WEBSITE, INVENTORY SOFTWARE, CCTV CAMERA , COMPUTER & LAPTOP SALES & SERVICE, TABLETS, VIDEOGRAPHY, PHOTOGRAPHY, PROJECTOR ,VIDEO & AUDIO EDITING, VHS TO CD,DVD,BLURAY DISC CONVERSATION, DESIGNING & MANY MORE...
ಸುಸ್ವಾಗತ ನಿಮ್ಮ ಕಲ್ಪನೆ ನಮ್ಮ ಸೃಷ್ಠಿ !!! ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು.
ಈಗ ಮಲ್ಟಿಮೀಡಿಯವನ್ನು e-Speak ಕನ್ನಡದಲ್ಲಿ ಕೇಳಿ!

ಹಿತನುಡಿ

ನಮ್ಮ ಕನಸನ್ನು ನನಸಾಗಿಸಿಕೊಳ್ಳಲು ಪರಿಶ್ರಮದಿಂದ ದುಡಿಯಬೇಕು. ಇಲ್ಲದಿದ್ದರೆ ನಮ್ಮ ಪರಿಶ್ರಮವೆಲ್ಲ ಬೇರೆಯವರ ಕನಸು ನನಸಾಗಿಸಲು ದುಡಿಯಬೇಕಾಗುತ್ತದೆ.
+++++++++++++++++++++++++++++

ಮನುಷ್ಯನಿಗೆ ಅತ್ಯುತ್ತಮ ಔಷಧಗಳೆಂದರೆ ಪ್ರೀತಿ ಮತ್ತು ಕಾಳಜಿ. ಇವೆರಡರಿಂದ ಗುಣಮುಖರಾಗದಿದ್ದರೆ, ಈ ಔಷಧಗಳ ಪ್ರಮಾಣ(ಡೋಸ್)ವನ್ನು ಜಾಸ್ತಿ  ಮಾಡಿದರಾಯಿತು. 
+++++++++++++++++++++++++++++
ಎಲ್ಲ ಕಲಾವಿದರೂ ತಾವು ರಚಿಸಿದ ಚಿತ್ರದಲ್ಲಿ ತಮ್ಮ ಹೆಸರನ್ನು ಬರೆಯಲು ಮರೆಯುವುದಿಲ್ಲ. ಆದರೆ ತಾಯಿ ಇದ್ದಾಳಲ್ಲ, ತಾನು ಹೆತ್ತ ಮಗುವಿಗೆ ತನ್ನ ಗಂಡನ ಹೆಸರನ್ನು ನೀಡುತ್ತಾಳೆ. ನಾವು ಮಾಡುವ ಕಾರ್ಯಗಳ ಪ್ರತಿಫಲವನ್ನು ಬೇರೆಯವರಿಗೆ ನೀಡುವುದರಲ್ಲೂ ಆನಂದವಿದೆ.
 +++++++++++++++++++++++++++++
ನಂಬಿಕೆ ಬಹಳ ಪುಟ್ಚ ಪದವಿರಬಹುದು. ಆದರೆ ಅದಕ್ಕೆ ಅಗಾಧ ಶಕ್ತಿ, ಸಾಮರ್ಥ್ಯವಿದೆ. ಬಹಳ ಜನರ ಸಮಸ್ಯೆ ಏನೆಂದರೆ, ಅವರೆಲ್ಲರಿಗೆ ತಮ್ಮ ನಂಬಿಕೆ   ಮೇಲೆ ಸಂದೇಹ ಹಾಗೂ ಆ ಸಂದೇಹದ ಮೇಲೆ ನಂಬಿಕೆ. ನಿಮ್ಮ  ಮೇಲೆ ನಿಮಗೆ  ನಂಬಿಕೆ ಇರಲಿ.
+++++++++++++++++++++++++++++
ದೊಡ್ಡ ದೊಡ್ಡ ಸಂಗತಿಗಳ ಬಗ್ಗೆ ಮಾತಾಡುವುದು ಪ್ರಬುದ್ಧತೆ ಅಲ್ಲ. ಸಣ್ಣಪುಟ್ಟ ಸಂಗತಿಗಳನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳುವುದು ಹಾಗೂ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಪ್ರಬುದ್ಧತೆ. ಜೀವನಕ್ಕೆ ಬದ್ಧರಾಗಿರುವುದು ಪ್ರಬುದ್ಧತೆ ಲಕ್ಷಣ.
+++++++++++++++++++++++++++++
ಪ್ರತಿದಿನ ಏಳುವಾಗ ಈ ದಿನವು ನಾವು ಅಂದುಕೊಂಡಿದ್ದನ್ನು ಸಾಧಿಸಲು ಸಿಕ್ಕ ಸದಾವಕಾಶ ಎಂದು ಭಾವಿಸಿ. ನಾವು ಆ ದಿನವನ್ನು ನೋಡುವ ರೀತಿಯೇ ಬದಲಾಗುತ್ತದೆ. ಹಾಗೆ ನಮ್ಮ ಜೀವನ ಸಹ.
