WEBSITE, INVENTORY SOFTWARE, CCTV CAMERA , COMPUTER & LAPTOP SALES & SERVICE, TABLETS, VIDEOGRAPHY, PHOTOGRAPHY, PROJECTOR ,VIDEO & AUDIO EDITING, VHS TO CD,DVD,BLURAY DISC CONVERSATION, DESIGNING & MANY MORE...
ಸುಸ್ವಾಗತ ನಿಮ್ಮ ಕಲ್ಪನೆ ನಮ್ಮ ಸೃಷ್ಠಿ !!! ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು.
ಈಗ ಮಲ್ಟಿಮೀಡಿಯವನ್ನು e-Speak ಕನ್ನಡದಲ್ಲಿ ಕೇಳಿ!

ಅಂತರ್ಜಾಲತಾಣಸಾತ್ವಿಕ ಪ್ರೀತಿ

ಪ್ರೀತಿ ಎಂಬುದು ಅಸಂಖ್ಯಾತ ಭಾವನೆಗಳು ಮತ್ತು ಅನುಭವಗಳ ಪೈಕಿ ಯಾವುದಾದರೂ ಒಂದು ಭಾವವಾಗಿದ್ದು, ಪ್ರಬಲವಾದ ವಾತ್ಸಲ್ಯ ಮತ್ತು ಬಾಂಧವ್ಯಗಳ ಒಂದು ಸಂವೇದನೆಗೆ ಅದು ಸಂಬಂಧಿಸಿರುತ್ತದೆ. ಪ್ರೀತಿ ಎನ್ನುವ ಪದ ವಿಭಿನ್ನ ಭಾವನೆಗಳನ್ನು, ಮನೋಸ್ಥಿತಿಗಳನ್ನು ಮತ್ತು ದೃಷ್ಟಿಕೋನಗಳನ್ನು ಸೂಚಿಸುತ್ತದೆ. ಸಾರ್ವತ್ರಿಕ ಸಂತೋಷ (ಉದಾ: "ಆ ಊಟ ನನಗೆ ತುಂಬಾ ಇಷ್ಟವಾಯಿತು") ದಿಂದ ಹಿಡಿದು ಅಂತರ್‌ವ್ಯಕ್ತೀಯ ಆಕರ್ಷಣೆ (ಉದಾ: "ನಾನು ನನ್ನ ಹುಡುಗನನ್ನು ಪ್ರೀತಿಸುತ್ತೇನೆ.) ಯವರೆಗೆ ಈ ಸಮ್ಮೋಹಕ ಪದದ ಅರ್ಥ ವ್ಯಾಪಿಸಿಕೊಂಡಿದೆ.ಬಹಳ ಸಂಕೀರ್ಣ ಭಾವನೆಗಳೊಂದಿಗೆ ಸಂಯೋಜನೆಯಾಗಿರುವ ಇದರ ಅರ್ಥ ಮತ್ತು ಬಳಕೆಯಲ್ಲಿ ಸಾಕಷ್ಟು ವೈವಿಧ್ಯತೆಯಿದ್ದು, ಇದನ್ನು ಇತರೆ ಬೇರೆ ಮನೋಸ್ಥಿತಿಗೆ ಹೋಲಿಸಿದರೂ ಸಮರ್ಪಕವಾಗಿ ವ್ಯಾಖ್ಯಾನಿಸಲಾಗದಷ್ಟು ಅಸಾಮಾನ್ಯವಾಗಿದೆ.
ಒಂದು ಅಮೂರ್ತ ಪರಿಕಲ್ಪನೆಯಾಗಿರುವ ಪ್ರೀತಿ, ಬೇರೊಬ್ಬ ವ್ಯಕ್ತಿಯ ಮೇಲೆ ತೋರುವ ಸೂಕ್ಷ್ಮವಾದ ಕಾಳಜಿಯ ಆಳವಾದ ಮತ್ತು ಅನಿರ್ವಚನೀಯ ಭಾವನೆಗಳನ್ನು ಸಾಮಾನ್ಯವಾಗಿ ಸೂಚಿಸುತ್ತದೆ.ಆದರೂ, ಪ್ರಣಯ ಪ್ರೀತಿಯ ಭಾವೋದ್ರಿಕ್ತ ವಾಂಛೆ ಹಾಗೂ ಅನ್ಯೋನ್ಯತೆಯಿಂದ ಹಿಡಿದು ಕೌಟುಂಬಿಕ ಮತ್ತು ಸಾತ್ವಿಕ ಪ್ರೀತಿಯ ಲೈಂಗಿಕೇತರ ಭಾವನಾತ್ಮಕ ನಿಕಟತೆಯವರೆಗೆ ಮತ್ತು ಅಲ್ಲಿಂದ, ಧಾರ್ಮಿಕ ಪ್ರೀತಿಯ ಗಾಢ ಐಕ್ಯತೆ ಅಥವಾ ಉಪಾಸನೆಯವರೆಗಿನ ವಿವಿಧ ಭಾವನೆಗಳ ಅನುಭೂತಿಗಳ ಶ್ರೀಮಂತಿಕೆಯನ್ನು ಪ್ರೀತಿಯ ಈ ಸೀಮಿತ ಪರಿಕಲ್ಪನೆಯು ಒಳಗೊಳ್ಳುತ್ತದೆ. ತನ್ನ ವೈವಿಧ್ಯಮಯ ರೂಪಗಳಲ್ಲಿ ಅಂತರ್‌ವ್ಯಕ್ತೀಯ ಸಂಬಂಧಗಳ ಬಹುಮುಖ್ಯ ಸುಲಭಕಾರಕವಾಗಿ ವರ್ತಿಸುವ ಪ್ರೀತಿಯು ತನ್ನ ಮನಶ್ಯಾಸ್ತ್ರೀಯ ಪ್ರಾಮುಖ್ಯತೆಯ ಕಾರಣದಿಂದಾಗಿ ಸೃಜನಶೀಲ ಕಲೆಗಳಲ್ಲಿನ ಬಹಳ ಸಾಮಾನ್ಯವಾದ ವಸ್ತುಗಳಲ್ಲಿ ಒಂದಾಗಿ ನಿಂತಿದೆ.  http://satvikapreeti.blogspot.com/

