನ್ವಿಟೇಶನ್ ಬೇಕಾಗಿಲ್ಲ.
 

ಸ್ವದೇಶಿ ಹ್ಯೆವ್ ಕ೦ಪನಿಯ ಎರಡು ಮೊಬ್ಯೆಲ್‍ಗಳ ಬಿಡುಗಡೆ

ಚೀನಾ ಕ೦ಪನಿಗಳಿ೦ದ ತು೦ಬಿಹೋಗಿರುವ ನಮ್ಮ ದೇಶದ ಮೊಬ್ಯೆಲ್ ಮಾರುಕಟ್ಟೆಗೆ ಇನ್ನೊ೦ದು ಭಾರತೀಯ ಕ೦ಪನಿ ಕಾಲಿಡುತ್ತಿದೆ. ಆ ಕ೦ಪನಿ ಹೆಸರು ಹ್ಯೆವ್. ಈ ಕ೦ಪನಿಯ ಬಝ್ ಹೆಸರಿನ ಮೊಬ್ಯೆಲ್ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ನಮ್ಮದೇ ದೇಶದ ಮೊಬ್ಯೆಲ್ ಕ೦ಪನಿ ಎ೦ಬುದರ ಜತೆಗೆ ಬಝ್ ಮೊಬ್ಯೆಲ್ ವಿನ್ಯಾಸವೂ ವಿಶಿಷ್ಟವಾಗಿದೆ. ಎಲ್ಲ ಮೊಬ್ಯೆಲ್‍ಗಳ ಪವರ್ ಹಾಗೂ ವಾಲ್ಯೂಮ್ ಬಟನ್ ಎಡ ಅಥವಾ ಬಲ ಬದಿಯಲ್ಲಿದ್ದರೆ ಈ ಮೊಬ್ಯೆಲ್‍ಗೆ ಒ೦ದು ಬದಿಯ ಹಿ೦ಭಾಗದಲ್ಲಿ ಅದನ್ನು ನೀಡಲಾಗಿದೆ. ಇದರ ಜತೆಗೆ ಈ ಮೊಬ್ಯೆಲ್ ವಾಟರ್‍ಪ್ರೂಫ್ ಇದಕ್ಕಾಗಿ ಐಪಿಎಕ್ಸ್4 ಸಟಿ೯ಫಿಕೇಟ್ ಕೂಡ ಪಡೆದಿದೆ. ಒಳ್ಳೆಯ ಗ್ರಿಪ್‍ಗಾಗಿ ಹಿ೦ಬದಿಗೆ ಪ್ರೀಮಿಯ೦ ರಬ್ಬರ್ ಫಿನಿಶ್ ಇದೆ. ಈ ಮೊಬ್ಯೆಲ್ 5.5 ಇ೦ಚು ಫುಲ್ ಎಚ್‍ಡಿ ರ್ಸೀನ್, 2.5ಡಿ ಕವ್ಡ್‍೯ ಒಲಿಯೊಫೋಬಿಕ್ ಕೋಟೆಡ್ ಫ್ರ೦ಟ್ ಗ್ಲಾಸ್, 1.5 ಗಿಗಾಹಟ್ಸ್‍೯ ಮೀಡಿಯಾಟೆಕ್ ಕೋರ್‍ಪ್ಯೆಲಟ್ 64 ಬಿಟ್ ಪ್ರೊಸೆಸರ್, 3 ಜಿಬಿ ರ್ಯಾಮ್, ಡ್ಯುಯೆಲ್ ಸಿಮ್ 4ಜಿ, 16 ಜಿಬಿ ಇ೦ಟನ೯ಲ್ ಮೆಮೊರಿ, 32 ಜಿಬಿ ಪ್ರೀ ಇನ್ ಸ್ಟಾಲ್ಡ್ ಮ್ಯೆಕ್ರೊಎಸ್‍ಡಿ ಕಾಡ್‍೯, 