 +++++++++++++++++++++++++++++
ಮುಖ ಅಥವಾ ಮೈಮೇಲಿನ ಕಲೆಗಳ ಬಗ್ಗೆ ಹೆಚ್ಚು ಚಿಂತಿಸಬೇಡಿ, ಅವುಗಳನ್ನು ಹಚ್ಚೆಗಳು ಎಂದು ಭಾವಿಸಿ. ನೀವು ಅವುಗಳನ್ನು ನೋಡುವ ದೃಷ್ಟಿಯೇ ಬದಲಾದೀತು. 
   +++++++++++++++++++++++++++++ 
ತಪ್ಪು ಮಾಡಿದರೆ ನೀರು ನೆಲದಲ್ಲಿ ಚೆಲ್ಲಿಹೋದಂತೆ, ತಪ್ಪು ತಿದ್ದಲಾಗುವುದಿಲ್ಲ. ಆದರೆ ಮುಂದೆ ಅಂತಹ ತಪ್ಪುಮಾಡದಂತಾ, ಕಲಿಕೆಯ ಶಕ್ತಿ ಮತ್ತು ಸಾಮರ್ಥ್ಯ ನಮಗಿದೆ. ನಾವು ಅದನ್ನು ಉದ್ದೀಪಿಸಿಕೊಳ್ಳಬೇಕು.
 +++++++++++++++++++++++++++++ 
ಎಲ್ಲ ಎಲ್ಲವನರಿದು ಫಲವೇನು ಮತ್ತೆ ಎಲ್ಲ ಎಲ್ಲವನರಿದು ಫಲವೇನು? ತನ್ನ ತಾನರಿಯದನ್ನಕ್ಕ? ತನ್ನರಿವು ಕರಿಗೊಂಡ ಬಳಿಕ ಇದಿರಿಟ್ಟು ಕೇಳಲುಂಟೆ? ನಿಮ್ಮರಿವು ತಲೆದೋರಿದ ಕಾರಣ ನನ್ನ ನಾನರಿದೆ ಚೆನ್ನಮಲ್ಲಿಕಾರ್ಜುನ.
 +++++++++++++++++++++++++++++ 
ಯಾವುದಾದರೂ ಕೆಲಸವನ್ನು ಹೇಗೆ ಮುಗಿಸಬೇಕೆಂಬುದನ್ನು ಯಶಸ್ವಿ ವ್ಯಕ್ತಿಯನ್ನು ಕೇಳಬೇಕು. ಆ ಕೆಲಸವನ್ನು ಹೇಗೆ ಆರಂಭಿಸಬೇಕು ಎಂಬುದನ್ನು ಅನುಭವಿ ವ್ಯಕ್ತಿಯನ್ನು ಕೇಳಬೇಕು. ನಿಮ್ಮಲ್ಲಿ ಅದಮ್ಯ ಉತ್ಸಾಹವಿದ್ದರೆ ಯಾರನ್ನೂ ಕೇಳಬೇಕಾಗಿಲ್ಲ.
 +++++++++++++++++++++++++++++  
ಅರ್ಥ ಆಗದಿರುವುದೇ ಗೊಂದಲದ ಮೂಲ. ಅರ್ಥ ಆದ ತಕ್ಷಣ ಆ ಗೊಂದಲ ಇರುವುದಿಲ್ಲ. ಮತ್ತೆ ಗೊಂದಲ ಆಗೋದು ಅರ್ಥವಾಗದ ಮತ್ತೊಂದು ಗೊಂದಲ ಎದುರಾದಾಗ. 
 +++++++++++++++++++++++++++++
ನಗುವಿನ ಹಿಂದಿನ ನೋವನ್ನು ಮೌನದ ಹಿಂದಿನ ಮಾತನ್ನು ಸಿಟ್ಟಿನ ಹಿಂದಿನ ಪ್ರೀತಿಯನ್ನು ಅರ್ಥ ಮಾಡಿಕೊಳ್ಳ ಬಲ್ಲವರೇ ನಿಜವಾದ ಗೆಳೆಯರು...!