ಬಾಲವನ

ಬಾಲವನದ ಬಗ್ಗೆ
ಮನೆಯಲ್ಲಿ ತಾಯಿ,ತಂದೆಯ ಪೋಷಣೆ, ಶಾಲೆಯಲ್ಲಿ ಶಿಕ್ಷಕರಿಂದ ಶಿಕ್ಷಣ, ಸಂಸ್ಕೃತಿ ಮತ್ತು ಪರಂಪರೆ ಹಾಗೂ ಮಕ್ಕಳ ಮುಂದಿನ ಭವಿಷ್ಯದ ಬದುಕಿನ ಬಗ್ಗೆ ಕಲಿಯಲು ತೊಡಗಿರುವ ಬಳಕೆದಾರರನ್ನು ಗುರಿಯಾಗಿಟ್ಟುಕೊಂಡು ಬಾಲವನವನ್ನು ಅಭಿವೃದ್ಧಿ ಪಡಿಸಲಾಗಿದೆ.

ತಮ್ಮದೇ ಮಾತೃ ಭಾಷೆಯಲ್ಲಿ ಕಲಿಯಲು ತೊಡಗಿರುವ ಮಕ್ಕಳಿಗಾಗಿ ಈ ಸೇವೆ.

ಈ ವಲಯದಲ್ಲಿ ನಿಮಗೆ ಖುಷಿ ಮತ್ತು ಮೋಜು ಸಿಗುತ್ತದೆ. ಇದು ಮಗುವಿನ ಸಮಗ್ರ ಬೆಳವಣಿಗೆಗೆ ಸಹಾಯಕವಾಗಿದೆ.