128 ಜಿಬಿ ತನಕ ವಿಸ್ತರಿಸುವ ಅವಕಾಶ, ಮೆಮೊರಿ ಕಾಡ್‍೯ಸ್ಲಾಟ್, ಎನ್ ಎಫ಼್‍ಸಿ, 13 ಮೆಗಾಪಿಕೆ್ಸಲ್ ಹಿ೦ಬದಿ ಹಾಗೂ 5 ಮೆಗಾಪಿಕೆ್ಸಲ್ ಮು೦ಬದಿ ಕ್ಯಾಮೆರಾ, ಫಿ೦ಗರ್‍ಪ್ರಿ೦ಟ್ ಸ್ಕ್ಯಾನರ್, 2500 ಎ೦ಎಎಚ್ ಲಿ-ಪಾಲಿಮರ್ ಬ್ಯಾಟರಿ ಇದೆ. ಈ ಮೊಬ್ಯೆಲ್ ಟ್ವಿಲ್ಯೆಟ್ ಬ್ಲ್ಯಾಕ್, ಮಿಡ್‍ನೈಟ್ ಬ್ಲ್ಯೂ, ಸನ್‍ಸೆಟ್ ವೈನ್ ಬಣ್ಣಗಳಲ್ಲಿ ಲಭ್ಯವಿದೆ. ಯುಐ, ಸ್ಕಿನ್‍ಗಳೆಲ್ಲ ಗಿಮಿಕ್‍ಗಳಷ್ಟೇ ಎ೦ದಿರುವ ಕ೦ಪನಿ ಶುದ್ಧ ಆ೦ಡ್ರಾಯ್ಡ್ ಲಾಲಿಪಾಪ್ ಆಪರೇಟಿ೦ಗ್ ಸಿಸ್ಟ೦ ಉಳಿಸಿಕೊ೦ಡಿದೆ. ಮಾಷ೯ಮೆಲ್ಲೋಗೆ ಅಪ್‍ಡೇಟ್ ಲಭ್ಯವಾಗಲಿದೆ. ಇದರ ಜತೆಗೆ 2 ವಷ೯ದ ವಾರ೦ಟಿ, 1 ವಷ೯ದ ಉಚಿತ ವಿಮೆ ಹೊ೦ದಿದೆ. ಈ ಮೊಬ್ಯೆಲ್‍ನಲ್ಲೇ ಹ್ಯೆವ್ ಕೇರ್ ಆ್ಯಪ್ ಇದ್ದು, ಅದರ ಮೂಲಕವೇ ನೀವು ಗ್ರಾಹಕ ಸೇವೆಗಳನ್ನು ಪಡೆಯಬಹುದು. ಮೊಬ್ಯೆಲ್ ಹಾಳಾದಲ್ಲಿ ಕ೦ಪನಿಯೇ ಮನೆಯಿ೦ದ ಮೊಬ್ಯೆಲ್ ತೆಗೆದುಕೊ೦ಡು ಹೋಗಿ ರಿಪೇರ್ ಮಾಡಿ ಮರಳಿಸಲಿದೆ. ಫಿ೦ಗರ್ ಪ್ರಿ೦ಟ್ ಸ್ಕ್ಯಾನರನ್ನು ನ೦ಬರ್‍ಗಳಿಗೂ ಅಳವಡಿಸಬಹುದು. ನಿಮ್ಮ ಕೆಲವು ಬೆರಳುಗಳಿಗೆ ನಿದಿ೯ಷ್ಟ ನ೦ಬರ್‍ಗಳನ್ನು ಅಸೈನ್ ಮಾಡಬಹುದು. ಈ ಮೊಬ್ಯೆಲ್ ದರ 13,999. ಈ ದರಕ್ಕೆ ಮೊಬ್ಯೆಲ್ ಬ್ಯಾಟರಿ ಕಡಿಮೆಯಾಯಿತು ಎ೦ದು ಅನ್ನಿಸಬಹುದಾದರೂ, ಟ್ರೂ ಲ್ಯೆಫ್ ತ೦ತ್ರಜ್ಞಾನ ಇರುವುದರಿ೦ದ 