  +++++++++++++++++++++++++++++  
ಕಾರಣವಿಲ್ಲದೇ ಪ್ರೀತಿ ಮಾಡಬೇಕು, ಪ್ರೀತಿಯ ಹಿಂದೆ ಕಾರಣವಿದ್ದರೆ ಅದು ಪ್ರೀತಿಯಲ್ಲ, ಸ್ವಾರ್ಥ ಅನಿಸಿಕೊಳ್ಳುತ್ತದೆ
  +++++++++++++++++++++++++++++ 
ಹೃದಯ ಶ್ರೀಮಂತಿಕೆ ಮುಂದೆ ಉಳಿದುದೆಲ್ಲವೂ ಗೌಣ. ನೀವು ಕಿಸೆಯಲ್ಲಿ ಎಷ್ಟೇ ತುಂಬಿಕೊಂಡರೂ ಅದು ಕೆಲವೇ ದಿನಗಳಿಗೆ ಸಾಕಾಗಬಹುದು. ಅದೇ ಹೃದಯದಲ್ಲಿ ತುಂಬಿಕೊಂಡರೆ ಜೀವನಪರ್ಯಂತ ಸಾಕಾಗುತ್ತದೆ. ಹೃದಯ ಶ್ರೀಮಂತಿಕೆ ಮುಂದೆ ಉಳಿದುದೆಲ್ಲವೂ ಗೌಣ.
 +++++++++++++++++++++++++++++ 
ಒಂದೋ ಸರಿಯಾಗಿ ತಿಳಿಯಲು ಕೇಳಿಸಿಕೊಳ್ಳುವುದಿಲ್ಲ, ಇಲ್ಲವೇ ಒಂದೋ ಸರಿಯಾಗಿ ತಿಳಿಯಲು ಕೇಳಿಸಿಕೊಳ್ಳುವುದಿಲ್ಲ, ಇಲ್ಲವೇ ಸಿದ್ಧ ಉತ್ತರ ನೀಡಲು ಕೇಳಿಸಿಕೊಳ್ಳುವುದರಿಂದ ನಮ್ಮ ಸಮಸ್ಯೆಗಳು ಆರಂಭವಾಗುತ್ತವೆ. ಬೇರೆಯವರು ಹೇಳುವುದನ್ನು ಕೇಳುವ ಸಹನೆ, ವ್ಯವಧಾನ ಇರಬೇಕು.
 +++++++++++++++++++++++++++++ 
ನೀವು ಸದಾ ನಗುತ್ತಿದ್ದರೆ ಅದು ನಿಮ್ಮ ಮನಸ್ಸಿನ ಭಾವನೆಯನ್ನು ತೋರಿಸುತ್ತದೆ. ಅದೇ ನೀವು ಬೇರೆಯವರ ನಗುವಿಗೆ ಕಾರಣರಾದರೆ, ನಿಮ್ಮ ವ್ಯಕ್ತಿತ್ವವನ್ನು ತೋರಿಸುತ್ತದೆ. ನೀವು ನಗಿ, ಬೇರೆಯವರ ನಗುವಿಗೂ ಕಾರಣರಾಗಿ.
 +++++++++++++++++++++++++++++ 
ನಾವು ಹೇಳಿದ್ದಕ್ಕೆಲ್ಲ ತಲೆಯಾಡಿಸಿ ಸಮ್ಮತಿಸುವವರಿಂದ ನಮಗೆ ಸಮಧಾನ ಸಿಗಬಹುದು. ಆದರೆ ಅಂಥವರಿಂದ ನಮ್ಮ ಬೆಳವಣಿಗೆ ಸಾಧ್ಯವಿಲ್ಲ. ನಿಮ್ಮನ್ನು ಟೀಕಿಸುವವರು, ವಿರೋಧಿಸುವವರು ನಿಮ್ಮ ಬೆಳವಣಿಗೆಗೆ ಕಾರಣರು ಎಂಬುದನ್ನು ಮರೆಯಬಾರದು.
 +++++++++++++++++++++++++++++ 
ಸಹನೆ ಹಾಗೂ ಮೌನ ಅತ್ಯಂತ ಶಕ್ತಿಶಾಲಿ ಸಾಧನಗಳು. ಸಹನೆ ಮಾನಸಿಕವಾಗಿ, ಮೌನ ಭಾವನಾತ್ಮಕವಾಗಿ ಗಟ್ಟಿಗೊಳಿಸುತ್ತವೆ. ಸಹನೆ ಅಂದ್ರೆ ಮೌನವಾಗಿರುವುದಲ್ಲ. ಮೌನ ಅಂದ್ರೆ ಎಲ್ಲವನೂ ಸಹಿಸಿಕೊಳ್ಳುವುದಲ್ಲ.
 +++++++++++++++++++++++++++++
ಗೆಲುವು ನಿಮ್ಮನ್ನು ಇಡೀ ಜಗತ್ತಿಗೆ ಪರಿಚಯಿಸುತ್ತದೆ. ಅದೇ ಸೋಲಿದೆಯಲ್ಲ, ಅದು ನಿಮಗೆ ಜಗತ್ತನ್ನು ಪರಿಚಯಿಸುತ್ತದೆ. ಸೋಲು ಕಲಿಸುವ ಪಾಠವನ್ನು ಗೆಲುವು ಹೇಳಿಕೊಡುವುದಿಲ್ಲ. ನಿಮ್ಮ ಸೋಲು ನಿಮಗೆ ಗೆಲುವಾಗಿ ಪರಿಣಮಿಸಬೇಕು.