ಇಲ್ಲಿ ಭಾರತದ ಜಾನಪದ ಕಥೆಗಳು, ಕವಿತೆಗಳು, ನುಡಿಮುತ್ತುಗಳು, ರಾಷ್ಟ್ರಪ್ರೇಮ, ದೇಶಭಕ್ತಿ, ಸಂಪ್ರದಾಯ, ಆಚಾರ ವಿಚಾರಗಳು, ಪಾಲನೆ, ಶಿಕ್ಷಣ ಪದ್ದತಿ, ವಿಜ್ಞಾನ, ಪರಿಸರ, ವನ್ಯಜೀವಿ, ಸಮಾಜ, ಕಲೆ, ಸಂಸ್ಕೃತಿ, ಜಾನಪದಮಕ್ಕಳಿಗೆ ಸಂಬಂಧಪಟ್ಟ ಅಂತರ ಜಾಲತಾಣಗಳ ವಿವರ, ನೀತಿ  ಕಥೆಗಳನ್ನು ಕೇಳಬಹುದು, ಪದ್ಯಗಳನ್ನು ಹಾಡಬಹುದು ನಮ್ಮ ಸುತ್ತಮುತ್ತಲಿನ ಆಸಕ್ತಿದಾಯಕ ವಿಷಯಗಳ ಬಗ್ಗೆ ತಿಳಿದುಕೊಳ್ಳಬಹುದು.


ನಮ್ಮೊಂದಿಗೆ ನೀವೂ ಹೆಜ್ಜೆಗೂಡಿಸುವಂತಿದ್ದರೆ, ನೀವು

ದಿನಕ್ಕೊಂದು ರೂಪಾಯಿ ಕೂಡಿಸಿ ನೀಡುವ ಮೂಲಕ ಬಾಲವನದ ಸದಸ್ಯರಾಗಬಹುದು.
ಬಾಲವನ ಕಾರ್ಯ ಚಟುವಟಿಕೆಗಳಿಗೆ ನಿಮ್ಮಿಂದಾದಷ್ಟು ಹಣದ ನೆರವು ನೀಡುವ ಮೂಲಕ
   
ನಮ್ಮ ಬಳಗದಲ್ಲಿ ಒಬ್ಬರಾಗಬಹುದು
ಬಾಲವನದ ಪ್ರಯೋಗಗಳನ್ನು ಆಹ್ವಾನಿಸಿ ನಿಮ್ಮ ಶಾಲೆ/ಸಮಾರಂಭಗಳಲ್ಲಿ ಅರ್ಥಪೂರ್ಣ
   
ಮನರಂಜನೆ ಒದಗಿಸುವ ಮೂಲಕವೂ ಬಾಲವನಕ್ಕೆ ನೆರವಾಗಬಹುದು.
ಭಾಲವನದ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ ನೀಡಬಹುದು.
ಬಾಲವನದ ಕಾರ್ಯ ಚಟುವಟಿಕೆಗಳಲ್ಲಿ ಸ್ವಯಂ ಸೇವಕರಾಗಿ ಭಾಗವಹಿಸಿ
   
ಪ್ರೋತ್ಸಾಹಿಸಬಹುದು.

ನಿಮ್ಮ ಸಲಹೆ ಸೂಚನೆಗಳಿಗೂ ಸ್ವಾಗತ.
ಬಾಲವನ
ಇದು ಮಕ್ಕಳ ಲೋಕ
ಚಂದ್ರು ಮಲ್ಟಿಮೀಡಿಯ
ಶಿವಾಜಿ ಸರ್ಕಲ್,
ಚಂದಾಪುರ ಮುಖ್ಯ ರಸ್ತೆ
ಆನೇಕಲ್ ನಗರ,
ಬೆಂಗಳೂರು-562106.
ಮೊ.9740463256.
ಮಿಂಚೆ: anekalbalavana@gmail.com 