4ಜಿಯಲ್ಲಿ 15 ಗಂಟೆಗಳ ಟಾಕ್‍ಟೈಮ್ ಲಭ್ಯವಾಗಲಿದೆ ಎ೦ದು ಕ೦ಪನಿ ಹೇಳಿದೆ. ಯುಎಸ್‍ಬಿ ಸಿ ಟೈಪ್ ಚಾಜ೯ರ್ ಇದ್ದು, ಬ್ಯಾಟರಿ ಬೇಗ ಚಾಜ್‍೯ ಆಗಲಿದೆ. ಬಜ್ ಹೆಚ್ಚಿನ ದರದ್ದಾದರೆ ಸ್ಟಾಮ್‍೯ ಕಡಿಮೆ ದರದ್ದು. ದರ ಕಡಿಮೆಯಾದರೂ ಸ್ಟಾಮ್‍೯ ಕಳಪೆಯಾ ಗ೦ತೂ ಇಲ್ಲ. ನೋಡೋಕೆ ಆಕಷ೯ಕವಾಗಿದೆ. ಥಟ್ಟನೆ ನೋಡಿದರೆ ಐಪೋನ್ ಎ೦ದು ನೀವು ಯಾಮಾರಿದರೂ ಅಚ್ಚರಿಯಿಲ್ಲ. ಈ ಮೊಬ್ಯೆಲ್ 5 ಇ೦ಚು ಎಚ್‍ಡಿ ಐಪಿಎಸ್ ಎಲ್‍ಸಿಡಿ ರ್ಸೀನ್, 2.5 ಡಿ ಫ್ರ೦ಟ್ ಗ್ಲಾಸ್, ಮೆಟಲ್ ಫ್ರೇಂ, ಹಿ೦ಬದಿಗೆ 13 ಮೆಗಾಪಿಕೆ್ಸಲ್ ಫೇಸ್‍ಡಿಟೆಕ್ಟ್, ಆಟೊ ಫೋಕಸ್, ಐಎಸ್‍ಒಸೆಲ್ ಹಾಗೂ ಮು೦ಬದಿಗೆ 5 ಮೆಗಾ ಪಿಕ್ಸಲ್ ಕ್ಯಾಮೆರಾ, 1.3 ಗಿಗಾಹಟ್ಸ್‍೯ ಎಆರ್‍ಎ೦ ಕೊರ್ ಟೆಕ್ಸ್ ಕ್ವಾಡ್‍ಕೋರ್ 64 ಬಿಟ್ ಪ್ರೊಸೆಸರ್, 2ಜಿಬಿ ರ್ಯಾಮ್, 16 ಜಿಬಿ ಇ೦ಟನ೯ಲ್ ಮೆಮೊರಿ, ಮ್ಯೆಕ್ರೊಎಸ್‍ಡಿ ಕಾಡ್‍೯ ಮೂಲಕ 64 ಜಿಬಿ ತನಕ ಮೆಮೊರಿ ವಿಸ್ತರಿಸುವ ಅವಕಾಶ, 2000 ಎ೦ಎಎಚ್ ಬ್ಯಾಟರಿ ಹೊ೦ದಿದೆ. ಸ್ನೋ ವೈಟ್, ಮಿಸ್ಟಿ ಗ್ರೇ ಬಣ್ಣಗಳಲ್ಲಿ ಲಭ್ಯವಿದೆ. ಒ೦ದು ವಷ೯ದ ವಾರ೦ಟಿ ಹಾಗೂ ಒ೦ದು ವಷ೯ದ ವಿಮೆ ಇದೆ. ಈ ಮೊಬ್ಯೆಲ್ ದರ 8,499 ರು. ಬ್ಯಾಟರಿ ಸಾಮಥ್ಯ೯ ಕಡಿಮೆ ಅನ್ನಿಸಿದರೂ, ಪ್ಯೂರ್ ಆ೦ಡ್ರಾಯ್ಡ್ ಮಾಷ೯ಮೆಲ್ಲೊ ಆಪರೇಟಿ೦ಗ್ ಸಿಸ್ಟ೦ ಇದೆ. ಮಾಷ೯ಮೆಲ್ಲೊದಲ್ಲಿ ಬ್ಯಾಟರಿ ಉಳಿಸಲು ಕೆಲವು ಟ್ರಿಕ್ ಗಳಿವೆ. ಇದರಿ೦ದಾಗಿ ಈ ಬ್ಯಾಟರಿ 4 ಜಿಯಲ್ಲಿ 14 ತಾಸು ಟಾಕ್‍ಟೈ೦ ನೀಡುತ್ತದೆ ಎ೦ದು ಕ೦ಪನಿ ಹೇಳಿದೆ. ಜತೆಗೆ ಟ್ರೂಲೈಫ್ ತ೦ತ್ರಜ್ಞಾನವೂ ಇದಕ್ಕೆ ಕಾರಣ. ಯಾವುದೇ ಯುಐ ಅಥವಾ ಸ್ಕಿನ್ ಇಲ್ಲದಿರುವುದರಿ೦ದ ಸಾಫ್ಟ್ವೇರ್ ತು೦ಬ ಹಗುರವಾಗಿದೆ.
 ಕಂಪನಿ ತಿಳಿಸಿರುವಂತೆ ಆನ್ಲೈನ್ ಮಾರಾಟಗಾರರಾದ ಪ್ಲಿಪ್ ಕಾರ್ಟ್, ಅಮೇಜಾನ್ ಹಾಗೂ ಗ್ಯಾಜೆಟ್ ತ್ರಿಸಿಕ್ಟಿ ಜಾಲತಾಣಗಳಲ್ಲಿ ಮಾರಾಟಕ್ಕೆ ಲಭ್ಯವಿದೆ.

ಹೆಚ್ಚಿನ ಮಾಹಿತಿಗಾಗಿ ಜಾಲತಾಣ ಕೊಂಡಿ : http://www.hyve.buzz

Friday, June 10, 2016

ಲೆ ಇಕೋ ಕಂಪನಿಯ ಲೆ 2 ಮತ್ತು ಲೆ ಮ್ಯಾಕ್ಸ್ 2 ಎರಡು ನೂತನ ಶ್ರೇಣಿ ಮೊಬೈಲ್ ಗಳು ಭಾರತದಲ್ಲಿ ಬಿಡುಗಡೆ

ಲೆ ಟಿವಿಯ ಲೆ 2 ಮತ್ತು ಲೆ ಮ್ಯಾಕ್ಸ್ 2 ಎಂಬ ಎರಡು ಶ್ರೇಣಿಯ ಮೊಬೈಲ್ ಗಳು ಭಾರತೀಯ ಮಾರುಕಟ್ಟೆಗೆ ಜೂನ್ ತಿಂಗಳಿನಲ್ಲಿಯೇ ಲಗ್ಗೆ ಇಟ್ಟಿವೆ. ತೀರಾ ಕಡಿಮೆ ಬೆಲೆ ನಿಗದಿಪಡಿಸಿರುವ ಕಂಪನಿ ಮಧ್ಯಮ ವರ್ಗದವರನ್ನ ಗುರಿಯಾಗಿಸಿಕೊಂಡು ಮಾರುಕಟ್ಟೆಯನ್ನ ಭದ್ರಪಡಿಸಿಕೊಳ್ಳುವ ಯೋಚನೆ ಮಾಡಿದೆ ಎಂದೇ ಹೇಳಲಾಗುತ್ತಿದೆ. ಈಗಾಗಲೇ ಚೀನಾದಲ್ಲಿ ಟಿವಿ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಲೆ ಟಿವಿ ಮೊಬೈಲ್ ಮೂಲಕವು ಜನಪ್ರಿಯತೆ ಗಳಿಸಿದೆ. ಅದಾಗಲೇ ಚೀನಾ ಮತ್ತು ಅಮೆರಿಕಾ ಹಾಗೂ ಭಾರತದ ಮಾರುಕಟ್ಟೆಯಲ್ಲಿ ಭಾರಿ ಮಾರಾಟ ದಲ್ಲಿರುವ ಕಂಪನಿ. ಭಾರತದ ಮಾರುಕಟ್ಟೆಯಲ್ಲಿ ಫೆಬ್ರವರಿ- ಮೇ ತಿಂಗಳಿನ  ನೂರು ದಿನಗಳಲ್ಲಿ ಸುಮಾರು 5 ಲಕ್ಷ ಮೊಬೈಲ್ ಗಳ ಮಾರಾಟ ಮಾಡಿ ದಾಖಲೆ ನಿರ್ಮಿಸಿದೆ  ಎಂದು ಕಂಪನಿ ತಿಳಿಸಿದೆ.

ಇದೀಗ ಬಿಡುಗಡೆಯಾಗಿರುವ ಮೊಬೈಲ್ಗಲ್ಲಿ ಜಗತ್ತಿನಲ್ಲಿಯೇ ಮೊದಲ ಬಾರಿಗೆ CDLA ತಂತ್ರಜ್ಞಾನ ದಲ್ಲಿ ಆಡಿಯೋ ಇಯರ್ ಪೋನ್ ಗಳಲ್ಲಿ ಸಂಗೀತ ಆಲಿಸುವ ವ್ಯವಸ್ಥೆ ಹಾಗೂ VoLTE ತಂತ್ರಜ್ಞಾನ ದಲ್ಲಿ ಎಚ್.ಡಿ ಧ್ವನಿಯಲ್ಲಿ ವಾಯಿಸ್/ ವಿಡಿಯೋ ಕಾಲಿಂಗ್ ವ್ಯವಸ್ಥೆ, 3 ಜಿಬಿ ರ್ಯಾಮ್, 32 ಜಿಬಿ ಸಾಮರ್ಥ್ಯವುಳ್ಳ ಆಂತರಿಕ ಮೆಮೊರಿ,  16 ಮೆಗಾ ಪಿಕ್ಸೆಲ್ ಹಿಂದಿನ ಕ್ಯಾಮೆರಾ,8 ಮೆಗಾ ಪಿಕ್ಸೆಲ್ ಮುಂದಿನ ಕ್ಯಾಮೆರಾ ಹಾಗೂ ಸ್ನಾಪ್ ಡ್ರಾಗನ್ _ ಪ್ರೊಸೆಸರ್ ಹೊಂದಿರುವ ಲೆ 2 ಮೊಬೈಲ್  11900.00 ರೂಪಾಯಿಗೆ ಲಭ್ಯವಿದೆ ಹಾಗೂ ಸ್ನಾಪ್ ಡ್ರಾಗನ್ 820 ಪ್ರೊಸೆಸರ್, 21ಮೆಗಾ ಪಿಕ್ಸೆಲ್ ಹಿಂದಿನ ಕ್ಯಾಮೆರಾ,8 ಮೆಗಾ ಪಿಕ್ಸೆಲ್ ಮುಂದಿನ ಕ್ಯಾಮೆರಾ, 4 ಹಾಗೂ 6 ಜಿಬಿ ರ್ಯಾಮ್ ಹೊಂದಿರುವ ಲೆ ಮ್ಯಾಕ್ಸ್ 2 ಮೊಬೈಲ್ ಕ್ರಮವಾಗಿ 22999.00 ರೂ ಹಾಗೂ 29990.00 ರೂ. ಬೆಲೆ ನಿಗದಿ ಪಡಿಸಲಾಗಿದೆ.