 +++++++++++++++++++++++++++++
ಬೇರೆಯವರು ನಿಮಗಿಂತ ಒಳ್ಳೆಯವರಾಗಿದ್ದಾರೆ ಎಂದು ಚಿಂತೆ ಮಾಡಬೇಡಿ. ಪ್ರತಿದಿನ ನಿಮ್ಮ ದಾಖಲೆಯನ್ನು ನೀವೇ ಮುರಿಯಬೇಕಾಗುತ್ತದೆ. ಅಷ್ಟಕ್ಕೂ ನಿಮ್ಮ ಜತೆ ಹೋರಾಡುವವರು ನೀವೇ.
 +++++++++++++++++++++++++++++
ಯಾರೂ ಸಹ ಪರಿಪೂರ್ಣ ಅಲ್ಲ ಎಂಬುದು ಇತಿಹಾಸದಿಂದ ಗೊತ್ತಾಗುತ್ತದೆ. ಯಾರು ಬೇಕಾದರೂ ಬದಲಾಗುತ್ತಾರೆ ಎಂಬುದು ವರ್ತಮಾನದಿಂದ ತಿಳಿಯುತ್ತದೆ. ಪ್ರತಿದಿನವೂ ಪಾಠ ಕಲಿಯಬೇಕು. ಕಲಿಕೆಗೆ ಕೊನೆ ಇಲ್ಲ.
 +++++++++++++++++++++++++++++
ನನಗೆ ಕಷ್ಟವನ್ನು ಕೊಡಲೇಬೇಡ ಎಂದು ದೇವರನ್ನು ಪ್ರಾರ್ಥಿಸುವ ಬದಲು, ಎಂಥ ಕಷ್ಟ ಬಂದರೂ ಧೈರ್ಯದಿಂದ ಎದುರಿಸಿ ಜಯಿಸುವ ಶಕ್ತಿ ಕೊಡು ಎಂದು ಪ್ರಾರ್ಥಿಸಿ. ಕಷ್ಟ ಎದುರಿಸಿದ ಅನುಭವ, ಜಯಿಸಿದ ಸಂತಸ ನಿಮ್ಮದಾಗುತ್ತದೆ. ಅದನ್ಯಾಕೆ ಕಳೆದುಕೊಳ್ಳುತ್ತೀರಿ?
 +++++++++++++++++++++++++++++
ಯಾವುದಾದರೂ ಕೆಲಸವನ್ನು ಹೇಗೆ ಮುಗಿಸಬೇಕೆಂಬುದನ್ನು ಯಶಸ್ವಿ ವ್ಯಕ್ತಿಯನ್ನು ಕೇಳಬೇಕು. ಆ ಕೆಲಸವನ್ನು ಹೇಗೆ ಆರಂಭಿಸಬೇಕು ಎಂಬುದನ್ನು ಅನುಭವಿ ವ್ಯಕ್ತಿಯನ್ನು ಕೇಳಬೇಕು. ನಿಮ್ಮಲ್ಲಿ ಅದಮ್ಯ ಉತ್ಸಾಹವಿದ್ದರೆ ಯಾರನ್ನೂ ಕೇಳಬೇಕಾಗಿಲ್ಲ.
 +++++++++++++++++++++++++++++
 +++++++++++++++++++++++++++++
 +++++++++++++++++++++++++++++
 +++++++++++++++++++++++++++++
 +++++++++++++++++++++++++++++
 +++++++++++++++++++++++++++++
 +++++++++++++++++++++++++++++
 +++++++++++++++++++++++++++++
 +++++++++++++++++++++++++++++
 +++++++++++++++++++++++++++++
 +++++++++++++++++++++++++++++
 +++++++++++++++++++++++++++++
 +++++++++++++++++++++++++++++
 +++++++++++++++++++++++++++++
 +++++++++++++++++++++++++++++
 +++++++++++++++++++++++++++++
 +++++++++++++++++++++++++++++
 +++++++++++++++++++++++++++++
 +++++++++++++++++++++++++++++
 +++++++++++++++++++++++++++++
 +++++++++++++++++++++++++++++
 +++++++++++++++++++++++++++++
 +++++++++++++++++++++++++++++
 +++++++++++++++++++++++++++++
 +++++++++++++++++++++++++++++
 +++++++++++++++++++++++++++++
 +++++++++++++++++++++++++++++
 +++++++++++++++++++++++++++++
 +++++++++++++++++++++++++++++
 +++++++++++++++++++++++++++++
 +++++++++++++++++++++++++++++
 +++++++++++++++++++++++++++++
 +++++++++++++++++++++++++++++