ಚೆಡ್ಡಿ ದೊಸ್ತ್

ಜೀವನದ ಗಡಿಬಿಡಿಯ ದಿನದ ಓಟದಲ್ಲಿ ಗೆಳೆತನ ಅರ್ಥ ಕಳೆದುಕೊಳ್ಳುತ್ತಿದೆ. ಸ್ವಾರ್ಥದ, ದ್ವೇಷದ,ಇಗೋ , attitude ಗಳ ನಡುವೆ ನಲುಗುತ್ತಿದೆ. ಎಲ್ಲವನ್ನು ಬದಿಗೊತ್ತಿ. ಅದೆಲ್ಲೋ ಕಳೆದುಹೋದ ದೊಸ್ತಿಯನ್ನೊಮ್ಮೆ ನೆನೆದುಬಿಡಿ. ಅದೇನನ್ನು ಕಳೆದುಕೊಂಡಿದ್ದೀರಿ ಎಂಬುದು ತಿಳಿಯುತ್ತದೆ. http://cheddidost.blogspot.com/
ಸ್ವಯಂ ವೈದ್ಯ

ಉತ್ತಮ ಆರೋಗ್ಯಕ್ಕಾಗಿ ಆಯುರ್ವೇದ ತಾಣ
ಆರೋಗ್ಯ, ಯಾರಿಗೆ ಬೇಡ? ಅದರಲ್ಲೂ ಉತ್ತಮ ಆರೋಗ್ಯ! ಅದಕ್ಕಾಗಿ ಈ ಒಂದು ಪ್ರಯತ್ನ, ಎಲ್ಲರಿಗಾಗಿ, ಎಲ್ಲರ ಒಳಿತಿಗಾಗಿ.
ಉತ್ತಮ ಆರೋಗ್ಯ ಎಂದರೆ ಏನು? ಖಾಯಿಲೆಗಳಿಲ್ಲದಿರುವುದು ಅಷ್ಟೆಯೇ? ಅದು ಆರೋಗ್ಯದ ಒಂದು ಭಾಗವಷ್ಟೇ. ಆಯುರ್ವೇದದಲ್ಲಿದೋಷ, ಅಗ್ನಿ, ಧಾತು, ಮಲ ಮತ್ತು ಎಲ್ಲ ಕ್ರಿಯೆಗಳ ಸಾಮ್ಯತೆಯೊಡನೆ ಪ್ರಸನ್ನವಾದ ಆತ್ಮಾ, ಇಂದ್ರಿಯಗಳು ಮತ್ತು ಮನಸ್ಸು ಇದ್ದರೆ ಅದನ್ನು ಸ್ವಾಸ್ಥ್ಯಎಂದು ವಿವರಿಸಿದ್ದಾರೆ. ಇಲ್ಲಿ ಹೇಳಿದ ಪ್ರತಿಯೊಂದು ಅಂಶಗಳನ್ನೂ ಮುಂದಿನ ದಿನಗಳಲ್ಲಿ ವಿವರಿಸುತ್ತೇನೆ. ಏಕೆಂದರೆ ಇವುಗಳು ತುಂಬಾ ವಿಸ್ತಾರವಿರುವ ಮತ್ತು ಗಹನವಾದ ವಿಚಾರಗಳು.
ಆದರೂ ಸದ್ಯಕ್ಕೆ ಸುಲಭವಾಗಿ ಅರ್ಥವಾಗಲು ಹೇಳುವುದಾದರೆ ಎಲ್ಲಾ ಶಾರೀರಿಕ ಮತ್ತು ಮಾನಸಿಕ ಕ್ರಿಯೆಗಳು ಸರಿಯಾಗಿ, ಕಾಲಕಾಲಕ್ಕೆ ಆಗುತ್ತಿದ್ದು, ಮನಸ್ಸು ಉಲ್ಲಸಿತವಾಗಿದ್ದು, ವಿವೇಚನೆ-ಬುದ್ಧಿಗಳು ಸರಿಯಾಗಿ ವರ್ತಿಸುತ್ತಿದ್ದರೆ ಅದು ಉತ್ತಮ ಆರೋಗ್ಯಎನ್ನಬಹುದು. ಇಲ್ಲಿ ದೈಹಿಕ, ಮಾನಸಿಕ, ಆಧ್ಯಾತ್ಮಿಕ (ತನ್ನ ಬಗೆಗಿನ ಅರಿವು) ಹಾಗೂ ಸಾಮಾಜಿಕ (ತನ್ನ ಸುತ್ತಲಿನ ಪರಿವೆ ಹಾಗೂ ಅದಕ್ಕೆ ತಕ್ಕ ವರ್ತನೆ) ಆರೋಗ್ಯವೂ ಒಟ್ಟಾಗಿ ಹೇಳಲ್ಪಟ್ಟಿವೆ. ಹಾಗಾಗಿಯೇ ಆಯುರ್ವೇದವನ್ನುಪರಿಪೂರ್ಣ ಚಿಕಿತ್ಸಾ ವಿಧಾನಎನ್ನಲಾಗಿದೆ.
ಮುಂದಿನ ಬರಹಗಳಲ್ಲಿ ಆಯುರ್ವೇದದಲ್ಲಿ ಹೇಳಿದ ಒಂದೊಂದೇ ವಿಚಾರಗಳನ್ನೂ ನನಗೆ ತಿಳಿದಷ್ಟು ವಿವರಿಸಲು ಪ್ರಯತ್ನಿಸುತ್ತೇನೆ. ನಿಮ್ಮ ಸಹಕಾರ, ಪ್ರೋತ್ಸಾಹ, ಸಲಹೆಗಳು ಇದನ್ನು ಇನ್ನೂ ಉತ್ತಮ ಪಡಿಸಲು ಸಹಾಯ ಮಾಡುತ್ತವೆ. ಅವನ್ನು ನಿಮ್ಮಿಂದ ಬಯಸಬಹುದಲ್ಲವೇ?