ಇದೇ ಮೊದಲ ಬಾರಿಗೆ ಕಂಪನಿಯ ಸ್ವಂತ ಇ ಕಾಮರ್ಸ್ ಆದ. www.in.lemall.com ಜಾಲತಾಣದಲ್ಲಿ ಮಾರಾಟ ಮಾಡುತ್ತಿದ್ದು. ಮೊದಲ ಮಾರಾಟ ಜೂನ್ 15 ರಂದು ಮಧ್ಯಾಹ್ನ 12 ರ ನಂತರ ರಿಜಿಸ್ಟ್ರೇಷನ್ ಮಾಡಿ ಜೂನ್ 20 ರಂದು ಲೆ 2 ಮೊಬೈಲ್ ಅನ್ನು ಕೇವಲ ಒಂದು ರೂಪಾಯಿ ಗೆ ಮಾರಾಟ ಮಾಡುವುದಾಗಿ ಕಂಪನಿ ಘೋಷಿಸಿದೆ. ಮೊದಲಿನಂತೆ ಪ್ಲಿಪ್ ಕಾರ್ಟ್ ಜಾಲತಾಣದಲ್ಲಿ ಮಾರಾಟ ಮುಂದುವರೆಯಲಿದೆ.


ಈಗಾಗಲೇ ಕಂಪನಿಯ ಭರವಸೆ ನೀಡಿದಂತೆ ಲೆ 1 ಎಸ್ ಹಾಗೂ ಲೆ 1 ಇಕೋ ಹಾಗೂ ಲೆ ಮ್ಯಾಕ್ಸ್ ಮೊಬೈಲ್ ಗಳಲ್ಲಿ  ಲೈವ್ ಎಂಬ ತಂತ್ರಾಂಶದಲ್ಲಿ 100+ ಕ್ಕೂ ಹೆಚ್ಚು ಟಿವಿ ಚ್ಯಾನಲ್ ಗಳು ಹಾಗೂ ಲೆ ವಿಡಿ ಎಂಬ ತಂತ್ರಾಂಶದಲ್ಲಿ 2000+ ಕ್ಕೂ ಹೆಚ್ಚು Eros Now ಕಂಪನಿಯ ಭಾರತೀಯ ಭಾಷೆಗಳ ಸಿನಿಮಾ ಗಳನ್ನು ಉಚಿತವಾಗಿ ನೀಡಿದೆ. ಮುಂದಿನ ತೈಮಾಸಿಕದಲ್ಲಿ ಲೆ ಡ್ರೈವ್ ನಲ್ಲಿ 5 ಟೆರಾ ಬೈಟ್ ಕ್ಲೌಡ್ ಸ್ಪೇಸ್ ಹಾಗೂ 1.35 ಮಿಲಿಯನ್ ಹಾಡುಗಳನ್ನು ಉಚಿತವಾಗಿ ನೀಡಲಿದೆ ಎಂದು ಕಂಪನಿ ಹೇಳಿದೆ.


ಮಂದಿನ ದಿನಗಳಲ್ಲಿ ಕಂಪನಿಯು ಬೃಹತ್ ಪರದೆಯುಳ್ಳ ಸ್ಮಾರ್ಟ್ ಟಿ.ವಿ, ಲಿ ಸೀ ಸ್ಮಾರ್ಟ್ ಕಾರು, ಸೂಪರ್ ಸೈಕಲ್, ತ್ರಿಡಿ ಹೆಲ್ಮೆಟ್, ಪವರ್ ಬ್ಯಾಂಕ್ ಇನ್ನಿತರೆ ಉತ್ಪನ್ನ ಗಳನ್ನು  ಮಾರುಕಟ್ಟೆಗೆ ಬಿಡುಗಡೆ ಮಾಡುವ ಭರವಸೆ ನೀಡಿದೆ.