ಕರ್ನಾಟಕ ಪರಂಪರೆ 

ಯುಗ ಯುಗಾಂತರಗಳಿಂದ ಪ್ರಜ್ವಲಗೊಂಡಿರುವ ಕರ್ನಾಟಕ ದೇಶದ ಚರಿತ್ರೆಯನ್ನು ಅಮೂಲಾಗ್ರವಾಗಿ ಬರೆದಿಡುವ ಪ್ರಯತ್ನ............ ವಿ.ಸೂ:- ನನ್ನ ಬ್ಲಾಗಿನಲ್ಲಿರುವ ಯಾವುದೇ ಮಾಹಿತಿಗಳ ಬಗ್ಗೆ ತಂಟೆತಗರಾರುಗಳೇನಾದರೂ ಇದ್ದರೆ ನನಗೆ ತಿಳಿಸಿದಲ್ಲಿ ಬ್ಲಾಗಿನಿಂದ ತೆಗೆಯಲಾಗುವುದು ಹಾಗೂ ಬ್ಲಾಗಿನಲ್ಲಿರುವ ಯಾವುದೇ ವಿಷಯಗಳನ್ನು ಯಾರು ಬೇಕಾದರೂ ಬಳಸಿದಲ್ಲಿ ನನ್ನ ಅಭ್ಯಂತರವೇನೂ ಇರುವುದಿಲ್ಲ (no copyright) ಇದರಲ್ಲಿ ನನಗೆ ನಂಬಿಕೆಯಿಲ್ಲ. @ ಹಾಗೇ ನನ್ನ ಮತ್ತಷ್ಟು ಬ್ಲಾಗುಗಳಿಗೆ ಬೇಟಿಕೊಡುವುದನ್ನು ಮರೆಯಬೇಡಿ.
http://karnatakaparampare.blogspot.com/
ಉಡುಗೊರೆ

ಫೋಟೋ ಆಲ್ಬಮ್..ನ. ಉಡುಗೊರೆ........................................... ಒಂದು ಛಾಯಾಚಿತ್ರ ಸಾವಿರ ಪದಗಳಿಗೆ ಸಮ. ನೆನಪುಗಳು ಸಕ್ಕರೆಗಿಂತ ಸಿಹಿ. ಅಂತಹ ಸವಿನೆನಪುಗಳ ಬ್ಲಾಗು............................................................................................. http://udugore.blogspot.com/